Tag: ನಟಿ ರಮ್ಯಾ

  • ನಟಿ ರಮ್ಯಾ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಮತ್ತೆ ಫೇಸ್‍ಬುಕ್‍ಗೆ ಮರಳಿದ ಪದ್ಮಾವತಿ

    ನಟಿ ರಮ್ಯಾ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಮತ್ತೆ ಫೇಸ್‍ಬುಕ್‍ಗೆ ಮರಳಿದ ಪದ್ಮಾವತಿ

    – ಆನೆ ಕೊಂದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸಹಿ ಅಭಿಯಾನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಮಂಡ್ಯ ಮಾಜಿ ಸಂಸದೆ ರಮ್ಯಾ ಬರೋಬ್ಬರಿ ವರ್ಷದ ಬಳಿಕ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆಗಿದ್ದಾರೆ. ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆಯಾಗಿದ್ದ ಮೋಹಕ ತಾರೆ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.

    Ramya a

    ಕೇರಳದಲ್ಲಿ ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಯನ್ನು ಹತ್ಯೆ ಮಾಡಿರುವುದನ್ನು ರಮ್ಯಾ ಖಂಡಿಸಿದ್ದು, ಆನೆಯನ್ನು ಹತ್ಯೆ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಡೆಯುತ್ತಿರುವ ಸಹಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

    ಸದ್ಯ ಫೇಸ್‍ಬುಕ್‍ನಲ್ಲಿ ಸಕ್ರಿಯರಾಗುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ರೀ ಎಂಟ್ರಿ ಕೊಟ್ಟಿರುವ ರಮ್ಯಾ ಅವರು, ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಸ್ಟೇ ಸೇಫ್! ಈ ಅಭಿಯಾನಕ್ಕೆ ಸಹಿ ಹಾಕಿ ಎಂದು ಬರೆದುಕೊಂಡಿದ್ದಾರೆ.

    Elephant

    ರಮ್ಯಾ ಅವರು 2019ರ ಮೇ 29 ರಂದು ಕೊನೆಯಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇತ್ತ 2019ರ ಜೂನ್ 1 ರಂದು ಕೊನೆಯ ಬಾರಿಗೆ ರಮ್ಯಾ ಟ್ವೀಟ್ ಮಾಡಿದ್ದರು. ಕಳೆದೊಂದು ವರ್ಷದಿಂದ ಅವರು ಎಲ್ಲಿದ್ದರೂ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. 2016ರ ನಾಗರಹಾವು ರಮ್ಯಾ ಅವರ ಕೊನೆಯ ಸಿನಿಮಾ ಆಗಿದೆ. ಆ ಬಳಿಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ಸಂಸದೆಯಾಗಿ ಆಯ್ಕೆ ಆಗಿದ್ದರು. ತಮ್ಮ ಅವಧಿ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿದ್ದರು.

    Elephant 1

    ಏನಿದು ಆನೆ ಕೊಂದ ಪ್ರಕರಣ: ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿತ್ತು. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ ಘಟನೆ ನಡೆದಿತ್ತು. ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿದ್ದ ಪರಿಣಾಮ ನೋವಿನಲ್ಲಿ ರಸ್ತೆ ತುಂಬಾ ಆನೆ ಓಡಾಡಿತ್ತು. ಅಲ್ಲದೇ ನೋವಿಗೆ ವೆಲ್ಲಿಯಾರ್ ನದಿಯಲ್ಲಿ ಮುಳುಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿತ್ತು. ಈ ಕುರಿತ ವಿಡಿಯೋವನ್ನು ಅರಣ್ಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  • ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ

    ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ

    ಬೆಂಗಳೂರು: ಸ್ಯಾಂಡಲ್‍ವುಡ್ ಬ್ಯೂಟಿಕ್ವೀನ್ ರಮ್ಯ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದು, ಅವರ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ.

    ಒಂದು ಕಾಲದಲ್ಲಿ ಚಂದನವದ ಬುಹುಬೇಡಿಕೆಯ ನಟಿಯಾಗಿ ಮರೆದಿದ್ದ ರಮ್ಯಾ, ಸದ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಖತ್ ಸಕ್ರಿಯವಾಗಿ ಇದ್ದ ರಮ್ಯಾ ಅವರು, ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆದರೆ ಈಗ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ್ಯಕ್ಟಿವ್ ಆಗಿ ಇಟ್ಟುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ramya tw

    ಈ ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದ ರಮ್ಯಾ ಅವರು, ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ತಮ್ಮ ಟ್ವಿಟ್ಟರ್ ಖಾತೆಯನ್ನು ಡೀ ಆಕ್ಟಿವೇಟ್ ಮಾಡಿದ್ದರು. ಆದಾದ ನಂತರ ರಮ್ಯ ಅವರು ಎಲ್ಲಿ ಇದ್ದಾರೆ. ಏನ್ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿರಲ್ಲಿ. ಆದರೆ ಈಗ ದೇಶವೇ ಕೊರೊನಾ ಸೋಂಕಿನಿಂದ ಭೀತಿಯಲ್ಲಿ ಸಮಯದಲ್ಲಿ ರಮ್ಯ ಅವರು ತಮ್ಮ ಟ್ವಿಟ್ಟರ್ ಖಾತೆಯಗೆ ವಾಪಸ್ ಬಂದಿದ್ದಾರೆ.

    RAMYA 2

    ಮತ್ತೆ ತಮ್ಮ ಟ್ವಿಟ್ಟರ್ ಖಾತೆಗೆ ಮರಳಿರುವ ಅವರು ಯಾವುದೇ ಹೊಸ ಟ್ವೀಟ್ ಮಾಡಿಲ್ಲ. ಆದರೆ ಅವರ ಅಕೌಂಟ್ ಆ್ಯಕ್ಟಿವ್ ಆಗಿದೆ. ರಮ್ಯಾ ಅವರು ಕೊನೆಯದಾಗಿ 2019ರ ಜೂನ್ 1ರಂದು ಕೊನೆಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ಕಳೆದು ಹೋದ ಶ್ವಾನದ ಒಂದು ಫೋಟೋ ಹಾಕಿ ಈ ನಾಯಿ ಕಳೆದು ಹೋಗಿದೆ ಪ್ಲೀಸ್ ವಿಟೋವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.

    ramya birthday 3

    ಈ ಹಿಂದೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರನ್ನು ಲೋಕಸಭೆ ಚುನಾವಣೆ ಬಳಿಕ ಬದಲಾಯಿಸಲಾಗಿತ್ತು. ಈ ಕಾರಣದಿಂದ ಬೇಸರಗೊಂಡು ಸಾಮಾಜಿಕ ಜಾಲತಾಣದಿಂದ ದೂರು ಉಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳಿರುವುದು ತಮ್ಮ ನೆಚ್ಚಿನ ನಟಿ ಕಾಣದೇ ಬೇಜಾರಗಿದ್ದ ಅಭಿಮಾನಿಗಳಲ್ಲಿ ಸಂತಸ ತಂದಿದೆ.

    ramya

    ಸಿನಿಮಾದ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ಕೊನೆಯದಾಗಿ 2016ರಲ್ಲಿ ತೆರೆಕಂಡ ನಾಗರಹಾವು ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಬಳಿಕ ಫುಲ್ ಟೈಮ್ ರಾಜಕೀಯಕ್ಕೆ ಬಂದ ಅವರು ಮತ್ತೆ ಯಾವುದೇ ಸಿನಿಮಾ ಮಾಡಿಲ್ಲ. ಆದರೆ ಇಷ್ಟು ದಿನ ಮರೆಯಾಗಿದ್ದ ರಮ್ಯ ಮತ್ತೆ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಕ್ಯಾಮೆರಾ ಮುಂದೆ ಬರುತ್ತಾರಾ ನಟನೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

  • ಫೋಟೋಶಾಪ್ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

    ಫೋಟೋಶಾಪ್ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ, ಫೋಟೋ ಶಾಪ್ ಮಾಡಿದ್ದಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದು, ಆದರೆ ನೈಜ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ನೆಟ್ಟಿಗರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

    ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಹಿಟ್ಲರ್ ಅವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಮಗುವಿನೊಂದಿಗೆ ಇರುವ ಹಿಟ್ಲರ್ ಫೋಟೋವನ್ನು ಮಗುವಿನ ಕಿವಿ ಹಿಂಡುವಂತೆ ಫೋಟೋಶಾಪ್ ಮಾಡಲಾಗಿದೆ. ಇದೇ ರೀತಿ ಮೋದಿ ಅವರ ಪುಟ್ಟ ಬಾಲಕನೊಂದಿಗೆ ಇರುವ ಫೋಟೋಗೆ ಹೋಲಿಕೆ ಮಾಡಿ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.

    ರಮ್ಯಾ ಅವರ ಟ್ವೀಟ್‍ಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಲವು ಮಂದಿ ಹಿಟ್ಲರ್ ಮಗುವಿನೊಂದಿಗೆ ಇರುವ ಆಸಲಿ ಫೋಟೋ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೋಟೋಶಾಪ್ ಮಾಡಿದ ಫೋಟೋವನ್ನು ನೀವು ಟ್ವೀಟ್ ಮಾಡಿದ್ದು, ಆಸಲಿ ಫೋಟೋ ಇಲ್ಲಿದೆ ನೋಡಿ ಎಂದಿದ್ದಾರೆ. ಅಲ್ಲದೇ ಅಪ್ಪು ಎಂಬವರು ರಾಜೀವ್ ಗಾಂಧಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಿಟ್ಲರ್‍ಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಹಲವರು ರಮ್ಯಾ ಅವರು ವೋಟ್ ಮಾಡದ ಬಗ್ಗೆ ಪ್ರಸ್ತಾಪ ಮಾಡಿ ಕಾಲೆಳೆದಿದ್ದು, ಮೊದಲು ನೀವು ವೋಟ್ ಮಾಡಿ ಮೇಡಂ. ಆ ಬಳಿಕ ಇತರರಿಗೆ ಬುದ್ಧಿ ಹೇಳಿ ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    https://twitter.com/17_appu/status/1122759483891994624

  • ರಮ್ಯಾ ಹ್ಯಾಟ್ರಿಕ್ ಸಾಧನೆ ಬಗ್ಗೆ ಸುರೇಶ್ ಕುಮಾರ್ ವ್ಯಂಗ್ಯ!

    ರಮ್ಯಾ ಹ್ಯಾಟ್ರಿಕ್ ಸಾಧನೆ ಬಗ್ಗೆ ಸುರೇಶ್ ಕುಮಾರ್ ವ್ಯಂಗ್ಯ!

    ಬೆಂಗಳೂರು: ಎಐಸಿಸಿ ಐಟಿ ಸೆಲ್ ಮುಖ್ಯಸ್ಥೆ ಆಗಿರುವ ನಟಿ ರಮ್ಯಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡದೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

    ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಸುರೇಶ್ ಕುಮಾರ್ ಅವರು, ನಟಿ ರಮ್ಯಾ ಸೇರಿದಂತೆ ಎಐಸಿಸಿ ಐಟಿ ವಿಭಾಗದ ಪ್ರಮುಖರು ಮತದಾನಕ್ಕೆ ಗೈರಾಗಿದ್ದು, ಕೊನೆಗೂ ಮತದಾನಕ್ಕೆ ಬರದೆ ರಮ್ಯಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಎಂದು ಏ.18 ರಂದು ಟ್ವೀಟ್ ಮಾಡಿದ್ದಾರೆ. ಏ.19 ಮತ್ತೊಂದು ಟ್ವೀಟ್ ಮಾಡಿ ಅನೇಕ ಸಂಸ್ಥೆಗಳಲ್ಲಿ ಮೂರು ಬಾರಿ ಸಂಸ್ಥೆಗೆ ಹಾಜರಾಗದಿದ್ದರೆ ಅಂತಹವರ ಹೆಸರನ್ನು ತೆಗೆದು ಹಾಕಲಾಗುತ್ತದೆ. ರಮ್ಯಾ ಅವರ ಹೆಸರೂ ತೆಗೆಸಿ ಹಾಕಿಕೊಳ್ಳುವ ಅರ್ಹತೆ ಸಂಪಾದಿಸಿದೆ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

    ಇತ್ತ ಮತದಾನದ ದಿನವೂ ಕೂಡ ನಟಿ ರಮ್ಯಾರನ್ನು ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಮಂಡ್ಯದಲ್ಲಿ ನಿಖಿಲ್ ಗೆ ವೋಟು ಹಾಕೋದು ಯಾಕೆ ಅಂತಾ ರಮ್ಯಾ ಊರಿಗೆ ಬಂದಿಲ್ಲ ಅಂತಾ ಕಾಲೆಳೆದಿದ್ದರು. ಅಲ್ಲದೇ ಮಂಡ್ಯದಲ್ಲಿ ಕಾಂಗ್ರೆಸ್ ಇಲ್ಲ ಅಲ್ವಾ ಅದಕ್ಕೆ ಬಂದಿಲ್ಲ ಎಂದು ಕೆಲ ಮಂದಿ ವ್ಯಂಗ್ಯವಾಡಿದ್ದರು.

    ರಮ್ಯಾ ಅವರು ವಿಧಾನಸಭಾ ಚುನಾವಣೆ, ಮಂಡ್ಯ ಲೋಕಸಭಾ ಉಪಚುನಾವಣೆ ಸೇರಿದಂತೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ. ನಟ ಅಂಬರೀಶ್ ಅವರ ಸಾವಿನ ದಿನವೂ ಕೂಡ ಅವರ ಅಂತಿಮ ದರ್ಶನ ಪಡೆಯಲು ಕೂಡ ಬಂದಿರಲಿಲ್ಲ. ಈ ವೇಳೆ ಅನಾರೋಗ್ಯ ಸಮಸ್ಯೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಕಳೆದ ತಿಂಗಳು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳಲು ಆಗಮಿಸಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ತಮಿಳುನಾಡಿನ ವಯನಾಡಿನಲ್ಲಿ ರಾಹುಲ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ವಯನಾಡಿನ ಸೋಷಿಯಲ್ ಮೀಡಿಯಾ ಟೀಂ ಜೊತೆಗೆ ಫುಲ್ ಬ್ಯುಸಿಯಾಗಿ ರಾಹುಲ್ ಪರ ಅಲೆ ಸೃಷ್ಟಿಸಲು ಕಾರ್ಯ ನಿರ್ವಹಿಸಿದ್ದರು.

  • ಸ್ಯಾಂಡಲ್‍ವುಡ್ ಕ್ವೀನ್‍ಗೆ ಫುಲ್‍ಕ್ಲಾಸ್- ರಮ್ಯಾ ಬರ್ತ್ ಡೇ ನಮ್ಗೆ ಕರಾಳ ದಿನವೆಂದ್ರು ಅಭಿಮಾನಿ

    ಸ್ಯಾಂಡಲ್‍ವುಡ್ ಕ್ವೀನ್‍ಗೆ ಫುಲ್‍ಕ್ಲಾಸ್- ರಮ್ಯಾ ಬರ್ತ್ ಡೇ ನಮ್ಗೆ ಕರಾಳ ದಿನವೆಂದ್ರು ಅಭಿಮಾನಿ

    ಮಂಡ್ಯ: ನಟ, ಮಾಜಿ ಸಚಿವ ಅಂಬರೀಶ್ ಅಂತ್ಯಕ್ರಿಯೆಗೆ ನಟಿ, ಮಾಜಿ ಸಂಸದೆ ರಮ್ಯಾ ಬಾರದ ಹಿನ್ನೆಲೆಯಲ್ಲಿ ರಮ್ಯಾ ಕಟ್ಟಾ ಅಭಿಮಾನಿಯೇ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸ್ಯಾಂಡಲ್ ವುಡ್ ಕ್ವೀನ್ ವಿರುದ್ಧ ಪೋಸ್ಟ್ ಮಾಡಿದ್ದಾರೆ.

    ಅಭಿಮಾನಿ ಗುಣಶೇಖರ್ ಎಂಬವರು ರಮ್ಯಾ ಅವರ ವಿರುದ್ಧ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ರಮ್ಯಾ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಅಭಿಮಾನಿಯಾಗಿ ಗುಣಶೇಖರ್ ಸಾಕಷ್ಟು ಶ್ರಮ ಪಟ್ಟಿದ್ದರು. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ರಮ್ಯಾ ಅವರು ಬಂದಿಲ್ಲ ಎಂದು ಅಭಿಮಾನಿ ಕೋಪಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ramya 1 1

    ಅಭಿಮಾನಿ ಪೋಸ್ಟ್ ನಲ್ಲೇನಿದೆ..?
    ಗುಣಶೇಖರ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ, `ಇಲ್ಲಿ ಸಲ್ಲದ ನೀವು ಇನ್ನೆಲ್ಲೂ ಸಲ್ಲಲ್ಲ. ಇಂದು ನಿಮ್ಮ ಹುಟ್ಟು ಹಬ್ಬದ ದಿನ ಆದ್ರೆ ನಮಗೆ ಇಂದು ಬೇಸರದ ದಿನ. ಹೃದಯವಂತ ಅಂಬರೀಶ್ ಅವರ ಅಂತಿಮ ದರ್ಶನ ಮಾಡದ ನೀವು ಕನ್ನಡಿಗರ ದರ್ಶನ ಮಾಡಲು ಅನರ್ಹರು. ನಿಮ್ಮ ಮೇಲಿಟ್ಟಿದ್ದ ನಂಬಿಕೆಗಳೆಲ್ಲ ಸುಳ್ಳಾಗಿದೆ. ಅಂಬಿ ಎಲ್ಲಿದ್ದರೂ ಮಂಡ್ಯ ಮರೆತಿರಲಿಲ್ಲ. ಆದ್ದರಿಂದ ಅಂಬಿಗೆ ಮಂಡ್ಯದಿಂದ ಇಂಡಿಯಾವರೆಗೆ ಅಭಿಮಾನಿಗಳಿದ್ದಾರೆ. ರೈತನಾಯಕ ಪುಟ್ಟಣ್ಣಯ್ಯ ಅಂತ್ಯಕ್ರಿಯೆಗೆ ನೀವು ಬರಲಿಲ್ಲ. ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಇಡೀ ದೇಶವೇ ಕಂಬನಿ ಮಿಡಿಯಿತು. ಆದ್ರೆ ನೀವು ಸಾವಿನಲ್ಲೂ ರಾಜಕಾರಣ ಮಾಡುತ್ತೀದ್ದೀರಾ..’ ಎಂದು ನಟಿ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

    ambareesh a

    ಅಷ್ಟೆ ಅಲ್ಲದೆ `ನೀವು ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸುತ್ತಾ ಕಾಲಕಳೆಯುತ್ತಿದ್ದೀರಿ. ನಿಮ್ಮ ತಪ್ಪುಗಳ ಅರಿವು ನನಗಿದ್ದರೂ ನಿಮ್ಮ ಅಭಿಮಾನಿಯಾಗಿ ನಿಮ್ಮನ್ನ ಸಮರ್ಥಿಸಿಕೊಳ್ಳುತ್ತಿದ್ದೆ. ಯಾಕಂದ್ರೆ ತಿಳಿದೋ ತಿಳಿಯದೋ ತಪ್ಪು ಮಾಡಿರಬಹುದು ಅಂತಾ ಅಂದುಕೊಂಡಿದ್ದೆ. ಆದ್ರೆ ನಿಮ್ಮಲ್ಲಿರೋದು ವಿಷ ಅಂತಾ ಗೊತ್ತಿರಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬದಂದು ಅನಾಥ ಮಕ್ಕಳಿಗೆ, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಕೊಟ್ಟು ಆಚರಿಸುತ್ತಿದ್ವಿ, ನಿಮ್ಮನ್ನ ಸಮರ್ಥಿಸಿಕೊಂಡು ಸ್ವಪಕ್ಷೀಯರ ವಿರೋಧವೂ ಕಟ್ಟಿಕೊಂಡಿದ್ದೆ. ಇಂದು ಆ ಹೋರಾಟವೆಲ್ಲಾ ವ್ಯರ್ಥವಾಗಿದೆ. ಇಂದು ನಿಮ್ಮ ಜನ್ಮದಿನವಲ್ಲ ಕರಾಳ ದಿನ’ ಎಂದು ರಮ್ಯ ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರಿಗೆ ಫುಲ್‍ಕ್ಲಾಸ್ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv