Wednesday, 17th July 2019

Recent News

2 days ago

ಅಡ್ವೆಂಚರ್ ಪಾರ್ಕ್‌ನಲ್ಲಿ ಕುಸಿದು ಬಿದ್ದ ಜಾಯ್ ರೈಡ್- ಮೂವರು ಸಾವು

– 31 ಮಂದಿ ಗಂಭೀರ ಗಾಂಧಿನಗರ: ಅಡ್ವೆಂಚರ್ ಪಾರ್ಕ್‌ನಲ್ಲಿ ಜಾಯ್ ರೈಡ್ ಕುಸಿದು ಬಿದ್ದು ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಗುಜರಾತ್‍ನ ಅಹಮದಾಬಾದ್ ನಗರದಲ್ಲಿ ನಡೆದಿದೆ. ಕಂಕರಿಯಾ ಅಡ್ವೆಂಚರ್ ಪಾರ್ಕ್‌ನಲ್ಲಿನ ಭಾನುವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಪಾರ್ಕ್‌ನಲ್ಲಿದ್ದ `ಡಿಸ್ಕವರಿ’ ಜಾಯ್ ರೈಡ್ ಕುಸಿದು ಬಿದ್ದಾಗ ಅದರಲ್ಲಿ ಸುಮಾರು 40 ಮಂದಿ ಇದ್ದರು ಎನ್ನಲಾಗಿದೆ. ಜಾಯ್ ರೈಡ್ ಆಟ ಆರಂಭವಾಗಿ ಅದು ಮೇಲಕ್ಕೆ ಹೋದ ಬಳಿಕ ದಿಢೀರ್ ಕುಸಿದು ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, […]

2 weeks ago

ಜಗನ್ನಾಥ ರಥಯಾತ್ರೆ ಆರಂಭ- ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಅಮಿತ್ ಶಾ ದಂಪತಿ

ಅಹಮದಾಬಾದ್: ವಾರ್ಷಿಕ ಜಗನ್ನಾಥ ರಥಯಾತ್ರೆ ಇಂದಿನಿಂದ ಶುಭಾರಂಭಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಪತ್ನಿ ಸೋನಾಲ್ ಶಾ ಅವರು ಅಹಮದಾಬಾದ್‍ನ 450 ವರ್ಷಗಳಷ್ಟು ಪುರಾತನ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್‍ನಲ್ಲಿ ನಡೆಯುವ ಈ ಜಗನ್ನಾಥ ರಥಯಾತ್ರೆಯನ್ನು ಒಡಿಶಾದ ಪುರಿಯಲ್ಲಿ ನಡೆಯುವ ರಥಯಾತ್ರೆಗೆ ಹೋಲಿಕೆ ಮಾಡಲಾಗುತ್ತದೆ. ‘ರಥ ಉತ್ಸವ’...

ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

1 month ago

ಗಾಂಧಿನಗರ: ಹೋಟೆಲ್ ಸಂಪ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ನಾಲ್ಕು ಜನ ಪೌರ ಕಾರ್ಮಿಕರು ಸೇರಿದಂತೆ ಒಟ್ಟು ಏಳು ಜನ ಸಾವನ್ನಪ್ಪಿರುವ ಘಟನೆ ವಡೋದರದಲ್ಲಿ ಶನಿವಾರ ನಡೆದಿದೆ. ಗುಜರಾತ್‍ನ ವಡೋದರಾ ಹತ್ತಿರದ ದಾಭೋಯಿ ತೆಹಸಿಲ್‍ನ ಫರ್ಟಿಕುಯಿ ಗ್ರಾಮದ ದರ್ಶನ್ ಹೋಟೆಲ್‍ನಲ್ಲಿ...

ಗುರುವಾರ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ‘ವಾಯು’ – 3 ಲಕ್ಷ ಮಂದಿ ಸ್ಥಳಾಂತರ

1 month ago

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ `ವಾಯು’ ಚಂಡಮಾರುತ ವಾಯು ವೇಗದಲ್ಲಿ ಗುಜರಾತ್‍ನತ್ತ ಮುನ್ನುಗ್ಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಲಕ್ಷದ್ವೀಪ ಸಮೀಪ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗಿದ್ದು ಗುರುವಾರ ಮಧ್ಯಾಹ್ನದ ವೇಳೆ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಮುಂದಿನ...

ಮೂಢನಂಬಿಕೆಗೆ ಕಂದಮ್ಮ ಬಲಿ – ಚಿಕಿತ್ಸೆ ಬದಲು ಬರೆ ಎಳೆದ ತಾಂತ್ರಿಕ

1 month ago

ಗಾಂಧಿನಗರ: ಅನಾರೋಗ್ಯದಿಂದ ಬಳಲುತ್ತಿದ್ದ 1 ವರ್ಷದ ಕಂದಮ್ಮ ಮೂಢನಂಬಿಕೆಗೆ ಬಲಿಯಾಗಿದೆ. ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ವಾಸೆಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಾಸೆಡಾ ಗ್ರಾಮದ ವಿಫುಲ್ ಸಾವನ್ನಪ್ಪಿದ ಮಗು. ವಿಫುಲ್‍ಗೆ ಕಳೆದ 10 ದಿನಗಳಿಂದ ಜ್ವರ ಬಂದಿತ್ತು. ಆದರೆ ಪೋಷಕರು ಮಗುವನ್ನು...

ಮೋದಿ, ಸೋನಿಯಾ, ರಾಹುಲ್ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿ ಅರೆಸ್ಟ್

2 months ago

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ನಾಯಕರ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿಯನ್ನು ರೈಲ್ವೇ ಭದ್ರತಾ ಸಿಬ್ಬಂದಿ (ಆರ್ ಪಿಎಫ್) ಬಂಧಿಸಿದ್ದಾರೆ. ಅದ್ವೇಶ್ ದುಬೆ ಬಂಧಿತ ವ್ಯಾಪಾರಿ. ಅದ್ವೇಶ್ ವ್ಯಾಪಾರ ವೇಳೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು....

ಲಿಫ್ಟ್ ಗೆ ಸಿಕ್ಕಿಕೊಂಡ ಇಯರ್‌ಫೋನ್‌ – ನೆಲಮಹಡಿಯಲ್ಲಿ ಮಹಿಳೆಯ ರುಂಡ, 3ನೇ ಮಹಡಿಯಲ್ಲಿ ದೇಹ

2 months ago

ಗಾಂಧಿನಗರ: ಮಹಿಳೆಯೊಬ್ಬರು ಹಾಕಿಕೊಂಡಿದ್ದ ಇಯರ್‌ಫೋನ್‌ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ಆಕೆಯ ದೇಹದಿಂದ ರುಂಡ ಬೇರಾದ ದುರಂತ ಗುಜರಾತ್‍ನ ವಡೋದರದಲ್ಲಿ ನಡೆದಿದೆ. ವಡೋದರದ ಪ್ಲಾಸ್ಟಿಕ್ ಉತ್ಪನ್ನ ಮಾಡುವ ಫ್ಯಾಕ್ಟರಿಯಲ್ಲಿ ಮಂಗಳವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮಹಿಳೆಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ...

ವಧುವಿನ ಕೈ ಹಿಡಿದ ವರನ ಸಹೋದರಿ!

2 months ago

– ಗುಜರಾತ್‍ನಲ್ಲಿ ನಡೆಯುತ್ತೇ ವಿಚಿತ್ರ ವಿವಾಹ ಗಾಂಧಿನಗರ: ಭಾರತದ ಹಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರಾದಾಯಿಕ ಮದುವೆ ಶೈಲಿಗಳು ಜಾರಿಯಲ್ಲಿದ್ದು, ಗುಜರಾತ್‍ನ ಚೋಟಾ ಉದಯ್‍ಪುರ ಪ್ರದೇಶದ ಬುಡಕಟ್ಟಿನ ಸಮುದಾಯದಲ್ಲಿ ವರನ ಸಹೋದರಿ ವಧುವನ್ನು ಮದುವೆಯಗುವ ಪದ್ಧತಿ ಜಾರಿಯಲ್ಲಿದೆ. ತನ್ನ ಮದುವೆ ಸಮಾರಂಭದಲ್ಲಿಯೇ...