Thursday, 18th July 2019

Recent News

7 months ago

ಅಯೋಧ್ಯೆ: ನಮಾಜ್‍ಗೆ ಮನವಿ ಸಲ್ಲಿಸಿ 5 ಲಕ್ಷ ರೂ. ದಂಡಕ್ಕೆ ಗುರಿಯಾದ್ರು

ಲಕ್ನೋ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿವಾದಿತ ಜಾಗದಲ್ಲಿ ನಮಾಜ್‍ಗೆ ಅವಕಾಶ ಕೋರಿದ್ದ ಅರ್ಜಿದಾರರಿಗೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ 5 ಲಕ್ಷ ರೂ.ಗಳ ದಂಡ ವಿಧಿಸಿದೆ. ಅಲ್ ರಹಮಾನ್ ಟ್ರಸ್ಟ್ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿವಾದಿತ ಜಾಗದಲ್ಲಿ ನಮಾಜ್‍ಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನ್ಯಾಯಮೂರ್ತಿ ಡಿ.ಕೆ ಅರೋರಾ ಮತ್ತು ಅಲೋಕ್ ಮಾಥುರ್ ದ್ವಿಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿ ಅರ್ಜಿ ವಜಾಗೊಳಿಸಿದೆ. ಅರ್ಜಿದಾರರು ಪ್ರಚಾರಕ್ಕಾಗಿ ಕೆಟ್ಟ ದಾರಿ ಹಿಡಿದಿದ್ದಾರೆ. […]

7 months ago

ಶ್ರೀರಾಮ, ಆಂಜನೇಯ ಆರಾಧನೆ-88 ಲಕ್ಷ ರಾಮಕೋಟಿ ಬರೆದಿದ್ದಾರೆ ಬಂಗಾರಪೇಟೆಯ ಪಾಚಾಸಾಬ್

ಕೋಲಾರ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹಿಂದೂ-ಮುಸಲ್ಮಾನರ ನಡುವೆ ಕಾನೂನು ಸಮರ ನಡೀತಿದೆ. ಜೊತೆಗೆ ರಾಮನನ್ನು ಮುಸ್ಲೀಮರು ದ್ವೇಷಿಸ್ತಾರೆ ಅನ್ನೋ ಟೀಕೆಯೂ ಇದೆ. ಆದ್ರೆ, ಕೋಲಾರದ ಪಬ್ಲಿಕ್ ಹೀರೋ ಪಾಚಾ ಸಾಬ್ ವಿರೋಧವೇ ಸರಿ. 88 ಲಕ್ಷ ರಾಮಕೋಟಿ ಬರೆದಿದ್ದಾರೆ. ಕೋಲಾರದ ಬಂಗಾರಪೇಟೆಯ ಮಾಗೊಂದಿ ಗ್ರಾಮದ 96 ವರ್ಷದ ಪಾಚಾಸಾಬ್ ಶ್ರೀರಾಮನ ಆರಾಧಕರಾಗಿದ್ದು, ಕೋಟಿ ಶ್ರೀರಾಮಕೋಟಿ ಬರೆದು...

ರಾಮನ ಕಾರ್ಯ ಆಗದೇ ನಮಗೆ ವಿರಾಮ ಇಲ್ಲ, ಆರಾಮವಿಲ್ಲ- ಪೇಜಾವರ ಶ್ರೀ

8 months ago

– ನಾನು ಬದುಕಿರುವಾಗಲೇ ರಾಮ ಮಂದಿರ ನಿರ್ಮಾಣವಾಗಬೇಕು ಬೆಂಗಳೂರು: ಅಯೋಧ್ಯೆಯಲ್ಲಿ ರಾಮನ ಕಾರ್ಯ ಆಗದೇ ನಮಗೆ ವಿರಾಮ ಇಲ್ಲ, ಆರಾಮವಿಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಹೇಳಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ...

ರಾಮ ಮಂದಿರಕ್ಕೆ ಕಾಂಗ್ರೆಸ್ ವಿರೋಧಿಸಿದರೆ ಚುನಾವಣೆಯಲ್ಲಿ ಪಾಠ: ಪೇಜಾವರ ಶ್ರೀ

8 months ago

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧಿಸಿದರೆ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಉಡುಪಿಯ ಪೇಜಾವರ ಶ್ರೀಗಳು ಹೇಳಿದ್ದಾರೆ. ನಗರದಲ್ಲಿ ನಡೆಯುತ್ತಿರುವ ರಾಮ ಮಂದಿರ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಕೋರ್ಟ್ ನಿಂದ ಹೊರಗೆ ಮಂದಿರ ನಿರ್ಮಾಣದ...

ರಾಮ ಮಂದಿರ ನಿರ್ಮಾಣವಾದಗಲೇ ದೇಶದಲ್ಲಿ ಅಚ್ಛೇ ದಿನ್ ಬರಲಿದೆ: ಸೋಹನ್ ಸಿಂಗ್ ಸೋಲಂಕಿ

8 months ago

ಮಂಗಳೂರು: ರಾಮಮಂದಿರ ನಿರ್ಮಾಣ ಆದಾಗಲೇ ದೇಶದಲ್ಲಿ ಅಚ್ಛೇ ದಿನ್ ಬರಲಿದೆ ಎಂದು ಬಜರಂಗದಳ ರಾಷ್ಟ್ರೀಯ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶ ಟಿಪ್ಪು, ಅಕ್ಬರ್,...

ಅಯೋಧ್ಯೆ ರಾಮಮಂದಿರ ವಿಚಾರಣೆ – ನ್ಯಾಯಾಧೀಶರಿಗೆ ಕಾಂಗ್ರೆಸ್ ಬೆದರಿಕೆ ಹಾಕಿತ್ತು : ಪ್ರಧಾನಿ ಮೋದಿ

8 months ago

ಜೈಪುರ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಮಮಂದಿರ ವಿವಾದ ಪ್ರಕರಣದ ವಿಚಾರಣೆಯನ್ನು ತಡಮಾಡುವಂತೆ ಕಾಂಗ್ರೆಸ್ ಹೇಳಿತ್ತು. ಅಲ್ಲದೇ ಇದನ್ನು ನಿರಾಕರಿಸಿದ ನ್ಯಾಯಮೂರ್ತಿಗಳಿಗೆ ಮಹಾಭಿಯೋಗ ಮಾಡುವುದಾಗಿ ಬೆದರಿಕೆ ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಮಧ್ಯಪ್ರದೇಶದ ಅಲ್ವಾರ್ ಚುನಾವಣಾ...

ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ

8 months ago

ಉಡುಪಿ: ಸರ್ಕಾರ ಬಿದ್ದರೂ ಪರವಾಗಿಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ವಿಶ್ವ ಹಿಂದೂ...

ರಾಮ ಮಂದಿರ ಜನಜಾಗೃತಿ ಸಭೆಗೆ ಉಚಿತ ಬಸ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

8 months ago

ಮಂಗಳೂರು: ನಗರದಲ್ಲಿ ಆಯೋಜಿಸಿರುವ ರಾಮ ಮಂದಿರ ಉದ್ದೇಶಿತ ಜನಜಾಗೃತಿ ಸಭೆಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ಜನಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ...