Tag: ಅತ್ಮಹತ್ಯೆ

  • ಬೆಂಗ್ಳೂರು ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಂಗ್ಳೂರು ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ದಾವಣಗೆರೆ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐದು ಜನ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಕೂಡ ಒಂದೇ ಕುಟುಂಬದ ಮೂವರು ಜನ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

    DVG3 1

    ನಗರದ ಭರತ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಏಳು ವರ್ಷದ ಮಗು ಸೇರಿ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ನಾಯ್ಕ್ (44), ಹೆಂಡತಿ ಸುಮ (32) ಮಗು ಧ್ರುವ (7) ಆತ್ಮಹತ್ಯೆ ಮಾಡಿಕೊಂಡವರು. ಕೃಷ್ಣಾ ನಾಯ್ಕ್ ಲಾರಿ ಚಾಲಕನಾಗಿದ್ದು, ಮೊದಲ ಮಗುವಿಗೆ ವಿಷ ಕುಡಿಸಿ, ನಂತರ ದಂಪತಿ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತಂದೆ ಶಂಕರ್ ಅನೈತಿಕ ಸಂಬಂಧವೇ ಕುಟುಂಬಕ್ಕೆ ಕುತ್ತಾಯ್ತಾ..? – ಅಪ್ಪನ ಬಗ್ಗೆ ಮೃತ ಮಕ್ಕಳ ಡೆತ್‍ನೋಟ್

    DVG2

    ಮೃತ ಪತ್ನಿ ಸುಮ ಅನಾರೋಗ್ಯಕ್ಕೆ ತುತ್ತಾಗಿದ್ದರು. ಗಂಡ ಕೃಷ್ಣ ನಾಯ್ಕ್ ಸಾಕಷ್ಟು ಆಸ್ಪತ್ರೆಗಳಿಗೆ ಸುಮರನ್ನು ತೋರಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕಾಗಿ ಸಾಕಷ್ಟು ಹಣವನ್ನು ಕೃಷ್ಣ ಖರ್ಚು ಮಾಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬೇಸತ್ತು, ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್, ಕುಡುಕ – ಡೆತ್‍ನೋಟ್‍ನಲ್ಲಿ ಮಧುಸಾಗರ್ ಗಂಭೀರ ಆರೋಪ

    DVG5

    ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು,  ಆರ್​ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಪತ್ನಿ, ಮಗಳಿಗೆ ಚಾಕುವಿನಿಂದ ಇರಿದು ವ್ಯಕ್ತಿ ಆತ್ಮಹತ್ಯೆ

    ಪತ್ನಿ, ಮಗಳಿಗೆ ಚಾಕುವಿನಿಂದ ಇರಿದು ವ್ಯಕ್ತಿ ಆತ್ಮಹತ್ಯೆ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗಳಿಗೆ ಚಾಕುವಿನಿಂದ ಇರಿದು ಬಳಿಕ ತಾನೂ ಇರಿದುಕೊಂಡಿರುವ ಘಟನೆ ದೆಹಲಿಯ ಸಂಗಮ್ ವಿಹಾರ್‍ನಲ್ಲಿ ಶುಕ್ರವಾರದಂದು ನಡೆದಿದೆ.

    ಜಿತೇಂದರ್ ಹಣಕಾಸಿನ ಸಮಸ್ಯೆಯಿಂದಾಗಿ ಈ ಕೃತ್ಯವೆಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತ್ನಿ ಹಾಗೂ ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಬಳಿಕ ತಾನು ಇರಿದುಕೊಂಡಿದ್ದಾನೆ. ತೀವ್ರವಾದ ಗಾಯಗಳಿಂದ ಜಿತೇಂದರ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.

    ಅದೇ ಆಸ್ಪತ್ರೆಯಲ್ಲಿ ಜಿತೇಂದರ್‍ನ ಪತ್ನಿ ಹಾಗೂ ಮಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.