Tag: ಗಲ್ಲು ಶಿಕ್ಷೆ

  • ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    ನವದೆಹಲಿ: ಕ್ರಿಮಿನಲ್ ಕಾನೂನುಗಳನ್ನು ಪರಿಷ್ಕರಿಸುವ ಮೂರು ಮಸೂದೆಗಳನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ್ದಾರೆ.

    ದೇಶದ ಕ್ರಿಮಿನಲ್ ಕಾನೂನುಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಹೊಸ ಮಸೂದೆಯನ್ನು ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಹೊಸ ಮಸೂದೆಗಳೊಂದಿಗೆ ಸರ್ಕಾರವು ನ್ಯಾಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆಯೇ ಹೊರತು, ಶಿಕ್ಷೆಯನ್ನಲ್ಲ ಎಂದು ಮಸೂದೆ ಮಂಡನೆ ವೇಳೆ ಅಮಿತ್‌ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

    amit shah lok sabha1

    ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಗುಂಪು ಹಿಂಸಾಚಾರಕ್ಕೆ ಮರಣದಂಡನೆ ಶಿಕ್ಷೆ ವಿಧಿಸುವುದನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸುವ ಮಸೂದೆಯನ್ನು ಅಮಿತ್‌ ಶಾ ಮಂಡಿಸಿದ್ದಾರೆ.

    ವಿವಾದಾತ್ಮಕ ದೇಶದ್ರೋಹ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಬಂಧನೆಯನ್ನು ಮಸೂದೆ ಹೊಂದಿದೆ. ಮಸೂದೆಯು IPCಯನ್ನು ಬದಲಿಸುವ ಗುರಿಯನ್ನು ಹೊಂದಿದೆ ಎಂದು ಅಮಿತ್‌ ಶಾ ಸಂಸತ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: 50ರ ಅಜ್ಜಿಗೆ ಫ್ಲೈಯಿಂಗ್ ಕಿಸ್ ಕೊಡಲು ರಾಹುಲ್‌ಗೇನು ಹುಡುಗಿಯರ ಕೊರತೆ ಇಲ್ಲ: ಕಾಂಗ್ರೆಸ್ ಶಾಸಕಿ ಹೇಳಿಕೆ

    ಅಪರಾಧದ ತೀವ್ರತೆಗೆ ಅನುಗುಣವಾಗಿ ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆ, ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದರೆ ಒಂದು ವರ್ಷ ಜೈಲು ಶಿಕ್ಷೆ, ಸಾಮೂಹಿಕ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ, ಅಪ್ರಾಪ್ತೆಯರ ಅತ್ಯಾಚಾರಕ್ಕೆ ಮರಣದಂಡನೆ ಅಂಶಗಳನ್ನು ಮಸೂದೆ ಒಳಗೊಂಡಿದೆ.

    1860 ರ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತಾದಿಂದ ಬದಲಾಯಿಸಲಾಗುವುದು. ಮೊದಲು 511 ವಿಭಾಗಗಳಿದ್ದವು, ಆದರೆ ಈಗ ಅದು 356 ವಿಭಾಗಗಳನ್ನು ಹೊಂದಿರುತ್ತದೆ. 175 ಪರಿಚ್ಛೇದಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಫೈಲ್ಸ್’ ನಿರ್ಮಾಪಕನನ್ನು ಗಲ್ಲಿಗೇರಿಸಿ : ಸಿಡಿದೆದ್ದ ಎನ್.ಸಿ.ಪಿ ನಾಯಕ

    ‘ದಿ ಕೇರಳ ಫೈಲ್ಸ್’ ನಿರ್ಮಾಪಕನನ್ನು ಗಲ್ಲಿಗೇರಿಸಿ : ಸಿಡಿದೆದ್ದ ಎನ್.ಸಿ.ಪಿ ನಾಯಕ

    ವಿವಾದಿತ ‘ದಿ ಕೇರಳ ಫೈಲ್ಸ್’ (The Kerala Story) ಸಿನಿಮಾದ ನಿರ್ಮಾಪಕನ (Producer) ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಪಿ) (NCP)  ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಿನಿಮಾದಲ್ಲಿ ಸುಳ್ಳುಗಳನ್ನೇ ತುಂಬಿಸಿರುವ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ (Hanging) ಎಂದು ಹೇಳಿಕೆ ನೀಡಿದ್ದಾರೆ. ಮತಿಯ ಭಾವನೆಯನ್ನು ಹರಡುತ್ತಿರುವ ಈ ಸಿನಿಮಾವನ್ನು ಕೂಡಲೇ ಭಾರತದಾದ್ಯಂತ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.

    The Kerala Story 3

    ಮೊದ ಮೊದಲು ಈ ಸಿನಿಮಾದಲ್ಲಿ 32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಹೇಳಿದ್ದರು. ಆನಂತರ ಅದು 3 ಸಾವಿರಕ್ಕೆ ಇಳಿಯಿತು. ಮೂವತ್ತೆರಡು ಸಾವಿರಕ್ಕೂ, ಮೂರು ಸಾವಿರಕ್ಕೂ ವ್ಯತ್ಯಾಸ ಗೊತ್ತಿಲ್ಲವಾ? ಎಂದು ಪ್ರಶ್ನೆ ಮಾಡಿರುವ ಜಿತೇಂದ್ರ, ಕೇರಳದಲ್ಲಿ ಹಿಂದೂಗಳ ಮದುವೆಯನ್ನು ಮುಸ್ಲಿಂ ನೆರವೇರಿಸಿದ್ದನ್ನು ಯಾಕೆ ತೋರಿಸಿಲ್ಲ ಎಂದು ಅವರು ಕೇಳಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    The Kerala Story 2

    ಕೇರಳದಲ್ಲಿ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರೆ, ತಮಿಳು ನಾಡಿನಲ್ಲೂ ಅಘೋಷಿದ ನಿಷೇಧ ಹೇರಲಾಗಿದೆ. ಹಾಗಾಗಿ ಆ ರಾಜ್ಯದಲ್ಲೂ ಚಿತ್ರ ಪ್ರದರ್ಶನವಿಲ್ಲ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಚಿತ್ರಕ್ಕೆ ನಿಷೇಧವನ್ನೇ ಹೇರಿದ್ದಾರೆ. ಹೀಗಾಗಿ ನಿರ್ಮಾಪಕರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಕುರಿತಂತೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

    The Kerala Story

    ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕರು ಪಶ್ಚಿಮ ಬಂಗಾಳದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಅದೇ ಅರ್ಜಿಯಲ್ಲೇ ತಮಿಳು ನಾಡು ಸರಕಾರಕ್ಕೆ ಚಿತ್ರಮಂದಿರಗಳಿಗೆ ಭದ್ರತೆ ನೀಡುವಂತೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಭದ್ರತೆ ದೃಷ್ಟಿ ಕಾರಣವನ್ನು ನೀಡಿ ತಮಿಳು ನಾಡಿನ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರಿಂದ ಒಂದೇ ಅರ್ಜಿಯಲ್ಲೇ ಎರಡೂ ವಿಷಯಗಳನ್ನು ಪ್ರಸ್ತಾಪ ಮಾಡಿದೆ ಚಿತ್ರತಂಡ.

    The Kerala Story 1

    ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.

  • ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ

    ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ

    ಲಕ್ನೋ: ಗೋರಖನಾಥ ದೇವಸ್ಥಾನದ (Gorakhnath Temple) ಮೇಲೆ ದಾಳಿ ನಡೆಸಿದ ಉಗ್ರನಿಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಿಶೇಷ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸ್ವಕ್ಷೇತ್ರ ಗೋರಖನಾಥ ದೇವಸ್ಥಾನದ ಮೇಲೆ ಅಹ್ಮದ್ ಮುರ್ತಜಾ ಅಬ್ಬಾಸಿ (Ahmed Murtaza Abbasi) 2022ರ ಏಪ್ರಿಲ್‌ 3 ರಂದು ದಾಳಿ ನಡೆಸಿದ್ದ. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಉತ್ತರ ಪ್ರದೇಶ ಪ್ರಾಂತೀಯ ಪೊಲೀಸರ ಮೇಲೆ ಅಹ್ಮದ್‌ ಕುಡುಗೋಲಿನಿಂದ ಹಲ್ಲೆ ನಡೆಸಿದ್ದ. ದಾಳಿ ಬಳಿಕ ಆತನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ್ದ ಎನ್‌ಐಎ ನ್ಯಾಯಾಲಯ (NIA Special Court) ಮುರ್ತಜಾ ಅಬ್ಬಾಸಿ ದೋಷಿ ಎಂದು ತೀರ್ಪು ನೀಡಿ ಸೋಮವಾರ ಗಲ್ಲು ಶಿಕ್ಷೆಯನ್ನು (Death Sentence) ವಿಧಿಸಿದೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದಕ್ಕೆ ಪ್ರಿಯತಮೆಯ ಮೇಲೆ ಶೂಟೌಟ್!

    Ahmed Murtaza IIT Graduate Who Attacked Policemen Outside Gorakhnath Temple Sentenced To Death By NIA Court 1

    ಯಾರು ಈ ಮುರ್ತಜಾ?
    ಮುರ್ತಜಾ ಮುಂಬೈ ಐಐಟಿಯಲ್ಲಿ ರಾಸಾಯನಿಕ ಎಂಜಿನಿಯರ್ ಪದವಿ ಪಡೆದಿದ್ದ. 2016 ರಲ್ಲಿ ಭಾರತದಿಂದ ಪಲಾಯನ ಮಾಡಿರುವ ವಿವಾದಿತ ಇಸ್ಲಾಮಿಕ್ ಧರ್ಮಗುರು ಝಾಕಿರ್ ನಾಯ್ಕ್‌ನಿಂದ ಮುರ್ತಜಾ ಸ್ಫೂರ್ತಿ ಪಡೆದಿದ್ದ. ತನಿಖೆಯ ಸಮಯದಲ್ಲಿ ಪೊಲೀಸರು ಆತನ ಲ್ಯಾಪ್‌ಟಾಪ್ ಮತ್ತು ಪೆನ್ ಡ್ರೈವ್‌ನಲ್ಲಿ ಜಿಹಾದ್‌ಗೆ ಸಂಬಂಧಿಸಿದ ವೀಡಿಯೊಗಳು ಸೇರಿದಂತೆ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

    ಈತ ಗೋರಖ್‌ಪುರ ನಿವಾಸಿಯಾಗಿದ್ದರೂ ಆಧಾರ್‌ ಕಾರ್ಡ್‌ ಮುಂಬೈನಲ್ಲಿ ಮಾಡಲಾಗಿತ್ತು.  ಮಾಧ್ಯಮಗಳ ಜೊತೆ  ಮಾತನಾಡಿದ್ದ ತಂದೆ ಮಗ ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

    ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

    ಕಾಬುಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ (Afghanistan) ಕೊಲೆ ಆರೋಪಿಯನ್ನು ತಾಲಿಬಾನ್‌ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಲೆ ಆರೋಪಿಯನ್ನು ಗಲ್ಲಿಗೇರಿಸಲಾಗಿದೆ.

    ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ 2017 ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಇರಿದು ಕೊಂದ ಆರೋಪವನ್ನು ಈತ ಹೊಂದಿದ್ದ ಎಂದು ತಾಲಿಬಾನ್ (Taliban) ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಇದನ್ನೂ ಓದಿ: ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

    taliban 1

    ಈ ಪ್ರಕರಣವನ್ನು ಮೂರು ನ್ಯಾಯಾಲಯಗಳು ತನಿಖೆ ಮಾಡಿವೆ. ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ತಂಡದ ಅತ್ಯುನ್ನತ ಆಧ್ಯಾತ್ಮಿಕ ನಾಯಕರಿಂದ ಶಿಕ್ಷೆಯನ್ನು ಅಧಿಕೃತಗೊಳಿಸಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ. ಆದರೆ ವ್ಯಕ್ತಿಯನ್ನು ಹೇಗೆ ಗಲ್ಲಿಗೇರಿಸಲಾಯಿತು ಎಂದು ಅವರು ಹೇಳಿಲ್ಲ.

    10ಕ್ಕೂ ಹೆಚ್ಚು ಹಿರಿಯ ತಾಲಿಬಾನ್ ಅಧಿಕಾರಿಗಳು ಮರಣದಂಡನೆ ಶಿಕ್ಷೆ ಸಂದರ್ಭದಲ್ಲಿ ಹಾಜರಾಗಿದ್ದರು. ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಮತ್ತು ಹಾಲಿ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್, ದೇಶದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ವಿದೇಶಾಂಗ ಮಂತ್ರಿ ಮತ್ತು ಹಾಲಿ ಶಿಕ್ಷಣ ಸಚಿವರು ಇದ್ದರು. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ವರ್ಷವಿಡೀ ಶಾಲೆಗೆ ಹೋಗಲು ನಿರ್ಬಂಧಿಸಿದ ತಾಲಿಬಾನ್ ಪರೀಕ್ಷೆ ಬರೆಯಲು ಅನುಮತಿ

    ತಾಲಿಬಾನ್‌ನ ಆಧ್ಯಾತ್ಮಿಕ ನಾಯಕ, ನ್ಯಾಯಾಧೀಶರನ್ನು ಭೇಟಿಯಾಗಿ ಷರಿಯಾ ಕಾನೂನಿಗೆ ಅನುಗುಣವಾಗಿ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದರು. 1996-2001ರ ಸಂದರ್ಭದಲ್ಲಿ ತಾಲಿಬಾನ್ ಆಡಳಿತದಲ್ಲಿ ಕಲ್ಲೆಸೆತದ ಮೂಲಕ ಮರಣದಂಡನೆ ನೀಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಗಲ್ಲು ಶಿಕ್ಷೆಯಿಂದ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಹೆಚ್ಚಳ: ಕ್ಷಮೆ ಯಾಚಿಸುವಂತೆ ಗೆಹ್ಲೋಟ್‌ಗೆ ಬಿಜೆಪಿ ಒತ್ತಾಯ

    ಗಲ್ಲು ಶಿಕ್ಷೆಯಿಂದ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಹೆಚ್ಚಳ: ಕ್ಷಮೆ ಯಾಚಿಸುವಂತೆ ಗೆಹ್ಲೋಟ್‌ಗೆ ಬಿಜೆಪಿ ಒತ್ತಾಯ

    ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅತ್ಯಾಚಾರ ಪ್ರಕರಣಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ. ಗೆಹ್ಲೋಟ್ ನೀಡಿದ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

    ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಕಾನೂನನ್ನು ಜಾರಿಗೊಳಿಸಿದ ಬಳಿಕ ಭಾರತದಲ್ಲಿ ಅತ್ಯಾಚಾರ ಸಂತ್ರಸ್ತೆಯರ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ನಿರ್ಭಯಾ ಘಟನೆಯ ಬಳಿಕ ಮರಣದಂಡನೆ ಶಿಕ್ಷೆ ಜಾರಿಗೆ ಬಂದಿದೆ. ಅತ್ಯಾಚಾರಿಗಳು ಕೃತ್ಯ ನಡೆಸಿದ ಬಳಿಕ ಸಂತ್ರಸ್ತೆ ಸಾಕ್ಷಿಯಾಗಿರುತ್ತಾಳೆ ಎಂಬ ಕಾರಣಕ್ಕೆ ಆಕೆಯನ್ನೂ ಕೊಂದು ಬಿಡುತ್ತಾರೆ. ಇದು ದೇಶಾದ್ಯಂತ ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಗೆಹ್ಲೋಟ್ ಶುಕ್ರವಾರ ಹೇಳಿಕೆ ನೀಡಿದ್ದರು.

    Ashok Gehlot 1

    ಗೆಹ್ಲೋಟ್ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ತಮ್ಮ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದು ದುರದೃಷ್ಟಕರ. ಅವರು ಈ ಕೂಡಲೇ ಕ್ಷಮೆ ಕೇಳಬೇಕಾಗಿ ಒತ್ತಾಯಿಸಿದೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಫೋಟೋ ಕಡ್ಡಾಯಗೊಳಿಸಿ – ಹಣಬರ ಯಾದವ ಸಮಾಜದಿಂದ ಬೈಕ್ ರ‍್ಯಾಲಿ

    ಈ ಬಗ್ಗೆ ಕಿಡಿಕಾರಿರುವ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್, ಕಳೆದ 3 ವರ್ಷಗಳಿಂದ ರಾಜಸ್ಥಾನ ಮುಗ್ಧ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಕೇಂದ್ರವಾಗಿದೆ. ಅವರ ವೈಫಲ್ಯಗಳನ್ನು ಮರೆಮಾಚಲು ವಿವಾದಾತ್ಮಕ ಹೇಳಿಕೆಯನ್ನು ನೀಡಿ, ಸಮಸ್ಯೆಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    Ashok Gehlot

    ರಾಜಸ್ಥಾನ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಅವರು, ಈ ಹೇಳಿಕೆ ದುರದೃಷ್ಟಕರ ಹಾಗೂ ಅವಮಾನಕರ. ಸಿಎಂ ಗೆಹ್ಲೋಟ್ ಅವರು ಅಸಂಬದ್ಧ ಹೇಳಿಕೆಗಳನ್ನು ನೀಡಿ, ತಮ್ಮ ಸರ್ಕಾರದ ವೈಫಲ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: BJP ಮುಖಂಡ ಪ್ರವೀಣ್ ಹತ್ಯೆ ಕೇಸ್ – ಮತ್ತಿಬ್ಬರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಜೀಸಸ್‌ ಸುಪ್ರೀಂ ಎಂದಿದ್ದ ವ್ಯಕ್ತಿಗೆ ಪಾಕ್‌ನಲ್ಲಿ ಗಲ್ಲು ಶಿಕ್ಷೆ

    ಜೀಸಸ್‌ ಸುಪ್ರೀಂ ಎಂದಿದ್ದ ವ್ಯಕ್ತಿಗೆ ಪಾಕ್‌ನಲ್ಲಿ ಗಲ್ಲು ಶಿಕ್ಷೆ

    ಇಸ್ಲಾಮಾಬಾದ್‌: ಜೀಸಸ್‌ ಸರ್ವೋಚ್ಚ ದೇವರು ಎಂದು ಹೇಳಿದ ವ್ಯಕ್ತಿಗೆ ಪಾಕಿಸ್ತಾನ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

    5 ವರ್ಷದ ಹಿಂದೆ ಧರ್ಮ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಈಗ ತೀರ್ಪು ಪ್ರಕಟಿಸಿದೆ. ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಧರ್ಮನಿಂದನೆ ಮಾಡಿದರೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

    PAK

    ಏನಿದು ಪ್ರಕರಣ?
    ಜೂನ್‌ 2017ರಲ್ಲಿ ವ್ಯಕ್ತಿಯೊಬ್ಬನ ಬೈಕನ್ನು ಮೆಕ್ಯಾನಿಕ್‌ ಅಶ್ಫಾಕ್ ಮಸಿಹ್ ರಿಪೇರಿ ಮಾಡಿದ್ದ. ಈ ವೇಳೆ ಆತ ನಾನು ಧಾರ್ಮಿಕ ಭಕ್ತ ನನಗೆ ಬಿಲ್‌ನಲ್ಲಿ ಡಿಸ್ಕೌಂಟ್‌ ನೀಡಬೇಕು ಎಂದು ಹೇಳಿದ್ದ.

    ಸವಾರನ ಈ ವಾದವನ್ನು ತಿರಸ್ಕರಿಸಿ ಪೂರ್ಣ ಹಣವನ್ನು ಪಾವತಿ ಮಾಡುವಂತೆ ಅಶ್ಫಾಕ್ ಸೂಚಿಸಿದ್ದ. ಆದರೆ ಆತ ನನಗೆ ಡಿಸ್ಕೌಂಟ್‌ ನೀಡಲೇಬೇಕೆಂದು ಹಠ ಹಿಡಿದಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಕ್ಸಮರ ಆರಂಭವಾಗಿದೆ. ಈ ಗಲಾಟೆ ಕೊನೆಗೆ ಧರ್ಮದ ವಿಚಾರಕ್ಕೆ ತಿರುಗಿದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

    ಇಬ್ಬರ ಗಲಾಟೆ ಜೋರಾಗುತ್ತಿದ್ದಂತೆ ಜನ ಸೇರಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಜನ ಅಶ್ಫಾಕ್ ಪ್ರವಾದಿಯನ್ನು ನಿಂದಿಸಿ ಜೀಸಸ್‌ ಸರ್ವೋಚ್ಚ ದೇವರು ಎಂದು ಹೇಳಿದ್ದಾನೆ ಎಂದು ಆರೋಪಿಸಿದ್ದಾರೆ. ಕೂಡಲೇ ಪೊಲೀಸರು ಅಶ್ಫಾಕ್‌ ವಿರುದ್ಧ ಧರ್ಮನಿಂದನೆ ಕೇಸ್‌ ದಾಖಲಿಸಿ ಬಂಧಿಸಿದ್ದಾರೆ.

    pakistan

    ಅಶ್ಫಾಕ್‌ಗೆ ಪತ್ನಿ ಮತ್ತು ಮಗಳಿದ್ದಾಳೆ. 2019ರಲ್ಲಿ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಪೆರೋಲ್‌ನಲ್ಲಿ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ.

    ಧರ್ಮನಿಂದನೆ ಮಾಡಿದರೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸುವುದು ಹೊಸದೆನಲ್ಲ. ಈ ವರ್ಷದ ಜನವರಿಯಲ್ಲಿ 26 ವರ್ಷದ ಮಹಿಳೆ ಪ್ರವಾದಿಯ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಅನ್ನು ವಾಟ್ಸಪ್‌ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಕನ್ಹಯ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಿ: ಉಮ್ಮತ್ ಚಿಂತಕರ ವೇದಿಕೆ ಮನವಿ

    ಕನ್ಹಯ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಿ: ಉಮ್ಮತ್ ಚಿಂತಕರ ವೇದಿಕೆ ಮನವಿ

    ದಾವಣಗೆರೆ: ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಮಾಡಿ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಬೇಕುಎಂದು ಉಮ್ಮತ್ ಚಿಂತಕರ ವೇದಿಕೆ ಒತ್ತಾಯಿಸಿದೆ.

    ಉದಯಪುರದ ಹತ್ಯೆಯನ್ನು ಖಂಡಿಸಿದ ಉಮ್ಮತ್ ಚಿಂತಕರ ವೇದಿಕೆ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಲ್ಲಿ ಮನವಿ ಮಾಡಿದೆ. ಇಸ್ಲಾಂ ಬಗ್ಗೆ ತಿಳಿಯದೇ ಇರುವ ವ್ಯಕ್ತಿಗಳಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ. ಈ ಕೂಡಲೇ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿದೆ. ಇದನ್ನೂ ಓದಿ: ತುಂಬಾ ಒಳ್ಳೇ ಕೆಲಸ ಮಾಡಿದ್ದೀಯಾ ಸಹೋದರ – ಕನ್ಹಯ್ಯ ಹತ್ಯೆ ಬೆಂಬಲಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್

    Ummat thinkers forum Davanagere 1

    ಪ್ರವಾದಿಗೆ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಇಬ್ಬರು ಕೊಲೆಗಡುಕರು ಹತ್ಯೆ ನಡೆಸಿ, ಅದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನೂ ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪಾತಕಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    ಇಬ್ಬರು ಧರ್ಮಾಂಧರು ಹಿಂದೂ ವ್ಯಕ್ತಿಯ ಶಿರಚ್ಛೇದನ ನಡೆಸಿ ಹತ್ಯೆ ಮಾಡಿದ್ದರಿಂದ ಮುಸ್ಲಿಂ ಸಮುದಾಯದ ಮೇಲೆ ಹಿಂದೂ ಸಂಘಟನೆಗಳು ಕಿಡಿ ಕಾರಿವೆ.

    Live Tv

  • 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    ಅಗರ್ತಲಾ: ಕಳೆದ ವರ್ಷ ನಾಲ್ಕೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಆರೋಪಿಗೆ ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.

    ಖೋವೈ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ ಮೊದಲ ನಿದರ್ಶನ ಇದಾಗಿದ್ದು, ಅಪರಾಧಿ ಕಾಳಿಚರಣ್‌ಗೆ ಮರಣದಂಡನೆ ವಿಧಿಸಲಾಗಿದೆ. ಈ ಹಿಂದೆ ಆರೋಪಿ ಸಾಕ್ಷ್ಯಾಧಾರಗಳಿಂದ ತಪ್ಪಿಸಿಕೊಂಡಿದ್ದನು. ಸತತ ವಿಚಾರಣೆಯ ಬಳಿಕ ಸುಳ್ಳು ಮಾಹಿತಿ ಹಂಚಿಕೊಂಡಿರುವುದು ಸಾಬೀತಾಗಿದ್ದು ಅಪರಾಧಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

    STOP RAPE

    ತ್ರಿಪುರಾದ ಖೋವೈ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಕರಿ ದಾಸ್ ಅವರು ತನಿಖಾಧಿಕಾರಿ ಬಿದೀಶ್ವರ್ ಸಿನ್ಹಾರ ವರದಿಯನ್ನು ಪರಿಶೀಲನೆ ನಡೆಸಿದ ಬಳಿಕ ಮರಣದಂಡನೆಗೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 35 ಸಾಕ್ಷಿಗಳನ್ನು ದಾಖಲಿಸಲಾಗಿದೆ.

    ಏನಿದು ಘಟನೆ?: 2021ರ ಫೆಬ್ರವರಿ 22ರಂದು ಖೋವೈ ಜಿಲ್ಲೆಯ ಟೆಲಿಯಮುರಾದ ಡಸ್ಕಿ ಪ್ರದೇಶದಿಂದ 4 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಅದಾದ 6 ದಿನಗಳ ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಕಾಡಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹವನ್ನು ಹೊರತೆಗೆಯಲಾಗಿತ್ತು.

    Live Tv

  • ತಮ್ಮನನ್ನು ಕೊಲೆಗೈದ ಆರೋಪಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ – ಗಲ್ಲು ಶಿಕ್ಷೆ ನೀಡಿ ಎಂದ ಅಣ್ಣ

    ತಮ್ಮನನ್ನು ಕೊಲೆಗೈದ ಆರೋಪಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ – ಗಲ್ಲು ಶಿಕ್ಷೆ ನೀಡಿ ಎಂದ ಅಣ್ಣ

    ಬೀದರ್: ಕೊಲೆ ಮಾಡಿದ ಆರೋಪಿಯ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವ ವೇಳೆ ಸಹೋದರನ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂದು ಹಿರಿಯ ಸಹೋದರ ಆಕ್ರೋಶಗೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ.

    brother bidar 3

    ಕೊಲೆಯಾದ ಅಂತೇಷ್ ಅಣ್ಣ ಸಂತೋಷ್ ನ್ಯಾಯಕ್ಕಾಗಿ ಕೈಮುಗಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ನಿಜವಾಗಲೂ ಆತ್ಮಹತ್ಯೆ ನಡೆದಿದ್ಯಾ?: ಅನುಮಾನ ಹೊರಹಾಕಿದ ಸಿ.ಟಿ.ರವಿ

    brother bidar 2

    ನಡೆದಿದ್ದೇನು?
    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ್‌ನ ರಾಜಾ ಡಾಬಾ ಬಳಿ ಅಂತೇಷ್ ಇರುವುದನ್ನು ಆರೋಪಿಗಳು ಗಮನಿಸಿದರು. ಹಳೆಯ ವೈಷಮ್ಯ ಹಿನ್ನೆಲೆ ಕಟ್ಟಿಗೆಯಿಂದ ಹೊಡೆದು ಅಂತೇಷ್‍ನನ್ನು ಕೊಲೆ ಮಾಡಲಾಗಿದೆ. ಸುದ್ದಿ ತಿಳಿದ ತಕ್ಷಣ ಅಂತೇಷ್ ಕುಟುಂಬ ಮತ್ತು ಸ್ಥಳೀಯರು ಕೊಲೆ ನಡೆದ ಜಾಗಕ್ಕೆ ಬಂದಿದ್ದಾರೆ. ಪರಿಣಾಮ ಗ್ರಾಮದ ಯುವಕ ಪ್ರವೀಣ್ ಕುಮಾರ್ ಮನೆಯ ಮುಂದೆ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಸಂತೋಷ್ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    brother bidar 1

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಪ್ರವೀಣ್ ಕುಮಾರ್ ಹಾಗೂ ಅವರ ಸ್ನೇಹಿತರ ಬಂಧನಕ್ಕೆ ಸಂತಪೂರ್ ಪೊಲೀಸರು ಬಲೆ ಬಿಸಿದ್ದಾರೆ.

  • ಪ್ರವಾದಿಯ ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ

    ಪ್ರವಾದಿಯ ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ

    ಇಸ್ಲಾಮಾಬಾದ್: ಪ್ರವಾದಿಯ ವ್ಯಂಗ್ಯಚಿತ್ರವನ್ನು ವಾಟ್ಸಪ್‌ನಲ್ಲಿ ತನ್ನ ಸ್ನೇಹಿತನಿಗೆ ಕಳುಹಿಸಿದ್ದಕ್ಕೆ ಮಹಿಳೆಯೊಬ್ಬರಿಗೆ ಪಾಕಿಸ್ತಾನ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದೆ.

    2020ರಲ್ಲಿ ಫಾರೂಕ್ ಹಸನಾತ್ ಎಂಬಾತ ಮಹಿಳೆ ಅನಿಕಾ ಅಟಿಕ್ ಎಂಬಾಕೆಯ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿದ್ದ. ಇದೀಗ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

    ಅನಿಕಾ ಹಾಗೂ ಫಾರೂಕ್ ಸ್ನೇಹಿತರಾಗಿದ್ದರು. ಆದರೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ನಂತರ ಅನಿಕಾ ವಾಟ್ಸಪ್‌ನಲ್ಲಿ ಧರ್ಮನಿಂದನೆಯ ಸಂದೇಶವನ್ನು ಫಾರೂಕ್‌ಗೆ ಕಳುಹಿಸಿದ್ದಳು.

    whatsapp

    ಅನಿಕಾ ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯಗಳೊಂದಿಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ತಾಲಿಬಾನ್ ಆಡಳಿತ – ಉದ್ಯೋಗ ಕಳೆದುಕೊಂಡು 5 ಲಕ್ಷ ಅಫ್ಘಾನಿಸ್ತಾನಿಯರು ಕಂಗಾಲು

    ಫಾರೂಕ್ ಅನಿಕಾಳ ಸಂದೇಶವನ್ನು ಅಳಿಸುವಂತೆ ಹಾಗೂ ಕ್ಷಮೆ ಯಾಚಿಸುವಂತೆ ಹೇಳಿದ್ದ. ಆದರೆ ಅನಿಕಾ ನಿರಾಕರಿಸಿದ್ದರಿಂದ ಫಾರೂಕ್ ಆಕೆಯ ಮೇಲೆ ಕೇಸ್ ದಾಖಲಿಸಿದ್ದರು.

    jail

    ಪೊಲೀಸರು ಆಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಅನಿಕಾಳನ್ನು ಬಂಧಿಸಿದ್ದರು. ಆದರೆ ಅನಿಕಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಳು. ನ್ಯಾಯಾಲಯ ವಿಚಾರಣೆಯ ವೇಳೆ ಆಕೆ ಫಾರೂಕ್ ಉದ್ದೇಶಪೂರ್ವಕವಾಗಿ ಹೀಗೆ ಆರೋಪ ಹೊರಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಇದನ್ನೂ ಓದಿ: ಕಳ್ಳತನ ಮಾಡಿದ್ದೇನೆಂದು ನಿದ್ರೆಯಲ್ಲಿದ್ದಾಗ ಕನವರಿಸಿದ ಪತ್ನಿ – ಪೊಲೀಸರಿಗೆ ದೂರು ನೀಡಿದ ಪತಿ!

    ಧರ್ಮನಿಂದನೆಯ ವಿಚಾರವಾಗಿ ಪಾಕಿಸ್ತಾನದಲ್ಲಿ ಯಾರನ್ನೂ ಇಲ್ಲಿಯವರೆಗೆ ಗಲ್ಲಿಗೇರಿಸಿಲ್ಲ. ಆದರೆ ಆರೋಪ ಹೊತ್ತ ಹಲವರು ಹತ್ಯೆಯಾಗಿದ್ದಾರೆ. ಕಳೆದ ವರ್ಷವೂ ಶ್ರೀಲಂಕಾ ಮೂಲದ ವ್ಯಕ್ತಿಯ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿ ಪಾಕಿಸ್ತಾನಿ ಗುಂಪೊಂದು ಆತನನ್ನು ಕೊಲೆ ಮಾಡಿತ್ತು.