Thursday, 18th July 2019

Recent News

1 year ago

ಬಸವಣ್ಣ, ಅಂಬೇಡ್ಕರ್ ಪ್ರತಿಮೆಗೆ ಹಾರಹಾಕಿ ತಾವೂ ಹಾರಬದಲಿಸಿ ಮದ್ವೆಯಾದ ಅಂತರ್ಜಾತಿ ಜೋಡಿ

ಧಾರವಾಡ: ಅಂತರ್ಜಾತಿಯ ಮದುವೆಯೊಂದು ಸರಳ ಹಾಗೂ ವಿಶಿಷ್ಟ ರೀತಿಯಲ್ಲಿ ನಡೆದ ಘಟನೆ ಧಾರವಾಡದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ತಿಳುವಳ್ಳಿ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿಯನ್ನು ಧಾರವಾಡ ಜಿಲ್ಲೆಯ ದಲಿತ ಯುವಕನೋರ್ವ ಪ್ರೀತಿಸಿ ಮದುವೆಯಾಗಿದ್ದಾನೆ. ಸುನೀತಾ(18) ಎಂಬ ಲಿಂಗಾಯತ ಜಾತಿಯ ಯುವತಿ ಹಾಗೂ ಜಿಲ್ಲೆಯ ಕಿತ್ತೂರ ಗ್ರಾಮದ ಶರಣಪ್ಪ ಎಂಬ ಯುವಕ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅದ್ರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧವಿತ್ತು. ಈ ಹಿನ್ನೆಲೆ ದಲಿತ ಸಂಘಟನೆ ಎದುರು ಇವರು ತಮ್ಮ ಅಳಲನ್ನ […]

2 years ago

ಹೆಸರು ಬದಲಾವಣೆ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ- ಯೋಧ ಆತ್ಮಹತ್ಯೆ

ಬೆಳಗಾವಿ: ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯ ಜೊತೆಗೆ ಜಗಳವಾಡಿ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಬಿಎಸ್‍ಎಫ್ ಯೋಧ ಬಸವರಾಜ್ ಉರ್ಫ್ ರಫೀಕ್ ಮುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣವೇನು?: ಬಸವರಾಜ್ ಅವರ ತಾಯಿ ಮೂಲತಃ ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದು, ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದರು....