Tuesday, 16th July 2019

Recent News

6 months ago

ಕರುನಾಡ ಸಿಂಗಂ ಮಧುಕರ್ ಶೆಟ್ಟಿಗೆ ನುಡಿ ನಮನ

ಬೆಂಗಳೂರು: ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಂದು ನಗರದಲ್ಲಿ ನುಡಿ ನಮನ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಕುಟುಂಬ ಸಮೇತರಾಗಿ ಬಂದು ಪುಷ್ಪ ನಮನ ಸಲ್ಲಿಸಿದರು. ನಗರದ ವಿಜಯನಗರ ಬಂಟರ ಸಂಘದ ಆವರಣದಲ್ಲಿ ಡಾ. ಮಧುಕರ್ ಶೆಟ್ಟಿ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ನಿಷ್ಟಾವಂತ, ದಕ್ಷ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು. ಇದು ಪೊಲೀಸ್ ವ್ಯವಸ್ಥೆಯ ದೌರ್ಭಾಗ್ಯ […]

7 months ago

ಅಗ್ನಿಸ್ಪರ್ಶದ ವೇಳೆ ಬಿಕ್ಕಿಬಿಕ್ಕಿ ಅತ್ತ ಮಧುಕರ್ ಪತ್ನಿ- ಅಪ್ಪ ಬೇಕು ಅಂತ ಮಗಳು ಕಣ್ಣೀರು

ಉಡುಪಿ: ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಪತಿಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಪತ್ನಿ ಹಾಗೂ ಮಗಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಪತಿಯ ಚಿತೆಯ ಮುಂದೆ ನಿಂತಿದ್ದ ಪತ್ನಿ ಸ್ವರ್ಣ ದುಃಖಿತರಾದ್ರೆ, ಮಗಳು ಸಮ್ಯಾ ನನಗೆ ಅಪ್ಪ ಬೇಕು ಅಂತ ಕಣ್ಣೀರು ಹಾಕಿರುವುದು ನೆರೆದವರಲ್ಲಿ ಮತ್ತಷ್ಟು ಕಣ್ಣೀರಿಗೆ ಕಾರಣವಾಯಿತು. ಈ ವೇಳೆ ಕುಟುಂಬದವರು...

ಮಧುಕರ್ ಅಂತ್ಯಕ್ರಿಯೆಗೆ ಸಿದ್ಧತೆ- ಪಾರ್ಥಿವ ಶರೀರ ದರ್ಶನ ಪಡೆಯದ ಬಿಜೆಪಿಗರು..!

7 months ago

ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಲಹಂಕ ಟ್ರೈನಿಂಗ್ ಸೆಂಟರ್‍ಗೆ ಮಧುಕರ್ ಶೆಟ್ಟಿ ಹೆಸರು ಇಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 13 ಶಾಸಕರು ಮತ್ತು ಇಬ್ಬರು ಸಂಸದರಿದ್ರೂ ಮಧುಕರ್ ಶೆಟ್ಟಿ ಪಾರ್ಥಿವ ಶರೀರ...

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆಗೆ ಕುಂದಾಪುರದಲ್ಲಿ ಸಿದ್ಧತೆ

7 months ago

ಉಡುಪಿ: ಖಡಕ್ ಐಪಿಎಸ್ ಅಧಿಕಾರಿ- ಕರ್ನಾಟಕದ ಸಿಂಗಂ ಖ್ಯಾತಿಯ ಮಧುಕರ್ ಶೆಟ್ಟಿ ಶುಕ್ರವಾರದಂದು ಇಹಲೋಕ ತ್ಯಜಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕರ್ನಾಟಕದ ಜನರ ಹೃದಯ ಗೆದ್ದ ದಕ್ಷ ಪೊಲೀಸ್ ಅಧಿಕಾರಿಯ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಕಣ್ಣೀರಿಡುತ್ತಾ ಸಿದ್ಧತೆ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದುಕೊಂಡು ಉನ್ನತ ಸ್ಥಾನದಲ್ಲಿದ್ದು ಜನ...

ಸಿಂಗಂ ಸಾವಿನ ಬಗ್ಗೆ ಅನುಮಾನಕ್ಕೆ ಕಾರಣಗಳು ಇಲ್ಲಿವೆ

7 months ago

ಬೆಂಗಳೂರು: ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸಾವಿನ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರದಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಹೆಚ್1 ಎನ್1 ಸೋಂಕು ಕಾಣಿಸಿಕೊಂಡ...

ಬೊಂಬೆನಾಡಿನಿಂದ ವೃತ್ತಿ ಆರಂಭಿಸಿದ್ದರು ಮಧುಕರ್ ಶೆಟ್ಟಿ

7 months ago

– ಪರೋಪಕಾರಿ, ಜನಸ್ನೇಹಿಯಾಗಿದ್ದ ಅಧಿಕಾರಿ ಅಗಲಿಕೆಗೆ ಕಣ್ಣೀರಿಟ್ಟ ಜನತೆ ರಾನಮನಗರ: ಎಚ್1 ಎನ್1 ಸೋಂಕಿನಿಂದ ಅಕಾಲಿಕ ಮರಣಹೊಂದಿದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಬೊಂಬೆನಾಡು ಚನ್ನಪಟ್ಟಣದಿಂದ ವೃತ್ತಿ ಆರಂಭಿಸಿದ್ದರು. ಮಧುಕರ್ ಶೆಟ್ಟಿ ಅವರ ಅಗಲಿಕೆಯಿಂದ ಜಿಲ್ಲೆಯ ಜನತೆ ಕಣ್ಣೀರಿಟ್ಟಿದ್ದಾರೆ. ಚನ್ನಪಟ್ಟಣ...

ಇಷ್ಟದ ಹಾಡು ಹಾಡಿ ಕಣ್ಣೀರ ವಿದಾಯ ತಿಳಿಸಿದ್ರು ಮಧುಕರ್ ಸಹೋದ್ಯೋಗಿ

7 months ago

ಹೈದರಾಬಾದ್: ಕರ್ನಾಟಕದ ರಿಯಲ್ ಸಿಂಗಂ, ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಷ್ಟದ ಹಾಡು ಹಾಡುವ ಮೂಲಕ ಸಹೋದ್ಯೋಗಿಗಳು ಗೀತ ನಮನ ಸಲ್ಲಿಸಿದ್ದಾರೆ. ಹೈದರಾಬಾದ್ ನಲ್ಲಿ ಇಂದು...

ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!

7 months ago

ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದು, ಇದೀಗ ಇವರ ಅಕಾಲಿಕ ಮರಣಕ್ಕೆ ಸಚಿವ ಡಿಕೆ ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ. ಮಧುಕರ್ ಶೆಟ್ಟಿ ನನಗೆ ಹತ್ತಿರದಿಂದ ಪರಿಚಯ. ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ...