ಕತಾರ್: ಫಿಫಾ ವಿಶ್ವಕಪ್‍ನಲ್ಲಿ (FIFA World Cup) ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೆಕ್ಸಿಕೋ (Mexico) ವಿರುದ್ಧ 2-0 ಅಂತರದ ಗೋಲುಗಳಿಂದ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ (Argentina) ಗೆಲುವು ದಾಖಲಿಸಿ ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡಿದೆ.
Advertisement
ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಮೆಸ್ಸಿ (Lionel Messi) ಬಳಗ ಎದುರಾಳಿಗೆ ಎಲ್ಲಾ ವಿಭಾಗದಲ್ಲೂ ಕಂಟಕವಾಗಿ ಕಾಡಿತು. ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ಭಾರತಕ್ಕೆ ವಿಶ್ವಕಪ್ ಟೂರ್ನಿ ಬಹಿಷ್ಕರಿಸೋ ಬೆದರಿಕೆ ಹಾಕಿದ ಪಾಕ್
Advertisement
Advertisement
ಬಳಿಕ ರೋಚಕವಾಗಿ ಸಾಗಿದ ಕಾದಾಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನಿಂದ ಕಾದಾಡಿದವು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ. ಇದನ್ನೂ ಓದಿ: ಜಡೇಜಾ ಟೀಂ ಇಂಡಿಯಾ ಪರ ಆಡಲು ಅನ್‍ಫಿಟ್ – ಬಿಜೆಪಿ ಪರ ಪ್ರಚಾರಕ್ಕೆ ಫಿಟ್
Advertisement
ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು. ಜೊತೆಗೆ ನಾಕೌಟ್‍ಗೇರುವ ಅವಕಾಶವನ್ನು ಉಳಿಸಿಕೊಂಡಿತು.
ಅತ್ತ ಗೆಲುವಿನ ಹೀರೋ ಆಗಿ ಅರ್ಜೆಂಟೀನಾ ದಿಗ್ಗಜ ಆಟಗಾರ ಮೆಸ್ಸಿ ಮೆರೆದಾಡಿದರು. ಮೆಕ್ಸಿಕೋ ವಿರುದ್ಧ ಏಕೈಕ ಗೋಲು ಸಿಡಿಸಿದ ಮೆಸ್ಸಿ ವಿಶ್ವಕಪ್‍ನಲ್ಲಿ ಈವರೆಗೆ ಅರ್ಜೆಂಟೀನಾ ಪರ 8 ಗೋಲು ಸಿಡಿಸಿದ ಸಾಧನೆ ಮಾಡಿದರು. ಈ ಸಾಧನೆಯೊಂದಿಗೆ ಫುಟ್‍ಬಾಲ್ ದಂತಕಥೆ ಅರ್ಜೆಂಟೀನಾದ ಮಾಜಿ ಆಟಗಾರ ಡಿಯಾಗೋ ಮರಡೋನಾ ಅವರ 8 ಗೋಲುಗಳ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಇವರಿಬ್ಬರೂ ಕೂಡ ತಾವಾಡಿದ 21 ಪಂದ್ಯಗಳಲ್ಲಿ 8 ಗೋಲು ಸಿಡಿಸಿ ಮಿಂಚಿದ್ದಾರೆ.