Tag: ಸ್ಯಾಂಡಲ್‍ವುಡ್

  • ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಪ್ಯಾರಿಸ್ (Paris) ಬೀದಿಯಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಎರಡು ಮಕ್ಕಳ ತಾಯಿಯಾಗಿರೋ ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ದರ್ಶನ್‌, ಮದರ್‌ ಇಂಡಿಯಾ ನಡುವೆ ಬಿರುಕು?- ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆಯಿರಿ ಎಂದ ನಟಿ

    pranitha subhash 2

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯೋ ಪ್ರಣಿತಾ ಇದೀಗ ಪ್ಯಾರಿಸ್‌ನಲ್ಲಿ ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಲೈಟ್ ಅರೇಂಜ್ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ನಟಿಯ ಮುಖದಲ್ಲಿ ಗ್ಲೋ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಅನುಪಮಾ ಪರಮೇಶ್ವರನ್ ಸಿನಿಮಾಗೆ ಸಮಂತಾ ಸಾಥ್

    pranitha subhash

    ಮತ್ತೊಂದು ಪೋಸ್ಟ್‌ನಲ್ಲಿ ಒಳಉಡುಪು ಧರಿಸಿ, ಅದರ ಮೇಲೆ ಕೋಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ವಿವಿಧ ಭಂಗಿಯಲ್ಲಿ ಪ್ರಣಿತಾ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಅವತಾರಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    pranitha subhash 4

    ಪ್ರಣಿತಾ ಸುಭಾಷ್ ತಾಯಿಯಾದ್ಮೇಲೆ ನಿಮ್ಮ ಅಂದ ಹೆಚ್ಚಾಯ್ತಾ? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಟಿಯ ಫ್ಯಾಷನ್ ಸೆನ್ಸ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಂತೂರ್‌ ಮಮ್ಮಿ ಎಂದು ಹಾಡಿ ಹೊಗಳಿದ್ದಾರೆ.

    pranitha subhash 5

    ಅಂದಹಾಗೆ, ಉದ್ಯಮಿ ನಿತಿನ್ ಜೊತೆ 2021ರಲ್ಲಿ ಹಸೆಮಣೆ ಏರಿದರು. ಅವರ ಸುಂದರ ದ್ಯಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ.

    pranitha subhash 6

    ಮದುವೆಯಾದ್ಮೇಲೆಯೂ ಸಿನಿಮಾಗಳಲ್ಲಿ ಪ್ರಣಿತಾ ಆ್ಯಕ್ಟೀವ್ ಆಗಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ದಿಲೀಪ್‌ಗೆ ನಾಯಕಿಯಾಗಿ ನಟಿಸಿದರು.

    pranitha subhash 8

    ‘ಪೋರ್ಕಿ’ ಸಿನಿಮಾದ ಮೂಲಕ ದರ್ಶನ್‌ಗೆ (Darshan) ನಾಯಕಿಯಾಗಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟನರ ಜೊತೆ ನಟಿಸಿದ್ದಾರೆ. ಜ್ಯೂ.ಎನ್‌ಟಿಆರ್, ರಾಮ್ ಪೋತಿನೇನಿ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ.

  • ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ

    ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ

    ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ (Sumalatha) ಸೇರಿದಂತೆ ಎಲ್ಲರನ್ನೂ ದರ್ಶನ್ ಅನ್‌ಫಾಲೋ ಮಾಡಿದ ವಿಚಾರ ಹಾಟ್ ಟಾಪಿಕ್ ಆಗಿದೆ. ಈ ಬೆನ್ನಲ್ಲೇ ಸುಮಲತಾ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಯಾವತ್ತಿದ್ರೂ ನನ್ನ ಮಗ, ನಾನು ಹಂಚಿಕೊಂಡಿರುವ ಪೋಸ್ಟ್‌ಗೂ ಅವರಿಗೂ ಸಂಬಂಧವಿಲ್ಲ ಎಂದು ವಿವಾದಕ್ಕೆ ನಟಿ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಬೆಸ್ಟ್‌ ಆಕ್ಟಿಂಗ್‌ ಆಸ್ಕರ್‌ ಅವಾರ್ಡ್‌ ಯಾರಿಗೆ ಹೋಗುತ್ತೆ ಅಂದ್ರೆ.. – ದರ್ಶನ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್

    darshan sumalatha

    ದರ್ಶನ್ (Darshan) ಅನ್‌ಫಾಲೋ ಮಾಡಿರೋದ್ದಕ್ಕೂ ಸುಮಲತಾ ಮಾರ್ಮಿಕವಾಗಿ ಪೋಸ್ಟ್ ಹಾಕಿರೋದ್ದಕ್ಕೂ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಲಿಂಕ್ ಮಾಡಿದರು. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದ ಬೆನ್ನಲ್ಲೇ ಸುಮಲತಾ ಮಾತನಾಡಿ, ಇದೆಲ್ಲಾ ಅನಗತ್ಯವಾದ ವಿವಾದ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ನನಗೆ ಅಷ್ಟು ಸಮಯವೂ ಇಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು.

    sumalatha

    ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ನನಗೆ ಅಂತ ವಿಶೇಷವಾಗಿ ಯಾಕೆ ಪಾಯಿಂಟ್ ಔಟ್ ಮಾಡುತ್ತೀರಿ, ನನಗೆ ಗೊತ್ತಾಗುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ. ಈ ವಿಚಾರ ನನಗೆ ಈಗ ಗಮನಕ್ಕೆ ಬಂತು. ನಾನು ಜನರಲ್ ಆಗಿ ಪೋಸ್ಟ್ ಮಾಡಿದ್ದೇನೆ. ನಾನು ಬರೆದ ಸಾಲುಗಳಲ್ಲ ಅವು, ಎಲ್ಲೋ ನೋಡಿದ ಪೋಸ್ಟ್ ಹಾಕಿದ್ದೇನಷ್ಟೇ. ಯಾರನ್ನು ಟಾರ್ಗೆಟ್ ಮಾಡಿ, ಯಾರನ್ನು ಉದ್ದೇಶಿಸಿ ಪೋಸ್ಟ್ ಹಾಕಲ್ಲ. ಇನ್ನೂ ದರ್ಶನ್ ಬಗ್ಗೆ ನಾನು ನೆಗೆಟಿವ್ ಮಾತನಾಡುತ್ತೇನಾ? ದರ್ಶನ್ ಯಾವಾತ್ತಿದ್ದರೂ ನನ್ನ ಮಗ ಅಂತ ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅದು ಅವತ್ತಿಗೂ ಅಷ್ಟೇ, ಇವತ್ತಿಗೂ ಅಷ್ಟೇ. ನನ್ನ ಪ್ರೀತಿ ಮತ್ತು ಅಭಿಮಾನ ಯಾವತ್ತಿಗೂ ಒಂದೇ ತರಹ ಇರುತ್ತದೆ. ಆ ಪೋಸ್ಟ್‌ಗೂ, ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ.

    sumalatha 2

    ಅವರು ಈಗಷ್ಟೇ ಕಹಿ ಘಟನೆಗಳನ್ನು ಬಿಟ್ಟು ಶೂಟಿಂಗ್ ಶುರು ಮಾಡ್ತಿದ್ದಾರೆ. ಹೀಗಿರುವಾಗ ಹೀಗೊಂದು ನೆಗೆಟಿವ್ ಬರೋದು ಬೇಜಾರ್ ಅನಿಸುತ್ತದೆ. ನನ್ನ ಹತ್ತಿರದವರಿಗೆ, ಕುಟುಂಬದವರನ್ನು ಸಂಪರ್ಕ ಮಾಡಬೇಕು ಅಂದ್ರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಮಾಡಲ್ಲ. ಇದಕ್ಕೆ ಇಷ್ಟು ಬೆಲೆ ನಾನು ಕೊಡಲ್ಲ. ಸಾಮಾಜಿಕ ಮಾಧ್ಯಮ ಜನರಲ್ ಆಗಿ ಬಳಸುತ್ತೇನೆ. ವೈಯಕ್ತಿಕ ವಿಚಾರಕ್ಕೆ ಬಳಸೋದಿಲ್ಲ. ನನ್ನ ಬದುಕಿನಲ್ಲಿ ನೆಗೆಟಿವ್ಸ್‌ಗೆ ಜಾಗವಿಲ್ಲ. ಮೊಮ್ಮಗನ ಜೊತೆ ಕಾಲ ಕಳೆದುಕೊಂಡು ಖುಷಿಯಾಗಿದ್ದೇನೆ. ಇನ್ನೊಬ್ಬರ ಬಗ್ಗೆ ಕೂಡ ನೆಗೆಟಿವ್ ಹಂಚಿಕೊಳ್ಳಲ್ಲ.

    ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ದರ್ಶನ್ ಗುರಿಯಾಗಿಕೊಂಡು ನಾನು ಪೋಸ್ಟ್ ಮಾಡಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ. ಜೈಲಿನಿಂದ ರಿಲೀಸ್ ಆದ್ಮೇಲೆ ದರ್ಶನ್‌ರನ್ನು ಭೇಟಿಯಾದ್ರಾ? ಎಂಬ ಪ್ರಶ್ನೆಗೆ ಅದು ನಮ್ಮ ವೈಯಕ್ತಿಕ ವಿಚಾರ ಎಂದಿದ್ದಾರೆ.

  • ಕೃತಿ ಕರಬಂಧ ಮದುವೆಗೆ ಯಾರಿಗೆಲ್ಲಾ ಆಹ್ವಾನವಿದೆ?

    ಕೃತಿ ಕರಬಂಧ ಮದುವೆಗೆ ಯಾರಿಗೆಲ್ಲಾ ಆಹ್ವಾನವಿದೆ?

    ಶ್ (Yash) ನಾಯಕಿ, ಗೂಗ್ಲಿ ಬೆಡಗಿ ಕೃತಿ ಕರಬಂಧ (Kriti Kharbanda) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 15ಕ್ಕೆ ದೆಹಲಿಯಲ್ಲಿ ಅದ್ಧೂರಿಯಾಗಿ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಮದುವೆಯಾಗುತ್ತಿದ್ದಾರೆ. ಹಾಗಾದ್ರೆ ಯಾರಿಗೆಲ್ಲಾ ಕೃತಿಯ ಮದುವೆಗೆ ಆಹ್ವಾನವಿದೆ. ಯಾರೆಲ್ಲಾ ‘ಗೂಗ್ಲಿ’ (Googly) ನಟಿಯ ಮದುವೆಗೆ ಹಾಜರಿ ಹಾಕಲಿದ್ದಾರೆ.

    kriti 1

    ಹಲವು ವರ್ಷಗಳ ಪ್ರೀತಿಗೆ ಮದುವೆಯ (Wedding) ಮುದ್ರೆ ಒತ್ತಲು ನಟಿ ಸಜ್ಜಾಗಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್‌ಗಳಾದ ರಿಚಾ ಚಡ್ಡಾ, ಅಲಿ ಫಜಲ್, ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್, ಜೋಯಾ ಅಕ್ತರ್, ರಿತೇಶ್ ಸಿದ್ವಾನಿ, ಲವ್ ರಂಜನ್ ಸೇರಿದಂತೆ ಆಪ್ತರನ್ನು ಕೃತಿ-ಪುಲ್ಕಿತ್ ಜೋಡಿ ಮದುವೆಗೆ ಆಮಂತ್ರಣ ನೀಡಿದ್ದಾರೆ. ಇದನ್ನೂ ಓದಿ:‘ಕಾಂತಾರ’ ಪ್ರೀಕ್ವೇಲ್‌ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.ಎನ್‌ಟಿಆರ್

    Kriti Kharbanda Pulkit Samrat

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿದೆ. ಮಾರ್ಚ್ 15ರಂದು ಕೃತಿ-ಪುಲ್ಕಿತ್ ಮದುವೆ ನಡೆಯಲಿದೆ. ಈಗ ಈ ಜೋಡಿ ಮದುವೆ ಆಗುತ್ತಿರುವ ಸ್ಥಳದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿಯಲಿದ್ದಾರೆ.

    kriti 1 2

    ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಆಗುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ರೆಸಾರ್ಟ್ 300 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಈ ಭವ್ಯವಾದ ರೆಸಾರ್ಟ್ ಅರಮನೆಯ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರಾಚೀನ ಶೈಲಿಯಲ್ಲಿ ಸುಂದರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

    ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿದೆ.

  • ‘ಕಾಂತಾರ’ ಪ್ರೀಕ್ವೇಲ್‌ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.ಎನ್‌ಟಿಆರ್

    ನ್ನಡದ ಪ್ರತಿಭಾನ್ವಿತ ನಟ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಸಿನಿಮಾ ಮಾಡಿದ ಡಿವೈನ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ಕಾಂತಾರ ಪಾರ್ಟ್ 1ಗಾಗಿ (Kantara 1) ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದೀಗ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.Ntr) ನಟಿಸುತ್ತಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದನ್ನೂ ಓದಿ:ಸತತ ಸಿನಿಮಾಗಳ ಸೋಲು, ತಮಿಳು ನಿರ್ದೇಶಕನ ಜೊತೆ ಕೈಜೋಡಿಸಿದ ಸಲ್ಮಾನ್ ಖಾನ್

     

    View this post on Instagram

     

    A post shared by Hombale Films (@hombalefilms)

    ರಿಷಬ್ ಶೆಟ್ಟಿ ಸೈಲೆಂಟಾಗಿದ್ದಾರೆ. ಕಾರಣ ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಕಾಣಿಸುತ್ತಿಲ್ಲ ಶಿವ. ಆದರೆ ಮೊನ್ನೆ ಅವರು ಜ್ಯೂ.ಎನ್‌ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟರು. ಅಲ್ಲಿಂದ ಆರಂಭ ತಲೆಗೊಂದು ಲೆಕ್ಕಾಚಾರ. ಹಾಗಾಗಿ ರಿಷಬ್ ಜೊತೆ ತಾರಕ್ ನಟಿಸುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.

     

    View this post on Instagram

     

    A post shared by Jr NTR (@jrntr)

    ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರಿಚೇಬಲ್ ಎಂದಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ನ್‌ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡರು. ಆಗ ಆಕಾಶಕ್ಕೇರಿದ ಗಾಳಿಪಟದ ಹಾರಾಟ ಈಗಲೂ ನಿಂತಿಲ್ಲ. ಇದರ ಪರಿಣಾಮ, ಕಾಂತಾರದಲ್ಲಿ ಜ್ಯೂ.ನ್‌ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಇದು ನಿಜವಾ ಸುಳ್ಳಾ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಜ್ಯೂ.ಎನ್‌ಟಿಆರ್ ತಾಯಿ ಮೂಲತಃ ಮಂಗಳೂರಿನವರು. ಅದರಲ್ಲೂ ರಿಷಬ್ ಕುಂದಾಪುರದವರು. ಹೀಗಾಗಿಯೇ ತಾರಕ್ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಅದನ್ನಿಟ್ಟುಕೊಂಡು ಕಾಡುಶಿವ ಹಾಗೂ ಟೈಗರ್ ಜುಗಲ್‌ಬಂದಿ ತೋರಿಸಲಿದ್ದಾರೆ ಅನ್ನೋದು ಸದ್ಯದ ತಾಜಾ ಸುದ್ದಿ. ಕಾಂತಾರ ಮುಗಿವಷ್ಟರಲ್ಲಿ ಇನ್ನು ಯಾರ‍್ಯಾರು ಇದರಲ್ಲಿ ನಾಮಕಾವಾಸ್ತೆ ಸೇರಲಿದ್ದಾರೊ. ಖುದ್ದು ಕಾಡು ಶಿವನಿಗೂ ಗೊತ್ತಿಲ್ಲ. ಸದ್ಯ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಕಾಂತಾರ ಸಿನಿಮಾದಲ್ಲಿ ನಟಿಸೋದು ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದಲ್ಲಿ ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ.

  • ಪತ್ನಿ ಮಾಡಿದ ತ್ಯಾಗ, ಲವ್ ಸ್ಟೋರಿ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಲವ್ಲಿ ಸ್ಟಾರ್ ಪ್ರೇಮ್

    ಪತ್ನಿ ಮಾಡಿದ ತ್ಯಾಗ, ಲವ್ ಸ್ಟೋರಿ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಲವ್ಲಿ ಸ್ಟಾರ್ ಪ್ರೇಮ್

    ಕಿರುತೆರೆಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರದ ಅತಿಥಿಯಾಗಿ ತಮ್ಮ ಜೀವನ ಕಥೆಯನ್ನ ಬಿಚ್ಚಿದ್ದಾರೆ. ಪತ್ನಿ ಜ್ಯೋತಿ ತ್ಯಾಗದ ಬಗ್ಗೆ ನಟ ಸ್ಮರಿಸಿದ್ದಾರೆ. ಯಾವ ಫಿಲ್ಮಿಂ ಸ್ಟೋರಿಗೂ ಕಮ್ಮಿಯಿಲ್ಲ ಪ್ರೇಮ್ ಲವ್ ಲೈಫ್ ಸ್ಟೋರಿ. ಅಷ್ಟಕ್ಕೂ ಜ್ಯೋತಿ (Wife Jyothi) -ಪ್ರೇಮ್‌ಗೆ ಲವ್ (Love) ಆಗಿದ್ದು ಹೇಗೆ? ಇಲ್ಲಿದೆ ನೋಡಿ..

    prem

    ಬಡ ಕುಟುಂಬದಲ್ಲಿ ಹುಟ್ಟಿದ ಪ್ರೇಮ್, ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಹೀಗೆ ಒಮ್ಮೆ ಊಟಕ್ಕೆ ಹೋಗುವಾಗ ಪ್ರಾವಿಜನ್ ಸ್ಟೋರ್ ಬಳಿ ಒಬ್ಬ ಹುಡುಗಿಯೊಬ್ಬಾಕೆಯನ್ನು ಕಂಡಿದ್ದಾರೆ. ಬಹಳ ಮುದ್ದಾಗಿದ್ದ ಆ ಹುಡುಗಿಯನ್ನು ಕಂಡು ಈಕೆಯೇ ನನ್ನ ಹೆಂಡತಿಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು ಮುಂದೆ ಹೋಗಿದ್ದಾರಷ್ಟೆ, ಅಷ್ಟರಲ್ಲಿ ಹುಡುಗನೊಬ್ಬ ಬಂದು ಅಕ್ಕ ನಿಮ್ಮ ಬಳಿ ಮಾತನಾಡಬೇಕಂತೆ ಎಂದಿದ್ದಾರೆ. ಪ್ರೇಮ್ ನಿಮಿಷದ ಹಿಂದೆ ನೋಡಿದ್ದ ಹುಡುಗಿಯೇ ಪ್ರೇಮ್ ಬಳಿ ಬಂದು ಟ್ಯೂಷನ್ ಕುರಿತಾಗಿ ಏನೋ ಮಾತನಾಡಿಸಿ ಹೆಸರು ಕೇಳಿ ಹೋಗಿದ್ದಾರೆ. ಆ ಹುಡುಗಿಯೇ ಜ್ಯೋತಿ.

    prem 1

    ಆದರೆ ಜ್ಯೋತಿ ಸಹ ಯಾವುದೋ ಮದುವೆಯಲ್ಲಿ (Wedding) ಪ್ರೇಮ್‌ರನ್ನು ನೋಡಿದ್ದರಂತೆ. ಆ ಹುಡುಗಿಯ ಸಂಬಂಧಿಯೊಬ್ಬರು ಮದುವೆಯಲ್ಲಿ ವಧು-ವರರ ಜೊತೆ ಪ್ರೇಮ್ ತೆಗೆಸಿಕೊಂಡಿದ್ದ ಫೋಟೊ ತೋರಿಸಿ ಈ ಹುಡುಗನನ್ನು ನಾನು ಮದುವೆಯಾಗುತ್ತೀನಿ ಎಂದಿದ್ದರಂತೆ ಜ್ಯೋತಿ ಬಳಿ, ಆ ಫೋಟೊ ನೋಡಿದ ಜ್ಯೋತಿ ಸಹ ಪ್ರೇಮ್‌ರನ್ನು ಇಷ್ಟಪಟ್ಟಿದ್ದಾರೆ. ಹೀಗೆ ಪ್ರಾವಿಜನ್ ಸ್ಟೋರ್ ಬಳಿ ಆದ ಪರಿಚಯ ಹೀಗೆ ಮುಂದುವರೆದಿದೆ. ಆಗೊಮ್ಮೆ ಪ್ರೇಮ್, ಜ್ಯೋತಿಗೆ ಪತ್ರವೊಂದನ್ನು ಬರೆದು ನನಗೆ ಜೀವನದಲ್ಲಿ ಬಹಳ ಜವಾಬ್ದಾರಿಗಳಿವೆ, ನಾನು ತಂಗಿಯರ ಮದುವೆ ಮಾಡಬೇಕು ನಾನು ಇನ್ನೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದೀನಿ ನನ್ನನ್ನು ಮರೆತುಬಿಡು ಎಂದೆಲ್ಲ ಪತ್ರದಲ್ಲಿ ಬರೆದಿದ್ದರಂತೆ. ಆದರೆ ಅದರಲ್ಲಿ ಬಹಳ ತಪ್ಪುಗಳಿದ್ದಿದ್ದನ್ನು ಕಂಡು ಆ ತಪ್ಪುಗಳನ್ನೆಲ್ಲ ರೌಂಡ್ ಹಾಕಿದ್ದರಂತೆ ಜ್ಯೋತಿ. ಅದಾದ ಬಳಿಕ ಇಬ್ಬರೂ ಭೇಟಿಯಾಗಿ ಈಗಲೇ ಪ್ರೀತಿ-ಗೀತಿ ಎಲ್ಲ ಬೇಡ ಇನ್ನೆರಡು ವರ್ಷ ಹೀಗೆ ಗೆಳೆಯರಾಗಿರೋಣ ಆ ನಂತರವೂ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದುಕೊಂಡಿದ್ದಾರೆ. ಆದರೆ ಆ ಪ್ರಾಮಿಸ್ ಅನ್ನು ಬಹಳ ಬೇಗ ಅವರೇ ಮುರಿಯುವ ಪರಿಸ್ಥಿತಿ ಎದುರಾಗುತ್ತದೆ.

    prem 1 1

    ಇಬ್ಬರ ಲವ್ ವಿಚಾರ ವಿಷಯ ಜ್ಯೋತಿಯವರ ಮನೆಯವರಿಗೆ ಗೊತ್ತಾಗಿ ಗಂಡು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಆತಂಕಗೊಂಡ ಜ್ಯೋತಿ ಹಾಗೂ ಪ್ರೇಮ್ ಮನೆಯವರ ವಿರೋಧದ ನಡುವೆ ಮದುವೆ ಆಗಲು ನಿಶ್ಚಯಿಸಿ ಒಂದು ದಿನಾಂಕ ಗುರುತು ಮಾಡಿಕೊಂಡಿದ್ದಾರೆ. ಆದರೆ ಅದೇ ದಿನ ರಾಜ್‌ಕುಮಾರ್ ಅಪಹರಣ ಆದ ಕಾರಣ ಎಲ್ಲವೂ ಸ್ಥಬ್ಧವಾಗಿಬಿಟ್ಟಿದೆ. ಹಾಗಿದ್ದರೂ ಜ್ಯೋತಿ ತಮ್ಮನನ್ನು ಕರೆದುಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದುಬಿಟ್ಟರಂತೆ. ಪ್ರೇಮ್ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನು ಮದುವೆಯೂ ಆಗಿಬಿಟ್ಟಿದ್ದಾರೆ. ಅದಾದ ಬಳಿಕ ಎರಡು ಕುಟುಂಬದವರನ್ನು ಕರೆಸಿ ಅಂದೇ ರಾಜಿ ಮಾಡಿಸಿ ಎಲ್ಲರನ್ನೂ ಒಪ್ಪಿಸಿದ್ದಾರೆ. ಅಳಿಯನ ಕಷ್ಟ ಗಮನಿಸಿ ಜ್ಯೋತಿಯವರ ತಾಯಿ, ಮಗಳು-ಅಳಿಯನಿಗೆ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆಯ ಮನೆಯಲ್ಲಿಯೇ ಪ್ರೇಮ್ ವಾಸವಿದ್ದರು. ಇದನ್ನೂ ಓದಿ:ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

     

    View this post on Instagram

     

    A post shared by Jyothi Prem (@jyothiprem1008)

    ತನ್ನ ಉದ್ದಿಮೆಯಲ್ಲಿ ಬಹಳ ನಷ್ಟವಾಗಿ ಸುಮಾರು ಏಳೆಂಟು ಲಕ್ಷ ಸಾಲ ಮಾಡಿಬಿಟ್ಟರಂತೆ ಪ್ರೇಮ್. ಆಗ ಜ್ಯೋತಿ ಕೆಲಸಕ್ಕೆ ಹೋಗುತ್ತಿದ್ದರಂತೆ. ವರಮಹಾಲಕ್ಷ್ಮಿ ಹಬ್ಬದ ದಿನ ತಮಗೆ ಸಾಲ ಕೊಟ್ಟಿದ್ದ ಗೆಳೆಯ ಸಾಲವನ್ನು ತೀರಿಸುವಂತೆ ಒತ್ತಾಯಿಸಿದ್ದಾನೆ. ಆಗ ಪ್ರೇಮ್ ಪತ್ನಿಯ ಕಚೇರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿದ್ದಾರೆ. ಆಗ ಜ್ಯೋತಿ ತಮ್ಮ ಚಿನ್ನದ ತಾಳ ಬಿಚ್ಚಿಕೊಟ್ಟುಬಿಟ್ಟರಂತೆ. ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಪ್ರೇಮ್ ಕಣ್ಣೀರು ಹಾಕಿದರು. ನಾನು ಸತ್ತು ಹೋಗಬಾರದ ಎಂದು ಎನಿಸಿತು ನನಗೆ. ಆ ದಿನ ನನ್ನ ಜೀವನದಲ್ಲಿ ಮತ್ತೆಂದೂ ಬರಬಾರದು ಎಂದರು ಪ್ರೇಮ್. ಆದರೆ ಆ ಸಂಕಷ್ಟದ ಸಮಯದಲ್ಲಿ, ಅದೂ ವರಮಹಾಲಕ್ಷ್ಮಿ ಹಬ್ಬದ ದಿನ ತಾಳಿ ನೀಡಿದ ಪತ್ನಿ ನನಗೆ ಎರಡನೇ ತಾಯಿಯಂತೆ ಎಂದರು. ಸಾಕಷ್ಟು ಎದುರಿಸಿದ ಬಳಿಕ ಪ್ರೇಮ್‌ಗೆ ನಟನೆ ಕೈಹಿಡಿಯಿತು. ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಿ ಮಿಂಚ್ತಿದ್ದಾರೆ.

  • ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

    ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

    ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya) ಅವರ ಕಾಣೆಯಾಗಿದ್ದ ಮುದ್ದಿನ ಶ್ವಾನ ಮೃತಪಟ್ಟಿರುವುದಾಗಿ ಸ್ವತಃ ನಟಿಯೇ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚಾಂಪ್ (Champ) ಮೃತಪಟ್ಟಿದೆ. ಹಾಗೆಯೇ ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

    https://twitter.com/divyaspandana/status/1654866757608419330?t=8VW4-tFtfhcfu8B8s964Zw&s=08

    ಶನಿವಾರ ಬೆಳಗ್ಗೆಯಷ್ಟೇ ನಾಯಿ ಕಾಣೆಯಾಗಿರುವ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಮೇ 6 ರಿಂದ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ದುಡ್ಡಿಗಾಗಿ ನಾನು ಪ್ರಚಾರಕ್ಕೆ ಬಂದಿಲ್ಲ: ಸಂಬರಗಿಗೆ ಶಿವಣ್ಣ ತಿರುಗೇಟು

    Ramya 2

     

    ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಅವರು ಸಾರ್ವಜನಕರಲ್ಲಿ ಮನವಿ ಮಾಡಿದ್ದರು. ಆದರೆ ಇದೀಗ ತಮ್ಮ ಮುದ್ದಿನ ಶ್ವಾನ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    https://twitter.com/divyaspandana/status/1654765749196472322

    ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. `ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು.

  • Ghajini 2: ಅಲ್ಲು ಅರವಿಂದ್‌ ನಿರ್ಮಾಣದಲ್ಲಿ ಆಮೀರ್ ಖಾನ್

    Ghajini 2: ಅಲ್ಲು ಅರವಿಂದ್‌ ನಿರ್ಮಾಣದಲ್ಲಿ ಆಮೀರ್ ಖಾನ್

    ‘ಲಾಲ್ ಸಿಂಗ್ ಚಡ್ಡಾ’ (Lal Singh Chadha) ಸಿನಿಮಾದ ಸೋಲಿನ ನಂತರ ಆಮೀರ್ ಖಾನ್ (Aamir Khan) ಬ್ರೇಕ್ ತೆಗೆದುಕೊಂಡಿದ್ದರು. ಈ ಸಿನಿಮಾದ ಸೋಲು ಅವರನ್ನ ನಟನೆಯಿಂದ ದೂರಯುಳಿವಂತೆ ಮಾಡಿತ್ತು. ಇದೀಗ ಮತ್ತೆ ಕಂಬ್ಯಾಕ್ ಆಗುವ ಆಲೋಚನೆಯಲ್ಲಿದ್ದಾರೆ. ಸೂಪರ್ ಡೂಪರ್ ಹಿಟ್ ‘ಗಜನಿ’ ಸೀಕ್ವೆಲ್ ಮಾಡಲು ಆಮೀರ್ ಮುಂದಾಗಿದ್ದಾರೆ.

    aamir khan 2

    2005ರಲ್ಲಿ ಬಂದ ತಮಿಳಿನ ‘ಗಜನಿ’ (Ghajini) ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ 2008ರಲ್ಲಿ ರಿಮೇಕ್ ಮಾಡಲಾಯಿತು. ತಮಿಳಿನಲ್ಲಿ (Tamil) ಸೂರ್ಯ (Suriya)  ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದರು. ಈಗ ಚಿತ್ರಕ್ಕೆ ಈಗ ಸೀಕ್ವೆಲ್ ತರಲು ಸಿದ್ಧತೆ ನಡೆದಿದೆ. ಆಮಿರ್ ಖಾನ್ ಅವರು ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದು, ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    gajini

    ತಮಿಳಿನ ‘ಗಜನಿ’ (Ghajini)  ಚಿತ್ರವನ್ನು ನಿರ್ಮಾಣ ಮಾಡಿದ್ದು ಸೇಲಮ್ ಚಂದ್ರಶೇಖರನ್. ಅವರು ಈಗ ನಮ್ಮೊಂದಿಗೆ ಇಲ್ಲ. 2021ರಲ್ಲಿ ಅವರು ತೀರಿಕೊಂಡರು. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಮುಂದಾಗಿದ್ದಾರೆ. ಈ ವಿಷ್ಯವಾಗಿಯೇ ಆಮೀರ್ ಅವರು ಪದೇ ಪದೇ ಹೈದರಾಬಾದ್‌ಗೆ ಭೇಟಿ ನೀಡ್ತಿದ್ದಾರೆ. ಕಥೆಯ ಬಗ್ಗೆ ತಂಡದ ಜೊತೆ ಆಮೀರ್ ಚರ್ಚೆ ಮಾಡ್ತಿದ್ದಾರೆ. ಹಿಂದಿಯ ‘ಗಜನಿ’ ಸಿನಿಮಾದಲ್ಲಿ ಆಮಿರ್ ಖಾನ್ (Aamir Khan) ಅವರು ಸಂಜಯ್ ಸಿಂಘಾನಿಯಾ ಆಗಿ ಕಾಣಿಸಿಕೊಂಡಿದ್ದರು. ಈಗ ಚಿತ್ರದ ಕಥೆ ಮುಂದುವರಿಯಲಿದೆ. ಈ ರೀತಿಯಲ್ಲಿ ಕಥೆ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ.

    allu aravind

    ಅಲ್ಲು ಅರವಿಂದ್ ಅವರು ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಈಗಾಗಲೇ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ‘ಗಜನಿ 2’ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ನಟ ಆಮೀರ್‌ಗೂ ಗಜನಿ ಪಾರ್ಟ್ 2 ಕಥೆ ಸಾಕಷ್ಟು ಇಷ್ಟ ಆಗಿದೆಯಂತೆ. ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯ ಈ ಬಗ್ಗೆ ಅಂತೆ- ಕಂತೆ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವೆರೆಗೂ ಕಾದು ನೋಡಬೇಕಿದೆ.

  • ರಾಹುಲ್ ಗಾಂಧಿ ಫಿಟ್‌ನೆಸ್‌ಗೆ ಫಿದಾ ಆದ ನಟ ಶಿವಣ್ಣ

    ರಾಹುಲ್ ಗಾಂಧಿ ಫಿಟ್‌ನೆಸ್‌ಗೆ ಫಿದಾ ಆದ ನಟ ಶಿವಣ್ಣ

    ಚುನಾವಣೆಯ ರಂಗು ಜೋರಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಕಾಂಗ್ರೆಸ್ ಪರ ಪ್ರಚಾರ ಮಾಡ್ತಿದ್ದಾರೆ. ‘ಕೈ’ಗೆ ಶಿವಣ್ಣ ಸಾಥ್ ಕೊಡ್ತಿದ್ದಂತೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಬಗ್ಗೆ ನಟ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಶಿವಣ್ಣ ಅವರು ಸಿದ್ದರಾಮಯ್ಯ ಪರ ಭರ್ಜರಿಯಾಗಿ ಪ್ರಚಾರ ಮಾಡ್ತಿದ್ದಾರೆ. ಗೀತಾ ಶಿವರಾಜ್‌ಕುಮಾರ್- ಮಧು ಬಂಗಾರಪ್ಪ ಜೊತೆಗೂಡಿ ಚುನಾವಣಾ ಅಖಾಡದಲ್ಲಿ ಶಿವಣ್ಣ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಹೀಗಿರುವಾಗ ಬಿಜೆಪಿ ನಾಯಕರ (Bjp)  ಅಸಮಾಧಾನಕ್ಕೆ ನಟ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ರಾಜಕೀಯಕ್ಕೆ ಅಖಾಡಕ್ಕೆ ರಮೇಶ್ ಅರವಿಂದ್? ಸ್ಪಷ್ಟನೆ ನೀಡಿದ ನಟ

    NishvikaNaidu 1

    ವರುಣದಲ್ಲಿ ಪ್ರಚಾರ ಚೆನ್ನಾಗಿ ನಡೆಯಿತು. ಇವತ್ತು ಮುಂಡುಗೋಡು, ಶಿರಸಿಯಲ್ಲಿ ಪ್ರಚಾರ ಮಾಡ್ತೀನಿ ಎಂದು ತಮ್ಮ ಮುಂದಿನ ನಡೆ ಬಗ್ಗೆ ಶಿವಣ್ಣ ಅಪ್‌ಡೇಟ್ ನೀಡಿದ್ದರು. ಸಚಿವ ಸೋಮಣ್ಣ- ಪ್ರತಾಪ ಸಿಂಹ ಅವರು ನಮಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ಒಳ್ಳೆಯ ಗೌರವವಿದೆ. ನಾನು ಏನು ಚಿಕ್ಕ ಹುಡುಗನಾ ನನಗೆ ಈಗ 61 ವರ್ಷ ಆಯ್ತು. ನನಗೆ ಯಾರು ವೈರಿಗಳಿಲ್ಲ. ಎಲ್ಲರೂ ನನ್ನ ಸ್ನೇಹಿತರೇ ಆಗಿದ್ದಾರೆ. ಇನ್ನೂ ರಾಹುಲ್ ಗಾಂಧಿ (Rahul Gandhi) ಅವರನ್ನ ಮೀಟ್ ಮಾಡಬೇಕು ಅಂತಾ ಮೊದಲಿನಿಂದಲೂ ನನಗೆ ಆಸೆ ಇತ್ತು. ಮೊನ್ನೆಯಷ್ಟೇ ಅವರನ್ನ ಮೀಟ್ ಮಾಡಿದೆ, ರಾಹುಲ್ ಗಾಂಧಿ ಅವರ ಫಿಟ್‌ನೆಸ್ ಇಷ್ಟ ಆಯ್ತು. ಹಾಗಾಗಿ ಅವರ ಬಗ್ಗೆ ಇಂಪ್ರೆಸ್ ಆಯ್ತು ಎಂದು ಶಿವಣ್ಣ ಖುಷಿಯಿಂದ ಮಾತನಾಡಿದರು. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದವರು ಯಾರು ಪ್ರಚಾರಕ್ಕೆ ನನ್ನನ್ನು ಕರೆದಿರಲಿಲ್ಲ. ಯಾರಾದರೂ ಕರೆದಿದ್ದರೆ ಅವರ ಪರ ಪ್ರಚಾರಕ್ಕೆ ನಾನು ಹೋಗುತ್ತಿದ್ದೆ. ಮೊದಲಿನಿಂದಲೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದೆ, ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದೀನಿ ಎಂದು ಶಿವಣ್ಣ ಮಾತನಾಡಿದರು.

    shivanna 1

    ಶಿವಣ್ಣ ಕಾಂಗ್ರೆಸ್ (Congress) ಪ್ರಚಾರ ಮಾಡ್ತಿದ್ದಂತೆ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratapsimha) ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದರು. ಬಿಜೆಪಿ ಅಭ್ಯರ್ಥಿ ಸೋಮಣ್ಣನನ್ನು ಹೊಗಳುವ ಮೂಲಕ ಶಿವಣ್ಣನಿಗೆ ಟಾಂಗ್ ನೀಡಿದ್ದರು. ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ನಟ ಶಿವಣ್ಣ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಕೆಲಸ ಮಾಡಿದ್ದಾರೆ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ ಜೀವಂತವಾಗಿ ಇದ್ದಾಗಲು ಒಳ್ಳೆಯ ಕೆಲಸ ಮಾಡಿದ್ದರು. ಈಗಲು ಮಾಡುತ್ತಿದ್ದಾರೆ. ಆದರೆ ಅವರು ಯಾರು ಹೇಳಿಕೊಂಡು ಓಡಾಡಲ್ಲ ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರು ಕೂಡ ಪ್ರಚಾರಕ್ಕೆ ಹೋಗ್ತಿದ್ದಾರೆ. ಹಾಗಂತ ನಾಳೆ ನಾನು ಸುದೀಪ್ ಅವರನ್ನು ಮಾತನಾಡಿಸಲು ಆಗಲ್ವಾ ಅಂತಾ ಶಿವಣ್ಣ ಪ್ರಶ್ನೆ ಮಾಡಿದ್ದಾರೆ. ನಾವಿಬ್ಬರೂ ಬೇರೆ ಬೇರೆ ಪಕ್ಷದಲ್ಲಿ ಪ್ರಚಾರ ಮಾಡ್ತಿದ್ದರು. ನಾವಿಬ್ಬರೂ ಎಂದಿಗೂ ಸ್ನೇಹಿತರೇ ಎಂದು ಶಿವಣ್ಣ ರಿಯಾಕ್ಟ್ ಮಾಡಿದ್ದಾರೆ.

  • ರಾಜಕೀಯಕ್ಕೆ ಅಖಾಡಕ್ಕೆ ರಮೇಶ್ ಅರವಿಂದ್? ಸ್ಪಷ್ಟನೆ ನೀಡಿದ ನಟ

    ರಾಜಕೀಯಕ್ಕೆ ಅಖಾಡಕ್ಕೆ ರಮೇಶ್ ಅರವಿಂದ್? ಸ್ಪಷ್ಟನೆ ನೀಡಿದ ನಟ

    ನ್ನಡ ಚಿತ್ರರಂಗದ ಸ್ಟಾರ್ ನಟ ರಮೇಶ್ ಅರವಿಂದ್ ಅವರು ‘ಶಿವಾಜಿ ಸುರತ್ಕಲ್ 2’ (Shivaji Surathkal 2) ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ನಂತರ ಮುಂದೇನು? ತಮ್ಮ ಮುಂದಿನ ಚಿತ್ರ ಯಾವುದು? ರಾಜಕೀಯಕ್ಕೆ (Politics) ರಮೇಶ್ ಅರವಿಂದ್ (Ramesh Aravind)  ಬರುತ್ತಾರಾ ಹೀಗೆ ಹಲವು ವಿಚಾರಗಳ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

    ramesh aravind 3

    ರಮೇಶ್ ಅರವಿಂದ್ ಅವರು ಯಾವಾಗಲೂ ವಿಭಿನ್ನ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ರಮೇಶ್ ಛಾಪು ಮೂಡಿಸಿದ್ದಾರೆ. Weekend With Ramesh ಕಾರ್ಯಕ್ರಮ ಸೇರಿದಂತೆ ಹಲವು ಶೋಗಳ ಮೂಲಕ ಉತ್ತಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ತಮ್ಮ ಮುಂದಿನ ನಡೆ ಸಿನಿಮಾ- ರಾಜಕೀಯ ಎಂಟ್ರಿ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

    ramesh aravind 2

    ವೀಕೆಂಡ್ ವಿತ್ ರಮೇಶ್ ಶೋ ಮುಗಿದ ಬಳಿಕ ಹೊಸ ಸಿನಿಮಾ ಮಾಡುತ್ತೇನೆ. ಕರೋನಾ ಸಮಯದಲ್ಲಿ ಮೂರು ಕಥೆಗಳನ್ನ ಮಾಡಿಕೊಂಡಿದ್ದೇನೆ. ಅವುಗಳಲ್ಲಿ ಒಂದು ಕಥೆಯನ್ನ ಪ್ರಾರಂಭಿಸುವ ಆಲೋಚನೆಯಿದೆ ಎಂದು ರಮೇಶ್ ಹೇಳಿದ್ದಾರೆ.

    ಇದೀಗ ಚುನಾವಣೆ ಕಣ ಜೋರಾಗಿರುವ ಕಾರಣ, ಸ್ಟಾರ್ ನಟ- ನಟಿಯರು ಪಕ್ಷಗಳ ಪರ ಪ್ರಚಾರ ಮಾಡ್ತಿದ್ದಾರೆ. ಹಾಗಾಗಿ ಪಾಲಿಟಿಕ್ಸ್ ಎಂಟ್ರಿ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಪ್ರಚಾರಕ್ಕೆ ಬನ್ನಿ ಅಂತ ಹಲವರು ಕರೆದರು. ಆದರೆ, ಹೋಗಲಿಲ್ಲ. ನಾನು ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಬದಲಾಗಿ ತಟಸ್ಥನಾಗಿರಲು ಬಯಸುತ್ತೇನೆ. ಎಲ್ಲರೂ ನನಗೆ ಗೆಳೆಯರೇ, ಎಲ್ಲಾ ಪಕ್ಷದಲ್ಲೂ ಗೆಳೆಯರಿದ್ದಾರೆ. ನನ್ನ ಮಗಳ ಮದುವೆಗೆ ಆ ಪಕ್ಷ, ಈ ಪಕ್ಷ ಅಂತ ನೋಡದೇ ಎಲ್ಲ ಪಕ್ಷದ ನಾಯಕರೂ ಬಂದಿದ್ದರು ಎಂದು ಮಾತನಾಡಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಬರುವ ಆಸಕ್ತಿ ತಮಗಿಲ್ಲ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.

  • ಶರತ್ ಬಾಬು ನಿಧನ ಸುಳ್ಳು- ಆರೋಗ್ಯದ ಬಗ್ಗೆ ನಟನ ಕುಟುಂಬ ಹೇಳಿದ್ದೇನು..?

    ಶರತ್ ಬಾಬು ನಿಧನ ಸುಳ್ಳು- ಆರೋಗ್ಯದ ಬಗ್ಗೆ ನಟನ ಕುಟುಂಬ ಹೇಳಿದ್ದೇನು..?

    ಬೆಂಗಳೂರು: ಹಿರಿಯ ನಟ ಶರತ್ ಬಾಬು (Sarath Babu) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶರತ್ ಬಾಬು ನಿಧರಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಅವರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ನಟನ ಆರೋಗ್ಯ ಸದ್ಯ ಚೇತರಿಸಿಕೊಂಡಿದೆ. ಶೀಘ್ರವೇ ಶರತ್ ಬಾಬು ಗುಣಮುಖರಾಗಲಿದ್ದಾರೆ ಎಂದು ಶರತ್ ಬಾಬು ಅವರ ಅಕ್ಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    SHARATH BABU

    ಇತ್ತೀಚಿಗೆ ನಟ ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯ ಸುಧಾರಿಸಿದ ಕಾರಣ ಅವರನ್ನು ಬೆಂಗಳೂರಿನಿಂದ ಹೈದರಾಬಾದ್‍ನ ಆಸ್ಪತ್ರೆ (Hyderabad Hospital) ಗೆ ಶಿಫ್ಟ್ ಮಾಡಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟನಿಗೆ ಉಸಿರಾಡಲು ಕಷ್ಟವಾಗಿತ್ತು. ಹೀಗಾಗಿ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಖ್ಯಾತ ನಟ, ನಿರ್ದೇಶಕ ಮನೋಬಾಲಾ ನಿಧನ

    Sharath Babu 1

    ದಕ್ಷಿಣದ ಹಿರಿಯ ನಟ ಶರತ್ ಬಾಬು ಸುಮಾರು 4 ದಶಕಗಳಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿರಪರಿಚಿತರಾಗಿದ್ದರು. ಕನ್ನಡದಲ್ಲಿ ಅವರು ನಟಿಸಿದ ಅಮೃತವರ್ಷಿಣಿ (mruthaVarshini) ಸಿನಿಮಾ ಸೂಪರ್ ಹಿಟ್ ಆಗಿತ್ತು.