Tag: ಟ್ರಾಫಿಕ್ ಪೊಲೀಸ್

  • ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್‍ಗೆ ಬಿಯರ್ ಬಾಟಲ್‍ನಲ್ಲಿ ಹೊಡೆದ ಯುವಕ

    ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್‍ಗೆ ಬಿಯರ್ ಬಾಟಲ್‍ನಲ್ಲಿ ಹೊಡೆದ ಯುವಕ

    ಪುಣೆ: ಟ್ರಾಫಿಕ್ (Traffic) ಕ್ಲಿಯರ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ (Traffic Police) ಒಬ್ಬರಿಗೆ ಯುವಕನೋರ್ವ ಬಿಯರ್ ಬಾಟಲ್‍ನಲ್ಲಿ (Beer Bottle) ಹೊಡೆದು ಹಲ್ಲೆ ನಡೆಸಿರುವ ಘಟನೆ ಪಿಂಪ್ರಿ-ಚಿಂಚ್‍ವಾಡ್‍ನ ಕಾಲೆವಾಡಿ ಪ್ರದೇಶದಲ್ಲಿ ನಡೆದಿದೆ.

    signal

    ಟ್ರಾಫಿಕ್ ಪೊಲೀಸ್ ರಮೇಶ್ ಜಾಧವ್ (52) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಟ್ರಾಫಿಕ್ ಕ್ಲಿಯರ್ ಆಗಿಲ್ಲ ಎಂದು ಸಿಟ್ಟಿಗೆದ್ದ ವೈಭವ್ ಗಾಯಕ್ವಾಡ್ (19) ಎಂಬಾತ ಬಿಯರ್ ಬಾಟಲ್‍ನಿಂದ ರಮೇಶ್ ಜಾಧವ್ ತಲೆಗೆ ಹಲ್ಲೆ ನಡೆಸಿದ್ದಾನೆ.

    TRAFIC POLICE copy

    ಪ್ರತ್ಯಕ್ಷದರ್ಶಿಗಳ ಪ್ರಕಾರ ಜಾಧವ್, ರಹತ್ನಿ ಚೌಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇತ್ತು. ಇದನ್ನು ನಿಯಂತ್ರಿಸಲು ಜಾಧವ್ ಚಿಂಚ್‍ವಾಡ್‍ನಿಂದ ಬರುವ ವಾಹನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟು ತಪ್‍ಕೀರ್ ಚೌಕ್‍ನಿಂದ ಎಂಎಂ ಚೌಕ್‍ಗೆ ಬರುತ್ತಿದ್ದ ಸಂಚಾರವನ್ನು ನಿಲ್ಲಿಸಿದರು. ಈ ವೇಳೆ ಗಾಯಕ್ವಾಡ್ ಈ ಬಗ್ಗೆ ಪ್ರಶ್ನಿಸಿ ಬೈದಿದ್ದಾನೆ. ಬಳಿಕ ತನ್ನ ಬಳಿ ಇದ್ದ ಬಿಯರ್ ಬಾಟಲ್‍ನಿಂದ ಜಾಧವ್ ತಲೆಗೆ ಹೊಡೆದಿದ್ದಾನೆ.

    ಬಳಿಕ ರಕ್ತಸ್ರಾವದಿಂದ ಕೆಳಕ್ಕೆ ಬಿದ್ದ ಜಾಧವ್ ಬಳಿ ಯಾರು ಕೂಡ ಬರಬಾರದು ಎಂದು ಸ್ಥಳದಲ್ಲಿದ್ದವರಿಗೆ ಗಾಯಕ್ವಾಡ್ ಬೆದರಿಕೆ ಹಾಕಿದ್ದು ಕೊನೆಗೆ ಸ್ಥಳಕ್ಕೆ ಬಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಡಲೇ ಜಾಧವ್‍ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿಯಿಂದ ಹಲ್ಲೆ

    ಸರ್ಕಾರಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿಯಿಂದ ಹಲ್ಲೆ

    ಬೆಂಗಳೂರು: ಹೆಚ್ಚು ಹೊತ್ತು ಬಸ್ ನಿಲ್ಲಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಕೆಎಸ್‍ಆರ್‌ಟಿಸಿಟಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ನಡೆದಿದೆ.

    bus

    ಕಾರ್ಪೊರೇಷನ್ ಬಳಿ ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೆಎಸ್‍ಆರ್‌ಟಿಸಿ ಬಸ್ ಅನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅಲ್ಲೇ ಇದ್ದ ಟ್ರಾಫಿಕ್ ಸಿಬ್ಬಂದಿ ಬಸ್ ತೆಗೆಯುವಂತೆ ಹೇಳಿದ್ದಾರೆ. ಪ್ರಯಾಣಿಕರು ಹತ್ತುತ್ತಿದ್ದರಿಂದ ಬಸ್ ಮುಂದೆ ಹೋಗಲಿಲ್ಲ. ಹೀಗಾಗಿ ಟ್ರಾಫಿಕ್ ಸಿಬ್ಬಂದಿ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕೋಪಗೊಂಡ ಟ್ರಾಫಿಕ್ ಸಿಬ್ಬಂದಿ ಕ್ಯಾಪ್‍ನಿಂದ ಚಾಲಕನ ಮೂಗಿಗೆ ರಕ್ತ ಬರುವಂತೆ ಥಳಿಸಿದ್ದಾರೆ. ಈ ಸಂಬಂಧ ಎಸ್.ಜೆ ಪಾರ್ಕ್ ಠಾಣೆಗೆ ಹಲ್ಲೆಗೊಳಗಾದ ಡ್ರೈವರ್ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಕಾಹು ಇನ್ನಿಲ್ಲ

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಚಾಲಕ, 7 ಜನ ರಿಸರ್ವೇಷನ್ ಪ್ರಯಾಣಿಕರಿದ್ದರು. ಅದಕ್ಕಾಗಿ ಬಸ್ ನಿಲ್ಲಿಸಿದ್ದೆ. ಈ ವೇಳೆ ಏಕಾಏಕಿ ಬಂದ ಟ್ರಾಫಿಕ್ ಪೊಲೀಸ್ ಬಸ್ ತೆಗೆಯುವಂತೆ ನನ್ನ ಮೇಲೆ ಕೂಗಾಡಿದ್ದಾರೆ. ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತೇನೆ ಎಂದು ಹೇಳಿದೆ. ಆದರೆ ಬಸ್ ಚಾಲನೆಯಲ್ಲಿರುವಾಗಲೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    Live Tv
    [brid partner=56869869 player=32851 video=960834 autoplay=true]

  • ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

    ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

    ರಾಯ್‍ಪುರ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿಯನ್ನು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

    money web

    ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರದ ಕಯಾಬಂಧದ ಟ್ರಾಫಿಕ್ ಕಾನ್‍ಸ್ಟೇಬಲ್ ನಿಲಂಬರ್ ಸಿನ್ಹಾ ಅವರಿಗೆ ಶನಿವಾರ ಬೆಳಗ್ಗೆ ಮಾನಾ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್‍ವೊಂದು ಕಂಡುಬಂದಿದೆ. ನಂತರ ಬ್ಯಾಗ್ ಜೀಪ್ ತೆಗೆದು ಪರಿಶೀಲನೆ ನಡೆಸಿದಾಗ 2000 ಮತ್ತು 500 ರೂಪಾಯಿ ನೋಟುಗಳಿರುವ 45 ಲಕ್ಷ ರೂಪಾಯಿ ಪತ್ತೆಯಾಗಿದೆ.

    ಬಳಿಕ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಿಲಂಬರ್ ಸಿನ್ಹಾ ಅವರು, ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಬ್ಯಾಂಕ್ ತೆಗೆದುಕೊಂಡು ಬಂದು ಹಣವನ್ನು ಹಿಂದಿರುಗಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಖನಂದನ್ ರಾಥೋರ್ ಹೇಳಿದ್ದಾರೆ. ಇದನ್ನೂ ಓದಿ: ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಟ್ರಾಫಿಕ್ ಕಾನ್‍ಸ್ಟೇಬಲ್ ಸಿನ್ಹಾ ಅವರ ಪ್ರಮಾಣಿಕತೆಗೆ ಮೆಚ್ಚಿ ಹಿರಿಯ ಅಧಿಕಾರಿಗಳು ಬಹುಮಾನ ಘೋಷಿಸಿದ್ದು, ಹಣ ಕಳೆದುಕೊಂಡವರಿಗಾಗಿ ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಇದನ್ನೂ ಓದಿ: ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ, ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ: ಆರ್‌ಜಿವಿ

    Live Tv
    [brid partner=56869869 player=32851 video=960834 autoplay=true]

  • ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಬೆಂಗಳೂರು: ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ದ್ವಿಚಕ್ರ ವಾಹನಗಳನ್ನು ತಡೆಹಿಡಿಯುತ್ತಿದ್ದ ಹೆಚ್.ಎಸ್.ಆರ್ ಟ್ರಾಫಿಕ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ ಅನ್ನು ಅಮಾನತು ಮಾಡಲಾಗಿದೆ.

    POLICE 1 2

    ಸಂಚಾರ ನಿಯಮ ಉಲ್ಲಂಘಿಸಿ ಬೆಳ್ಳಂದೂರು `eco space’ (ಇಕೋ ಸ್ಪೇಸ್) ಬಳಿ ಸುಖಾ ಸುಮ್ಮನೆ ದ್ವಿಚಕ್ರ ವಾಹನ ತಡೆಯುತ್ತಿದ್ದರು. ಈ ಕುರಿತು ಸಾರ್ವಜನಿಕರು ಟ್ವೀಟ್ ಮೂಲಕ ಡಿಜಿಪಿ ಪ್ರವಿಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಪೂರ್ವ ವಿಭಾಗ ಡಿಸಿಪಿ ಕಲಾ ಕೃಷ್ಣಸ್ವಾಮಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    POLICE 2 1

    ತನಿಖೆ ವೇಳೆ ಕಾನ್ಸ್‌ಟೇಬಲ್‌ ಸುಖಾ ಸುಮ್ಮನೆ ವಾಹನ ತಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪೊಲೀಸರು ಕರ್ತವ್ಯ ವೇಳೆ ಬಾಂಡಿ ವೋರ್ನ್ ಕ್ಯಾಮೆರಾ ಆನ್ ಮಾಡಿಕೊಂಡು ಕೆಲಸ ಮಾಡಬೇಕು. ಆದರೆ ಟ್ರಾಫಿಕ್ ಕಾನ್ಸ್‌ಟೇಬಲ್‌ ಬಾಂಡಿ ವೋರ್ನ್ ಕ್ಯಾಮರಾ ರೆರ್ಕಾಡಿಂಗ್‌ನ ಆನ್ ಮಾಡದೇ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಬಗ್ಗೆ ತನಿಖಾ ವರದಿ ನೀಡಿದ ಬಳಿಕ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಕಾನ್ಸ್‌ಟೇಬಲ್‌ ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಖಾದ್ಯ ತೈಲ ಬೆಲೆ 30 ರೂ. ಭಾರೀ ಇಳಿಕೆ

    ಅಲ್ಲದೆ ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘನೆ ಮಾಡಿದ ಕಾನ್ಸ್‌ಟೇಬಲ್‌ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಯಾರ ಮಗಳು ಗೊತ್ತಾ? – ಟ್ರಾಫಿಕ್ ಪೊಲೀಸರಿಗೆ ಆವಾಜ್‌ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ 10,000 ಫೈನ್‌

    ನಾನು ಯಾರ ಮಗಳು ಗೊತ್ತಾ? – ಟ್ರಾಫಿಕ್ ಪೊಲೀಸರಿಗೆ ಆವಾಜ್‌ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ 10,000 ಫೈನ್‌

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರಿಗೆ ಆವಾಜ್ ಹಾಕಿದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ 10,000 ರೂ. ದಂಡ ವಿಧಿಸಲಾಗಿದೆ.

    ಟ್ರಾಫಿಕ್ ಪೊಲೀಸರು ತಪಾಸಣೆ ವೇಳೆ ಕಾರು ತಡೆದ ಹಿನ್ನೆಲೆಯಲ್ಲಿ ಸಿಟ್ಟಾದ ಲಿಂಬಾವಳಿ ಪುತ್ರಿ, ಕಾರಿನಿಂದ ಇಳಿದ ಕೂಡಲೇ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಾನು MLA ಅರವಿಂದ ಲಿಂಬಾವಳಿ ಮಗಳು ಗೊತ್ತಾ? ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಅಲ್ಲದೆ ಇದು MLA ಗಾಡಿ, ನಾನು ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ನಿಖಿಲ್ ಕುಮಾರ್ ಸ್ವಾಮಿ ಮಗನ ಪೂರ್ತಿ ಹೆಸರು ಅವ್ಯನ್ ದೇವ್ ಎನ್.ಕೆ : ಈ ಹೆಸರು ಸೂಚಿಸಿದ್ದು ಯಾರು?

    TRAFIC POLICE 1

    10 ಸಾವಿರ ದಂಡ ಕೊಟ್ಟ ಬಳಿಕ ಕಾರುಬಿಟ್ಟ ಪೊಲೀಸರು: ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಲ್ಲದೆ ಟ್ರಾಫಿಕ್ ಪೊಲೀಸರಿಗೇ ಆವಾಜ್ ಹಾಕಿದ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. 10 ಸಾವಿರ ರೂ. ದಂಡ ಕಟ್ಟಿದ ಬಳಿಕ ಪೊಲೀಸರು ಕಾರನ್ನು ಬಿಟ್ಟು, ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಕಳುಹಿಸಿದ್ದಾರೆ. 

    Limavali doughter

    ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದ ಲಿಂಬಾವಳಿ ಪುತ್ರಿ, ಪೊಲೀಸರಿಗೂ ಕೇರ್ ಮಾಡದೇ ಪೊಲೀಸರ ಮೇಲೆಯೇ ಕಾರು ಹತ್ತಿಸುವಂತೆ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆನ್ನತ್ತಿದ ಪೊಲೀಸರನ್ನು ನೋಡಿ ಕ್ಯಾಪಿಟಲ್ ಹೋಟೆಲ್ ಒಳಗೆ ಕಾರು ಚಲಾಯಿಸಿದ್ದಾರೆ. ಕಾರು ವಾಪಸ್ ಬರುತ್ತಿದ್ದ ವೇಳೆ ಹೋಟೆಲ್ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರ ಮೇಲೆಯೇ ದರ್ಪ ತೋರಿ `ನಾನು ಅರವಿಂದ ಲಿಂಬಾವಳಿ ಮಗಳು’ ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

    ಶಾಸಕರ ಹೆಸರು ಹೇಳುತ್ತಿದ್ದಂತೆ ಸೈಲೆಂಟ್ ಆದ ಟ್ರಾಫಿಕ್ ಪೊಲೀಸರು ಯಾವುದೇ ಕೇಸ್ ದಾಖಲಿಸದೇ ಹಾಗೇ ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ, ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಫುಡ್ ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್‍ ಹಲ್ಲೆ

    ಫುಡ್ ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್‍ ಹಲ್ಲೆ

    ಚೆನ್ನೈ: ಫುಡ್ ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

    ಮಹಿಳಾ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಶಾಲಾ ವ್ಯಾನ್ ನಿಲ್ಲಿಸಲು ಪ್ರಯತ್ನಿಸಿದ ಫುಡ್ ಡೆಲಿವರಿ ಬಾಯ್ ಮೋಹನ್ ಸುಂದರಂ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ

    mumbai traffic police

    ಮಹಿಳೆ ಮತ್ತು ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಶಾಲಾ ವ್ಯಾನ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಿಳೆಯೊಂದಿಗಿದ್ದವ್ಯಕ್ತಿ ವ್ಯಾನ್ ನಿಲ್ಲಿಸಲು ಯತ್ನಿಸಿದ್ದಾರೆ ಮತ್ತು ನಿಂದಿಸಿದ್ದಾರೆ. ಇದನ್ನು ಕಂಡ ಮೋಹನ್ ಸುಂದರಂ ಶಾಲಾ ವಾಹನವನ್ನು ಹಿಂಬಾಲಿಸಿ ಬೈಕ್‍ನಿಂದ ಅಡ್ಡ ಹಾಕಲು ಯತ್ನಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ – ಸ್ಟೆಷನರಿ, ಕಿರಾಣಿ ಅಂಗಡಿಗೆ ಬೆಂಕಿ 

    ಈ ಗಲಾಟೆ ನೋಡಿ ಕೋಪಗೊಂಡ ಟ್ರಾಫಿಕ್ ಪೊಲೀಸ್ ಅಧಿಕಾರಿ ಮೋಹನಸುಂದರಂಗೆ ಕಪಾಳಮೋಕ್ಷ ಮಾಡಿದ್ದಾರೆ. ಅದರಲ್ಲಿಯೂ ಟ್ರಾಫಿಕ್ ಪೊಲೀಸ್ ಫುಡ್ ಡೆಲಿವರಿ ಬಾಯ್‍ಗೆ ಹಲವು ಬಾರಿ ಕಪಾಳಮೋಕ್ಷ ಮಾಡಿ, ಆತನ ಕೈಯಲ್ಲಿದ್ದ ಕೀ ಮತ್ತು ಹೆಡ್‍ಸೆಟ್ ಕಿತ್ತುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಪೊಲೀಸ್ ಅಧಿಕಾರಿಯನ್ನು ನಿಯಂತ್ರಣ ಕೊಠಡಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.

  • ರಾಜ್ಯದಲ್ಲಿ ಜನಸ್ನೇಹಿ ಟ್ರಾಫಿಕ್ ನಿಯಮ ಶೀಘ್ರವೇ ಜಾರಿ: ಆರಗ ಜ್ಞಾನೇಂದ್ರ

    ರಾಜ್ಯದಲ್ಲಿ ಜನಸ್ನೇಹಿ ಟ್ರಾಫಿಕ್ ನಿಯಮ ಶೀಘ್ರವೇ ಜಾರಿ: ಆರಗ ಜ್ಞಾನೇಂದ್ರ

    ಬೆಂಗಳೂರು: ಟ್ರಾಫಿಕ್ ನಿಯಮ ಮತ್ತು ಟೋಯಿಂಗ್‍ಗೆ ವಿಶೇಷ ನಿಯಮ ಪೊಲೀಸ್ ಇಲಾಖೆ ಶೀಘ್ರವೇ ಜಾರಿಗೆ ತರಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    trafic 1

    ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಜನಸ್ನೇಹ ನಿಯಮ ರಾಜ್ಯದಲ್ಲಿ ಜಾರಿ ಮಾಡಲಾಗುತ್ತದೆ ಅಂತ ಭರವಸೆ ಕೊಟ್ಟರು. ಇದನ್ನೂ ಓದಿ: ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಉಕ್ರೇನ್ ‌ನಿಂದ ಬಂದ ಕನ್ನಡಿಗ ವೈದ್ಯ‌ವಿದ್ಯಾರ್ಥಿಗಳಿಗೆ ಪ್ರವೇಶ

    ರಾಜ್ಯದಲ್ಲಿ 1,05,864 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿರುವ ಜನಸಂಖ್ಯೆಗೆ ಅನುಪಾತವೂ 577 ಇದೆ. ಅಂದರೆ 577 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ ಅಂತ ಸಚಿವರು ಮಾಹಿತಿ ನೀಡಿದರು. ಕಳೆದ 5 ವರ್ಷಗಳಲ್ಲಿ 35 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. ಬಾಕಿ ಇರುವ ಸಬ್ ಇನ್ಸ್‌ಪೆಕ್ಟರ್‌ ನೇಮಕ ಆಗಿದೆ. ಅವ್ರಿಗೆ ಟ್ರೈನಿಂಗ್ ಆಗುತ್ತಿದೆ. ಅವರು ಬಂದ್ರೆ ಸಬ್ ಇನ್ಸ್‌ಪೆಕ್ಟರ್‌. ಎಲ್ಲಾ ಹುದ್ದೆ ಭರ್ತಿ ಆಗುತ್ತದೆ. ಪೇದೆಗಳ ನೇಮಕಾತಿಯೂ ಆಗಿದೆ. ಪ್ರತಿ ವರ್ಷ 4 ಸಾವಿರ ಪೊಲೀಸರ ನೇಮಕ ಆಗುತ್ತಿದೆ ಎಂದು ತಿಳಿಸಿದರು.

    ಮೊದಲು ರಾಜ್ಯದಲ್ಲಿ 6 FSL ಲ್ಯಾಬ್‍ಗಳು ಇತ್ತು. ಈಗ ಇದನ್ನು ಹೆಚ್ಚಳ ಮಾಡಿ ಬಲಪಡಿಸಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲೂ FSL ಪ್ರಾರಂಭ ಮಾಡಲಾಗಿದೆ. ಮೊದಲು ನಮಗೆ DNA ಸ್ಯಾಂಪಲ್ ವರದಿ ತಡ ಆಗುತ್ತಿತ್ತು. ಎರಡು ವರ್ಷ ತಡ ಆಗ್ತಿತ್ತು. ಈಗ ಹುಬ್ಬಳ್ಳಿಯಲ್ಲಿ DNA ಲ್ಯಾಬ್ ಪ್ರಾರಂಭ ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೋಯ್ಡಾದಲ್ಲಿ ರಾಜ್‍ನಾಥ್ ಸಿಂಗ್ ಮಗ ಪಂಕಜ್ ಸಿಂಗ್‍ಗೆ ದಾಖಲೆಯ ಜಯ

    ಪೊಲೀಸರಿಗೆ ಹೊಸ, ಹೊಸ ವೆಹಿಕಲ್ ಕೊಡಿಸಿದ್ದೇವೆ. ತಂತ್ರಜ್ಞಾನ ಅಳವಡಿಕೆಯನ್ನು ಇಲಾಖೆಯಲ್ಲಿ ಮಾಡಲಾಗಿದೆ. ಟೋಯಿಂಗ್ ಮಾಡೋದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಈಗಾಗಲೇ ಸಿಎಂ ಜೊತೆ ಈ ಬಗ್ಗೆ ಚರ್ಚೆ ಆಗಿದೆ. ಹೊಸ ಟೋಯಿಂಗ್ ವ್ಯವಸ್ಥೆ ಶೀಘ್ರವಾಗಿ ಜಾರಿ ಮಾಡುತ್ತೇವೆ. ಅಲ್ಲದೆ ಟ್ರಾಫಿಕ್ ಇಲಾಖೆ ವ್ಯವಸ್ಥೆಯಲ್ಲೂ ವಿಶೇಷ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರುತ್ತಿದ್ದೇವೆ. ಶೀಘ್ರವೇ ಎರಡೂ ನೂತನ ವ್ಯವಸ್ಥೆ ಜಾರಿಗೆ ಬರುತ್ತೆ ಎಂದರು.

    ಇಂಟೆಲಿಜೆನ್ಸ್ ವಿಭಾಗಕ್ಕೆ ಪ್ರತ್ಯೇಕ ತಂಡ ಮಾಡುವ ಚಿಂತನೆ ಇದೆ. ಈಗ ಇಲಾಖೆಯಲ್ಲಿ ಇರೋರನ್ನೆ ಇಂಟಲಿಜೆನ್ಸ್‌ಗೆ ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ನೇಮಕಾತಿ ಮಾಡಿಕೊಂಡು, ಅವರಿಗೆ ವಿಶೇಷ ತರಬೇತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ ಅಂತ ತಿಳಿಸಿದರು.

  • ಹೊಸ ಎಸ್‍ಒಪಿ ಸಿದ್ಧಪಡಿಸೋ ತನಕ ಬೆಂಗಳೂರಿನಲ್ಲಿ ಟೋಯಿಂಗ್ ಕಿರಿಕಿರಿ ಇರಲ್ಲ!

    ಹೊಸ ಎಸ್‍ಒಪಿ ಸಿದ್ಧಪಡಿಸೋ ತನಕ ಬೆಂಗಳೂರಿನಲ್ಲಿ ಟೋಯಿಂಗ್ ಕಿರಿಕಿರಿ ಇರಲ್ಲ!

    ಬೆಂಗಳೂರು: ಟ್ರಾಫಿಕ್ ಪೊಲೀಸರ ಟೋಯಿಂಗ್ ಟಾರ್ಚರ್‌ಗೆ ಜನ ಹೈರಾಣಾಗಿ ಹೋಗಿದ್ದಾರೆ. ಇದು ನಿನ್ನೆ ಮೊನ್ನೆಯದಲ್ಲ. ನಿತ್ಯ ವಾಹನವನ್ನು ಪಾರ್ಕ್ ಮಾಡಿದರೆ ವಾಪಸ್ ಬರುವಷ್ಟರಲ್ಲಿ ಎತ್ತಾಕ್ಕೊಂಡು ಹೋಗಿರ್ತಾರೆ. ಈ ಟೋಯಿಂಗ್ ಗೊಂದಲಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ತಾತ್ಕಾಲಿಕ ಮದ್ದು ಕೊಟ್ಟಿದ್ದಾರೆ.

    ಟೋಯಿಂಗ್ ಗೊಂದಲದ ಬಗ್ಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಶಕ್ತಿ ಭವನದಲ್ಲಿ ಬೊಮ್ಮಾಯಿ ಸಭೆ ನಡೆಸಿದರು. ಬೊಮ್ಮಾಯಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಇಂದು ನಡೆಯಿತು. ಹೊಸ ಮಾರ್ಗಸೂಚಿ (ಎಸ್‍ಒಪಿ) ಸಿದ್ದಪಡಿಸೊ ತನಕ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಟೋಯಿಂಗ್ ಕಿರಿಕಿರಿ ಇಲ್ಲ ಎಂದು ಸಂಜೆ ನಡೆದ ಸಿಎಂ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    towing

    ಸಭೆಯಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗಿಯಾಗಿದ್ದರು. ಸಿಎಂ ಜೊತೆ ನಡೆದ ಸುದೀರ್ಘ ಸಭೆಯಲ್ಲಿ ಟೋಯಿಂಗ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಈಗ ಇರುವಂತೆ ಟೋಯಿಂಗ್ ನಿಯಮಗಳನ್ನ ಬದಲಾವಣೆ ಮಾಡಲು ಸೂಚನೆ ಕೊಟ್ಟಿದ್ದಾರೆ.

    towing 1

    ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ,  ಟೋಯಿಂಗ್ ವಾಹನಗಳ ಕಾರ್ಯ ವೈಖರಿ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ಮಾಡಿ. ಎಸ್‍ಒಪಿ ಏನು ಇದೆ ಅವುಗಳಲ್ಲಿ ಕೆಲವು ಬದಲಾವಣೆಗಳಿಗೆ ಸೂಚನೆ ನೀಡಿದ್ದಾರೆ. ಪಾರದರ್ಶಕತೆಯ ದೃಷ್ಟಿಯಿಂದ ಪಾರದರ್ಶಕವಾಗಿರಬೇಕು. ಅಲ್ಲಿಯ ತನಕ ಟೋಯಿಂಗ್ ವಾಹನವನ್ನ ನಿಯಂತ್ರಿಸಿ ಕಾರ್ಯಚರಣೆ ಮಾಡುವುದಕ್ಕೆ ನಾವು ಸೂಚನೆ ಕೊಡುತ್ತಿದ್ದೇವೆ. ಒಟ್ಟಾರೆ ಕೆಲವು ಬದಲಾವಣೆಗಳು ಪಾರದರ್ಶಕತೆ ದೃಷ್ಟಿಯಿಂದ ಮಾಡಲು ಹೇಳಿದ್ದಾರೆ. ಅದನ್ನ ಪರಿಶೀಲನೆ ಮಾಡಿ ಇಲಾಖೆ ಹೊಸ ಎಸ್‍ಒಪಿಯನ್ನ ಕೆಲವು ಬದಲಾವಣೆ ತರುವುದಕ್ಕೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ರೀತಿಯ ಆರೋಪಗಳಿಗೆ ಅವಕಾಶವಾಗದಂತೆ ಬದಲಾವಣೆ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಟೋಯಿಂಗ್ ಸಿಬ್ಬಂದಿ ಕಾರ್ಯವೈಖರಿಯ ವೀಡಿಯೋಗಳನ್ನ ಸಾಮಾಜಿಕ ಜಾಲಾತಾಣದಲ್ಲಿ ಹಾಕಿ ಸಂಚಾರಿ ಪೊಲೀಸರ ಮೇಲೆ ಸಾರ್ವಜನಿಕರು ಕಿಡಿಕಾರಿದ್ದರು. ಇದು ಸರ್ಕಾರಕ್ಕೆ ಒಂದು ರೀತಿ ಮುಜುಗರ ಉಂಟು ಮಾಡಿತ್ತು. ಹಾಗಾಗಿ ಸಿಎಂ ಮಧ್ಯಪ್ರವೇಶ ಮಾಡಿ ಟೋಯಿಂಗ್ ಗೊಂದಲಕ್ಕೆ ತಾತ್ಕಾಲಿಕ ಮದ್ದುಕೊಟ್ಟಿದ್ದಾರೆ.

  • ಫೈನ್ ತಪ್ಪಿಸೋಕೆ ಹೋಗಿ ಬಿದ್ದು ಗಾಯಗೊಂಡಿದ್ದ ಯುವಕ ದುರ್ಮರಣ!

    ಫೈನ್ ತಪ್ಪಿಸೋಕೆ ಹೋಗಿ ಬಿದ್ದು ಗಾಯಗೊಂಡಿದ್ದ ಯುವಕ ದುರ್ಮರಣ!

    ಬೆಂಗಳೂರು: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಂಭೀರವಾಗಿ ಗಾಯವಾಗಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.

    BNG ACCIDENT 2

    19 ವರ್ಷದ ಕೌಶಿಕ್ ಸಾವನ್ನಪ್ಪಿದ ಬೈಕ್ ಸವಾರ. ಅತ್ತಿಗುಪ್ಪೆ ಬಳಿ ವಿಜಯನಗರ ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವಾಗ ಕೌಶಿಕ್ ಸ್ನೇಹಿತನ ಬೈಕ್ ನಲ್ಲಿ ಬರುತ್ತಿರುವಾಗ ಪೊಲೀಸರು ಬೈಕ್ ತಡೆಯಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    BNG ACCIDENT 1

    ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಕೌಶಿಕ್ ಅಂಡ್ ಟೀಂ ಮುಂದಾಗುವಾಗ ಡಿವೈಡರ್ ಗೆ ಡಿಕ್ಕಿ ಹೊಡೆದು ಕೌಶಿಕ್ ತಲೆಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಬೈಕ್ ಸವಾರ ಕೌಶಿಕ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಕೌಶಿಕ್ ಬ್ರೈನ್ ಡೆಡ್ ಆಗಿರೋ ಬಗ್ಗೆ ಖಚಿತ ಪಡಿಸಿ ಚಿಕಿತ್ಸೆ ಕೊಡುತ್ತಿದ್ದರು. ಮುಂಜಾನೆ ಕೌಶಿಕ್ ಸಾವನ್ನಪ್ಪಿದ್ದಾನೆ.

    BNG BIKE

    ಘಟನೆ ಸಂಬಂಧ ವಿಜಯ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮನುಷ್ಯರು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ: ಬಾಲಕೃಷ್ಣ

  • ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಹೈದರಾಬಾದ್: ಟ್ರಾಫಿಕ್ ಪೊಲೀಸ್ ಪ್ರವಾಹದಲ್ಲಿ ಸಿಲುಕಿದ್ದ ಅರ್ಚಕರೊಬ್ಬರನ್ನು ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀರೋ ಎಂದು ಪ್ರಶಂಸಿಸುತ್ತಿದ್ದಾರೆ.

    ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಕೊಡವಲೂರು ಶಿವ ದೇವಸ್ಥಾನದ ಅರ್ಚಕರು ವೆಂಕಟೇಶ್ವರಪುರಂ ಸೇತುವೆ ಮೇಲೆ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಪ್ರವಾಹದ ನೀರಿನ ಸೆಳೆತಕ್ಕೆ ಅರ್ಚಕರು ಕೊಚ್ಚಿಹೋಗುವ ವೇಳೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

    TRAFFIC POLICE 1

    ಈ ವೇಳೆ ಅಲ್ಲೇ ಇದ್ದ ಕರ್ತವ್ಯ ನಿರತ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ನಾಯಕ್ ಅವರು ಅರ್ಚಕರನ್ನು ರಕ್ಷಿಸಲು ಮುಂದಾಗುತ್ತಾರೆ. ನಾಯಕ್ ಅವರು ಹಗ್ಗವನ್ನು ಬಳಸಿ ಅರ್ಚಕರು ಇರುವ ಸ್ಥಳಕ್ಕೆ ತಲುಪಿ ನಂತರ ಅವರು ಅರ್ಚಕರನ್ನು ಬಿಗಿಯಾಗಿ ಹಿಡಿದುಕೊಂಡು ಸುರಕ್ಷಿತವಾಗಿ ದಡ ಮುಟ್ಟಿಸುತ್ತಾರೆ.

    ನಾಯಕ್ ಅವರ ಸಾಹಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಲ್ಲೂರು ಜಿಲ್ಲೆಯ ಕೊಡವಲೂರು ಶಿವ ದೇವಾಲಯದಲ್ಲಿ ಕೆಲಸ ಮಾಡುವ ಅರ್ಚಕರೊಬ್ಬರು ವೆಂಕಟೇಶ್ವರಪುರಂ ಸೇತುವೆಯ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅವರು ಪ್ರವಾಹದ ನೀರಿನಿಂದ ಕೊಚ್ಚಿಹೋಗುತ್ತಿದ್ದರು. ಆಗ ಸಮಯಕ್ಕೆ ಸರಿಯಾಗಿ ಧೈರ್ಯ ಮಾಡಿದ ಟ್ರಾಫಿಕ್ ಸಿಐ ನಾಯಕ್ ಅವರು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ಬರೆದು ಟ್ವೀಟ್ ಮಾಡಲಾಗಿದೆ.

    ಈ ವೀಡಿಯೋ ವೈರಲ್ ಆಗಿದ್ದು ಟ್ರಾಫಿಕ್ ಪೊಲೀಸ್ ಸಾಹಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಈ ಕುರಿತು, ಸಾರ್ವಜನಿಕ ಸೇವೆಯಲ್ಲಿ ಮತ್ತು ವ್ಯಕ್ತಿಯ ಜೀವ ಉಳಿಸುವಲ್ಲಿ ಟ್ರಾಫಿಕ್ ಸಿಐ ಅವರು ತೋರಿದ ಶೌರ್ಯ ರಕ್ಷಣೆ ಮತ್ತು ಬದ್ಧತೆಯನ್ನು ಟ್ವೀಟ್ ಮಾಡಿ ಪ್ರಶಂಸಿದ್ದಾರೆ. ಇದನ್ನೂ ಓದಿ:  100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್