Monday, 17th February 2020

2 months ago

ತಮ್ಮದೆ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿದ ಚಿತ್ರಕಲಾ ವಿದ್ಯಾರ್ಥಿಗಳು

ಚಿತ್ರದುರ್ಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಹಿರಿಯೂರು ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಿದೆ. ಶಿಕ್ಷಣ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಂತೆ ಎಲ್ಲಾ ಆಯಾಮದಲ್ಲಿ ಶಾಲೆ ಪೈಪೋಟಿ ನೀಡುತ್ತಿದ್ದು, ಈಗ ತನ್ನ ವಿಶೇಷ ಆಕರ್ಷಕ ಸೊಬಗಿನಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಗೆ ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರಿನಿಂದ ಇಂದು ಆಗಮಿಸಿದ್ದು ಬಣ್ಣದ ಮೆರೆಗು ನೀಡಿದ್ದಾರೆ. […]

2 months ago

ಬಲೂನ್‍ಗಿಂತ ಮುದ್ದಾದ ಮಗು ಜೊತೆ ವೀಕೆಂಡ್ ಕಳೆದ ನುಸ್ರತ್ ಜಹಾನ್

ಕೋಲ್ಕತ್ತಾ: ಜನಪ್ರಿಯ ನಟಿ, ಸಂಸದೆ ನುಸ್ರತ್ ಜಹಾನ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ತಮ್ಮ ಪತಿ ಜೊತೆಗಿರುವ ಫೋಟೊಗಳನ್ನು ಹೆಚ್ಚು ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದ ನುಸ್ರತ್ ಜಹಾನ್, ಈ ಬಾರಿ ಬಲೂನು ಮಾರುವ ಚಿಕ್ಕ ಹುಡುಗನ ಫೋಟೋ ಹಾಕುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಗುವಿನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನುಸ್ರತ್ ಇನ್‍ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ಒಂದೂವರೆ...