-ರಕ್ತ ಗ್ರಹಣ ಅಂತಾ ಕರೆಯೋದ್ಯಾಕೆ?
-ಎಲ್ಲೆಲ್ಲಿ ‘ಬೆಂಕಿ’ ಗ್ರಹಣ ಗೋಚರತೆ?
ಬೆಂಗಳೂರು: ಈ ವರ್ಷದ ಅಂತ್ಯಕ್ಕೆ ಅಂದ್ರೆ ಡಿಸೆಂಬರ್ 26ರಂದು ಸೂರ್ಯಗ್ರಹಣ ಸಂಭವಿಸಲಿದೆ. ಬೆಂಗಳೂರಿನ ಭಾಗದಲ್ಲಿ ಬೆಳಗ್ಗೆ 8 ಗಂಟೆ 4 ನಿಮಿಷದಿಂದ ಬೆಳಗ್ಗೆ 11 ಗಂಟೆ 5 ನಿಮಿಷದವರೆಗೆ ಸೂರ್ಯ ಗ್ರಹಣ ಸಂಭವಿಸಲಿದೆ.
ಈ ಬಾರಿಯ ಸೂರ್ಯಗ್ರಹಣ ಮೂರು ಲಗ್ನಗಳಲ್ಲಿ ಬರೋದರಿಂದ ಇದನ್ನು ರಕ್ತ ಗ್ರಹಣ ಮತ್ತು ಕೇತುಗ್ರಸ್ಥ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ವೃಶ್ಚಿಕ ಲಗ್ನದಲ್ಲಿ ಪ್ರಾರಂಭವಾಗಿ, ಧನಸ್ಸು ಲಗ್ನದಲ್ಲಿ ಹಾದು, ಕೊನೆಗೆ ಮಕರ ಲಗ್ನದಲ್ಲಿ (ಮೋಕ್ಷ)ಕೊನೆಗೊಳ್ಳುತ್ತದೆ.
Advertisement
Advertisement
1980ರಲ್ಲಿ ಕರ್ನಾಟಕದ ಅಂಕೋಲಾದಲ್ಲಿ 2.50 ನಿಮಿಷಗಳ ಕಾಲ ಖಗ್ರಾಸ ಸೂರ್ಯ ಗ್ರಹಣ ಸಂಪೂರ್ಣ ಗೋಚರತೆ ಕಾಣ ಸಿಕ್ಕಿತ್ತು. 2010ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಬೆಂಕಿ ಉಂಗುರ ಸೂರ್ಯ ಗ್ರಹಣ ಸಂಭವಿಸಿತ್ತು. ಆದರೆ ಕರ್ನಾಟಕದಲ್ಲಿ ಗೋಚರತೆ ಇರಲಿಲ್ಲ. ಈ ಬಾರಿ ಗ್ರಹಣ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಬೆಂಕಿ ಉಂಗುರ ಸೂರ್ಯ ಪರಿಪೂರ್ಣ ಕಾಣ ಸಿಗಲಿದ್ದಾನೆ. ಅದಾದ ಬಳಿಕ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಅಂದ್ರೆ ಶೇ.93.07 ಬೆಂಕಿ ಗ್ರಹಣ ಕಾಣಸಿಗೋದೆ ಮಂಗಳೂರಿನಲ್ಲಿ ಎಂದು ಹೇಳಲಾಗಿದೆ.
Advertisement
ರಾಜ್ಯದ ಎಲ್ಲೆಲ್ಲಿ ‘ಬೆಂಕಿ’ ಗ್ರಹಣ ಗೋಚರತೆ
* ಮಂಗಳೂರು ನಗರದಲ್ಲಿ ಶೇ.93.04
* ಶಿವಮೊಗ್ಗ ನಗರದಲ್ಲಿ ಶೇ.89.96
* ಬೆಂಗಳೂರು ನಗರದಲ್ಲಿ ಶೇ.89.54
* ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಶೇ.86.24
* ವಿಜಯಪುರ ನಗರ ಪ್ರದೇಶದಲ್ಲಿ ಶೇ.80.64
* ಬೀದರ್ ನಗರ ಭಾಗದಲ್ಲಿ ಶೇ.74.40
Advertisement
ಸೂರ್ಯಗ್ರಹಣ ಹೇಗೆ ಜರಗುತ್ತದೆ?
ಇದೊಂದು ನೈಸರ್ಗಿಕ ಸಹಜ ಪ್ರಕ್ರಿಯೆ. ಭೂಮಿ, ಸೂರ್ಯ ಹಾಗೂ ಚಂದ್ರನ ಮಧ್ಯೆ ನಡೆಯುವಂತಹ ಪ್ರಕ್ರಿಯೆ. ಸೂರ್ಯನ ಕಿರಣಗಳು ಭೂಮಂಡಲದ ಮೇಲೆ ಬೀಳದೆ ಇರೋದು ಸೂರ್ಯಗ್ರಹಣ. ಈ ಮೂರು ಗ್ರಹಗಳು ಒಂದೇ ರೇಖೆಗೆ ಸಮನಾಗಿ ಬಂದು ತಲುಪುತ್ತದೆ. ಈ ವೇಳೆ ಸೂರ್ಯನ ಕಿರಣಗಳು ಭೂಮಿಯನ್ನ ಸ್ಪರ್ಶಿಸದಂತೆ ಚಂದ್ರ ತಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯಗ್ರಹಣ ಉಂಟಾಗುತ್ತದೆ.