Saturday, 15th June 2019

2 days ago

ಶಿಕ್ಷಕಿ ಹಿಂದೆ ಬಿದ್ದ 60ರ ಅಂಕಲ್ – ಒಪ್ಪದಿದ್ದಕ್ಕೆ ಕೊಲೆಗೈದು, ತಾನೂ ಶೂಟ್ ಮಾಡ್ಕೊಂಡ

ಮಡಿಕೇರಿ: ಹೈಸ್ಕೂಲ್ ಶಿಕ್ಷಕಿ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳೆಲೆ ಗ್ರಾಮದ ಆಶಾ ಕಾವೇರಮ್ಮ(50) ಮೃತ ಶಿಕ್ಷಕಿ. ಜಗದೀಶ್(60) ಆತ್ಮಹತ್ಯೆಗೆ ಶರಣಾದ ಆರೋಪಿ. ಮೃತ ಶಿಕ್ಷಕಿ ಇಂದು ಬೆಳಗ್ಗೆ 8.15ರ ಸುಮಾರಿಗೆ ಶಾಲಾ ವಾಹನಕ್ಕಾಗಿ ಬಾಳೆಲೆ ಪೊಲೀಸ್ ಉಪಠಾಣೆ ಎದುರು ಕಾಯುತ್ತಿದ್ದರು. ಈ ವೇಳೆ ಶಿಕ್ಷಕಿಯ ಮೇಲೆ ಪೊನ್ನಂಪೇಟೆ ನಿವಾಸಿ ಜಗದೀಶ್ ಐದು ಬಾರಿ ಗುಂಡು […]

1 week ago

ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನ -ಪಕ್ಕದ್ಮನೆ ಆಂಟಿಗೆ ಅಂಕಲ್ ಪ್ಲೈನ್ ಕಿಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಓರ್ವ ಕಾಮುಕ ಅಂಕಲ್ ಇದ್ದು, ಪಕ್ಕದ ಮನೆ ಮಹಿಳೆಗೆ ಪ್ಲೈನ್ ಕಿಸ್ ಕೊಟ್ಟು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆರೋಪಿಯನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಕೆಟ್ಟದಾಗಿ ಸನ್ನೆ ಮಾಡಿ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆ ಆರೋಪಿ ಸೋಮಶೇಖರ್ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಏನಿದೆ? ಪಕ್ಕದ...

ಮಕ್ಕಳಾಗಿಲ್ಲವೆಂದು ಪೂಜೆಗೆ ಹೋದ ಗೃಹಿಣಿ -ಮಂಚಕ್ಕೆ ಕರೆದ ಗುಡ್ಡಪ್ಪ

4 weeks ago

ಮೈಸೂರು: ಮಕ್ಕಳಾಗದ ಕಾರಣ ಶನಿ ದೇವರ ಪೂಜೆ ಮಾಡಿಸಲು ಹೋದ ಗೃಹಿಣಿಗೆ ಪೂಜೆಯ ನೆಪದಲ್ಲಿ ಮಂಚಕ್ಕೆ ಕರೆದ ಶನಿ ಮಹಾತ್ಮ ದೇವಸ್ಥಾನದ ಗುಡ್ಡಪ್ಪನಿಗೆ ಗ್ರಾಮಸ್ಥರೆಲ್ಲ ಸೇರಿ ಥಳಿಸಿದ್ದಾರೆ. ಮೈಸೂರು ತಾಲೂಕು ಮಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಸವರಾಜ್ ನಾಯಕ(26) ಗೃಹಿಣಿಯನ್ನು ಮಂಚಕ್ಕೆ...

12ರ ಬಾಲಕನಿಗೆ ಮದರಸ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

4 weeks ago

ಮಂಗಳೂರು: 12ರ ಹರೆಯದ ಬಾಲಕನಿಗೆ ಮದರಸ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಮಸೀದಿಯಲ್ಲಿ ನಡೆದಿದೆ. ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ. ಅನ್ವರ್ ಮದರಸಕ್ಕೆ ಹೋಗಿದ್ದಾಗ...

ರೂಂಗೆ ಬಾ, ಅಶ್ಲೀಲ ಸಿಡಿಗಳನ್ನ ನೋಡು ಎಂದು ವೈದ್ಯನಿಂದ ಕಿರುಕುಳ

4 weeks ago

ದಾವಣಗೆರೆ: ವೈದ್ಯನೊಬ್ಬ ಆಸ್ಪತ್ರೆಯ ಸಿಬ್ಬಂದಿಗೆ ಹಾಗೂ ರೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆಯ ಎಸ್.ಎಂ.ಕೃಷ್ಣ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವೈದ್ಯ ಪ್ರಭುಗೌಡ ಪಾಟೀಲ್...

ಪ್ರತಿ ನಿತ್ಯ ಸೆಕ್ಸ್ ಬೇಕಾ? ಮಹಿಳಾ ಪೈಲಟ್‍ಗೆ ಪ್ರಶ್ನಿಸಿದ ಕ್ಯಾಪ್ಟನ್

1 month ago

ನವದೆಹಲಿ: ಏರ್ ಇಂಡಿಯಾ ಹಿರಿಯ ಕ್ಯಾಪ್ಟನ್ ತನ್ನ ಸಹದ್ಯೋಗಿ ಮಹಿಳಾ ಪೈಲಟ್ ಗೆ ಪ್ರತಿನಿತ್ಯ ಸೆಕ್ಸ್ ಬೇಕಲ್ಲವೆ ಎಂದು ಪ್ರಶ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆ ಕ್ಯಾಪ್ಟನ್ ವಿರುದ್ಧ ದೂರು ದಾಖಲಿಸಿದ್ದಾರೆ. ಈಗಾಗಲೇ ಏರ್ ಇಂಡಿಯಾ ಈ...

ವಿಮಾನದಲ್ಲಿ ಮಲಗಿದ್ದ ಯುವತಿಯ ಒಳಉಡುಪಿಗೆ ಕೈಹಾಕಿ ಜೈಲು ಸೇರಿದ ಭಾರತೀಯ

1 month ago

ಲಂಡನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣ ಮಾಡುವಾಗ ಯುವತಿಯೊಬ್ಬಳ ಒಳಉಡುಪಿಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಒಂದು ವರ್ಷದ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಅಪರಾಧಿಯನ್ನು ಹರ್ದೀಪ್ ಸಿಂಗ್ (36) ಎಂದು ಗುರುತಿಸಲಾಗಿದ್ದು, ಈತ ತನ್ನ ಒಂದು ವರ್ಷದ...

ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ

2 months ago

ಚಿತ್ರದುರ್ಗ: ಯುವಕನೊಬ್ಬ ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗ ನಗರದ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪಾವಗಡ ಮೂಲದ ಆರೋಪಿ ಹನುಮಂತಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ....