Wednesday, 13th November 2019

3 months ago

ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆ ಸಾವು

ಚಾಮರಾಜನಗರ: ಜಮೀನಿನಲ್ಲಿ ಮೋಟಾರ್‍ ಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕೆಂಪನಪುರದಲ್ಲಿ ನಡೆದಿದೆ. ಗೂಳಿಪುರ ಗ್ರಾಮದ 50 ವರ್ಷದ ಕೆಂಪಮ್ಮ ಮೃತಪಟ್ಟ ಮಹಿಳೆ. ಇವರು ಕಟ್ಟಿಗೆ ತರಲು ತೆರಳಿದ್ದಾಗ ಬೋರ್‍ವೆಲ್ ಮೋಟಾರ್‍ ಗೆ ಅಳವಡಿಸಿದ್ದ ತಂತಿ ಸ್ಪರ್ಶಿಸಿದೆ. ಪರಿಣಾಮ ಕೆಂಪಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೋಹನ್ ಎಂಬವರಿಗೆ ಸೇರಿದ ಬಾಳೆ ತೋಟದಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಸಂತೇಮರಹಳ್ಳಿ ಪಿಎಸ್‍ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ […]

5 months ago

ಇನ್ಫೋಸಿಸ್‍ನಲ್ಲಿ ಕೆಲಸ ಬಿಟ್ಟು ಕೃಷಿಕಳಾದ ಮಹಿಳೆಯ ಯಶೋಗಾಥೆ

-ಎಂಜಿನಿಯರ್ ಆಗುವ ಕನಸು ಸತ್ತಿತ್ತು, ಛಲ ಸತ್ತಿರಲಿಲ್ಲ ರಾಯಚೂರು/ಬಾಗಲಕೋಟೆ : ಕಾಲೇಜು ಕಲಿಯುವ ವೇಳೆ ಪಂಚೆಯುಟ್ಟ ವ್ಯಕ್ತಿಯನ್ನು ನೋಡಿ ಓಡಿ ಹೋಗುತ್ತಿದ್ದ ಮಹಿಳೆ ಇಂದು ಎಂಟು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ಲಕ್ಷಾಂತರ ರೂ. ಸಂಪಾದಿಸುತ್ತಿರುವ ಪ್ರಗತಿ ಪರ ರೈತ ಮಹಿಳೆ, ಪಬ್ಲಿಕ್ ಹೀರೋ ಕವಿತಾ ಮಿಶ್ರಾ ಯುವ ಹಾಗೂ ಮಹಿಳಾ ರೈತರಿಗೆ ಕಿವಿಮಾತು ಹೇಳಿದ್ದಾರೆ....

ಸಿಎಂ ಮಾತಿನಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನ: ರೈತ ಮಹಿಳೆ ಕಣ್ಣೀರು

12 months ago

– ಎಚ್‍ಡಿಕೆ ಮಾತು ಕೇಳಿ ನೊಂದು ನಿದ್ದೆ ಬಂದಿಲ್ಲ ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ ಎಂದು ನೊಂದ ಮಹಿಳೆ ಕಣ್ಣೀರು ಹಾಕಿದ್ದಾರೆ. ಕಬ್ಬು ಬಾಕಿ ಪಾವತಿ, ಸೂಕ್ತ ಬೆಂಬಲ ಬೆಲೆ ನಿಗದಿಗಾಗಿ...

ಗಣಪತಿಗೆ ಪೂಜೆ ಸಲ್ಲಿಸಿ ಮಂಡ್ಯದಲ್ಲಿ ಮಹಿಳೆ ಆತ್ಮಹತ್ಯೆ!

1 year ago

ಮಂಡ್ಯ: ನಾಡಿನಾದ್ಯಂತ ಗುರುವಾರ ಗಣೇಶ ಹಬ್ಬ ಆಚರಿಸುತ್ತಿದ್ದು, ಮಂಡ್ಯದಲ್ಲಿ ಮಹಿಳೆಯೊಬ್ಬರು ಗಣಪತಿಗೆ ಪೂಜೆ ಸಲ್ಲಿಸಿ ಬಳಿಕ ನೇಣಿಗೆ ಶರಣಾದ ಘಟನೆ ನಡೆದಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ದೇವಿರಹಳ್ಳಿ ಗ್ರಾಮದ ಗೌರಮ್ಮ (55) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಇವರು ಗುರುವಾರ...