Connect with us

Bengaluru City

ರಾಷ್ಟ್ರದ ಜನಪ್ರಿಯ ನಾಯಕರೊಬ್ರು ಅಸ್ತಂಗತವಾಗ್ತಿದ್ದಾರೆ- ಎಸ್‍.ಎಂ ಕೃಷ್ಣ ಸಂತಾಪ

Published

on

ಬೆಂಗಳೂರು: ನನ್ನ ಸ್ನೇಹಿತರಾದಂತಹ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಹಠಾತ್ ನಿಧನ ನನಗೆ ಹಾಗೂ ಅವರ ಸಹಸ್ರಾರು ಸ್ನೇಹಿತರಿಗೆ ಬಹಳ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಮೂಲಕ ಇಂದು ರಾಷ್ಟ್ರದ ಜನಪ್ರಿಯ ನಾಯಕರೊಬ್ಬರು ಅಸ್ತಂಗತವಾಗ್ತಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಮಂತ್ರಿ ಎಸ್. ಎಂ ಕೃಷ್ಣ ಸಂತಾಪ ಸೂಚಿಸಿದ್ದಾರೆ.

ಅನಂತ್ ಕುಮಾರ್ ಅವರ ಬೆಂಗಳೂರು ನಿವಾಸದಲ್ಲಿ ಸಚಿವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಯಾವುದೇ ಜ್ವಲಂತ ಸಮಸ್ಯೆ ಎದುರು ಬಂದಾಗ ನನ್ನ ಕಣ್ಣಿಗೆ ದೆಹಲಿ ಮಟ್ಟದಲ್ಲಿ ಕಾಣುತ್ತಿದ್ದ ಮೊದಲಿಗ ಅಂದ್ರೆ ಅದು ಅನಂತ್ ಕುಮಾರ್ ಅವರಾಗಿದ್ದರು. ನದಿ ನೀರು, ಗಡಿ ಪ್ರಶ್ನೆ ಇರಬಹುದು ಅಥವಾ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಎಲ್ಲಾ ವಿಚಾರಗಳಲ್ಲಿಯೂ ನಾನು ಮತ್ತು ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡ ನನ್ನ ಭುಜಕ್ಕೆ ಭುಜ ಕೊಟ್ಟು ಕರ್ನಾಟಕದ ಬೆಳವಣಿಗೆಗೆ ಸರ್ವತೋಮುಖವಾಗಿ ಸಹಕಾರ ಕೊಟ್ಟು ಸಹಾಯ ಮಾಡಿದ ಅವರನ್ನು ಇಂದು ನಾನು ಅತ್ಯಂತ ಬೇಸರದಿಂದ ಸ್ಮರಿಸಿಕೊಳ್ಳುತ್ತಿದ್ದೇನೆ ಅಂತ ಹೇಳಿದ್ರು.

ಅನಂತ್ ಕುಮಾರ್ ಅವರು ವಿಶೇಷ ಗುಣವೆಂದರೆ, ಎಲ್ಲರೂ ನನ್ನವರೇ ಎಂಬ ಅತ್ಯಂತ ದೊಡ್ಡ ಹೃದಯ ವೈಶಾಲ್ಯದಿಂದ ಜನರನ್ನು ನೋಡುತ್ತಿದ್ದರು. ಇದು ಕೇವಲ ರಾಜ್ಯ ಮಟ್ಟದಲ್ಲಿ ಅಲ್ಲ. ರಾಷ್ಟ್ರಮಟ್ಟದಲ್ಲೂ ಅವರ ಗುಣ ಇದೇ ಆಗಿತ್ತು. ನಾನು ವಿದೇಶಾಂಗ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ವಿರೋಧ ಪಕ್ಷದಲ್ಲಿ ನೋಡುತ್ತಿದ್ದೆ. ಆ ವೇಳೆ ಅನಂತ್ ಅವರು ಇಡೀ ದೇಶದಲ್ಲಿ ತಮ್ಮ ವ್ಯಕ್ತಿತ್ವದ ಛಾಯೆಯ ಛಾಪು ಮೂಡಿಸಿದ್ರು. ಆದ್ರೆ ವಿಧಿ ತನ್ನ ಕೈವಾಡ ಮಾಡುತ್ತಲೇ ಇರುತ್ತದೆ. ಇಂದು ಅತ್ಯಂತ ಜನಪ್ರಿಯ ನಾಯಕನೊಬ್ಬ ರಾಷ್ಟ್ರದಿಂದ ಅಸ್ತಂಗತವಾಗುತ್ತಿದ್ದಾರೆ. ಅವರಿಗೆ ನನ್ನ ಗೌರವಪೂರ್ಣ ನಮನ ಸಲ್ಲಿಸಲು ಅವರ ಮನೆಗೆ ಬಂದಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೃಷ್ಣ ಅವರು ಸಂತಾಪ ಸೂಚಿಸಿದ್ರು.

https://www.youtube.com/watch?v=48qGsizNGvg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *