Sunday, 19th August 2018

Recent News

2 weeks ago

ಮಧ್ಯರಾತ್ರಿ ಪೆಟ್ರೋಲ್ ಬಂಕ್ ದರೋಡೆಗೆ ಯತ್ನ – ಸರಿಯಾದ ಸಮಯಕ್ಕೆ ಬಂದ ಪೊಲೀಸರಿಂದ ಆರೋಪಿಗಳು ಆರೆಸ್ಟ್

ಬಾಗಲಕೋಟೆ: ಮಧ್ಯರಾತ್ರಿ ಪೆಟ್ರೋಲ್ ಬಂಕ್‍ಗೆ ನುಗ್ಗಿ ಕಾರ್ಮಿಕರು ಹಾಗೂ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ 12.30ರ ಸುಮಾರಿಗೆ ಪೆಟ್ರೋಲ್ ಪಂಪ್‍ಗೆ ನುಗ್ಗಿದ ಎಂಟು ಜನರ ಗ್ಯಾಂಗ್ ಬಂಕ್‍ನ ಕಾರ್ಮಿಕರು ಹಾಗೂ ಮ್ಯಾನೇಜರ್ ಮೇಲೆ ಮನಬಂದತೆ ಹಲ್ಲೆ ನಡೆಸಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಎಂಟು ಜನ ಪುಡಾರಿಗಳು ಹಲ್ಲೆ ಮಾಡಿದ್ದು, ಬಂಕ್‍ಗೆ ಸೇರಿದ ಕಾರನ್ನು ಒಡೆದು […]

2 months ago

ಪೆಟ್ರೋಲ್ ವಿತರಣಾ ಘಟಕಕ್ಕೆ ಡಿಕ್ಕಿ ಹೊಡೆದು, ಆಟೋಗೆ ಗುದ್ದಿದ ಕಾರ್-ವಿಡಿಯೋ ನೋಡಿ

ರಾಜ್‍ಕೋಟ್: ವೇಗವಾಗಿ ಬಂದ ಕಾರೊಂದು ಬಂಕ್ ನ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿಕೊಂಡು ಆಟೋಗೂ ಗುದ್ದಿರುವ ಆಘಾತಕಾರಿ ಅಪಘಾತವೊಂದು ನಗರದಲ್ಲಿ ನಡೆದಿದೆ. ಇಡೀ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿರುವುದರಿಂದ ಘಟಕ ಮುರಿದು ಬಿದ್ದಿದೆ. ನಂತರ ಆಟೋಕ್ಕೆ ಗುದ್ದಿ ಆಟೋ ಮಗಚಿ ಬಿದ್ದಿದೆ. ಈ ಅಪಘಾತದಲ್ಲಿ ಮೂರು ಜನರು ಗಾಯಗೊಂಡಿದ್ದು,...

ಬ್ಯಾನರ್ ವಿಚಾರಕ್ಕೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡ ಅರೆಸ್ಟ್

5 months ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಜೆಪಿ ಮುಖಂಡರೊಬ್ಬರ ಅನುಯಾಯಿಗಳು ಗೂಂಡಾವರ್ತನೆ ತೋರಿದ್ದಾರೆ. ಕಾಂಗ್ರೆಸ್ ಶಾಸಕರ ಬ್ಯಾನರ್ ಕಟ್ಟಿದ್ದಕ್ಕೆ ಶಿವಾಜಿನಗರದ ಯೂನಿವರ್ಸಲ್ ಪೆಟ್ರೋಲ್ ಬಂಕ್ ಕ್ಯಾಷಿಯರ್‍ಗೆ ಥಳಿಸಲಾಗಿದೆ. ಪೆಟ್ರೋಲ್ ಬಂಕ್ ಮೇಲ್ಭಾಗದಲ್ಲಿ ಹಾಕಲಾಗಿದ್ದ ಸಚಿವ ರೋಷನ್ ಬೇಗ್ ಬ್ಯಾನರ್ ತೆಗೆಯುವಂತೆ ಗಲಾಟೆ ಮಾಡಿದ್ದಾರೆ. ಹಲ್ಲೆ...

ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

6 months ago

ವಾಷಿಂಗ್ಟನ್: ರಾತ್ರಿ ಹೊತ್ತಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಪೆಟ್ರೋಲ್ ಬಂಕ್ ತುಂಬಾ ನೆಲದ ಮೇಲೆ ಕುಳಿತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇವು ಗ್ರಾಕಲ್ ಪಕ್ಷಿಗಳಾಗಿದ್ದು, ಟೆಕ್ಸಾಸ್‍ನ ಹೂಸ್ಟನ್ ನಲ್ಲಿರೋ ಎಕ್ಸಾನ್‍ಮೊಬಿಲ್ ಸ್ಟೇಷನ್ ನಲ್ಲಿ ಕುಳಿತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಮಾಧ್ಯಮವೊಂದರ...

ಬಂದ್ ಗಲಾಟೆ: ಮೈಸೂರು ಪೆಟ್ರೋಲ್ ಬಂಕ್‍ನಲ್ಲಿ ಹೈಡ್ರಾಮಾ

1 year ago

ಮೈಸೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮೈಸೂರು ವಿಭಾಗದ ಪೆಟ್ರೋಲ್ ಬಂಕ್‍ಗಳನ್ನ ಇಂದು ಬಂದ್ ಮಾಡಲಾಗಿದೆ. ಈ ನಡುವೆ ಇಲ್ಲಿನ ಪೆಟ್ರೋಲ್ ಬಂಕ್‍ವೊಂದರಲ್ಲಿ ಹೈಡ್ರಾಮಾ ನಡೆದಿದೆ. ಅಧಿಕಾರಿಗಳ ಒತ್ತಡದಿಂದ ಲಕ್ಷ್ಮೀ ಸರ್ವಿಸ್ ಸ್ಟೇಷನ್...

ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

1 year ago

ಬೆಂಗಳೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ವಿರೋಧಿಸಿ ಶುಕ್ರವಾರ ರಾಜ್ಯಾಧ್ಯಂತ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಂಕ್ ಮಾಲೀಕರು ಮುಂದಾಗಿದ್ದಾರೆ. ಬಂದ್‍ಗೆ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಬೆಂಬಲ ನೀಡಿದ್ದು, ಶುಕ್ರವಾರ ದೇವನಹಳ್ಳಿ ಪೆಟ್ರೋಲ್ ಟ್ಯಾಂಕರ್ ಟರ್ಮಿನಲ್‍ನಿಂದ...

ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದ ಪೆಟ್ರೋಲ್ ಬಂಕ್ ಮಾಲೀಕರು

1 year ago

ಬೆಂಗಳೂರು: ಇವತ್ತು ಭಾನುವಾರ. ಆದರೂ ರಾಜ್ಯಾದ್ಯಂತ ಪೆಟ್ರೋಲ್ ಸಿಗುತ್ತೆ. ಇಂದಿನಿಂದ ಪ್ರತಿ ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ಮಾಲೀಕರು ಹಿಂದೆ ಸರಿದಿದ್ದಾರೆ. ಮೇ 17ರಂದು ಮುಂಬೈನಲ್ಲಿ ತೈಲ ಕಂಪನಿಗಳ ಜೊತೆಗೆ ಮಾತುಕತೆ ನಡೆಯಲಿದೆ. ಕಮಿಷನ್ ಹೆಚ್ಚಳ, ಡೀಲರ್‍ಗಳಿಗೆ ಹೆಚ್ಚಿನ ಸೌಲಭ್ಯ ಸೇರಿದಂತೆ...

ತುಮಕೂರು: ಪೆಟ್ರೋಲ್ ಗೆ ಸೀಮೆಎಣ್ಣೆ ಬೆರೆಸಿದ ಆರೋಪ- ಗ್ರಾಹಕರ ಪ್ರತಿಭಟನೆ

1 year ago

ತುಮಕೂರು: ಬಂಕ್‍ನಲ್ಲಿ ಪೆಟ್ರೋಲ್‍ಗೆ ಸೀಮೆಎಣ್ಣೆ ಮಿಶ್ರಣ ಮಾಡಿದ್ದಾರೆಂದು ಆರೋಪಿಸಿ ತುಮಕೂರಿನ ಗ್ರಾಹಕರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಕೆಆರ್ ಬಡಾವಣೆಯಲ್ಲಿರುವ ಅಣೇಕಾರ್‍ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಗ್ರಾಹಕರು ಪೆಟ್ರೋಲ್ ಹಾಕಿಸಿಕೊಳ್ಳುವ ವೇಳೆ ಸೀಮೆಎಣ್ಣೆ ವಾಸನೆ ಬಂದಿದೆ. ಈ ವೇಳೆ ಆಕ್ರೋಶಗೊಂಡ...