Tuesday, 12th November 2019

2 months ago

ಪ್ರಭಾಸ್‍ಗಾಗಿ ಮೊಬೈಲ್ ಟವರ್ ಏರಿ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ

ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್‍ಗಾಗಿ ಅಭಿಮಾನಿಯೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಂಗಾಣದ ಜಂಗಮ್‍ನಲ್ಲಿ ನಡೆದಿದೆ. ಪ್ರಭಾಸ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಭಿಮಾನಿ ಬೆದರಿಕೆ ಹಾಕಿದ್ದನು. ಅಲ್ಲದೆ ಸ್ಥಳಕ್ಕೆ ಪ್ರಭಾಸ್ ಬರಬೇಕು ಎಂದು ಹಠ ಹಿಡಿದಿದ್ದನು. ಆತನನ್ನು ಕೆಳಗೆ ಇಳಿಸಲು ಸ್ಥಳೀಯರು ಹಾಗೂ ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದರು. ಸ್ಥಳೀಯರು ಹಾಗೂ ಅಧಿಕಾರಿಗಳು ಎಷ್ಟೇ ಹೇಳಿದರೂ ಯುವಕ ಕೆಳಗೆ ಇಳಿಯಲು ನಿರಾಕರಿಸುತ್ತಿದ್ದನು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. […]

6 months ago

ರಾತ್ರೋ ರಾತ್ರಿ ಎದ್ದುನಿಂತ ಅನಧಿಕೃತ ಮೊಬೈಲ್ ಟವರ್- ಸ್ಥಳೀಯರು ಗರಂ

ಕೊಪ್ಪಳ: ಜನ ವಾಸಿಸುವ ಸ್ಥಳದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ಕಂಪನಿಯ ಅನಧಿಕೃತ ಮೊಬೈಲ್ ಟವರ್‌ವೊಂದು ಜಿಲ್ಲೆಯಲ್ಲಿ ರಾತ್ರೋ ರಾತ್ರಿ ನಿರ್ಮಾಣವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗಂಗಾವತಿಯ ಶರಣಬಸವೇಶ್ವರ ಕ್ಯಾಂಪ್‍ನ ಆಶ್ರಯ ಕಾಲೋನಿಯಲ್ಲಿ ಮೊಬೈಲ್ ಟವರ್ ನಿರ್ಮಾಣವಾಗಿದೆ. ಇನ್ನೂ ಇದನ್ನು ನಿರ್ಮಿಸಲು ಜಿಲ್ಲಾಡಳಿತ, ಹಾಗೂ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರದೆ ಅನಧಿಕೃತವಾಗಿ ನಿರ್ಮಾಣ...

ತ್ಯಾಜ್ಯ ವಿಲೇವಾರಿಗೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತ ಯುವಕರು!

1 year ago

ಚೆನ್ನೈ: ಸ್ಥಳೀಯ ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ಹಾಗೂ ಅಧಿಕಾರಿಗಳ ಉದಾಸೀನತೆಯ ವಿರುದ್ಧ ಕಿಡಿಕಾರಿದ ಮೂವರು ಯುವಕರು 150 ಅಡಿ ಎತ್ತರ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ನಗರದ ಹೊರವಲಯದಲ್ಲಿ ಬುಧವಾರ ನಡೆದಿದೆ. ಪ್ರತಿಭಟನಾಕಾರರನ್ನು ದಿನಕರನ್(35), ಪ್ರಭಾಕರನ್(24) ಹಾಗೂ...

ಲವ್ವರ್ ತನ್ನನ್ನು ಮದ್ವೆಯಾಗ್ಬೇಕೆಂದು ಆಗ್ರಹಿಸಿ ಟವರ್ ಮೇಲೇರಿ ಕುಳಿತ ಮಹಿಳಾ ಟೆಕ್ಕಿ!

1 year ago

ಹೈದರಾಬಾದ್: ಲವ್ವರ್ ತನ್ನನ್ನು ಮದುವೆಯಾಗಬೇಕೆಂದು ಆಗ್ರಹಿಸಿ ಯುವತಿಯೊಬ್ಬಳು ಮೊಬೈಲ್ ಟವರ್ ಏರಿ ಕುಳಿತ ಘಟನೆ ತೆಂಲಗಾಣದಲ್ಲಿ ನಡೆದಿದೆ. ಈ ಘಟನೆ ಶುಕ್ರವಾರ ತೆಲಂಗಾಣದ ಯದಾದ್ರಿ ಭೊಂಗಿರ್ ಜಿಲ್ಲೆಯ ವಾಲಿಗೊಂಡ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಮತ್ತು ಗ್ರಾಮಸ್ಥರು ಪರಿಪರಿಯಾಗಿ ಬೇಡಿಕೊಂಡ ಬಳಿಕ ಕೆಳಗಿಳಿದಿದ್ದಾಳೆ....

ಭಾರೀ ಮಳೆ, ಗಾಳಿಗೆ ಧರೆಗುರುಳಿದ ಮೊಬೈಲ್ ಟವರ್!

1 year ago

ಬೆಳಗಾವಿ/ವಿಜಯಪುರ: ಶನಿವಾರ ಸಂಜೆಯಿಂದ ಸುರಿದ ಭಾರೀ ಮಳೆ, ಗಾಳಿಗೆ ಮೊಬೈಲ್ ಟವರೊಂದು ಧರೆಗುರುಳಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಪಂಚಾಯತ್ ಆವರಣದಲ್ಲಿರುವ ಮೊಬೈಲ್ ಟವರ್ ನೆಲ ಕಚ್ಚಿದೆ. ಅಲ್ಲದೇ ಕೆಲ ಮನೆಗಳ ಹಂಚುಗಳು, ತಗಡಿನ ಶೆಡ್ಡುಗಳು...

ಮೊಬೈಲ್ ಟವರ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

2 years ago

ಚಂಡೀಗಢ: ಪ್ರೇಮಿಗಳು ಮೊಬೈಲ್ ಟವರ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸಘಡ ರಾಜ್ಯದ ಜಾಂಜಿಗೀರ್ ಜಿಲ್ಲೆಯ ಡೋಂಗರಿ ಗ್ರಾಮದಲ್ಲಿ ನಡೆದಿದೆ. 18 ವರ್ಷದ ಸುನೈನಾ ಪಟೇಲ್ ಮತ್ತು 32 ವರ್ಷದ ಅಜಯ್ ಯಾದವ್ ಆತ್ಮಹತ್ಯೆ ಮಾಡಿಕೊಂಡ ಜೋಡಿ. ಸುನೈನಾ...

ತನಗೆ ಸೇರಬೇಕಾದ ಆಸ್ತಿ ಬೇಕೆಂದು ಮೊಬೈಲ್ ಟವರ್ ಏರಿ ಕುಳಿತ ಯುವಕ

2 years ago

ಹಾವೇರಿ: ಆಸ್ತಿಯಲ್ಲಿ ತನ್ನ ಪಾಲು ಬೇಕು ಎಂದು ಆಗ್ರಹಿಸಿ, ಮೊಬೈಲ್ ಟವರ್ ಏರಿ ಕುಳಿತು ಯುವಕ ಪ್ರತಿಭಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೊಬೈಲ್ ಟವರ್ ಏರಿದ ಯುವಕನನ್ನ ಯಲ್ಲಪ್ಪ ದೊಡ್ಡಲಿಂಗಣ್ಣವರ(34) ಎಂದು ಗುರುತಿಸಲಾಗಿದೆ....

ಪತ್ನಿಯಿಂದ ಡೈವೋರ್ಸ್ ಕೇಳಿ ಮೊಬೈಲ್ ಟವರ್ ಏರಿದ ಪತಿ

2 years ago

ತೆಲಂಗಾಣ: ಪತ್ನಿಯಿಂದ ವಿಚ್ಛೇದನ ಬಯಸಿದ ವೈದ್ಯ ಪತಿಯೊಬ್ಬರು ಮೊಬೈಲ್ ಟವರ್ ಏರಿ ಕುಳಿತ ಘಟನೆ ತೆಲಂಗಾಣದ ಜಗ್ತಿಯಾಲ್‍ನಲ್ಲಿ ನಡೆದಿದೆ. ಪತಿ ಅಜಯ್ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಇವರ ಪತ್ನಿ ಲಾಸ್ಯಾ ಅಜಯ್ ವಿರುದ್ಧ ಜಕ್ತಿಯಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ನೊಂದ...