Recent News

5 months ago

ಮಠದ ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಸಿದ್ದಗಂಗಾ ಶ್ರೀ

ತುಮಕೂರು: ಸಿದ್ದಗಂಗಾ ಮಠದ ಅಂಗಳದಲ್ಲಿ ಕ್ರಿಕೆಟ್ ಕಲರವ ಕೇಳಿಬಂದಿದ್ದು ಶ್ರೀಗಳು ಮಕ್ಕಳ ಜೊತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ಹೌದು. ಸಿದ್ದಲಿಂಗ ಸ್ವಾಮೀಜಿಗಳು ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಇಷ್ಟು ದಿನ ಶ್ರೀಗಳಾಗಿ ಮಾತ್ರ ವಿದ್ಯಾರ್ಥಿಗಳು ಸಿದ್ದಲಿಂಗ ಸ್ವಾಮೀಜಿ ಅವರನ್ನು ನೋಡಿದ್ದರು. ಆದರೆ ಸ್ವಾಮೀಜಿ ಕೂಡ ಇಷ್ಟೊಂದು ಚೆನ್ನಾಗಿ ಕ್ರಿಕೆಟ್ ಆಡುತ್ತಾರೆ ಎಂಬ ಸಂಗತಿ ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಹೀಗಾಗಿ ಸ್ವಾಮೀಜಿ ಬ್ಯಾಟ್ ಬೀಸಿದ ಪರಿಗೆ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ. ಬುಧವಾರ ಸಂಜೆ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದರು. […]

6 months ago

ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

ತುಮಕೂರು: ಇಂದು ವಿಶ್ವಪರಿಸರ ದಿನಾಚರಣೆ, ಈ ವಿಶೇಷ ದಿನದಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ 1 ಸಾವಿರ ಸಸಿಗಳನ್ನು ನೆಡುವುದರ ಮೂಲಕ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಸ್ಮರಣೆ ಮಾಡಲಾಗುತ್ತಿದೆ. ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ರೀಚ್ ಫಾರ್ ಕಾಸ್ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ...

ಶ್ರೀಗಳ ಪುಣ್ಯಾರಾಧನೆಗೆ 25 ಟನ್ ಹಣ್ಣು, ತರಕಾರಿ ನೀಡಿದ್ರು ಕೋಲಾರದ ಭಕ್ತರು!

10 months ago

ಕೋಲಾರ: ತುಮಕೂರಿನ ಸಿದ್ಧಗಂಗಾ ಮಠದ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಗೆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ 25 ಟನ್ ಹಣ್ಣು ಮತ್ತು ತರಕಾರಿಗಳನ್ನು ಕಳುಹಿಸಿಕೊಡಲಾಯಿತು. ನಾಳೆ ಸಿದ್ದಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಲಕ್ಷಾಂತರ...

ಭಕ್ತರ ಪ್ರೀತಿಗೆ ಭಾವುಕರಾದ ಸಿದ್ದಲಿಂಗ ಶ್ರೀಗಳು

10 months ago

ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆ ಹಿನ್ನೆಲೆ ಸಿದ್ದಗಂಗಾ ಮಠಕ್ಕೆ ಭಕ್ತಾಧಿಗಳು ದಾಸೋಹಕ್ಕಾಗಿ ಸಾಮಾಗ್ರಿಗಳನ್ನು ಕಾಣಿಕೆ ನೀಡುತ್ತಿರುವುದನ್ನು ಕಂಡು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದೇ ತಿಂಗಳ 31ರಂದು ಡಾ. ಶ್ರೀ ಶಿವಕುಮಾರ ಸ್ವಾಮಿಜಿ ಅವರ ಪುಣ್ಯಾರಾಧನೆಯನ್ನು ಮಾಡಲಾಗುತ್ತಿದೆ. ಆದರಿಂದ...

ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

10 months ago

ದಾವಣಗೆರೆ: ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ತುಮಕೂರು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 11 ಟನ್‍ಕ್ಕಿಂತ ಹೆಚ್ಚು ಅಕ್ಕಿಯನ್ನು ದಾವಣಗೆರೆಯ ಸಿದ್ದಗಂಗಾ ವಿದ್ಯಾಸಂಸ್ಥೆ ಕಾಣಿಕೆಯಾಗಿ ನೀಡಿದೆ. ಇದೇ ತಿಂಗಳ 31ರಂದು ತುಮಕೂರು ಸಿದ್ದಗಂಗಾ ಮಠದಲ್ಲಿ ನಡೆಯವ ಶ್ರೀಗಳ ಪುಣ್ಯಾರಾಧನೆಗೆ...

ಕೇಶ ಮುಂಡನ ಮಾಡಿ ಶ್ರೀಗಳಿಗೆ ನಮನ ಸಲ್ಲಿಸಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು!

10 months ago

ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ 10 ಸಾವಿರ ವಿದ್ಯಾರ್ಥಿಗಳು ಕೇಶ ಮುಂಡನೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಜನವರಿ 29ರಂದು ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಪುಣ್ಯಸ್ಮರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ...

ಪೂಜೆ ಬಳಿಕ ಭಕ್ತಾಧಿಗಳಿಗೆ ಸಿಗಲಿದೆ ಶ್ರೀಗಳ ಗದ್ದುಗೆಯ ದರ್ಶನ ಭಾಗ್ಯ

11 months ago

ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಗದ್ದುಗೆಗೆ ಭಕ್ತರು ಬುಧವಾರವೇ ಭೇಟಿ ನೀಡಬಹುದು. ಈಗ ಸಿದ್ಧಲಿಂಗ ಸ್ವಾಮೀಜಿ ಜೊತೆ ವಿವಿಧ ಮಠಾಧಿಶರು ಪೂಜೆ ನಡೆಸುತ್ತಿದ್ದು, ಪೂಜೆ ಮುಗಿದ ಬಳಿಕ ಭಕ್ತಾಧಿಗಳಿಗೆ ಗದ್ದುಗೆ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ. ನಡೆದಾಡುವ ದೇವರು ಲಿಂಗೈಕ್ಯರಾದ...

ಮರಳಿನಲ್ಲಿ ಮೂಡಿಬಂತು ಶತಾಯುಷಿಯ ಕಲಾಕೃತಿ

11 months ago

ಧಾರವಾಡ: ಕಲಾವಿದರೊಬ್ಬರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಮರಳಿನ ಕಲಾಕೃತಿಯನ್ನು ರಚಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. ನಗರದ ಕೆಲಗೇರಿ ನಿವಾಸಿಯಾದ ಮಂಜುನಾಥ ಹಿರೇಮಠ ಸಿದ್ದಗಂಗಾ ಶ್ರೀಗಳ ಕಲಾಕೃತಿಯನ್ನ ರಚನೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮಂಜುನಾಥ ಅವರು ಮರಳಿನಲ್ಲಿ ಸಿದ್ದಗಂಗಾ ಶ್ರೀಗಳ ಕಲಾಕೃತಿಯನ್ನು...