Tag: ಸಂತೋಷ ಲಾಡ್

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಹುಬ್ಬಳ್ಳಿ: ‘ಪಬ್ಲಿಕ್ ಟಿವಿ’ ಸತತ ವರದಿಗೆ ಹುಬ್ಬಳ್ಳಿ ಧಾರವಾಡ (Dharwad) ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್‌ಗೆ (Indira Canteen) ಬ್ರೇಕ್ ಬಿದ್ದಿದು, ಹುಬ್ಬಳ್ಳಿ (Hubballi) ಮಂಟೂರು ರಸ್ತೆಯಲ್ಲಿನ ಸ್ಮಶಾನದಿಂದ ಮತ್ತೊಂದು ಸ್ಥಳಕ್ಕೆ ಇಂದಿರಾ ಕ್ಯಾಂಟೀನ್ ಸ್ಥಳಾಂತರಗೊಂಡಿದೆ.

    ಸ್ಮಶಾನದಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ರಾತ್ರೋರಾತ್ರಿ ಕಾಂಪೌಂಡ್ ಹೊಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಕುರಿತು ಸೆ.17 ರಂದು ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೂ ಇಂದಿರಾ ಕ್ಯಾಂಟೀನ್ ಕಾರಣವಾಗಿತ್ತು. ಹೀಗಾಗಿ ಇದೇ ತಿಂಗಳ 26ರಂದು ಶ್ರೀರಾಮಸೇನೆ ಮತ್ತು ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಭೂಮಿಯನ್ನು 2 ತಿಂಗಳ ಕಾಲ ಸುತ್ತಲಿರುವ ಮಿನಿ ಮೂನ್‌! – ಏನಿದರ ವಿಶೇಷ? 

    ಸಾರ್ವಜನಿಕರ ಸತತ ವಿರೋಧ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಮೇರೆಗೆ, ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಪಾಲಿಕೆ ಮುಂದಾಗಿದೆ. ಈ ಕುರಿತು ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

  • ಮೋದಿಯಂತೆ ಮಿಮಿಕ್ರಿ ಮಾಡಿದ ಸಚಿವ ಸಂತೋಷ್ ಲಾಡ್- ವೇದಿಕೆಯಲ್ಲೇ ತಿರುಗೇಟು ನೀಡಿದ ಬಿಜೆಪಿ ಜಿಪಂ ಸದಸ್ಯ!

    ಮೋದಿಯಂತೆ ಮಿಮಿಕ್ರಿ ಮಾಡಿದ ಸಚಿವ ಸಂತೋಷ್ ಲಾಡ್- ವೇದಿಕೆಯಲ್ಲೇ ತಿರುಗೇಟು ನೀಡಿದ ಬಿಜೆಪಿ ಜಿಪಂ ಸದಸ್ಯ!

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಭಾಷಣದ ರೀತಿಯೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಷಣ ಮಾಡಿ ಮೋದಿಯನ್ನು ಲೇವಡಿ ಮಾಡಿದ್ದಾರೆ.

    ನೂತನವಾಗಿ ರಚನೆಯಾದ ಕೂಟ್ಟೂರು ತಾಲೂಕು ಉದ್ಘಾಟನೆ ಮಾಡಿ ಸಚಿವರು ಸರ್ಕಾರದ ಸಾಧನೆ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಸಚಿವರ ಭಾಷಣದ ಮಧ್ಯೆ ರೈತರೊಬ್ಬರು ಬೆಳೆ ವಿಮೆ ದೊರೆಯದ ಬಗ್ಗೆ ಸಚಿವರನ್ನು ಪ್ರಶ್ನೆ ಮಾಡಿದರು. ಈ ವೇಳೆ ಸಚಿವ ಸಂತೋಷ್ ಲಾಡ್, ಮೋದಿಯವರ ಭಾಷಣದ ತರಹವೇ ಫಸಲ್ ಭೀಮಾ ಯೋಜನಾ… ಫಸಲ್ ಭೀಮಾ ಯೋಜನಾ…. ಅಂತಾ ಅಣಕಿಸಿದರು. ಮೇರೆ ಭಾಯಿಯೋ ಔರ್ ಬೆಹೆನೋ ಅಂತಾ ಭಾಷಣ ಮಾಡುತ್ತಾ ಮೋದಿಯನ್ನು ಲೇವಡಿ ಮಾಡಿದ್ರು. ಅಲ್ಲದೇ ಮೋದಿ ಭಾಷಣ ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬಂದಿದೆ ಎಂದು ಪ್ರಧಾನಿಯ ವಿರುದ್ಧ ಕಿಡಿಕಾರಿದ್ರು.

    santhosh lad

    ಸಚಿವ ಸಂತೋಷ್ ಲಾಡ್ ಮೋದಿ ತರಹವೇ ಭಾಷಣ ಮಾಡುತ್ತಿದ್ದಂತೆ ಸಮಾರಂಭದಲ್ಲಿದ್ದ ಜನರು ಕೇಕೆ ಹಾಕಿ ಚಪ್ಪಾಳೆ ತಟ್ಟಿದ್ರು. ಮೋದಿ ಭಾಷಣ ಅಷ್ಟೆ ಅಲ್ಲ ಬಿಜೆಪಿ ಸರ್ಕಾರದ ವಿರುದ್ಧವೂ ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಾ, ಬಿಜೆಪಿ ಸರ್ಕಾರವಿದ್ದಾಗ ಬರೀ ತಾಲೂಕಿನ ಘೋಷಣೆ ಮಾಡಿ ಅನುದಾನ ನೀಡಲಿಲ್ಲ. ಆದ್ರೆ ಸಿದ್ದರಾಮಯ್ಯ ಸರ್ಕಾರ ಘೋಷಣೆಯಾದ ಹೊಸ ತಾಲೂಕುಗಳಿಗೆ ಅನುದಾನ ನೀಡುವ ಮೂಲಕ ಕೆಲಸ ಆರಂಭಿಸಿದೆ ಎಂದರು.

    santhosh lad reaction

    ಈ ವೇಳೆ ವೇದಿಕೆಯಲ್ಲಿದ್ದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಎಂಎಂಜೆ ಹರ್ಷವರ್ಧನ, ಸಚಿವರ ಭಾಷಣಕ್ಕೆ ವೇದಿಕೆಯಲ್ಲೆ ತಿರುಗೇಟು ನೀಡಿದ್ರು. ಕಂಪ್ಲಿ, ಕುರಗೋಡ ತಾಲೂಕುಗಳು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸರ್ಕಾರದಲ್ಲೇ ತಾಲೂಕುಗಳಾಗಿವೆ. ಆದ್ರೆ ಕೆಲಸ ಆರಂಭಿಸಲು ತಾವೇಕೆ ತಡ ಮಾಡಿದ್ರಿ ಎಂದು  ಪ್ರಶ್ನೆ ಮಾಡಿದ್ರು.

    https://www.youtube.com/watch?v=166YoT43z7I&feature=youtu.be

  • ಕೇಂದ್ರ ಸಚಿವರ ಹೇಳಿಕೆಗೆ ವೇದಿಕೆಯಲ್ಲಿ ಗರಂ ಆದ ಕಾರ್ಮಿಕ ಸಚಿವ!

    ಕೇಂದ್ರ ಸಚಿವರ ಹೇಳಿಕೆಗೆ ವೇದಿಕೆಯಲ್ಲಿ ಗರಂ ಆದ ಕಾರ್ಮಿಕ ಸಚಿವ!

    ಬಳ್ಳಾರಿ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಆರೋಪ ಪ್ರತ್ಯಾರೋಪ ಮಾಡೋದು ಮಾಮೂಲು, ಆದರೆ ಕೇಂದ್ರ ವಿಮಾನಯಾನ ಖಾತೆ ಸಚಿವರು ಮಾಡಿದ ಆರೋಪಕ್ಕೆ ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ಗರಂ ಆದ ಘಟನೆ ನಡೆದಿದೆ.

    ಗುರುವಾರ ತೋರಣಗಲ್‍ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಟು ಹೈದರಾಬಾದ್ ವಿಮಾನಯಾನಕ್ಕೆ ಚಾಲನೆ ನೀಡಲಾಯಿತು. ಸಮಾರಂಭವನ್ನು ಉದ್ದೇಶಿಸಿ ಮಾತಾನಾಡಿದ ಕೇಂದ್ರ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ ಸಿನ್ಹಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ 75 ವರ್ಷದಲ್ಲಿ 70 ವಿಮಾನ ನಿಲ್ದಾಣ ಮಾಡಿದೆ. ಬಿಜೆಪಿ ಸರ್ಕಾರ ಒಂದೇ ವರ್ಷದಲ್ಲಿ ಕಡಿಮೆ ವೆಚ್ಚದಲ್ಲಿ 30 ನಿಲ್ದಾಣ ಸ್ಥಾಪನೆ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

    ಸಚಿವರ ಈ ಆರೋಪಕ್ಕೆ ವೇದಿಕೆಯಲ್ಲಿ ಇದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಗರಂ ಆಗಿ, ಬಿಜೆಪಿ ನಾಯಕರು ಕಾಂಗ್ರೆಸ್ ಏನೂ ಮಾಡಿಲ್ಲ ಏನೂ ಮಾಡಿಲ್ಲ ಅಂತಾರೆ. ಅವರು ಹೇಳುವುದನ್ನು ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬರುತ್ತಿದೆ. ದೇಶದಲ್ಲಿ ಆಧಾರ್, ಜಿಎಸ್‍ಟಿ, ಐಟಿಬಿಟಿ, ರೈಲ್ವೆ, ಆರ್‍ಟಿಐ, ಮೊಬೈಲ್ ಎಲ್ಲವನ್ನೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಬಿಜೆಪಿ ನಾಯಕರಿಂದ ಇದೆಲ್ಲವನ್ನು ಬರೀ ನಾಲ್ಕು ವರ್ಷದಲ್ಲಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿ, ಕೇಂದ್ರ ಸಚಿವರಿಗೆ ವೇದಿಕೆಯಲ್ಲೆ ತಿರುಗೇಟು ನೀಡಿ ವೇದಿಕೆಯಿಂದ ಹೊರ ನಡೆದರು.

    ಜಿಂದಾಲ್ ಆವರಣದಲ್ಲಿ ನಡೆದ ಸಮಾರಂಭ ಅಕ್ಷರಶಃ ಬಿಜೆಪಿ ಕಾಂಗ್ರೆಸ್ ನಾಯಕರ ಜಟಾಪಟಿಗೆ ಸಾಕ್ಷಿಯಾದಂತೆ ಕಂಡು ಬಂದಿತು.