Tag: ಸೌರವ್ಯೂಹ

  • ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು

    ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು

    ವಾಷಿಂಗ್ಟನ್: ಪ್ಲುಟೋವನ್ನು ಸೌರಮಂಡಲದ ಗ್ರಹಗಳ ಗುಂಪಿನಿಂದ ಹೊರ ತಳ್ಳಿ 16 ವರ್ಷಗಳೇ ಕಳೆದಿವೆ. ಆದರೂ ಪ್ಲುಟೋವಿನ ಹೊಸ ಹೊಸ ವಿಸ್ಮಯ, ಕುತೂಹಲಗಳನ್ನು ಒಂದೊಂದಾಗಿಯೇ ವಿಜ್ಞಾನಿಗಳು ಬಯಲಿಗೆಳೆಯುತ್ತಲೇ ಇದ್ದಾರೆ.

    ಇದೀಗ ವಿಜ್ಞಾನಿಗಳು ಪ್ಲುಟೋ ಮೇಲ್ಮೈಯಲ್ಲಿ ಮಂಜುಗಡ್ಡೆಯ ಜ್ವಾಲಾಮುಖಿ ಇರುವಿಕೆಯ ಸುಳಿವನ್ನು ಪತ್ತೆಹಚ್ಚಿದ್ದಾರೆ. ಇಂತಹ ನಿಗೂಢ ಅಂಶ ಸೌರವ್ಯೂಹದ ಬೇರೆ ಯಾವ ಗ್ರಹಗಳಲ್ಲೂ ಇಲ್ಲ ಎಂಬ ವಿಷಯವನ್ನೂ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದ ಶಾಂಫೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    Pluto 1

    ನ್ಯೂ ಹೊರೈಜನ್ಸ್ ಮಿಷನ್‌ನ ಖಗೋಳಶಾಸ್ತ್ರಜ್ಞರ ತಂಡ ಈ ದೂರದ ಪ್ಲುಟೋ ಮೇಲ್ಮೈಯಲ್ಲಿ ಹಿಮದಿಂದ ರೂಪುಗೊಂಡ ಬೆಟ್ಟಗಳು, ದಿಬ್ಬಗಳು ಹಾಗೂ ತಗ್ಗುಗಳಿಂದ ಸುತ್ತುವರಿದ ದೊಡ್ಡ ಗುಮ್ಮಟಗಳ ಪ್ರದೇಶವನ್ನು ಪತ್ತೆಹಚ್ಚಿದೆ. ಈ ಭಾರೀ ಬೆಟ್ಟಗಳ ಸೃಷ್ಟಿಗೆ ದೊಡ್ಡ ಮಟ್ಟದ ಸ್ಫೋಟದ ಸ್ಥಳಗಳ ಅಗತ್ಯವಿದೆ. ಇದು ಅದರ ಮೇಲ್ಮೈಯಲ್ಲಿ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

    ಈ ಮಂಜುಗಡ್ಡೆಯ ಜ್ವಾಲಾಮುಖಿ ಪ್ರದೇಶ 1 ರಿಂದ 7 ಕಿ.ಮಿ ಗಳಷ್ಟು ಎತ್ತರ ಹಾಗೂ 30 ರಿಂದ 100 ಅಥವಾ ಅದಕ್ಕಿಂತಲೂ ಹೆಚ್ಚು ಕಿ.ಮಿ ಗಳವರೆಗಿನ ಗುಮ್ಮಟಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

  • ಇಂದು ಬೆಳಗ್ಗೆ 11.30ಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ ಶನಿ

    ಇಂದು ಬೆಳಗ್ಗೆ 11.30ಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ ಶನಿ

    ನವದೆಹಲಿ: ಶನಿ ಗ್ರಹ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಭೂಮಿಯ ಸಮೀಪಕ್ಕೆ ಬರಲಿದೆ. ನಭೋಮಂಡಲದ ಈ ವಿದ್ಯಮಾನ ಕಾಣಲು ಖಗೋಳವಿಜ್ಞಾನಿಗಳು ಕಾತುರರಾಗಿದ್ದಾರೆ. ಆದ್ರೆ ಭಾರತದಲ್ಲಿ ಹಗಲು ಆಗಿದ್ದರಿಂದ ಇದರ ಗೋಚರ ಆಗಲ್ಲ.

    ಆಗಸ್ಟ್ 2ರ ಬೆಳಗ್ಗೆ 11.30ಕ್ಕೆ ಭೂಮಿ ಮತ್ತು ಶನಿ ಅತಿ ಸಮೀಪಕ್ಕೆ ಬರಲಿವೆ. ಈ ವಿದ್ಯಮಾನದಿಂದ ಪ್ರಕೃತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಸಂಭವಿಸಿಲ್ಲ. ಇದೊಂದು ಸೌರಮಂಡಲದ ಪ್ರಕ್ರಿಯೆ ಆಗಿರುತ್ತದೆ. ರಾತ್ರಿ ಆಗಿರುವ ದೇಶದ ಜನರು ಬರೀಗಣ್ಣಿನಿಂದ ನೋಡಬಹುದು ಎಂದು ಓಡಿಶಾ ತಾರಾಲಾಯದ ಉಪ ನಿರ್ದೇಶಕ ಪಠಾಣಿ ಸಾಮಂತ್ ಹೇಳಿದ್ದಾರೆ.

    ಆಕಾಶ ಮೋಡಗಳಿಂದ ಕೂಡಿದ್ದರೆ ಶನಿ ಗ್ರಹದ ಗೋಚರ ಆಗಲ್ಲ. ಈ ವಿದ್ಯಮಾನದ ಬಳಿಕ ಗುರು ಪ್ರಕಾಶಮಾನವಾಗಿ ಕಾಣಲಾರಂಭಿಸುತ್ತದೆ. ಶನಿಯ ಸ್ಥಾನವೂ ಗುರುವಿನ ಪಶ್ವಿಮಕ್ಕೆ ಇರಲಿದೆ. ಇದನ್ನೂ ಓದಿ: ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ

  • ಡಿಸೆಂಬರ್ 26ಕ್ಕೆ ಕೇತುಗ್ರಸ್ಥ ಸೂರ್ಯಗ್ರಹಣ

    ಡಿಸೆಂಬರ್ 26ಕ್ಕೆ ಕೇತುಗ್ರಸ್ಥ ಸೂರ್ಯಗ್ರಹಣ

    -ರಕ್ತ ಗ್ರಹಣ ಅಂತಾ ಕರೆಯೋದ್ಯಾಕೆ?
    -ಎಲ್ಲೆಲ್ಲಿ ‘ಬೆಂಕಿ’ ಗ್ರಹಣ ಗೋಚರತೆ?

    ಬೆಂಗಳೂರು: ಈ ವರ್ಷದ ಅಂತ್ಯಕ್ಕೆ ಅಂದ್ರೆ ಡಿಸೆಂಬರ್ 26ರಂದು ಸೂರ್ಯಗ್ರಹಣ ಸಂಭವಿಸಲಿದೆ. ಬೆಂಗಳೂರಿನ ಭಾಗದಲ್ಲಿ ಬೆಳಗ್ಗೆ 8 ಗಂಟೆ 4 ನಿಮಿಷದಿಂದ ಬೆಳಗ್ಗೆ 11 ಗಂಟೆ 5 ನಿಮಿಷದವರೆಗೆ ಸೂರ್ಯ ಗ್ರಹಣ ಸಂಭವಿಸಲಿದೆ.

    ಈ ಬಾರಿಯ ಸೂರ್ಯಗ್ರಹಣ ಮೂರು ಲಗ್ನಗಳಲ್ಲಿ ಬರೋದರಿಂದ ಇದನ್ನು ರಕ್ತ ಗ್ರಹಣ ಮತ್ತು ಕೇತುಗ್ರಸ್ಥ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ವೃಶ್ಚಿಕ ಲಗ್ನದಲ್ಲಿ ಪ್ರಾರಂಭವಾಗಿ, ಧನಸ್ಸು ಲಗ್ನದಲ್ಲಿ ಹಾದು, ಕೊನೆಗೆ ಮಕರ ಲಗ್ನದಲ್ಲಿ (ಮೋಕ್ಷ)ಕೊನೆಗೊಳ್ಳುತ್ತದೆ.

    Solara F

    1980ರಲ್ಲಿ ಕರ್ನಾಟಕದ ಅಂಕೋಲಾದಲ್ಲಿ 2.50 ನಿಮಿಷಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಸಂಪೂರ್ಣ ಗೋಚರತೆ ಕಾಣ ಸಿಕ್ಕಿತ್ತು. 2010ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಬೆಂಕಿ ಉಂಗುರ ಸೂರ್ಯ ಗ್ರಹಣ ಸಂಭವಿಸಿತ್ತು. ಆದರೆ ಕರ್ನಾಟಕದಲ್ಲಿ ಗೋಚರತೆ ಇರಲಿಲ್ಲ. ಈ ಬಾರಿ ಗ್ರಹಣ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಬೆಂಕಿ ಉಂಗುರ ಸೂರ್ಯ ಪರಿಪೂರ್ಣ ಕಾಣ ಸಿಗಲಿದ್ದಾನೆ. ಅದಾದ ಬಳಿಕ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಅಂದ್ರೆ ಶೇ.93.07 ಬೆಂಕಿ ಗ್ರಹಣ ಕಾಣಸಿಗೋದೆ ಮಂಗಳೂರಿನಲ್ಲಿ ಎಂದು ಹೇಳಲಾಗಿದೆ.

    ರಾಜ್ಯದ ಎಲ್ಲೆಲ್ಲಿ ‘ಬೆಂಕಿ’ ಗ್ರಹಣ ಗೋಚರತೆ
    * ಮಂಗಳೂರು ನಗರದಲ್ಲಿ ಶೇ.93.04
    * ಶಿವಮೊಗ್ಗ ನಗರದಲ್ಲಿ ಶೇ.89.96
    * ಬೆಂಗಳೂರು ನಗರದಲ್ಲಿ ಶೇ.89.54
    * ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಶೇ.86.24
    * ವಿಜಯಪುರ ನಗರ ಪ್ರದೇಶದಲ್ಲಿ ಶೇ.80.64
    * ಬೀದರ್ ನಗರ ಭಾಗದಲ್ಲಿ ಶೇ.74.40

    solar eclipse 759

    ಸೂರ್ಯಗ್ರಹಣ ಹೇಗೆ ಜರಗುತ್ತದೆ?
    ಇದೊಂದು ನೈಸರ್ಗಿಕ ಸಹಜ ಪ್ರಕ್ರಿಯೆ. ಭೂಮಿ, ಸೂರ್ಯ ಹಾಗೂ ಚಂದ್ರನ ಮಧ್ಯೆ ನಡೆಯುವಂತಹ ಪ್ರಕ್ರಿಯೆ. ಸೂರ್ಯನ ಕಿರಣಗಳು ಭೂಮಂಡಲದ ಮೇಲೆ ಬೀಳದೆ ಇರೋದು ಸೂರ್ಯಗ್ರಹಣ. ಈ ಮೂರು ಗ್ರಹಗಳು ಒಂದೇ ರೇಖೆಗೆ ಸಮನಾಗಿ ಬಂದು ತಲುಪುತ್ತದೆ. ಈ ವೇಳೆ ಸೂರ್ಯನ ಕಿರಣಗಳು ಭೂಮಿಯನ್ನ ಸ್ಪರ್ಶಿಸದಂತೆ ಚಂದ್ರ ತಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯಗ್ರಹಣ ಉಂಟಾಗುತ್ತದೆ.