Sunday, 19th May 2019

6 months ago

ರಾಷ್ಟ್ರದ ಜನಪ್ರಿಯ ನಾಯಕರೊಬ್ರು ಅಸ್ತಂಗತವಾಗ್ತಿದ್ದಾರೆ- ಎಸ್‍.ಎಂ ಕೃಷ್ಣ ಸಂತಾಪ

ಬೆಂಗಳೂರು: ನನ್ನ ಸ್ನೇಹಿತರಾದಂತಹ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಹಠಾತ್ ನಿಧನ ನನಗೆ ಹಾಗೂ ಅವರ ಸಹಸ್ರಾರು ಸ್ನೇಹಿತರಿಗೆ ಬಹಳ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಮೂಲಕ ಇಂದು ರಾಷ್ಟ್ರದ ಜನಪ್ರಿಯ ನಾಯಕರೊಬ್ಬರು ಅಸ್ತಂಗತವಾಗ್ತಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಮಂತ್ರಿ ಎಸ್. ಎಂ ಕೃಷ್ಣ ಸಂತಾಪ ಸೂಚಿಸಿದ್ದಾರೆ. ಅನಂತ್ ಕುಮಾರ್ ಅವರ ಬೆಂಗಳೂರು ನಿವಾಸದಲ್ಲಿ ಸಚಿವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಯಾವುದೇ ಜ್ವಲಂತ ಸಮಸ್ಯೆ ಎದುರು […]

6 months ago

ರಾಜಕೀಯಕ್ಕೆ ಪ್ರವೇಶಿಸಿದ್ದಾಗ ಶಿಷ್ಯ ಅನಂತ್‍ಗೆ ಒಂದು ಸಂದೇಶ ಕಳುಹಿಸಿದ್ದೆ- ಶಿಕ್ಷಕಿ ಸುಜ್ಞಾನಮ್ಮ

ಬೆಂಗಳೂರು: ಅನಂತ ಕುಮಾರ್ ರಾಜಕೀಯಕ್ಕೆ ಪ್ರವೇಶಿಸಿದ್ದಾಗ ನಾನು ಆತನಿಗೆ ಒಂದು ಸಂದೇಶ ಕಳುಹಿಸಿದೆ ಎಂದು ಅವರ ಶಿಕ್ಷಕರಾದ ಸುಜ್ಞಾನಮ್ಮ ಅವರು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ. ಶಿಕ್ಷಕಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು ಹೀಗೆ ಅನಂತ ಅವರಿಗೆ ನಾನು 4ನೇ ತರಗತಿಯಿಂದ 7ನೇ ತರಗತಿವರೆಗೂ ಶಿಕ್ಷಕಿಯಾಗಿದ್ದೆ. ಆದರೆ 4ನೇ ತರಗತಿಯಲ್ಲಿ ನಾನು ಕ್ಲಾಸ್ ಟೀಚರ್ ಆಗಿದ್ದೆ. 7ನೇ ತರಗತಿವರೆಗೂ...

ಭಾರತೀಯ ಜನತಾ ಪಕ್ಷದ ಬ್ರೈನ್: ನಟ ಜಗ್ಗೇಶ್

6 months ago

ಬೆಂಗಳೂರು: ನಟ ಜಗ್ಗಶ್ ಕೇಂದ್ರ ಸಚಿವ ಅನಂತಕುಮಾರ್ ಅಂತಿಮ ದರ್ಶನ ಪಡೆದು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅನಂತಕುಮಾರ್ ಅವರ ಅಂತಿಮ ದರ್ಶನ್ ಪಡೆದ ಮಾಧ್ಯಮಗಳ ಜೊತೆ ಮಾತನಾಡಿದ ನಟ ಜಗ್ಗೇಶ್, ಅನಂತಕುಮಾರ್ ಅವರು ನಾನು ಕಂಡಂತಹ ಅದ್ಭುತ, ಸಜ್ಜನ ಮತ್ತು...

ಅನಂತ ಕುಮಾರ್ ಅಂತಿಮ ದರ್ಶನ ಪಡೆದ ಪವರ್ ಸ್ಟಾರ್

6 months ago

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಎಚ್.ಎನ್. ಅನಂತಕುಮಾರ್ (59) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ...

ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದ ಅನಂತ ಕುಮಾರ್: ಸಾಧನೆಯ ಅನಂತ ಪಥ ಓದಿ

6 months ago

ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಭಾರತೀಯ ಜನತಾ ಪಕ್ಷದಿಂದ ನಿರಂತರ ಗೆಲುವಿನೂಂದಿಗೆ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಪ್ರಭಾವಿ ರಾಜಕಾರಣಿಯಾಗಿದ್ದರು. ರಾಜಕೀಯ ಜೀವನವೇ ವರ್ಣ ರಂಜಿತ. ಬಿಜೆಪಿಯ ಕಟ್ಟಾ ಅನುಯಾಯಿ, ಆರ್‍ಎಸ್‍ಎಸ್ ತತ್ವ ಸಿದ್ಧಾಂತದ ಪ್ರತಿಪಾದಕಾರಾಗಿದ್ದ ಅನಂತ...

ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಕರ್ನಾಟಕವನ್ನು ಸಮರ್ಥಿಸಿಕೊಳ್ತಿದ್ರು: ಸಿದ್ದರಾಮಯ್ಯ

6 months ago

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಅಗಲಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಬಹಳ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರು ಅಕಾಲಿಕೆ...

ಕೇಂದ್ರ ಸಚಿವ ಅನಂತ್ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ

6 months ago

ಬೆಂಗಳೂರು: ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ಅವರು ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕಾಂಗ್ರೆಸ್ ನಾಯಕರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರು ಅನಂತ್ ಅವರ ನಿಧನಕ್ಕೆ ಟ್ವಿಟ್ಟರಿನಲ್ಲಿ,...

ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ವಿಚಾರದಲ್ಲಿ ನನಗಿಂತ ದೊಡ್ಡವರಾಗಿದ್ದರು: ಜೀವದ ಗೆಳೆಯನಿಗೆ ಶ್ರೀನಾಥ್ ಕಂಬನಿ

6 months ago

ಬೆಂಗಳೂರು: ಅನಂತ್ ಜೀಗೆ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ? ಎಂದು ಹೇಳುತ್ತಾ ಹಿರಿಯ ನಟ ಶ್ರೀನಾಥ್ ಅವರು ಕೇಂದ್ರ ಸಚಿವ ಅನಂತ್‍ಕುಮಾರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅನಂತ್ ಜೀಗೆ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ? ಎಂಬುದು ನನಗೆ ಕಾಡುತ್ತಿದೆ. ಅವರು...