Saturday, 25th January 2020

4 days ago

ರಾಯಚೂರಿನಲ್ಲಿ ಬೆಳ್ಳಂಬೆಳಿಗ್ಗೆ 5 ಗಂಟೆಗೆ ಮದ್ಯದಂಗಡಿ ಓಪನ್ – ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ

ರಾಯಚೂರು: ಜಿಲ್ಲೆಯಲ್ಲಿ ಸೂರ್ಯೋದಯಕ್ಕೂ ಮುನ್ನ ಬಾರ್ ಗಳ ಬಾಗಿಲು ತೆರೆದಿರುತ್ತವೆ. ಮದ್ಯವ್ಯಸನಿಗಳಂತೂ ಈ ಮದ್ಯದಂಗಡಿಗಳ ಮುಂದೆ ಬೆಳಿಗ್ಗೆ ಐದು ಗಂಟೆಯಿಂದಲೇ ಕಾಯುತ್ತ ಕುಳಿತಿರುತ್ತಾರೆ. ಹೌದು. ರಾಯಚೂರು ನಗರದ ಶ್ರೀ ನಂದಿ ಬಾರ್ ಆ್ಯಂಡ್ ಗಾರ್ಡನ್ ರೆಸ್ಟೋರೆಂಟ್ ಹಾಗೂ ಮಂಜು ವೈನ್ಸ್ ಸೇರಿದಂತೆ ಹಲವು ಮದ್ಯದಂಗಡಿಗಳು ಎಗ್ಗಿಲ್ಲದೆ ಬೆಳ್ಳಂಬೆಳಿಗ್ಗೆ ವ್ಯಾಪಾರ ಶುರು ಮಾಡುತ್ತಿವೆ. ಬೆಳಿಗ್ಗೆ 10:30ರ ನಂತರ ಮದ್ಯದ ಅಂಗಡಿಗಳನ್ನ ತೆರೆಯಬೇಕು ಎನ್ನುವ ನಿಯಮವಿದ್ದರೂ ಅದನ್ನ ಗಾಳಿಗೆ ತೂರಿ ಬೆಳಿಗ್ಗೆ ಐದು ಗಂಟೆಗೆ ಮದ್ಯ ಮಾರಾಟ ನಡೆಯುತ್ತಿದೆ. ಈ […]

2 weeks ago

ಕುಖ್ಯಾತ ಕಲಬೆರಕೆ ಸೇಂದಿ ದಂಧೆಕೋರನ ಬಂಧನ- ಗಡಿಪಾರಿಗೆ ಮುಂದಾದ ಅಧಿಕಾರಿಗಳು

ರಾಯಚೂರು: ಅಬಕಾರಿ ಹಾಗೂ ರಾಯಚೂರಿನ ವಿವಿಧ ಠಾಣೆ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ನರಸಿಂಹಲು ಅಲಿಯಾಸ್ ಬ್ರೂಸ್ಲಿ ಬಂಧಿತ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರ. ವಿವಿಧ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳನ್ನ ಎದುರಿಸುತ್ತಿರುವ ಆರೋಪಿ ನರಸಿಂಹಲು ಬ್ರೂಸ್ಲಿ ಸೇಂದಿ ತಯಾರಿಕೆ ವೇಳೆ ಸಿಕ್ಕಿಬಿದ್ದಿದ್ದಾನೆ. ರಾಯಚೂರಿನ...

ನ್ಯೂ ಇಯರ್ ಕಿಕ್‍ಗೆ ಅಬಕಾರಿ ಸಿದ್ಧತೆ – ದಂಡ ಹಾಕಲು ಬೆಣ್ಣೆ ನಗರಿ ಪೊಲೀಸರು ರೆಡಿ

4 weeks ago

ದಾವಣಗೆರೆ: ಹೊಸ ವರ್ಷ ಆಚರಣೆಗೆ ಇನ್ನೇನೂ ಕೆಲವೇ ಗಂಟೆಗಳು ಬಾಕಿ ಇದ್ದು, ಹೋಟೆಲ್ ರೆಸ್ಟೋರೆಂಟ್, ವೈನ್‍ಗಳಿಗೆ ಮದ್ಯ ಮಾರಾಟ ಮಾಡಿ ಅಬಕಾರಿ ಇಲಾಖೆ ತನ್ನ ಗುರಿ ಮುಟ್ಟಲು ಮುಂದಾದರೆ, ಇತ್ತ ದಾವಣಗೆರೆಯೆ ಪೊಲೀಸರು ಅಂದು ದಂಡ ಹಾಕಲು ರೆಡಿಯಾಗಿದ್ದಾರೆ. ಹೊಸ ವರ್ಷ...

ಒಂದೇ ಕುರ್ಚಿ ಇಬ್ಬರು ಡಿಸಿ – ಸಿಎಂ ತವರಿನಲ್ಲಿ ಅಧಿಕಾರಿಗಳ ಫೈಟ್

4 weeks ago

– ಅಬಕಾರಿ ಇಲಾಖೆಯಲ್ಲಿ ಕಿತ್ತಾಟ ಶಿವಮೊಗ್ಗ: ಸಿಎಂ ತವರಿನ ಅಬಕಾರಿ ಇಲಾಖೆಯ ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಫೈಟ್ ಮಾಡುತ್ತಿದ್ದಾರೆ. ಒಬ್ಬರು ವರ್ಗಾವಣೆ ಆಗಿದ್ದು, ಮತ್ತೊಬ್ಬರು ವರ್ಗಾವಣೆ ಜಾಗಕ್ಕೆ ಬಂದು ಕೂತಿದ್ದಾರೆ. ಆದರೆ ವರ್ಗಾವಣೆ ಆದ ಅಧಿಕಾರಿಯು ಡಿಸಿ ಕುರ್ಚಿ ಬಿಡುವುದಿಲ್ಲ...

ಎಂಎಸ್‍ಐಎಲ್ ಮದ್ಯದ ಅಂಗಡಿ ಮುಚ್ಚಿಸಿ- ಗ್ರಾಮಸ್ಥರ ಆಗ್ರಹ

1 month ago

ಮೈಸೂರು: ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯದಂಗಡಿಗಳನ್ನು ಬಂದ್ ಮಾಡಿಸುವಂತೆ ಮೈಸೂರು ತಾಲೂಕಿನ ಶ್ರೀರಾಂಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಶ್ರೀರಾಂಪುರ ಗ್ರಾಮಕ್ಕೆ ಹೊಂದಿಕೊಂಡಂತೆ ಈಗಾಗಲೇ 6 ಮದ್ಯದಂಗಡಿಗಳಿವೆ. ಇದೀಗ ಎಂಎಸ್‍ಐಎಲ್ ಸಹ ಮದ್ಯದಂಗಡಿ ತೆರೆದಿದ್ದು, ಇದರಿಂದ ಕುಡುಕರ...

ಸೀಜ್ ಮಾಡಿದ್ದ ಮದ್ಯ ಭಾರೀ ಡಿಸ್ಕೌಂಟ್‍ನಲ್ಲಿ ಮಾರಾಟ

2 months ago

ನವದೆಹಲಿ: ಸೀಜ್ ಮಾಡಿದ್ದ ಮದ್ಯವನ್ನು ನಾಶಪಡಿಸುವ ಬದಲು ದೆಹಲಿ ಸರ್ಕಾರ ಭಾರೀ ರಿಯಾಯಿತಿಯಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ರಾಜ್ಯದಲ್ಲಿ ವಿವಿಧ ಇಲಾಖೆಗಳು ಹಲವು ಸಂದರ್ಭದಲ್ಲಿ ಅಕ್ರಮ ಮದ್ಯವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ...

ಬ್ರ್ಯಾಂಡೆಡ್ ಲಿಕ್ಕರ್ ಬೆಲೆ ಇಳಿಕೆ

3 months ago

ನವದೆಹಲಿ: ದೇಶದ ರಾಜಧಾನಿಯಲ್ಲಿ ಕೆಲವೇ ದಿನಗಳಲ್ಲಿ ಬ್ರ್ಯಾಂಡೆಡ್ ಮತ್ತು ವಿದೇಶಿ ಲಿಕ್ಕರ್ ಬೆಲೆಯಲ್ಲಿ ಇಳಿಕೆಯಾಗಲಿದೆ. ಅಂದಾಜು 1 ಸಾವಿರ ರೂ. ಬೆಲೆ ಇಳಿಕೆಯಾಗಲಿದೆ ಎಂದು ವರದಿಯಾಗಿದೆ. ಈಗಾಗಲೇ Chivas Regal, Ballantine Finest ಮತ್ತು Absolut Vodka ತನ್ನ ಬೆಲೆ ಇಳಿಕೆಯನ್ನು...

ರಾಯಚೂರಿನಲ್ಲಿ ನಿಲ್ಲದ ಅಕ್ರಮ ಕಲಬೆರಕೆ ಸೇಂದಿ ಮಾರಾಟ- 1500 ಲೀಟರ್ ಸಿಎಚ್ ಪೌಡರ್ ಜಪ್ತಿ

4 months ago

ರಾಯಚೂರು: ನಗರದಲ್ಲಿ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆ ಜೋರಾಗಿ ನಡೆಯುತ್ತಿದ್ದು, ಅಬಕಾರಿ ಇಲಾಖೆ ನಿರಂತರ ದಾಳಿ ನಡೆಸಿದರೂ ಕ್ಯಾರೇ ಎನ್ನದ ದಂಧೆಕೋರರು ಸೇಂದಿ ಮಾರಾಟ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ನಗರದ ಮೈಲಾರ ನಗರದಲ್ಲಿ ಆರೋಪಿ ಬ್ರೂಸ್ಲಿ ಅಲಿಯಾಸ್ ನರಸಿಂಹಲು ಅಡ್ಡೆ...