Wednesday, 19th June 2019

Recent News

4 days ago

ಕೊಡಗು ಸಂತ್ರಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ: ಹರ್ಷಿಕಾ ಪೂಣಚ್ಚ

ಕೊಡಗು: ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಸ್ಯಾಂಡಲ್‍ವುಡ್‍ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ […]

5 days ago

ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಕೈಜೋಡಿಸಿದ ಕಿಚ್ಚ ಸುದೀಪ್

ಬೆಂಗಳೂರು: ಕೊಡಗಿನಲ್ಲಿ ಸುಸಜ್ಜಿತವಾದ ಒಂದು ಆಸ್ಪತ್ರೆ ಇಲ್ಲ ಎಂದು ಅಲ್ಲಿ ಜನತೆ #WeNeedEmergencyHospitalInKodagu ಎಂಬ ಟ್ಟಿಟ್ಟರ್ ಅಭಿಯಾನ ಒಂದನ್ನು ಶುರು ಮಾಡಿದ್ದರು. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೊಡ ಬೆಂಬಲ ಸೂಚಿಸಿದ್ದಾರೆ. ಈ ಅಭಿಯಾನಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ, ಪವರ್ ಸ್ಟಾರ್...

ಕೋಲಾರ ಸಂಸದ ಮುನಿಸ್ವಾಮಿಗೆ ಬಿಸಿ ಮುಟ್ಟಿಸಿದ ಆಯೋಗ

3 weeks ago

ಕೋಲಾರ: ಈ ಬಾರಿ ಲೊಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾದ ಎಸ್ ಮುನಿಸ್ವಾಮಿ ಅವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ. ಜಿಲ್ಲೆಯಲ್ಲಿ ಲೋಕಸಭಾ ಸಮರ ಮುಗಿದಿದ್ದು, ಈಗ ಪುರಸಭೆ ಚುನಾವಣಾ ಕಾವು ಹೆಚ್ಚಾಗಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರವನ್ನು...

ಲಂಬಾಣಿ ಡ್ರೆಸ್‍ನಲ್ಲಿ ಶೋಭಾ ಕರಂದ್ಲಾಜೆ ಮಿಂಚಿಂಗ್

1 month ago

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಲಂಬಾಣಿ ಡ್ರೆಸ್‍ನಲ್ಲಿ ಫುಲ್ ಮಿಂಚಿದ್ದಾರೆ. ಚಿಂಚೋಳಿ ತಾಲೂಕಿನ ಚಿಂದಾನೂರ ತಾಂಡದಲ್ಲಿ ಇಂದು ಶೋಭಾ ಕರಂದ್ಲಾಜೆ ಪ್ರಚಾರ ಮಾಡಿದರು. ಈ ವೇಳೆ ಲಂಬಾಣಿ ಉಡುಗೆ ತೊಟ್ಟು, ತಾಂಡಾದ ಜನರ...

ಕಾಂಗ್ರೆಸ್ಸಿಗರು ಬಿಜೆಪಿಗೆ ಬರೋದನ್ನ ನನ್ ಜೊತೆ ಯಾಕೆ ಕೇಳ್ತೀರಿ – ಈಶ್ವರಪ್ಪ ಫುಲ್ ಗರಂ

1 month ago

– ಅನೇಕ ‘ಕೈ’ ನಾಯಕರು ಸಿಎಂ ಹುದ್ದೆಗೆ ಟವಲ್ ಹಾಕಿದ್ದಾರೆ ಹುಬ್ಬಳ್ಳಿ: ಕಾಂಗ್ರೆಸ್ಸಿಗರು ಬಿಜೆಪಿಗೆ ಬರುವ ಬಗ್ಗೆ ನನ್ನ ಬಳಿ ಯಾಕೆ ಕೇಳುತ್ತೀರಿ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಮಾಧ್ಯಮಗಳ ವಿರುದ್ಧ ಫುಲ್ ಗರಂ...

ನೀವು ಹೇಳಿದವರಿಗೆ ನಿಮ್ಮ ಪತಿ ಮತ ಹಾಕದಿದ್ರೆ ಊಟ ಕೊಡಬೇಡಿ: ನಿತೀಶ್ ಕುಮಾರ್

2 months ago

ಪಾಟ್ನಾ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮಹಿಳೆಯರಿಗೆ ವಿಚಿತ್ರ ಸಲಹೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಬಿಹಾರದ ಮಧುಬಾನಿಯಲ್ಲಿ ಬುಧವಾರ ನಡೆದ ಪ್ರಚಾರದ ವೇಳೆ ಮಾತನಾಡಿದ ಅವರು, ಪತಿ ಹಾಗೂ...

ಕೈ ಪರ ಪ್ರಚಾರ – ಕುಸ್ತಿಪಟು ನರಸಿಂಗ್ ಯಾದವ್ ವಿರುದ್ಧ ಎಫ್‍ಐಆರ್

2 months ago

ಮುಂಬೈ: ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದ ಖ್ಯಾತ ಕುಸ್ತಿಪಟು ನರಿಸಿಂಗ್ ಯಾದವ್ ವಿರುದ್ಧ ಮಹಾರಾಷ್ಟ್ರದ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ನರಸಿಂಗ್ ಯಾದವ್ ಅವರು ಮಹಾರಾಷ್ಟ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ ನಾಯಕ, ಮುಂಬೈ ವಾಯುವ್ಯ...

ಒಂದು ಅವಕಾಶ ಕೊಡಿ, 5 ವರ್ಷ ನಿಮ್ಮ ಸೇವಕನಾಗಿ ಕೆಲ್ಸ ಮಾಡ್ತೀನಿ : ಉಮೇಶ್ ಜಾಧವ್

2 months ago

– ಕುಸ್ತಿ ಆಡಲು ಸಿದ್ಧನಾಗಿದ್ದೇನೆ, ಸಾಥ್ ಕೊಡಿ – ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲೇ ಹೆಚ್ಚು ಮಕ್ಕಳು ಸಾವನಪ್ಪಿದ್ದಾರೆ – ವೇದಿಕೆ ಮೇಲೆ ಸಾಷ್ಟಾಂಗ ನಮಸ್ಕಾರ ಹಾಕಿದ ಉಮೇಶ್ ಜಾಧವ್ ಕಲಬುರಗಿ: ನಿಮಗೆ ಕೈ ಜೋಡಿಸಿ ವಿನಂತಿ ಮಾಡುತ್ತೇನೆ ನನಗೆ ಒಂದು ಅವಕಾಶ...