Thursday, 23rd May 2019

2 years ago

ಮುಕ್ಕಾಲು ಇಂಚು ನೀರಲ್ಲೇ 5 ಎಕರೆಯಲ್ಲಿ ಕೃಷಿ ಮಾಡ್ತಿರೋ ಚಿತ್ರದುರ್ಗದ ದಯಾನಂದ್ ಮೂರ್ತಿ

ಚಿತ್ರದುರ್ಗ: ಈ ಬೇಸಿಗೆಯಲ್ಲಿ ನೀರಿಲ್ಲದೇ ಎಷ್ಟೋ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಆದರೆ ಚಿತ್ರದುರ್ಗದ ರೈತರೊಬ್ಬರು ಕೇವಲ ಮುಕ್ಕಾಲು ಇಂಚು ನೀರಿನಲ್ಲೇ ಸಮಗ್ರ ಕೃಷಿ ಮಾಡ್ತಿದ್ದಾರೆ. ಅಡಿಕೆ, ದಾಳಿಂಬೆ ಸೇರಿದಂತೆ ಸೊಂಪಾಗಿ ಮರ ಗಿಡಗಳನ್ನ ಬೆಳೆಸುತ್ತಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆಯ ಗ್ರಾಮದ ರೈತ ದಯಾನಂದ್ ಮೂರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ದಯಾನಂದ್ ಅವರು ಹನಿ ನೀರಾವರಿ ಮೂಲಕ ಕೃಷಿ ಮಾಡ್ತಿದ್ದಾರೆ. ಕೇವಲ ಮುಕ್ಕಾಲು ಇಂಚು ನೀರಿನ ಬೋರ್‍ವೆಲ್‍ನಲ್ಲಿ 5 ಎಕರೆಯಲ್ಲಿ ಕೃಷಿ ಮಾಡ್ತಿದ್ದಾರೆ. […]

2 years ago

ಕೃಷಿ ಬಿಟ್ಟು ಮೂಕ ಪ್ರಾಣಿಗಳ ಪಾಲಿಗೆ ದೇವರಾದ ಕೊಪ್ಪಳದ ಗವಿಸಿದ್ದಪ್ಪ

ಕೊಪ್ಪಳ: ಈ ಬರಗಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರೂ ಸಿಗುತ್ತಿಲ್ಲ. ಮೂರ್ನಾಲ್ಕು ಕಿಲೋ ಮೀಟರ್ ಅಲೆದಾಡಿದ್ರೂ ಜಾನುವಾರುಗಳಿಗೆ ಹನಿ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರೊಬ್ಬರು ಬೆಳೆ ಬೆಳೆಯಲು ಹಾಕಿಸಿದ್ದ ಬೋರ್‍ವೆಲ್‍ನಲ್ಲೇ ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದಾರೆ. ಹೌದು. ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ನಮ್ಮ ಪಬ್ಲಿಕ್ ಹೀರೋ ಗವಿಸಿದ್ದಪ್ಪ ಅವರು ನೀರಿನ ಹೊಂಡ ಮಾಡಿ...

ಮರ, ಗಿಡ ಬೆಳೆಸೋದಂದ್ರೆ ಪಂಚಪ್ರಾಣ – ಸೈಕಲ್‍ನಲ್ಲಿ ನೀರು ಹೊತ್ತು ಬೆಟ್ಟ ಏರ್ತಾರೆ ಚಿಕ್ಕಬಳ್ಳಾಪುರದ ಬ್ರಹ್ಮ ಚೈತನ್ಯ

2 years ago

ಚಿಕ್ಕಬಳ್ಳಾಪುರ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ತುಂಬಾ ಡಿಫರೆಂಟ್. ತಮ್ಮ ಇಳಿ ವಯಸ್ಸಿನಲ್ಲಿಯೀ ಕಡಿದಾದ ಬೆಟ್ಟವನ್ನೇರಿ ಮರ-ಗಿಡಗಳಿಗೆ ನೀರುಣಿಸಿ, ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಪಾಲನೆ ಪೋಷಣೆ ಮಾಡ್ತಿದ್ದಾರೆ. ಜಿಲ್ಲೆಯ ಚಿಂತಾಮಣಿ ಪಟ್ಟಣದ ನಿವಾಸಿ 73 ವರ್ಷದ ಬ್ರಹ್ಮ ಚೈತನ್ಯ ಅವರು ನಮ್ಮ...

ಮನೆಯ ಕೈತೋಟದಲ್ಲಿ ಹಚ್ಚಹಸಿರ ಹೊದಿಕೆ – ಬಿರುಬಿಸಿಲಲ್ಲೂ ಕೂಲ್ ಕೂಲ್ ಹವಾ

2 years ago

ಕಲಬುರಗಿ: ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗೋ ಜಿಲ್ಲೆಗಳ ಪೈಕಿ ಕಲಬುರಗಿಯೂ ಒಂದು. ಆದ್ರೆ ಇಂದಿನ ಪಬ್ಲಿಕ್ ಹೀರೋ ಡಾಕ್ಟರ್ ಚೇತನ್ ಇಂತಹ ಬಿಸಿಲಿನ ನಡುವೆಯೂ ಎಸಿ, ಕೂಲರ್ ಇಟ್ಟುಕೊಳ್ಳದೆ ಮನೆಯನ್ನ ಕೂಲಾಗಿ ಇಟ್ಟುಕೊಂಡಿದ್ದಾರೆ. ಕಲಬುರಗಿ ನಗರದ ವೆಂಕಟೇಶ್ವರ ಬಡಾವಣೆಯ ನಿವಾಸಿ ಡಾ.ಚೇತನ...

ದಿನಕ್ಕೆ 17 ಗಂಟೆ ಪಾಠ ಮಾಡೋ ಮೇಷ್ಟ್ರು- 50 ವರ್ಷಗಳಿಂದ ಟ್ಯೂಷನ್ ಉಚಿತ

2 years ago

ಬೆಂಗಳೂರು: ಇಂದಿನ ದಿನಗಳಲ್ಲಿ ಟ್ಯೂಷನ್ ಹೆಸರಿನಲ್ಲಿ ಟುಟೋರಿಯಲ್‍ಗಳು ಶಿಕ್ಷಣವನ್ನು ಒಂದು ಉದ್ಯಮ ಮಾಡಿಕೊಂಡಿವೆ. ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣವನ್ನು ಪೀಕ್ತಿವೆ. ಅದ್ರೆ ಇಲ್ಲೊಬ್ರು ಮೇಷ್ಟ್ರು ಮಾತ್ರ ಫ್ರೀಯಾಗಿಯೇ ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ಇವರೇ ಇಂದಿನ ನಮ್ಮ ಪಬ್ಲಿಕ್ ಹಿರೋ. ಹೌದು....

ನಾಲ್ಕನೇ ಕ್ಲಾಸ್‍ಗೆ ಶಾಲೆ ಬಿಟ್ರೂ ಓದು ನಿಲ್ಲಲಿಲ್ಲ – ಟಿವಿ ಬೆಳಕಲ್ಲೇ ಓದಿ ಸಾಧನೆಗೈದ ಛಲಗಾತಿ ನಮ್ಮ ಪಬ್ಲಿಕ್ ಹೀರೋ

2 years ago

ಹಾಸನ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಾಲೆಗೆ ಹೋಗಿದ್ದು 4ನೇ ಕ್ಲಾಸ್ ವರೆಗೆ ಮಾತ್ರ. ಆ ಬಳಿಕ ಬಡತನದಿಂದಾಗಿ ಶಾಲೆ ಮೆಟ್ಟಿಲನ್ನೇ ಏರಲಿಲ್ಲ. ಮನೆಯಲ್ಲೇ ಕಷ್ಟಪಟ್ಟು ಓದಿ ಬಿಎಡ್ ಮಾಡಿ, ಈಗ ಮೊರಾರ್ಜಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇವರ ಒಂದೊಂದು ಹೆಜ್ಜೆಯೂ...

50ಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರೋ ಉಡುಪಿಯ ವಿಶು ಶೆಟ್ರು

2 years ago

ಉಡುಪಿ: ಭೂಮಿಯ ಮೇಲೆ ಹುಟ್ಟಿದ ಮೇಲೆ ಯಾರೂ ಅನಾಥರಿಲ್ಲ. ರಕ್ತ ಸಂಬಂಧಗಳು ಕಡಿದುಹೋದರೂ ಮಾನವ ಸಂಬಂಧಗಳು ಇರಲೇಬೇಕು. ಏನಿದು ಫಿಲಾಸಫಿ ಹೇಳುತ್ತಿದ್ದೀರಿ ಅಂತ ಅಂದ್ಕೊಳ್ತಿದ್ದೀರಾ? ಇದು ಇವತ್ತಿನ ಪಬ್ಲಿಕ್ ಹೀರೋ ವಿಶು ಶೆಟ್ಟಿಯವರ ಫಿಲಾಸಫಿ. ಸಂಬಂಧಿಕರೇ ಸಿಗದ 50ಕ್ಕೂ ಹೆಚ್ಚು ಮಂದಿಯ...

ಮೂಕ ಪ್ರಾಣಿಗಳಿಗಾಗಿ ನದಿಗೇ ಬೋರ್‍ವೆಲ್ ನೀರು ಬಿಟ್ರು, ಐದಾರು ಊರುಗಳ ಪ್ರಾಣಿಗಳಿಗೆಲ್ಲಾ ಇವರೇ ಭಗೀರಥ..!

2 years ago

ಹಾವೇರಿ: ಈ ವರ್ಷ ನದಿ, ಹಳ್ಳಗಳಲ್ಲೂ ಕುಡಿಯೋಕೆ ನೀರಿಲ್ಲ. ನೀರಿಗಾಗಿ ಜನ ಮತ್ತು ಜಾನುವಾರುಗಳು ನಿತ್ಯವೂ ಪರದಾಡು ಪರಿಸ್ಥಿತಿ ಇದೆ. ಆದ್ರೆ ಇಲ್ಲೊಬ್ಬ ರೈತ ತಮ್ಮ ಬೋರ್‍ವೆಲ್ ನೀರಲ್ಲಿ ಪೈರು ಬೆಳೆಯೋದು ಬಿಟ್ಟು, ನದಿಗೇ ನೇರವಾಗಿ ನೀರು ಬಿಡ್ತಿದಾರೆ. ಪ್ರತಿನಿತ್ಯವೂ ಸಾವಿರಾರು...