Tag: Jubin Nautiyal

  • ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದ ಗಾಯಕ ಜುಬಿನ್ ನೌಟಿಯಾಲ್

    ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದ ಗಾಯಕ ಜುಬಿನ್ ನೌಟಿಯಾಲ್

    ಬಾಲಿವುಡ್ ಟ್ರೆಂಡಿಂಗ್- ಹಿಂದಿ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ (Jubin Nautiyal) ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರು. ಇದನ್ನೂ ಓದಿ:ಹಿಂದಿ ‘ಬಿಗ್ ಬಾಸ್ 17’ರ ವಿನ್ನರ್ ಆದ ಮುನಾವರ್ ಫಾರೂಕಿ

    jubin nautiyal 1

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ‘ಗಾಳಿಪಟ ಉತ್ಸವ’ದ ನಿಮಿತ್ತವಾಗಿ ಗಾಯನ ಕಾರ್ಯಕ್ರಮಕ್ಕೆ ಕಳೆದ ಎರಡು ದಿನಗಳಿಂದ ಜುಬಿನ್ ನೌಟಿಯಾಲ್ ಮತ್ತು ಅವರ ತಂಡ ಹುಬ್ಬಳ್ಳಿಯಲ್ಲಿದ್ದಾರೆ. ಕಾರ್ಯಕ್ರಮದ ಬಳಿಕ ಹುಬ್ಬಳ್ಳಿ ಧಾರವಾಡ ನಗರಗಳ ರೌಂಡ್ ಹಾಕಿದ ನೌಟಿಯಾಲ್, ಅಮರಗೋಳದ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಸಿದ್ಧಾರೂಢರ ಮಠಕ್ಕೆ (Siddharudh Swami Math) ಭೇಟಿ ನೀಡಿದರು. ಇಂದು (ಜ.29) ಸಿದ್ಧಾರೂಢರ ಗದ್ದುಗೆ ವಿಶೇಷ ಪೂಜೆ ಸಹ ಸಲ್ಲಿಸಿದ್ದು, ಮಠದ ಆಡಳಿತ ಮಂಡಳಿಯ ವತಿಯಿಂದ ನೌಟಿಯಾಲ್ ಅವರಿಗೆ ಸನ್ಮಾನಿಸಲಾಗಿದೆ.

    200ಕ್ಕೂ ಹೆಚ್ಚು ಹಾಡುಗಳಿಗೆ ಗಾಯನ ಜುಬಿನ್ ನೌಟಿಯಾಲ್ ಹಾಡಿದ್ದಾರೆ. ಶಿವರಾಜ್‌ಕುಮಾರ್ (Shivarajkumar), ಪ್ರಣೀತಾ ನಟನೆಯ ‘ಮಾಸ್ ಲೀಡರ್’ (Mass Leader) ಚಿತ್ರದಲ್ಲಿನ ‘ದೀಪವೇ ನಿನ್ನ ಕಣ್ಣು’ ಸಾಂಗ್ ಅನ್ನು ಜುಬಿನ್ ಅವರು ಹಾಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗ ಜೊತೆ ಗಾಯಕ ಜುಬಿನ್ ಒಡನಾಟ ಹೊಂದಿದ್ದಾರೆ.

  • ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

    ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

    `ಚಂದ್ರಲೇಖಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಶಾನ್ವಿ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ರೊಮ್ಯಾಂಟಿಕ್ ಆಲ್ಬಂ ಸಾಂಗ್ ಮೂಲಕ ಬಿಟೌನ್ ಅಡ್ಡಾಗೆ ʻಮಾಸ್ಟರ್ ಪೀಸ್ʼ ಬ್ಯೂಟಿ ಶಾನ್ವಿ ಎಂಟ್ರಿ ಕೊಟ್ಟಿದ್ದಾರೆ.

    shanvi srivastava 1

    `ಮಾಸ್ಟರ್ ಪೀಸ್’, `ತಾರಕ್’ `ಮಫ್ತಿ’, `ಭಲೇ ಜೋಡಿ’, ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿರುವ ನಟಿ ಶಾನ್ವಿ ಶ್ರೀವಾಸ್ತವ್ ಈಗ ಬಾಲಿವುಡ್‌ಗೆ ಹಿಂದಿ ಆಲ್ಬಂ ಸಾಂಗ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ತೆಲುಗು, ಕನ್ನಡ, ಮಾಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡ ಬಳಿಕ ಹಿಂದಿ ಆಲ್ಬಂ ಸಾಂಗ್‌ನಲ್ಲಿ ಶಾನ್ವಿ ಮಿಂಚಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯ ಕೊನೆಯ ಕ್ಯಾಪ್ಟನ್ ಆಗಿ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ

    shanvi srivastava 3ಮಾಸ್ಟರ್ ಪೀಸ್ ಸುಂದರಿ ಸೈಲೆಂಟ್ ಆಗಿ ಬಿಟೌನ್ ಸ್ಟಾರ್ ಸಿಂಗರ್ ಜುಬಿನ್ ನಾತಿಯಲ್ ಜತೆ ಆಲ್ಬಂ ಸಾಂಗ್‌ನಲ್ಲಿ ಶಾನ್ವಿ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ ಸಖತ್ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಾಂಗ್ ಮಿಲಿಯನ್‌ಗಟ್ಟಲೇ ವಿವ್ಸ್ ಗಿಟ್ಟಿಸಿಕೊಂಡಿದ್ದು, ಸಾಂಗ್ ಟ್ರೆಂಡಿಂಗ್‌ನಲ್ಲಿದೆ.

     

    View this post on Instagram

     

    A post shared by Shanvi sri (@shanvisri)


    ಶಾನ್ವಿ ಶ್ರೀವಾಸ್ತವ್ ಹೊಸ ಲುಕ್ ಮತ್ತು ಆಲ್ಬಂ ಸಾಂಗ್ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ. ನೆಚ್ಚಿನ ನಟಿಯ ಮುಂಬರುವ ಚಿತ್ರಕ್ಕಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]