Tag: ಮಾರ್ಕೆಟ್

  • ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಒದ್ದಾಡುತ್ತಿರುವ ನೆರೆಯ ಪಾಕಿಸ್ತಾನ (Pakistan) ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಒದ್ದಾಡುತ್ತಿದೆ. ಈ ಹಿನ್ನೆಲೆ ಪಾಕಿಸ್ತಾನದ ಸರ್ಕಾರ ಇಂಧನ (Energy) ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿದೆ.

    ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ.

    Pakistan

    ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ಮಾರುಕಟ್ಟೆ ಹಾಗೂ ಮಾಲ್‌ಗಳನ್ನು ಈಗ ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ. ಮದುವೆ ಮಂಟಪಗಳನ್ನು ರಾತ್ರಿ 10:00 ಗಂಟೆಗೆ ಮುಚ್ಚಲಾಗುತ್ತದೆ. ಈ ಕ್ರಮದಿಂದ ನಮಗೆ 60 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ.

    ದೇಶದ ಪರಿಸ್ಥಿತಿಯನ್ನು ನಿಭಾಯಿಸಲು ಪಾಕ್ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಕಾಶಮಾನವಾದ ಬಲ್ಬ್ ಉತ್ಪಾದನೆಯನ್ನು ಫೆಬ್ರವರಿ 1 ರಿಂದ ಸ್ಥಗಿತಗೊಳಿಸಲು ಸೂಚಿಸಲಾಗಿದ್ದು, ಜುಲೈ ತಿಂಗಳಿನಿಂದ ಅಸಮರ್ಥ ಫ್ಯಾನ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎನ್ನಲಾಗಿದೆ. ಈ ಕ್ರಮದಿಂದ 22 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ಆಸಿಫ್ ತಿಳಿಸಿದ್ದಾರೆ.

    Pakistan Defence Minister Khawaja Asif 1

    ಪಾಕ್ ಸರ್ಕಾರ 1 ವರ್ಷದೊಳಗೆ ಕಡಿಮೆ ವಿದ್ಯುತ್ ಬಳಸುವ ಗೀಸರ್‌ಗಳನ್ನು ಬಳಸಲು ಹಾಗೂ ಹಳೆಯದನ್ನು ಅಥವಾ ಹೆಚ್ಚು ವಿದ್ಯುತ್ ಉಪಯೋಗಿಸುವ ಗೀಸರ್‌ಗಳನ್ನು ಬದಲಿಲು ಜನರಿಗೆ ಕಡ್ಡಾಯವಾದ ಸೂಚನೆ ನೀಡಿದೆ. ಇದರಿಂದ 92 ಶತಕೋಟಿ ರೂ. ಉಳಿತಾಯವಾಗುತ್ತದೆ. ಬೀದಿ ದೀಪಗಳ ಬದಲು ಪರ್ಯಾಯ ದೀಪ ಬಳಕೆಯಿಂದ 4 ಶತಕೋಟಿ ರೂ. ಉಳಿಸಬಹುದು ಎಂದಿದೆ. ಇದನ್ನೂ ಓದಿ: ಹತ್ಯೆ ಕೇಸ್- ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ

    ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಕಚೇರಿಗಳಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲಾಗುತ್ತಿದ್ದು, ಆದಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

    bulb 1

    ಮಂಗಳವಾರ ನಡೆದ ಸಂಪುಟ ಸಭೆಯಲ್ಲೂ ಯಾವುದೇ ವಿದ್ಯುತ್ ದೀಪಗಳು ಉರಿಯದೇ ಇದ್ದುದು ವಿಶೇಷವಾಗಿತ್ತು. ಕೇವಲ ಸೂರ್ಯನ ಬೆಳಕಿನಿಂದಲೇ ಸಭೆಯನ್ನು ನಡೆಸಲಾಗಿತ್ತು. ಇದು ಇಡೀ ದೇಶ ಅನುಸರಿಸಲು ಒಂದು ಅತ್ಯುತ್ತಮ ಉದಾಹರಣೆ ಎಂದು ಆಸಿಫ್ ಹೇಳಿದ್ದಾರೆ. ಇದನ್ನೂ ಓದಿ: ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    Live Tv
    [brid partner=56869869 player=32851 video=960834 autoplay=true]

  • ಹಬ್ಬದ ಸಂಭ್ರಮಕ್ಕೆ ಮಾರ್ಕೆಟ್‍ನಲ್ಲಿದ್ದ 100ಕ್ಕೂ ಅಧಿಕ ಮಂದಿಗೆ ಹೃದಯ ಸ್ತಂಭನ

    ಹಬ್ಬದ ಸಂಭ್ರಮಕ್ಕೆ ಮಾರ್ಕೆಟ್‍ನಲ್ಲಿದ್ದ 100ಕ್ಕೂ ಅಧಿಕ ಮಂದಿಗೆ ಹೃದಯ ಸ್ತಂಭನ

    ಸಿಯೋಲ್: ಹಬ್ಬದ ಸಂಭ್ರಮಕ್ಕೆಂದು ಮಾರ್ಕೆಟ್‍ನಲ್ಲಿ (Market) ಸೇರಿದ್ದ 100ಕ್ಕೂ ಹೆಚ್ಚು ಮಂದಿ ಏಕಾಏಕಿ ಹೃದಯ ಸ್ತಂಭನದಿಂದ (Cardiac Arrest) ಕುಸಿದು ಬಿದ್ದ ಘಟನೆ ದಕ್ಷಿಣ ಕೊರಿಯಾದ (South Korea) ರಾಜಧಾನಿ ಸಿಯೋಲ್‍ನಲ್ಲಿ (Seoul) ಇಂದು ರಾತ್ರಿ ನಡೆದಿದೆ.

    South Korea

    ದಕ್ಷಿಣ ಕೊರಿಯಾದಲ್ಲಿ ಹ್ಯಾಲೋವೀನ್ ಹಬ್ಬದ (Halloween festivities) ಸಂಭ್ರಮದ ಖರೀದಿಗಾಗಿ ಜನ ಸಿಯೋಲ್‍ನ ಮಾರುಕಟ್ಟೆಯೊಂದರಲ್ಲಿ ಸೇರಿದ್ದರು. ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುಕಟ್ಟೆಯಲ್ಲಿದ್ದರು. ಈ ವೇಳೆ ನೂರಾರು ಮಂದಿ ಏಕಾಏಕಿ ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಿರುವ ವೀಡಿಯೋ ಸ್ಥಳೀಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್

    ಕಳೆದರಡು ವರ್ಷಗಳಿಂದ ಕೊರೊನಾದಿಂದಾಗಿ (Corona) ದಕ್ಷಿಣ ಕೊರಿಯಾದಲ್ಲಿ ಸ್ಥಗಿತಗೊಂಡಿದ್ದ ಹ್ಯಾಲೋವೀನ್ ಹಬ್ಬವನ್ನು ಈ ವರ್ಷ ಆಚರಿಸಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಜನ ಹಬ್ಬದ ಖರೀದಿಗಾಗಿ ಮಾರ್ಕೆಟ್‍ನಲ್ಲಿ ಸೇರಿದ್ದಾರೆ. ಈ ವೇಳೆ ಏಕಾಏಕಿ ಹಲವು ಮಂದಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದವರಿಗೆ ಹೃದಯ ಸ್ತಂಭನವಾಗಿದ್ದು, 81 ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ `ಮೋದಿ-ಮೋದಿ’, `AAP ನಾಯಕರು ಚೋರ್-ಚೋರ್’ ಘೋಷಣೆ

    ಹೃದಯ ಸ್ತಂಭನಕ್ಕೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

    ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

    ಭೋಪಾಲ್: ತರಕಾರಿ ಮಾರಾಟಗಾರನೊಬ್ಬನು ಭೋಪಾಲ್‍ನ ಸಿಂಧಿ ಮಾರ್ಕೆಟ್‍ನ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    coriander leaves 2

    ವೀಡಿಯೋದಲ್ಲಿ ಏನಿದೆ?
    ತರಕಾರಿ ಮಾರಾಟಗಾರನೊಬ್ಬ ಚರಂಡಿ ನೀರಿನಲ್ಲಿ ತರಕಾರಿ ತೊಳೆಯುತ್ತಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿ ಕೊಳಕು ನೀರಿನಲ್ಲಿ ತಿನ್ನುವ ತರಕಾರಿಗಳನ್ನು ತೊಳೆಯಬೇಡಿ ಎಂದು ವ್ಯಕ್ತಿ ಪದೇ ಪದೇ ಹೇಳುತ್ತಿದ್ದರೂ, ಮಾರಟಗಾರನು ಗಮನ ಕೊಡಲಿಲ್ಲ. ಈ ದೃಶ್ಯ ನೋಡಿದರೆ ನಿನ್ನ ಬಳಿ ಯಾರೂ ತರಕಾರಿ ಖರೀದಿಸುವುದಿಲ್ಲ ಎಂದು ವ್ಯಕ್ತಿ ಹೇಳುತ್ತಿದ್ದರೂ, ಸಹ ಮಾರಾಟಗಾರ ನಿರ್ಲಕ್ಷ್ಯ ಮಾಡುತ್ತಾ ಚರಂಡಿ ನೀರಿನಲ್ಲೇ ಸೊಪ್ಪನ್ನು ತೊಳೆದು ಮಾರಾಟ ಮಾಡಲು ಸಿದ್ಧವಾಗಿಟ್ಟಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧವಾಗಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೋಪಾಲ್‍ನ ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು, ನಾಗರಿಕರ ಆರೋಗ್ಯದೊಂದಿಗೆ ಯಾರೂ ಆಟವಾಡುವಂತಿಲ್ಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  • ಅನ್‍ಲಾಕ್ ಆದ ಮೊದಲ ಭಾನುವಾರ ಕೆ.ಆರ್ ಮಾರ್ಕೆಟ್ ನಲ್ಲಿ ಜನಜಾತ್ರೆ

    ಅನ್‍ಲಾಕ್ ಆದ ಮೊದಲ ಭಾನುವಾರ ಕೆ.ಆರ್ ಮಾರ್ಕೆಟ್ ನಲ್ಲಿ ಜನಜಾತ್ರೆ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕಲು ಸರ್ಕಾರ ಅನಿವಾರ್ಯವಾಗಿ ಇಡೀ ರಾಜ್ಯಕ್ಕೆ ಲಾಕ್ ಡೌನ್ ಜಾರಿಗೆ ತಂದಿತ್ತು. ಬಳಿಕ ಕೊರೊನಾ ಕೇಸ್‍ಗಳ ಸಂಖ್ಯೆ ಕಡಿಮೆ ಆಗುವುದಕ್ಕೆ ಶುರುವಾದ ನಂತರ ಸರ್ಕಾರ ಹಂತ ಹಂತವಾಗಿ ಅನ್‍ಲಾಕ್ ಘೋಷಿಸುತ್ತಾ ಬಂದಿದೆ.

    kr market 1 medium

    ಮೂರನೇ ಹಂತದ ಅನ್‍ಲಾಕ್ ಪ್ರಕ್ರಿಯೆ ಕಳೆದ ಸೋಮವಾರದಿಂದ ಜಾರಿಗೆ ಬಂದಿದೆ. ಬಹುತೇಕ ಶೇ 90ರಷ್ಟು ಚಟುವಟಿಕೆಗಳು ಈಗ ಮುಕ್ತವಾಗಿದೆ. ಇಂದು ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆಯ ಮೊದಲ ಭಾನುವಾರವಾಗಿದ್ದು, ಕೆ.ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆಯೇ ಹೂವಿನ ವ್ಯಾಪಾರ ಜೋರಾಗಿ ನಡೆದಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಕೊರೊನಾ ನಿಯಮವಾಗಿರುವ ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತು ವ್ಯಾಪಾರದಲ್ಲಿ ತೊಡಗಿದ್ದಾರೆ.

    kr market 3 medium

    ಬೆಳಗ್ಗೆಯೇ ಮಾರ್ಷಲ್ ಗಳು ಸಹ ಕಾರ್ಯಾರಂಭ ಮಾಡಿದ್ದು, ಮಾರ್ಷಲ್ ಗಳನ್ನು ನೋಡಿದ ಕೂಡಲೇ ಮಾಸ್ಕ್ ಸರಿಯಾಗಿ ಹಾಕಿಕೊಳ್ಳುವ ಕಡೆ ಜನ ಗಮನ ವಹಿಸಿದ್ದಾರೆ. ಮಾರ್ಷಲ್ ಇದ್ದಾರೆ ಎಂಬ ಕಾರಣಕ್ಕೆ ನಿಯಮ ಪಾಲನೆ ಮಾಡುವುದಲ್ಲ, ಜನ ಸ್ವಪ್ರೇರಣೆಯಿಂದ ಕೊರೊನಾ ನಿಯಮಗಳ ಪಾಲನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಮತ್ತೆ ಕೊರೊನಾ ರಣಕೇಕೆ ಶುರುವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕತ್ತರಿಸಿದ ಪತಿ

  • ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆ ಹೋಗಿದ್ದ ಅಣ್ಣನ ಬರ್ಬರ ಕೊಲೆ

    ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆ ಹೋಗಿದ್ದ ಅಣ್ಣನ ಬರ್ಬರ ಕೊಲೆ

    ಕಲಬುರಗಿ: ತಂಗಿಯ ಎಂಗೇಜ್‍ಮೆಂಟ್‍ಗೆ ತರಕಾರಿ ಖರೀದಿಗೆಂದು ಹೋಗಿದ್ದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಕೋಟನೂರ ತರಕಾರಿ ಮಾರ್ಕೆಟ್‍ನಲ್ಲಿ ನಡೆದಿದೆ.

    crime scene e1602054934159

    ನಿಖಿಲ್(24) ಕೊಲೆಯಾದ ದುರ್ದೈವಿ. ತಂಗಿಯ ಎಂಗೇಜ್‍ಮೆಂಟ್ ಕಾರ್ಯಕ್ರಮ ನಾಳೆ ನಡೆಯಲಿದ್ದ ಕಾರಣ ತಾಯಿ ಮತ್ತು ಅಣ್ಣನೊಂದಿಗೆ ಕೋಟನೂರ ಬಳಿಯ ಮಾರ್ಕೆಟ್‍ಗೆ ತರಕಾರಿ ಖರೀದಿಗೆ ನಿಖಿಲ್ ತೆರಳಿದ್ದರು. ಈ ವೇಳೆ ಈ ಹಿಂದೆ ತಂಗಿಯನ್ನು ಪ್ರೀತಿಸುತ್ತಿದ್ದ ಯುವಕ ವಿಶಾಲ್ ಹಾಗೂ ಆತನ ಸ್ನೇಹಿತರ ತಂಡ ನಿಖಿಲ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ:ಪ್ರೇಮ ವೈಫಲ್ಯ ಅತಿಥಿ ಉಪನ್ಯಾಸಕ ಆತ್ಮಹತ್ಯೆ

    Police Jeep 1

    ನಿಖಿಲ್‍ನ ತಂಗಿಯ ಎಂಗೇಜ್‍ಮೆಂಟ್ ಬೇರೊಬ್ಬ ಯುವಕನ ಜೊತೆ ನಾಳೆ ನಿಶ್ಚಯವಾಗಿತ್ತು. ಈ ದ್ವೇಷದಿಂದ ಕಾರಿನಲ್ಲಿ ಬಂದ ವಿಶಾಲ್ ಮತ್ತು ತಂಡ ಮಾರ್ಕೆಟ್‍ನಲ್ಲಿ ನಿಖಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಪರಿಣಾಮ ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ತಾಯಿ ಮತ್ತು ಅಣ್ಣನಿಗೆ ಗಂಭೀರ ಗಾಯವಾಗಿದೆ. ಗಾಯಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಳೆಯಿಂದ ಗದಗ ಜಿಲ್ಲೆ 5 ದಿನ ಲಾಕ್‍ಡೌನ್ – ಮಾರ್ಕೆಟ್‍ಗೆ ಮುಗಿಬಿದ್ದ ಜನ

    ನಾಳೆಯಿಂದ ಗದಗ ಜಿಲ್ಲೆ 5 ದಿನ ಲಾಕ್‍ಡೌನ್ – ಮಾರ್ಕೆಟ್‍ಗೆ ಮುಗಿಬಿದ್ದ ಜನ

    ಗದಗ: ನಾಳೆಯಿಂದ 5 ದಿನ ಜಿಲ್ಲೆಯಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದರು.

    ಜಿಲೆಯಾದ್ಯಂತ ಮತ್ತೆ ಜೂನ್ 7ರ ವರೆಗೆ ಸಂಪೂರ್ಣ ಕಠಿಣ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಜನರಿಗೆ ಇಂದು ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನ ಮಾತ್ರ ಎಷ್ಟೇ ಹೇಳಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೈ ಮರೆತು ಓಡಾಡಿದ್ದರು.

    FotoJet 1 7 medium

    ನಗರದ ನಾಮ ಜೋಶಿ ರೋಡ್, ಗ್ರೀನ್ ಮಾರ್ಕೆಟ್, ಬ್ಯಾಂಕ್ ರೋಡ್, ಪಟೇಲ್ ರೋಡ್, ನಾನ್ ವೆಜ್ ಮಾರ್ಕೆಟ್‍ನಲ್ಲಿ ಜನ ಜಂಗುಳಿಯೇ ತುಂಬಿತ್ತು. ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಜನರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದರು.

    FotoJet 3 5 medium

    ಗದಗ- ಬೆಟಗೇರಿ ಅವಳಿ ನಗರದ ಜನರು ಸೇರಿದಂತೆ ಗ್ರಾಮೀಣ ಭಾಗದ ಜನರು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಮಾರುಕಟ್ಟೆಗಳು ಜನ ಜಾತ್ರೆಯಂತಾಗಿತ್ತು. ಬಹುತೇಕರು ಮಾಸ್ಕ್‌ಗಳನ್ನೇ ಹಾಕಿಕೊಂಡು ಬಂದಿರಲಿಲ್ಲ. ಇನ್ನು ಕೆಲವರು ನಾಮಕಾವಸ್ತೆಗೆ ಮಾಸ್ಕ್ ಹಾಕಿಕೊಂಡಿದ್ದರು. ಸಾಮಾಜಿಕ ಅಂತರವಂತೂ ಅವರಿಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದರು.

    FotoJet 21 medium

    ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳ ಮೂಲಕ ಹಾಗೂ ಲಾಕ್‍ಡೌನ್ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರೂ ಜನರು ಮಾತ್ರ ಸುಧಾರಿಸುತ್ತಿಲ್ಲ. ಅಧಿಕಾರಿಗಳು ಎಷ್ಟೇ ಬುದ್ಧಿ ಹೇಳಿದರೂ ಜನ ಮಾತ್ರ ತಮ್ಮ ವರ್ತನೆಯಿಂದಲೇ ಎಲ್ಲವನ್ನೂ ಖರೀದಿಸಿ ಮನೆಗಳತ್ತ ಮುಖ ಮಾಡಿದರು.

  • ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ- ಟ್ರಾಫಿಕ್ ಜಾಮ್, ಸಾಮಾಜಿಕ ಅಂತರ ಮಾಯ

    ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ- ಟ್ರಾಫಿಕ್ ಜಾಮ್, ಸಾಮಾಜಿಕ ಅಂತರ ಮಾಯ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪರ್ಯಾಯ ಮಾರ್ಕೆಟ್ ಗಳನ್ನು ಜಿಲ್ಲಾಡಳಿತ ತೆರೆದಿದೆ. ಆದರೂ ಜನ ಸಾಮಾಜಿ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    vlcsnap 2021 05 07 11h32m55s112

    ಈ ಹಿಂದೆ ನಡೆಯುತ್ತಿದ್ದ ಮಾರುಕಟ್ಟೆಗಳ ಸ್ಥಳ ಬದಲಿಸಿ ಬೇರೆಡೆ ವಿಶಾಲ ಪ್ರದೇಶದಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಮಡಿಕೇರಿ ನಗರದ ಸರ್ಕಾರಿ ಬಸ್ ನಿಲ್ದಾಣ ಮತ್ತು ಎಪಿಎಂಸಿ ಆವರಣದಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ. ನೂಕು ನುಗ್ಗಲು ಸಂಭವಿಸದಂತೆ ಪ್ರತ್ಯೇಕ ಎರಡು ಕಡೆಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ.

    ಪ್ರತಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ 12 ಗಂಟೆಯ ವರೆಗೆ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಲು ಅಂಗಡಿಗಳ ಮುಂದೆ ಮಾರ್ಕ್ ಗಳನ್ನು ಸಹ ಹಾಕಲಾಗಿದೆ. ಮೂರಡಿ ಅಂತರಕ್ಕೆ ಒಂದು ಅಂಗಡಿ ತೆರೆಯಲು ಅವಕಾಶ ಮಾಡಿದ್ದರೂ ಜನಗಳು ಮಾತ್ರ ಅಂತರ ಕಾಯ್ದುಕೊಳ್ಳದೆ ತರಕಾರಿಗಳ ವ್ಯಾಪಾರ ಮಾಡುತ್ತಿದ್ದಾರೆ.

    vlcsnap 2021 05 07 11h33m18s697

    ನಗರಸಭೆ ಸಿಬ್ಬಂದಿ ಜನರಿಗೆ ಎಚ್ಚರಿಸುತ್ತಿದ್ದರೂ ಅರಿತುಕೊಳ್ಳದೆ ಅಗತ್ಯ ವಸ್ತುಗಳಿಗೆ ಮುಗಿಬೀಳುತ್ತಿದ್ದಾರೆ. ಅಷ್ಟೆ ಅಲ್ಲದೇ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದರೂ ಜನ ಮಾತ್ರ ಯಾವುದೇ ರಸ್ತೆಗೆ ಇಳಿದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಗತ್ಯವಸ್ತುಗಳನ್ನು ಖರೀದಿಸುತ್ತಿದ್ದಾರೆ.

    WhatsApp Image 2021 05 07 at 10.17.36 AM

  • ಕೊರೊನಾ ಸ್ಫೋಟದ ಮಧ್ಯೆ ಬೆಂಗ್ಳೂರಲ್ಲಿ ಎಂದಿನಂತೆ ಜನ ಓಡಾಟ

    ಕೊರೊನಾ ಸ್ಫೋಟದ ಮಧ್ಯೆ ಬೆಂಗ್ಳೂರಲ್ಲಿ ಎಂದಿನಂತೆ ಜನ ಓಡಾಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದ್ದು, ಶನಿವಾರ ಒಂದೇ ದಿನ 8,818 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಆದರೂ ಸಿಲಿಕಾನ್ ಸಿಟಿ ಜನರು ಎಂದಿನಿಂದ ಭರ್ಜರಿಯಾಗಿ ಓಡಾಟ ಮಾಡುತ್ತಿದ್ದಾರೆ.

    ಕಳೆದ ದಿನ ಬೆಂಗಳೂರಿನಲ್ಲಿ 3,495 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಅಲ್ಲದೇ ಮಹಾಮಾರಿ 35 ಜನರನ್ನು ಬಲಿ ಪಡೆದುಕೊಂಡಿದೆ. ಆದರೂ ಜನರು ಎಂದಿನಂತೆ ಲಾಲ್‍ಬಾಗ್‍ನಲ್ಲಿ ಬೆಳ್ಳಂಬೆಳ್ಳಗೆ ವಾಕಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಲಾಗ್‍ಬಾಗ್‍ಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಅನ್‍ಲಾಕ್ ಮಾಡಿದ ನಂತರ ಜನರು ಹೆಚ್ಚಾಗಿ ವಾಕಿಂಗ್ ಬರುತ್ತಿದ್ದಾರೆ.

    vlcsnap 2020 08 16 07h29m01s164 e1597543413965

    ಅದರಲ್ಲೂ ವಯಸ್ಸಾದರೂ ವಾಕಿಂಗ್‍ಗೆ ಹೋಗಬಾರದು ಎಂದು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಕೆಲ ಹಿರಿಯರು ಆರೋಗ್ಯ ದೃಷ್ಟಿಯಿಂದ ಬೆಳ್ಳಂಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾರೆ.

    vlcsnap 2020 08 16 07h28m25s66 e1597543454687

    ಇನ್ನೂ ಆನಂದಪುರ ಮಾರ್ಕೆಟ್ ಮತ್ತು ಯಶವಂತಪುರ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರಾಗಿದೆ. ಇಂದು ಭಾನುವಾರ ಆಗಿರುವುದರಿಂದ ನಿಧಾನವಾಗಿ ವ್ಯಾಪಾರ-ವಹಿವಾಟನ್ನು ಶುರು ಮಾಡುತ್ತಿದ್ದಾರೆ. ವ್ಯಾಪಾರ ಮಾಡುವಾಗ ಕೆಲವರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವಾಕಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

  • ವರಮಹಾಲಕ್ಷ್ಮಿ ಹಬ್ಬ ಸಂಭ್ರಮ- ಮಾರ್ಕೆಟ್‍ಗಳಲ್ಲಿ ಜನವೋ ಜನ

    ವರಮಹಾಲಕ್ಷ್ಮಿ ಹಬ್ಬ ಸಂಭ್ರಮ- ಮಾರ್ಕೆಟ್‍ಗಳಲ್ಲಿ ಜನವೋ ಜನ

    ಬೆಂಗಳೂರು: ದೇಶದ ದೊಡ್ಡ ಹಬ್ಬ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಸಿಲಿಕಾನ್ ಸಿಟಿಯಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ.

    ಕೊರೊನಾ ಸಂಕಷ್ಟ ನಡುವೆಯೂ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರ್ಕೆಟ್‍ಗೆ ಜನರು ಮುಗಿಬಿದಿದ್ದಾರೆ. ನಗರದ ಮೈಸೂರು ರಸ್ತೆಯ ಫ್ಲೈ ಓವರ್ ಕೆಳಭಾಗದ ಮಾರ್ಕೆಟ್, ಗಾಂಧಿ ಬಜಾರ್ ಮಾರುಕಟ್ಟೆ, ಲಾಲ್ ಬಾಗ್ ಗಣೇಶ ದೇವಾಲಯ ಬಳಿಯ ಮಿನಿ ಹೂವಿನ ಮಾರುಕಟ್ಟೆ, ಆನೇಕಲ್ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜನರು ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದರು.

    BNG MARKET 3

    ಕೊರೊನಾ ಸೋಂಕು ಹರಡುವ ಆತಂಕದ ನಡುವೆಯೂ ಹಲವರು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಖರೀದಿಗೆ ಮುಂದಾಗಿದ್ದು ಸಾಮಾನ್ಯ ದೃಶ್ಯವಾಗಿತ್ತು. ಹೂವು, ಬಾಳೆ-ಮಾವಿನ ಎಲೆ ಜೊತೆಗೆ ಹಣ್ಣುಗಳನ್ನು ಖರೀದಿ ಮಾಡಲು ಜನರು ಮುಂದಾಗಿದ್ದರು. ಮಾರ್ಕೆಟ್ ಪ್ರದೇಶದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿತ್ತು.

    BNG Market

    ಕೊರೊನಾ ಹಿನ್ನೆಲೆಯಲ್ಲಿ ಖರೀದಾರರ ಸಂಖ್ಯೆ ಕಡಿಮೆ ಇದ್ದರು ಹೂವು, ಹಣ್ಣು ದರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ತಾವರೆ ಹೂ 100 ರೂ., ಬಾಳೆಕಂದು 60 ರೂ., ಮಲ್ಲಿಗೆ ಕೆಜಿ 800 ರೂ ರೂ., ಕನಕಾಂಬರ ಹೂ ಕೆಜಿಗೆ 2500 ರೂ., ಗುಲಾಬಿ ಹೂ ಕೆಜಿಗೆ 350 ರೂ. ದರದಲ್ಲಿ ಮಾರಾಟವಾಗುತ್ತಿತ್ತು.

    ಉಳಿದಂತೆ ನಾಳೆ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸೇವೆ ಮಾಡಿಸಲು ಅವಕಾಶವಿಲ್ಲ ಎನ್ನಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಲಭಿಸಲಿದೆ.

  • ಬ್ಯಾಟರಾಯನಪುರ ಮಾರ್ಕೆಟ್‍ನಲ್ಲಿ ಜನವೋ ಜನ

    ಬ್ಯಾಟರಾಯನಪುರ ಮಾರ್ಕೆಟ್‍ನಲ್ಲಿ ಜನವೋ ಜನ

    ಬೆಂಗಳೂರು: ಒಂದು ವಾರದ ಕಾಲ ಲಾಕ್‍ಡೌನ್ ಜಾರಿಯಾಗಿ ಮೂರು ದಿನ ಕಳೆದಿದೆ. ಆದರೂ ಜನರು ಮಾತ್ರ ಎಂದಿನಿಂದ ಓಡಾಡುತ್ತಿದ್ದು, ವ್ಯಾಪಾರ-ವಹಿವಾಟಿನಲ್ಲಿ ಬ್ಯುಸಿಯಾಗಿದ್ದಾರೆ.

    ಬ್ಯಾಟರಾಯನಪುರ ಮಾರ್ಕೆಟ್‍ನಲ್ಲಿ ಬೆಳ್ಳಂಬೆಳಗ್ಗೆ ನೂರಾರು ಜನರು ವ್ಯಾಪಾರಕ್ಕೆ ಮುಗಿಬಿದ್ದಿದ್ದಾರೆ. ಇದರಿಂದ ಮಾರ್ಕೆಟ್ ಏರಿಯಾದಲ್ಲಿ ವಾಹನಗಳ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಮಾರ್ಕೆಟ್‍ನಲ್ಲಿ ಯಾವುದೇ ಲಾಕ್‍ಡೌನ್ ನಿಯಮವನ್ನು ಪಾಲನೆ ಮಾಡುತ್ತಿಲ್ಲ.

    vlcsnap 2020 07 18 08h07m50s168

    ಈ ಹಿಂದೆ ಯಲಹಂಕ ಬಳಿ ಈ ಮಾರ್ಕೆಟ್ ನಡೆಯುತ್ತಿತ್ತು. ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ಯಲಹಂಕದಿಂದ ಬ್ಯಾಟರಾಯನಪುರಕ್ಕೆ ಶಿಫ್ಟ್ ಮಾಡಲಾಗಿತ್ತು. ವಿಶಾಲವಾದ ಖಾಲಿ ಜಾಗದಲ್ಲಿ ಮಾರ್ಕೆಟ್ ನಡೆಸಲು ಬಿಬಿಎಂಪಿ ಅವಕಾಶ ನೀಡಿತ್ತು. ಆದರೆ ಲಾಕ್‍ಡೌನ್ ನಿಯಮ ಗಾಳಿಗೆ ತೋರಿ ಅಡ್ಡಾದಿಡ್ಡಿಯಾಗಿ ಜನರು ಮತ್ತು ವಾಹನಗಳು ಓಡಾಡುತ್ತಿವೆ.

    vlcsnap 2020 07 18 08h07m26s182

    ಇತ್ತ ಯಶವಂತಪುರ ಸಿಗ್ನಲ್ ಬಳಿಯೂ ವಾಹನ ಸಂಚಾರ ಹೆಚ್ಚಾಗಿದೆ. ಅನಗತ್ಯವಾಗಿ ವಾಹನಗಳು ಓಡಾಡುತ್ತಿವೆ. ಇನ್ನೂ ನಗರದ ಬಳ್ಳಾರಿ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಓಡಾಟ ಹೆಚ್ಚಾಗಿದೆ. ಫ್ಲೈಓವರ್‌ಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಜನರು ವಾಕ್ ಮಾಡುತ್ತಿದ್ದಾರೆ. ಅಲ್ಲದೇ ರಸ್ತೆಯ ಪಕ್ಕದ ಅಲ್ಲಲ್ಲಿ ಹಣ್ಣು, ಹೂ, ತರಕಾರಿ ವ್ಯಾಪಾರ ಕೂಡ ಜೋರಾಗಿ ನಡೆಯುತ್ತಿದೆ.