[Ruby_E_Template id="1354606"]
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಏಕದಿನ ಕ್ರಿಕೆಟ್‌ಗೆ ಆರನ್ ಫಿಂಚ್ ವಿದಾಯ

Public TV
Last updated: September 10, 2022 4:30 pm
Public TV
1 Min Read

ಕ್ಯಾನ್‌ಬೆರಾ: ಆಸ್ಟ್ರೇಲಿಯಾ (Australia) ತಂಡದ ನಾಯಕ ಆರನ್ ಫಿಂಚ್ (Aaron Finch) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದು, ಭಾನುವಾರ ನ್ಯೂಜಿಲೆಂಡ್ ವಿರುದ್ಧ 3ನೇ ಪಂದ್ಯದ ಬಳಿಕ ಅವರು ಏಕದಿನ ಕ್ರಿಕೆಟ್‌ (ODI Cricket)ಗೆ ನಿವೃತ್ತಿ ಘೋಷಿಸಲಿದ್ದಾರೆ. ಬಳಿಕ ಫಿಂಚ್ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.

⭐️ 145 ODIs
⭐️ 5401 runs
⭐️ 17 centuries
⭐️ 2020 Aus men’s ODI Player of the Year
⭐️ 2015 World Cup winner https://t.co/60KYlfwhMq

— Cricket Australia (@CricketAus) September 9, 2022

ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಕಳೆದ ವರ್ಷ ಯುಎಇ (UAE) ಆತಿಥ್ಯದಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್ (World Cup) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೇ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯುವ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಫಿಂಚ್ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

145 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಆರನ್ ಫಿಂಚ್ 5,401 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 17 ಶತಕಗಳೂ ಇವೆ. ಅಲ್ಲದೇ 2020ರಲ್ಲಿ ಆಸ್ಟ್ರೇಲಿಯಾ ಪುರುಷರ ಏಕದಿನ ಕ್ರಿಕೆಟ್ ವಿಭಾಗದ `ಪ್ಲೇಯರ್ ಆಫ್ ದಿ ಯಿಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 2015ರ ವಿಶ್ವಕಪ್ ಗೆಲ್ಲಲ್ಲು ಪ್ರಮುಖ ಪಾತ್ರ ವಹಿಸಿದ್ದಾರೆ.

ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿತ್ತು. ಆದರೆ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಫಿಂಚ್, ನನ್ನ ಕ್ರಿಕೆಟ್ ಬದುಕಿನ ಈ ಪಯಣ ಕೆಲವು ಅಸಾಧಾರಣ ನೆನಪುಗಳಿಂದ ಕೂಡಿದೆ. ಆಸ್ಟ್ರೇಲಿಯಾ ಏಕದಿನ ತಂಡದ ಸದಸ್ಯನಾಗಿದ್ದಕ್ಕೆ ನಾನು ತುಂಬಾ ಸಂತಸ ಪಡುತ್ತೇನೆ. ನನ್ನ ಜೊತೆ ಆಡಿದ ಹಾಗೂ ತೆರೆಮರೆಯಲ್ಲಿ ನನಗೆ ಸದಾ ಪ್ರೋತ್ಸಾಹಿಸುತ್ತಿದ್ದ ಹಲವರಿಂದ ನಾನು ಆಶೀರ್ವದಿಸಲ್ಪಟ್ಟಿದ್ದೇನೆ ಎಂದಿದ್ದಾರೆ.

Aaron Finch. What a sensational ODI career! ⭐️ pic.twitter.com/2dAiUch8Cs

— cricket.com.au (@cricketcomau) September 10, 2022

ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿ ಇಂದಿನಿಂದಲೇ ತಯಾರಿ ಆರಂಭಿಸಲು ನೆರವಾಗುವ ನಿಟ್ಟಿನಲ್ಲಿ ನಾನು ನಾಯಕತ್ವವನ್ನು ಬೇರೆ ಆಟಗಾರನಿಗೆ ವಹಿಸಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:Aaron FinchaustraliacricketT20 World Cupworld cupಆರನ್ ಫಿಂಚ್ಆಸ್ಟ್ರೇಲಿಯಾಕ್ರಿಕೆಟ್ಟಿ20ವಿಶ್ವಕಪ್
Leave a Comment

Leave a Reply

Your email address will not be published. Required fields are marked *

You Might Also Like

Cinema

ಕಾಂತಾರ ಸಿನಿಮಾಕ್ಕಾಗಿ ಇಡೀ ಥಿಯೇಟರ್‌ ಬುಕ್‌ ಮಾಡಿದ ಪ್ರತಾಪ್‌ ಸಿಂಹ

Public TV
By Public TV
3 hours ago
Cinema

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

Public TV
By Public TV
3 hours ago
Districts

ಕಲಬುರಗಿಗೂ ಕಾಲಿಟ್ಟ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ: ಹಿಂದೂ ಸಂಘಟನೆಗಳಿಂದ ಆಕ್ರೋಶ

Public TV
By Public TV
4 hours ago
Dharwad

ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ

Public TV
By Public TV
4 hours ago
Chikkaballapur

ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

Public TV
By Public TV
5 hours ago
Bagalkot

2021ನೇ ಸಾಲಿನ ಪ್ರಶಸ್ತಿ ಘೋಷಣೆ – ಚಾರ್ಲಿ 777 ಚಿತ್ರದ ನಟನೆಗೆ ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account