Tag: ಮೆಕ್ಸಿಕೋ

  • ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗೆ ಮೋದಿಯನ್ನೊಳಗೊಂಡ ಸಮಿತಿ ರಚಿಸಿ: ಮೆಕ್ಸಿಕೋ

    ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗೆ ಮೋದಿಯನ್ನೊಳಗೊಂಡ ಸಮಿತಿ ರಚಿಸಿ: ಮೆಕ್ಸಿಕೋ

    ವಿಶ್ವಸಂಸ್ಥೆ: ರಷ್ಯಾ ಮತ್ತು ಉಕ್ರೇನ್ ನಡುವೆ (Russia Ukraine War) ಶಾಂತಿಯನ್ನು ಸ್ಥಾಪಿಸಲು ಮಧ್ಯಸ್ಥಿಕೆ ವಹಿಸಲು ಭಾರತದ (India) ಪ್ರಧಾನಿ ನರೇಂದ್ರ ಮೋದಿ (Narendra Modi), ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಮೆಕ್ಸಿಕೋ ವಿಶ್ವಸಂಸ್ಥೆಯಲ್ಲಿ (United Nations) ಪ್ರಸ್ತಾಪಿಸಿದೆ.

    ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ಚರ್ಚೆಯಲ್ಲಿ ಭಾಗವಹಿಸಿದ ಮೆಕ್ಸಿಕೊದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

     

    NARENDRA MODI 6

    ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ 22 ನೇ ಶೃಗಸಭೆಯಲ್ಲಿ ಭೇಟಿಯಾಗಿ, ಇದು ಯುದ್ಧದ ಸಮಯವಲ್ಲ ಎಂದು ತಿಳಿಹೇಳಿದ್ದಾರೆ. ಇದರ ಬೆನ್ನಲ್ಲೇ ಮೆಕ್ಸಿಕೋ ಈ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ತಕ್ಷಣವೇ ಅಂತ್ಯಗೊಳಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಕರೆ

    ನರೇಂದ್ರ ಮೋದಿ ಪುಟಿನ್ ಅವರಿಗೆ ಇದು ಯುದ್ಧದ ಸಮಯವಲ್ಲ ಎಂದು ಹೇಳಿರುವುದಕ್ಕೆ ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

    Narendra Modi And Putin

    ಇದೀಗ ಉಕ್ರೇನ್ ಹಾಗೂ ರಷ್ಯಾ ನಡುವೆ ಶಾಂತಿಯನ್ನು ಸ್ಥಾಪಿಸಲು ನಾವು ಅತ್ಯುತ್ತಮವಾದ ಪ್ರಯತ್ನವನ್ನು ಮಾಡುವುದು ಮುಖ್ಯವಾಗಿದೆ. ಇದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಸೇರಿದಂತೆ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿ ಸಮಿತಿಯನ್ನು ಸ್ಥಾಪಿಸಬೇಕು ಎಂದು ಕ್ಯಾಸೌಬಾನ್ ವಿಶ್ವಸಂಸ್ಥೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    ಮಾತುಕತೆ, ರಾಜತಾಂತ್ರಿಕತೆ ಹಾಗೂ ಪರಿಣಾಮಕಾರಿ ರಾಜಕೀಯ ಮಾರ್ಗಗಳನ್ನು ನಿರ್ಮಿಸುವುದರಿಂದ ಮಾತ್ರವೇ ಶಾಂತಿಯನ್ನು ಸ್ಥಾಪಿಸಬಹುದು ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ವಿಶ್ವಸಂಸ್ಥೆಯಲ್ಲಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಅಂತ್ಯಕ್ರಿಯೆ ವೇಳೆ ಜೀವಂತವಾದ ಬಾಲಕಿ!

    ಅಂತ್ಯಕ್ರಿಯೆ ವೇಳೆ ಜೀವಂತವಾದ ಬಾಲಕಿ!

    ಮೆಕ್ಸಿಕೋ ಸಿಟಿ: 3 ವರ್ಷದ ಬಾಲಕಿ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಘೋಷಿಸಿದ ಬಳಿಕ ಆಕೆಯ ಅಂತ್ಯಕ್ರಿಯೆಯ ವೇಳೆ ಎಚ್ಚರಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ದುರಾದೃಷ್ಟವಶಾತ್ ಬಾಲಕಿಯನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಸಾವನ್ನಪ್ಪಿದ್ದಾಳೆ.

    ವರದಿಗಳ ಪ್ರಕಾರ ಮಧ್ಯ ಮೆಕ್ಸಿಕೋ ಸ್ಯಾನ್ ಲೂಯಿಸ್ ಪೊಟೋಸಿ ರಾಜ್ಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 3 ವರ್ಷದ ಬಾಲಕಿ ಕ್ಯಾಮಿಲಾ ಕೆಲವು ದಿನಗಳಿಂದ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಅವಳನ್ನು ತಾಯಿ ಮೇರಿ ಜೇನ್ ಮೆಂಡೋಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

    funeral 1

    ಬಾಲಕಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಬಾಲಕಿಯ ಸ್ಥಿತಿ ಮತ್ತೆ ಹದಗೆಟ್ಟಿದ್ದರಿಂದ ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಈ ವೇಳೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:  ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು

    ಬಳಿಕ ಬಾಲಕಿಯ ಅಂತ್ಯಕ್ರಿಯೆಗೆ ತಯಾರಿ ನಡೆಯುತ್ತಿದ್ದ ವೇಳೆ ಗಾಜಿನ ಶವಪೆಟ್ಟಿಗೆಯಲ್ಲಿ ಆಕೆಯ ಕಣ್ಣು ಚಲಿಸುತ್ತಿದ್ದುದು ಕುಟುಂಬದವರ ಗಮನಕ್ಕೆ ಬಂದಿದೆ. ಬಳಿಕ ಆಕೆಯ ನಾಡಿಯನ್ನು ಪರೀಕ್ಷಿಸಿದಾಗ ಬಾಲಕಿ ಜೀವಂತವಾಗಿರುವುದು ದೃಢವಾಗಿದೆ.

    Police Jeep

    ಬಾಲಕಿಯನ್ನು ತಕ್ಷಣವೇ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ಬಳಿಕ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ

    Live Tv
    [brid partner=56869869 player=32851 video=960834 autoplay=true]

  • ಜಗತ್ತಿನಲ್ಲಿ 5 ವರ್ಷ ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ: ಮೆಕ್ಸಿಕೋ ಅಧ್ಯಕ್ಷ

    ಜಗತ್ತಿನಲ್ಲಿ 5 ವರ್ಷ ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ: ಮೆಕ್ಸಿಕೋ ಅಧ್ಯಕ್ಷ

    ಮೆಕ್ಸಿಕೋ: ಜಗತ್ತಿನಲ್ಲಿ ಮುಂದಿನ 5 ವರ್ಷಗಳ ಕಾಲ ಯುದ್ಧವೇ ಇಲ್ಲದೆ ಜೀವನ ನಡೆಸಲು ಸಮಿತಿಯನ್ನು ರಚಿಸಬೇಕು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಮೂವರು ಸದಸ್ಯರಾಗಿರಬೇಕು ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.

    ರಷ್ಯಾ, ಚೀನಾ ಯುದ್ಧ ನಡೆಸುತ್ತಿರುವ ಆತಂಕದ ನಡುವೆಯು ಮೆಕ್ಸಿಕನ್ ಅಧ್ಯಕ್ಷರು ಯುದ್ಧ ನಿಲ್ಲಿಸಲು ಸಮಿತಿ ಸ್ಥಾಪನೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಇರಬೇಕು ಎಂದು ತಿಳಿಸಿದ್ದಾರೆ.

    narendra Modi Pope

    ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಈ ಸಮಿತಿಯ ಬಗ್ಗೆ ವಿಶ್ವಸಂಸ್ಥೆಗೆ ಲಿಖಿತ ರೂಪದಲ್ಲಿ ಮಂಡಿಸುತ್ತೇನೆ. ಈ ಆಯೋಗದ ಬಗ್ಗೆ ಪ್ರಚಾರ ಮಾಡಲು ಸಹಾಯ ಬೇಕಾಗಿದೆ ಎಂದು ಹೇಳಿದರು.

    ಈ ಸಮಿತಿಯ ರಚಿಸಲು ಉದ್ದೇಶವೆಂದರೆ, ಅವರೆಲ್ಲರೂ ನಿಯಮಿತವಾಗಿ ಸಭೆ ನಡೆಸುವುದು ಮಾತ್ರವಲ್ಲದೆ, ಯುದ್ಧವಾಗುವ ಸಂಭವ ಇರುವ ಕಡೆ ಯದ್ಧಗಳನ್ನು ನಿಲ್ಲಿಸುವ ಪ್ರಸ್ತಾಪದ ಬಗ್ಗೆಯೂ ಸಲಹೆಯನ್ನು ನೀಡುತ್ತಾರೆ. ಜೊತೆಗೆ ಆಯಾ ದೇಶಗಳೊಂದಿಗೆ ಕನಿಷ್ಠ 5 ವರ್ಷಗಳ ಕಾಲ ಯುದ್ಧಗಳಿಲ್ಲದ ಜಾಗತಿಕ ಒಪ್ಪಂದಕ್ಕೆ ಸಹಾಯ ಮಾಡುತ್ತಾರೆ. ಇದರಿಂದಾಗಿ ಪ್ರಪಂಚದಾದ್ಯಂತದ ಯುದ್ಧ ಮತ್ತು ಅದರ ಪರಿಣಾಮಗಳಿಂದ ಬಳಲುತ್ತಿರುವ ಜನರಿಗೆ ಇದು ನೆರವಾಗಲಿದೆ. ಜಗತ್ತಿಗೆ ಐದು ವರ್ಷಗಳ ಕಾಲ ಯಾವುದೇ ಉದ್ವಿಗ್ನತೆ ಇಲ್ಲದೆ, ಹಿಂಸೆಯಿಲ್ಲದೆ ಮತ್ತು ಶಾಂತಿಯಿಂದ ಇರುತ್ತವೆ ಎಂದು ಹೇಳಿದರು.

    UKRAINE 4

    ಈಗಾಗಲೇ ಯುದ್ಧ ನಡೆಸುತ್ತಿರುವ ಕೆಲವು ದೇಶಗಳು ತಮ್ಮ ವ್ಯಾಪಾರ ಸಂಘರ್ಷಗಳನ್ನು ನಿಲ್ಲಿಸಬೇಕು. ತಮ್ಮ ಸಂಬಂಧಿತ ಬದ್ಧತೆಗಳ ಬಗ್ಗೆ ನಿಗಾ ಇಡಲು ವಿಶ್ವಸಂಸ್ಥೆಯ ಚೌಕಟ್ಟನ್ನು ಬಳಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: PSI ಕೇಸ್‍ – ನಿಮ್ಹಾನ್ಸ್‌ನಲ್ಲಿ ಅಮೃತ್ ಪೌಲ್‌ಗೆ ಚಿಕಿತ್ಸೆ

    I2U2 narendra modi

    ಮೋದಿಯೇ ಯಾಕೆ?: ಕದನ ವಿರಾಮ ಘೋಷಿಸಿ ಶಾಂತಿ ಕಾಪಾಡಲು 3 ಜಾಗತಿಕ ಶಕ್ತಿಗಳಾದ ಚೀನಾ, ರಷ್ಯಾ ಮತ್ತು ಅಮೆರಿಕವನ್ನು ಆಹ್ವಾನಿಸುತ್ತೇನೆ. ಇದು ಅವರಿಗೆ ಅರ್ಥವಾಗುತ್ತದೆ ಎಂದುಕೊಳ್ಳುತ್ತೇನೆ. ಅವರ ಯುದ್ಧಗಳಿಂದಾಗಿ ಕಳೆದ ಒಂದು ವರ್ಷದಿಂದ ವಿಶ್ವದ ಪರಿಸ್ಥಿತಿ ಹದಗೆಟ್ಟಿದೆ. ಇಂದು ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದರೆ, ಅದಕ್ಕೆ ಈ ಮೂರು ದೇಶಗಳೇ ಕಾರಣ. ವಿಶ್ವ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ, ಆಹಾರದ ಕೊರತೆ, ಬಡತನ, ಜೀವಹಾನಿಗೆ ಅವರೇ ಕಾರಣೀಕರ್ತರು. ಈ ಮೂರು ದೇಶಗಳ ಜೊತೆ ನರೇಂದ್ರ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಈ ದೇಶಗಳು ಈ ಸಮಿತಿಯ ಮಾತನ್ನು ಒಪ್ಪುವ ಸಾಧ್ಯತೆಯಿದೆ ಎಂದು ಮೆಕ್ಸಿಕೋ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 4 ವರ್ಷಗಳಿಂದ ಸ್ಥಗಿತವಾಗಿದ್ದ ಮೈ ಶುಗರ್‌ ಕಾರ್ಖಾನೆ ಇಂದಿನಿಂದ ಆರಂಭ

    Live Tv
    [brid partner=56869869 player=32851 video=960834 autoplay=true]

  • ಸಿನಾಲೋವಾದಲ್ಲಿ ಹೆಲಿಕಾಪ್ಟರ್ ಅಪಘಾತ – 14 ಮಂದಿ ಸಾವು

    ಸಿನಾಲೋವಾದಲ್ಲಿ ಹೆಲಿಕಾಪ್ಟರ್ ಅಪಘಾತ – 14 ಮಂದಿ ಸಾವು

    ಮೆಕ್ಸಿಕೋ: ಉತ್ತರ ರಾಜ್ಯ ಸಿನಾಲೋವಾದಲ್ಲಿ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು 14 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಮೆಕ್ಸಿಕೋದ ನೌಕಾಪಡೆ ಶುಕ್ರವಾರ ತಿಳಿಸಿದೆ.

    ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶುಕ್ರವಾರ ಸಿನಾಲೋವಾದ ಮತ್ತೊಂದು ಭಾಗದಲ್ಲಿ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೊ ಕ್ವಿಂಟೆರೊನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಈ ಘಟನೆಗೆ ಅನ್ವಯವಾಗುವಂತೆ ಯಾವುದೇ ಮಾಹಿತಿಯಿಲ್ಲ ಎಂದು ನೌಕಾಪಡೆ ಹೇಳಿದೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಬ್ಯಾನ್ ನಿಷೇಧ ವಾಪಸ್- ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಮೆಕ್ಸಿಕೋದಲ್ಲಿ ಗುಂಡಿನ ದಾಳಿ – 19 ಜನರ ಸಾವು

    ಮೆಕ್ಸಿಕೋದಲ್ಲಿ ಗುಂಡಿನ ದಾಳಿ – 19 ಜನರ ಸಾವು

    ಮೆಕ್ಸಿಕೋ ಸಿಟಿ: ಸೆಂಟ್ರಲ್ ಮೆಕ್ಸಿಕೋದಲ್ಲಿ ಭಾನುವಾರ ಹತ್ತೊಂಬತ್ತು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಟೇಟ್ ಅಟಾರ್ನಿ ಜನರಲ್ ಕಚೇರಿ (ಎಫ್‌ಜಿಇ) ಸೋಮವಾರ ತಿಳಿಸಿದೆ.

    ಗುಂಡಿನ ದಾಳಿಗೆ ಸಾವನ್ನಪ್ಪಿದ 19 ಜನರ ಪೈಕಿ ಮೂವರು ಮಹಿಳೆಯರಿದ್ದು, ಹಲವರು ಗಾಯಗೊಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಶೂಟೌಟ್‌ಗೆ ನಿಖರ ಕಾರಣವನ್ನು ಅಧಿಕಾರಿಗಳು ತಿಳಿಸಿಲ್ಲ. ಮೈಕೋಕಾನ್ ರಾಜ್ಯದ ಲಾಸ್ ಟಿನಾಜಾಸ್ ಪಟ್ಟಣದಲ್ಲಿ ಹಬ್ಬದ ಸಂದರ್ಭ ಅಕ್ರಮ ಕೋಳಿ ಅಂಕಗಳಂತಹ ಬೆಟ್ಟಿಂಗ್ ದಂಧೆಗಳನ್ನು ಜನರು ನಡೆಸುತ್ತಾರೆ. ಇದೇ ರೀತಿ ಜೂಜಿನಲ್ಲಿ ತೊಡಗಿಕೊಂಡವರನ್ನು ಸೆರೆಹಿಡಿಯುವ ಸಲುವಾಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮೈಕೋಕಾನ್‌ನ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಕಚೇರಿ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    Mexico 1

    ಮೆಕ್ಸಿಕೋದ ಮೈಕೋವಾಕನ್ ಹಾಗೂ ಹತ್ತಿರದ ಗುವಾನಾಜುವಾಟೋ ಅತ್ಯಂತ ಹಿಂಸಾತ್ಮಕ ರಾಜ್ಯಗಳು ಎಂದೇ ಕರೆಯಲಾಗುತ್ತದೆ. ಇಲ್ಲಿ ಮಾದಕವಸ್ತು, ಕಳ್ಳಸಾಗಣೆ, ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಜಾರಿಯಾಗುತ್ತಾ ಯುಪಿ ಮಾದರಿ ಜನಸಂಖ್ಯಾ ನಿಯಂತ್ರಣ ಕಾನೂನು?

    ಕಳೆದ ತಿಂಗಳು ಕೂಡಾ ರಾಜ್ಯದಲ್ಲಿ ಶಸ್ತ್ರಾಸ್ತ್ರ ದಾಳಿ ನಡೆದಿದ್ದು, ಪರಿಣಾಮ 17 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

  • ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    ಮೆಕ್ಸಿಕೋ: ಎಂದಿಗೂ ಮನೆಗೆ ಬಾರದ ಮಾಲಕಿ ಕಾಯುತ್ತಿರುವ ನಾಯಿಯ ಹೃದಯವಿದ್ರಾವಕ ಫೋಟೋ ಮತ್ತು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಉತ್ತರ ಮೆಕ್ಸಿಕೋದ ಗಡಿ ನಗರವಾದ ಟಿಜುವಾನಾದಲ್ಲಿ ಪತ್ರಕರ್ತೆ ಲೌರ್ಡೆಸ್ ಮಲ್ಡೊನಾಡೊ ಲೋಪೆಜ್ ಅವರನ್ನು ಕಾರಿನೊಳಗೆ ಮಾರಣಾಂತಿಕವಾಗಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಆದರೆ ನಾಯಿ ತನ್ನ ಮಾಲಕಿಗಾಗಿ ಮನೆಯ ಹೊರಗೆ ಕಾಯುತ್ತಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ

    ವೀಡಿಯೋದಲ್ಲಿ ಏನಿದೆ?
    ಲೌರ್ಡೆಸ್ ಮಲ್ಡೊನಾಡೊ ಲೋಪೆಜ್ ಯುಎಸ್ ಪ್ರಜೆಯಾಗಿದ್ದು, ಈಕೆಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆಕೆ ಕೊಲೆಯಾದ ಒಂದು ದಿನದ ನಂತರ, ಆಕೆಯ ನಾಯಿಯು ಪೊಲೀಸ್ ಟೇಪ್‍ನಿಂದ ಸುತ್ತುವರಿದ ಅವರ ಮನೆಬಾಗಿಲಿನಲ್ಲಿಯೇ ಇದೆ. ಆ ಫೋಟೋ ನೋಡಿದರೆ ಆ ನಾಯಿಗೆ ತನ್ನ ಮಾಲಕಿ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇದೆ ಎಂಬುದು ತಿಳಿಯುತ್ತೆ.

    ಮಲ್ಡೊನಾಡೊ ಅವರ ಟಿಜುವಾನಾ ಮನೆಯಲ್ಲಿ ಇರುವ ನಾಯಿಯ ವೀಡಿಯೊವನ್ನು ಪತ್ರಕರ್ತೆ ರೋಸಾ ಲಿಲ್ಲಿಯಾ ಸೋಮವಾರ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ಮೆಕ್ಸಿಕೊದಲ್ಲಿ ಎರಡು ವಾರಗಳಲ್ಲಿ ಮೂವರು ಪತ್ರಕರ್ತರ ಕ್ರೂರ ಹತ್ಯೆಯಾಗಿದೆ. ಅದರಲ್ಲಿ ಮಲ್ಡೊನಾಡೊ ಒಬ್ಬರು. ಈ ಕೃತ್ಯ ಭಾನುವಾರ ನಡೆದಿದ್ದು, ಮಲ್ಡೊನಾಡೊ ಅವರ ಹತ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಶವ ಕಾರಿನಲ್ಲಿ ಪತ್ತೆಯಾಗಿತ್ತು. ಹಾಗೆಯೇ ಜನವರಿ 17 ರಂದು ಟಿಜುವಾನಾ ಫೋಟೋ ಜರ್ನಲಿಸ್ಟ್ ಮಾರ್ಗರಿಟೊ ಮಾರ್ಟಿನೆಜ್ ಮತ್ತು ಜನವರಿ 10 ರಂದು ವೆರಾಕ್ರಜ್ ಪತ್ರಕರ್ತ ಜೋಸ್ ಲೂಯಿಸ್ ಗ್ಯಾಂಬೋವಾ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಕಳೆದ ವರ್ಷ ಏಪ್ರಿಲ್‍ನಲ್ಲಿ, ಈಕೆಯ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂಬಂಧ 2019 ರಲ್ಲಿ, ಮಾಲ್ಡೊನಾಡೊ ಮೆಕ್ಸಿಕೋ ಅಧ್ಯಕ್ಷರಿಗೆ ನನ್ನ ಮೇಲೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದರು. ಆಗ ಮೆಕ್ಸಿಕನ್ ಸರ್ಕಾರವು ಇವರಿಗೆ ಪೊಲೀಸ್ ರಕ್ಷಣೆಯಲ್ಲಿ ಕೊಟ್ಟಿತ್ತು.

  • ಮೋಹಕತಾರೆ ರಮ್ಯಾ ಮೆಕ್ಸಿಕೋ ಟ್ರಿಪ್ -ವೀಡಿಯೋ ವೈರಲ್

    ಮೋಹಕತಾರೆ ರಮ್ಯಾ ಮೆಕ್ಸಿಕೋ ಟ್ರಿಪ್ -ವೀಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಸ್ನೇಹಿತರ ಜೊತೆಗೆ ಮೆಕ್ಸಿಕೋ ಪ್ರವಾಸವನ್ನು ಮಾಡುತ್ತಿದ್ದಾರೆ. ಅಲ್ಲಿಯ ಸುಂದರತಾಣಗಳಲ್ಲಿ ಎಂಜಾಯ್ ಮಾಡುತ್ತಿರುವ ಕೆಲವು ಫೋಟೋಗಳಿರವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ರಮ್ಯಾ ಇತ್ತೀಚೆಗೆ ಮೆಕ್ಸಿಕೋ ಟ್ರಿಪ್ ಮುಗಿಸಿ ಬಂದಿದ್ದಾರೆ. ಟ್ರಿಪ್‍ನ ಫೋಟೋ, ವೀಡಿಯೋಗಳನ್ನು ರಮ್ಯಾ ಎಡಿಟ್ ಮಾಡಿ, ನಿನ್ನ ಗುಂಗಲ್ಲೇ ನನ್ನೇ ಮರೆತೆ ನಾ ಎಂಬ ಕನ್ನಡ ಹಾಡನ್ನು ಸೇರಿಸಿದ್ದಾರೆ. ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಟ್ರಿಪ್ ಟೈಮ್‍ನಲ್ಲಿ ರಮ್ಯಾ ಸಖತ್ ಎಂಜಾಯ್ ಮಾಡಿರುವುದನ್ನು ಫೋಟೋಗಳಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:   CDS ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ- ಪತ್ನಿ ಸೇರಿ11 ಮಂದಿ ಸಾವು

    ರಮ್ಯಾ ಇತ್ತೀಚೆಗೆ ಮೆಕ್ಸಿಕೋ ಟ್ರಿಪ್ ಮುಗಿಸಿ ಬಂದಿದ್ದಾರೆ. ಅಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಟ್ರಿಪ್‍ನ ವೀಡಿಯೋವನ್ನು ರಮ್ಯಾ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್‍ನಲ್ಲಿ ರಿಲ್ಯಾಕ್ಸ್ ಮಾಡುವ ಫೋಟೋಗಳನ್ನು ಹಾಕಿದ್ದಾರೆ. ಸಮುದ್ರದ ನೀರಿನಲ್ಲಿ ರಮ್ಯಾ ಈಜು ಮಾಡುತ್ತಿರುವ ಫೋಟೋ ಕೂಡ ಇದರಲ್ಲಿ ಇದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದಯವಿಟ್ಟು ಸಿನಿಮಾ ರಂಗಕ್ಕೆ ವಾಪಸ್ ಬನ್ನಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್

    ramya2

    ರಮ್ಯಾ ಫುಲ್ ಟೈಮ್ ಚಿತ್ರರಂಗ ತೊರೆದು ದಶಕಗಳೇ ಕಳೆದುಹೋಗಿದೆ. ರಾಜಕೀಯದಲ್ಲೂ ಅಷ್ಟು ಸಕ್ರಿಯವಾಗಿಲ್ಲ. ಆದರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.

  • ಅಕ್ರಮ ಸಂಬಂಧ ಉಳಿಸಿಕೊಳ್ಳಲು ತನ್ನ ರೂಮಿಂದ ಪ್ರೇಯಸಿ ಕೋಣೆಗೆ ಸುರಂಗ ತೋಡಿದ!

    ಅಕ್ರಮ ಸಂಬಂಧ ಉಳಿಸಿಕೊಳ್ಳಲು ತನ್ನ ರೂಮಿಂದ ಪ್ರೇಯಸಿ ಕೋಣೆಗೆ ಸುರಂಗ ತೋಡಿದ!

    – ವ್ಯಕ್ತಿ ಹಾಗೂ ಮಹಿಳೆ ಇಬ್ಬರೂ ವಿವಾಹಿತರಾಗಿದ್ರು
    – ಮಹಿಳೆಯ ಪತಿ ನೈಟ್ ಶಿಫ್ಟ್ ಕೆಲಸಕ್ಕೆ ಹೋಗ್ತಿದ್ದಾಗ ಭೇಟಿ
    – ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

    ವಾಷಿಂಗ್ಟನ್: ಪ್ರೀತಿ ಮಾಡಿದ ಗೆಳತಿಗೆ ಚಾಕ್ಲೇಟ್, ಗ್ರೀಟಿಂಗ್, ಗಿಫ್ಟ್ ಗಳನ್ನು ಕೊಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೇಯಸಿಯೊಂದಿಗಿನ ಅಕ್ರಮ ಸಂಬಂಧಕ್ಕಾಗಿ ನೂರಾರು ಮೀಟರ್ ಸುರಂಗವನ್ನೇ ತೊಡಿದ್ದು, ಭಾರೀ ಸುದ್ದಿಯಲ್ಲಿದ್ದಾನೆ.

    ಹೌದು. ಅಕ್ರಮ ಸಂಬಂಧ ಉಳಿಸಿಕೊಳ್ಳುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಪ್ರತಿನಿತ್ಯ ಭೇಟಿ ಮಾಡಲು ಸುರಂಗ ಮಾರ್ಗವನ್ನೇ ನಿರ್ಮಿಸಿದ್ದಾನೆ. ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

    teenage couple love marrige

    ಆಲ್ಬರ್ಟೊ ಎಂಬ ವಿವಾಹಿತ ವ್ಯಕ್ತಿ ಮತ್ತು ವಿವಾಹಿತ ಮಹಿಳೆ ಇಬ್ಬರೂ ತಿಜುವಾನಾದ ಅಕ್ಕಪಕ್ಕದ ನಿವಾಸಿಗಳು. ಈ ಇಬ್ಬರ ನಡುವೆ ಪರಿಚಯವಾಗಿದೆ. ಮಹಿಳೆಯ ಪತಿ ಜಾರ್ಜ್ ಸೆಕ್ಯೂರಿಟಿ ಗಾರ್ಡ್ ಆಗಿ ನೈಟ್ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದನು. ಪತಿ ಇಲ್ಲದ ಸಮಯದಲ್ಲಿ ಪಕ್ಕದ ಮನೆಯ ಆಲ್ಬರ್ಟೊ ಮಹಿಳೆಯನ್ನು ಭೇಟಿ ಮಾಡಲು ತನ್ನ ಪತ್ನಿಗೆ ತಿಳಿಯದಂತೆ ಆಗಾಗ ಬರುತ್ತಿದ್ದನು. ಅಲ್ಲದೆ ಆಲ್ಬರ್ಟೊ ಆಕೆಯನ್ನು ಭೇಟಿ ಮಾಡಲು ಇನ್ನೂ ಸುಲಭವಾಗಲಿ ಎಂದು ತನ್ನ ಮನೆಯ ರೂಮ್‍ನಿಂದ ಆಕೆಯ ಮನೆಯ ರೂಮ್ ವರೆಗೆ ಸುರಂಗ ತೋಡಿದ್ದಾನೆ. ಹೀಗೆ ಇಬ್ಬರೂ ವರ್ಷಗಟ್ಟಲೆ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು.

    COUPLE

    ಒಂದು ದಿನ ಮಹಿಳೆಯ ಪತಿ ಜಾರ್ಜ್ ಪತ್ನಿಗೆ ಮಾಹಿತಿ ನೀಡದೇ ಬೇಗ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಯಾರೊಂದಿಗೋ ಜೋರಾಗಿ ಮಾತನಾಡುತ್ತಿರುವುದನ್ನು ಹೊರಗಡೆ ನಿಂತು ಕೇಳಿಸಿಕೊಂಡಿದ್ದಾನೆ. ಇನ್ನೂ ಮನೆಯೊಳಗಡೆ ಬಂದ ತಕ್ಷಣ ಮನೆಯಲ್ಲೆಲ್ಲ ಹುಡುಕಲು ಆರಂಭಿಸಿದನು. ಆಗ ಸೋಫಾದ ಹಿಂದೆ ಏನೋ ಇರುವುದನ್ನು ನೋಡಿ ಪರಿಶೀಲಿಸಿದಾಗ ಸುರಂಗ ಮಾರ್ಗ ಇರುವುದು ಗೊತ್ತಾಗಿದೆ. ಅಚ್ಚರಿಗೊಂಡ ಜಾರ್ಜ್, ಅದರೊಳಗಿನಿಂದ ಇಳಿದು ಮುಂದೆ ಸಾಗಿದಾಗ ಪಕ್ಕದ ಮನೆಯವರ ಬೆಡ್ ರೂಂಗೆ ಸಂಪರ್ಕ ಹೊಂದಿತ್ತು. ಇದನ್ನು ಕಂಡ ಪತಿಗೆ ಪತ್ನಿಯ ಅಕ್ರಮ ಸಂಬಂಧದ ಸತ್ಯ ಖಚಿತವಾಯಿತು.

    ROOM

    ಮೆಕ್ಸಿಕೋ ದೇಶಕ್ಕೆ ಬರುವುದಕ್ಕೂ ಮುನ್ನ ಜಾರ್ಜ್ ಪೆರು ದೇಶದಲ್ಲಿದ್ದು, ಒಮ್ಮೆ ಗೂಗಲ್ ಮ್ಯಾಪ್ ಉಪಯೋಗಿಸುವಾಗ ತಾಂತ್ರಿಕ ಸಮಸ್ಯೆ ಕಂಡುಬಂದು ಗೂಗಲ್ ಸ್ಟೀವ್ ವ್ಯೂನಲ್ಲಿ ದಾರಿ ಹುಡುಕುತ್ತಾ ಬರುತ್ತಿದ್ದ. ಈ ವೇಳೆ ಪ್ರೇಯಸಿಯೊಬ್ಬಳು ತ್ನನ ಪ್ರಿಯಕರನೊಂದಿಗೆ ಕುಳಿತಿರುವ ಕುತೂಹಲಕಾರಿ ಫೋಟೋ ಕಾಣಿಸಿತ್ತು. ಅದನ್ನು ಝೂಮ್ ಮಾಡಿ ನೋಡಿದಾಗ ಅದು ಈತನ ಪತ್ನಿಯೇ ಆಗಿದ್ದಳು. ಅದನ್ನು ನೋಡಿದ ಜಾರ್ಜ್, ತನ್ನ ಪತ್ನಿಯ ಅಕ್ರಮ ಸಂಬಂಧ ಇಂಟರ್ನೆಟ್ ನಲ್ಲಿಯೇ ಬಂದಿದೆಯಲ್ಲಾ ಎಂದು ದೇಶವನ್ನೇ ತೊರೆದು ಪತ್ನಿ ಜೊತೆಗೆ ಇರಲು ಮೆಕ್ಸಿಕೋಗೆ ಬಂದಿದ್ದಾನೆ. ಆದರೆ ಆಕೆ ಇಲ್ಲೂ ಕೂಡ ಮತ್ತೊಬ್ಬನ ಜೊತೆ ಸುರಂಗ ಮಾರ್ಗದ ಮೂಲಕ ಅಕ್ರಮ ಸಂಬಂಧ ಹೊಂದಿದ್ದು ನೋಡಿ ದಿಗ್ಭ್ರಾಂತನಾಗಿದ್ದಾನೆ.

    room e1559542923353

  • ಅವನನ್ನು ಚೆನ್ನಾಗಿ ನೋಡಿಕೊಳ್ಳಿ – ಪ್ರೀತಿಯ ಶ್ವಾನದ ಬಗ್ಗೆ ಭಾವನಾತ್ಮಕ ಸಾಲು ಬರೆದ ಮಾಲೀಕ

    ಅವನನ್ನು ಚೆನ್ನಾಗಿ ನೋಡಿಕೊಳ್ಳಿ – ಪ್ರೀತಿಯ ಶ್ವಾನದ ಬಗ್ಗೆ ಭಾವನಾತ್ಮಕ ಸಾಲು ಬರೆದ ಮಾಲೀಕ

    – ಸಂಬಂಧಿಕರಿಂದ ಅವನನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ

    ಮೆಕ್ಸಿಕೋ: ಅವನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದು ಮಾಲೀಕನೋರ್ವ ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಪಾರ್ಕಿನ ಬೆಂಚಿಗೆ ಕಟ್ಟಿ ಹೋಗಿರುವ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.

    ತಾನು ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಸಂಬಂಧಿಕರು ನಿಂದಿಸುತ್ತಾರೆ ಎಂಬ ಕಾರಣಕ್ಕೆ ಆತ ಇದನ್ನು ಬೇರೆಯವರಿಗೆ ಕೊಡುವ ತೀರ್ಮಾನ ಮಾಡಿದ್ದಾನೆ. ಅದಕ್ಕಾಗಿ ಒಂದು ಭಾವನಾತ್ಮಕ ಪತ್ರ ಬರೆದು ಶ್ವಾನವನ್ನು ಪಾರ್ಕಿನಲ್ಲಿರುವ ಬೆಂಚ್‍ಗೆ ಕಟ್ಟಿ, ಯಾರಾದರೂ ಇವನನ್ನು ದತ್ತು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.

    Mexico Dog 2

    ಪತ್ರದಲ್ಲೇನಿದೆ?
    ನಾನು ಈ ಪತ್ರದ ಮೂಲಕ ಶ್ವಾನವನ್ನು ದತ್ತು ಪಡೆಯಲು ಮತ್ತು ಅವವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ನಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಈ ರೀತಿ ಬಿಟ್ಟುಹೋಗಲು ಬಹಳ ಬೇಸರವಾಗುತ್ತಿದೆ. ಆದರೆ ನನ್ನ ಸಂಬಂಧಿಕರು ಅವನನ್ನು ದಿನ ಬೈಯುತ್ತಾರೆ. ಅವರು ನಿಂದಿಸುವುದನ್ನು ನೋಡಲಾಗದೇ ಈ ತೀರ್ಮಾನ ಮಾಡಿದ್ದೇನೆ. ಈ ಪತ್ರ ಓದಿ ದತ್ತು ಪಡೆಯಬೇಕು ಎಂದರೆ ಕೆರೆದುಕೊಂಡು ಹೋಗಿ. ಇಲ್ಲ ಈ ಪತ್ರವನ್ನು ಬೇರೆಯವರಿಗಾಗಿ ಇಲ್ಲೇ ಬಿಟ್ಟು ಹೋಗಿ ಎಂದು ಬರೆದುಕೊಂಡಿದ್ದಾರೆ.

    Mexico Dog 3

    ತನ್ನ ಮಾಲೀಕನನ್ನು ಕಳೆದುಕೊಂಡ ಶ್ವಾನ ಬೆಂಚಿನ ಮೇಲೆ ಮಲಗಿಕೊಂಡು, ಬಂದು ಪತ್ರ ಓದುವವರನ್ನು ನೋಡುತ್ತಾ ಕುಳಿತ್ತಿದೆ. ಪತ್ರ ಓದಿದ ಯಾರೂ ಶ್ವಾನವನ್ನು ದತ್ತು ಪಡೆದುಕೊಂಡಿಲ್ಲ. ಕೊನೆಗೆ ಅನಿಮಲ್ ಚಾರಿಟಿಯವರು ಬಂದು ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಶ್ವಾನಕ್ಕೆ ‘ಬೋಸ್ಟನ್’ ಎಂದು ನಾಮಕರಣ ಮಾಡಿದ್ದಾರೆ.

  • 6ರ ಬಾಲಕಿ ಮೇಲೆ ರೇಪ್, ಕೊಲೆ ಆರೋಪ- ವ್ಯಕ್ತಿಯನ್ನ ಜೀವಂತವಾಗಿ ಸುಟ್ಟ ಜನ

    6ರ ಬಾಲಕಿ ಮೇಲೆ ರೇಪ್, ಕೊಲೆ ಆರೋಪ- ವ್ಯಕ್ತಿಯನ್ನ ಜೀವಂತವಾಗಿ ಸುಟ್ಟ ಜನ

    – ಪೊಲೀಸರಿಗೆ ಒಪ್ಪಿಸಲು ಹೋಗುವಾಗ್ಲೇ ವ್ಯಕ್ತಿಯ ಕಗ್ಗೊಲೆ

    ಮೆಕ್ಸಿಕೊ: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ ಎಂದು ಶಂಕಿಸಿ ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮೆಕ್ಸಿಕೋದ ಚಿಯಾಪಾಸ್ ಗ್ರಾಮದಲ್ಲಿ ನಡೆದಿದೆ.

    ಆಲ್ಫ್ರೆಡೋ ರೊಬ್ಲೆರೊ ಕೊಲೆಯಾದ ವ್ಯಕ್ತಿ. ಈತನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ.

    uttar pradesh police jpg 1575793938 e1577603453458

    ಏನಿದು ಪ್ರಕರಣ?
    ಜನವರಿ 9 ರಂದು ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಮರುದಿನ ಬಾಲಕಿಯ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಪೋಷಕರು ಮತ್ತು ಗ್ರಾಮಸ್ಥರು ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಆಗ ಬಾಲಕಿಯ ಸಂಬಂಧಿಕರು ಆಲ್ಫ್ರೆಡೋ ರೊಬ್ಲೆರೊ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಿ ಪೊಲೀಸರಿಗೆ ಒಪ್ಪಿಸಲು ಮುಂದಾಗಿದ್ದರು. ಆದರೆ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದರೆ ಬೇಗ ನ್ಯಾಯ ಸಿಗುವುದಿಲ್ಲ ಎಂದು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಕೈ ಕಾಲು ಕಟ್ಟಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ.

    Police Jeep 1

    ಮೃತ ವ್ಯಕ್ತಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಬಾಲಕಿ ಮೃತಪಟ್ಟಿದ್ದಾಳೆ. ಆದರೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಆದರೆ ಗ್ರಾಮಸ್ಥರು ಅನುಮಾನದ ಮೇರೆಗೆ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಶಂಕಿತ ಆರೋಪಿಯ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಶಂಕಿತ ಆರೋಪಿಯನ್ನು ಯಾರು ಕೊಂದರು ಎಂಬುದು ತಿಳಿದು ಬಂದಿಲ್ಲ. ಹೀಗಾಗಿ ಪೊಲೀಸರು ಅಪರಿಚಿತರ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.