Monday, 18th March 2019

Recent News

8 months ago

ಆಡು ಮೇಯಿಸಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಸಹೋದರಿಬ್ಬರ ದುರ್ಮರಣ

ಕಲಬುರಗಿ: ವಿದ್ಯುತ್ ತಂತಿ ತಗುಲಿ ಇಬ್ಬರು ಸಹೋದರರು ಹಾಗೂ ಮೂರು ಆಡುಗಳು ಸಾವನಪ್ಪಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದಿದೆ. ಇಜೇರಿ ಗ್ರಾಮದ ದೇವಪ್ಪಾ(14) ಹಾಗೂ ರಾಜು (10) ಮೃತ ಸಹೋದರರಾಗಿದ್ದಾರೆ. ಇಂದು ಇಬ್ಬರು ಬಾಲಕರು ಹೊಲದಲ್ಲಿ ಆಡುಗಳನ್ನು ಮೇಯಿಸಲು ಹೋದಾಗ, ಹೊಲದಲ್ಲಿರುವ ತಂತಿ ಬೇಲಿಯನ್ನು ದಾಟುವ ವೇಳೆ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜೊತೆ ಮೂರು ಆಡುಗಳು ಸಹ ಸಾವನ್ನಪ್ಪಿವೆ. ಪಂಪಸೆಂಟ್ ಗೆ ಸಂಪರ್ಕಿಸಿದ್ದ ವಿದ್ಯುತ್ ತಂತಿಯೊಂದು ತಂತಿ ಬೇಲಿ ಮೇಲೆ […]

9 months ago

ಲ್ಯಾಬ್‍ನಲ್ಲಿ ಎಟಿಎಂ ಎಗರಿಸಿ, 20 ಸಾವಿರ ರೂ. ಡ್ರಾ: ಬಾಲಕರ ಕೈಚಳಕ

ಶಿವಮೊಗ್ಗ: ಮೆಡಿಕಲ್ ಲ್ಯಾಬೋರೇಟರಿಯಲ್ಲಿ ಇಬ್ಬರು ಬಾಲಕರು ಚಾಣಾಕ್ಷತನದಿಂದ ಎಟಿಎಂ ಎಗರಿಸಿ, 20 ಸಾವಿರ ರೂಪಾಯಿ ಡ್ರಾ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕಿನ ಮತ್ತಿಗಟ್ಟದ ಮಲ್ಲೇಶಪ್ಪ ಎಟಿಎಂ ಜೊತೆ ಹಣವನ್ನೂ ಕಳೆದುಕೊಂಡ ವ್ಯಕ್ತಿ. ಇದೇ ವರ್ಷ ಮಾರ್ಚ್ 7 ರಂದು ಮಲ್ಲೇಶಪ್ಪ ಅವರು ತಮ್ಮ ಮಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬಂದಾಗ...

ನಡುರಸ್ತೆಯಲ್ಲೇ ಅಪ್ರಾಪ್ತೆಯ ಬಟ್ಟೆ ಬಿಚ್ಚಿ ಬಾಲಕರಿಂದ ಲೈಂಗಿಕ ಕಿರುಕುಳ – ವಿಡಿಯೋ ವೈರಲ್

11 months ago

ಪಾಟ್ನಾ: 6ಕ್ಕೂ ಹೆಚ್ಚು ಅಪ್ರಾಪ್ತ ಬಾಲಕರು ಅಪ್ರಾಪ್ತೆಯ ಬಟ್ಟೆಯನ್ನು ಬಿಚ್ಚಿಸಿ ನಡು ರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದ ಜಹಾನಬಾದ್‍ನಲ್ಲಿ ನಡೆದಿದೆ. ಅಪ್ರಾಪ್ತೆಯ ಕೈ ಹಿಡಿದು ಎಳೆದುಕೊಂಡು ಹೋಗುತ್ತಾ ಹುಡುಗರು ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಾಲಕಿ ಆ ಹುಡುಗರಿಂದ...

ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

11 months ago

ಕೋಲಾರ/ಚಿತ್ರದುರ್ಗ: ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ. ಭವ್ಯ (10) ಮತ್ತು ಶಿಲ್ಪಾ(7) ಮೃತ ಸಹೋದರಿಯರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಗುರುವಾರ ಆಟವಾಡಲು ಹೋದಾಗ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಶಿಲ್ಪಾಳ ಶವ ದೊರಕಿದ್ದು,...

ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಹೈಲೈಟ್ಸ್ ಇಲ್ಲಿದೆ

1 year ago

ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತೀ ಬಾರಿಯೂ ಬೇರೆ ಬೇರೆ ರಾಜ್ಯಗಳಿಂದ ತಮ್ಮ ಸಂಸ್ಕೃತಿ, ಹಿರಿಮೆ, ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಬಳಿಕ ಅವುಗಳನ್ನು ಪರೇಡ್ ವೇಳೆ ಪ್ರದರ್ಶನ ಮಾಡಲಾಗುತ್ತದೆ. ಇದರಲ್ಲಿ ಕರ್ನಾಟಕದ ಟ್ಯಾಬ್ಲೋ ಕೂಡ ಒಂದಾಗಿದೆ. ಈ ಬಾರಿ ಕರ್ನಾಟಕ ಟ್ಯಾಬ್ಲೋದಲ್ಲಿ...

ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲು

1 year ago

ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ದೊಡ್ಡ ಕೆರೆಯಲ್ಲಿ ನಡೆದಿದೆ. 12 ವರ್ಷದ ಲೋಕೇಶ್ ನಾಗರಾಜ ತಟ್ಟಿ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಮತ್ತೊಬ್ಬನ ಶವ ಪತ್ತೆಯಾಗದ ಕಾರಣ ಬಾಲಕನ ಗುರುತು ಪತ್ತೆಯಾಗಿಲ್ಲ....

ಈಜಲು ಹೋಗಿ ಮೂವರು ಬಾಲಕರು ನೀರುಪಾಲು

1 year ago

ಚಿತ್ರದುರ್ಗ: ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಹೆಗ್ಗೆರೆ ಗ್ರಾಮದ ಕೆಂಪರಾಜ್ (14), ಕಾಂತರಾಜ್ (14) ಹಾಗು ಮಹಾಂತೇಶ್ ನೀರುಪಾಲಾದ ಬಾಲಕರು. ಶುಕ್ರವಾರ ಮಧ್ಯಾಹ್ನ ಈಜಲು...

ಸಮುದ್ರದಲ್ಲಿ ಆಟವಾಡಲು ಹೋಗಿ ಇಬ್ಬರು ಬಾಲಕರು ನೀರುಪಾಲು

1 year ago

ಕಾರವಾರ: ಆಟವಾಡಲು ಸಮುದ್ರಕ್ಕೆ ತೆರಳಿದ್ದ ಬಾಲಕರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು...