Wednesday, 20th November 2019

7 months ago

ನಾವೇ ದುಡಿಬೇಕು, ನಾವೇನು ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ: ಯಶ್

ಮಂಡ್ಯ: ನಾವೇ ದುಡಿಬೇಕು, ನಾವೇನು ಅಪ್ಪ ಮತ್ತು ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ ಎಂದು ರಾಕಿಂಗ್ ಸ್ಟಾರ್ ಯಶ್ ಟಾಂಗ್ ನೀಡಿದ್ದಾರೆ. ಮಂಡ್ಯದ ಯರಗನಹಳ್ಳಿಗೆ ಆಗಮಿಸಿದ ಯಶ್ ಅವರಿಗೆ ಗ್ರಾಮದ ಮಹಿಳೆಯೊಬ್ಬರು ನಿಖಿಲ್ ಹೇಳಿಕೆ ಬಗ್ಗೆ ಕೇಳಿದ್ದಾರೆ. ಈ ವೇಳೆ ಯಶ್, “ನಾವು ಬಡವರು. ನಮಗೆ ಯೋಗ್ಯತೆ ಇರಲ್ಲ. ದುಡಿದು ಸಹಾಯ ಮಾಡಿಕೊಳ್ಳಬೇಕು. ಮಾಡೋಣ ಬಿಡಿ. ನಾವು ನಮ್ಮ ಅಪ್ಪ ಹಾಗೂ ತಾತನ ಆಸ್ತಿಯಿಲ್ಲ ಬದುಕಿಲ್ಲ. ಯೋಗ್ಯತೆ ಬೆಳೆಸಿಕೊಳ್ಳೋಣ ಬಿಡಿ” ಎಂದು ಟಾಂಗ್ ನೀಡಿದ್ದಾರೆ. ನಿಖಿಲ್ ಹೇಳಿದ್ದೇನು? […]

8 months ago

ವೈಯಕ್ತಿಕವಾಗಿ ಟೀಕೆ ಮಾಡ್ತಿಲ್ಲ, ನಮ್ಮ ಕುಟುಂಬದ ಬಗ್ಗೆ ಮಾತಾಡಿದ್ರೆ ನಾವೂ ಉತ್ತರ ಕೊಡ್ತೀವಿ: ನಿಖಿಲ್‍ಗೆ ಅಭಿ ತಿರುಗೇಟು

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಅವರ ಮಗ, ನಟ ಅಭಿಷೇಕ್ ಅಂಬರೀಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವೈಯಕ್ತಿಕವಾಗಿ ನಾವು ಟೀಕೆ ಮಾಡುತ್ತಿಲ್ಲ. ನಮ್ಮ ಕುಟುಂಬದ ಬಗ್ಗೆ ಅವ್ರು ಮಾತಾಡಿದ್ರೆ ನಾವು ಉತ್ತರ ಕೊಡ್ತೀವಿ ಎಂದು ನಿಖಿಲ್‍ಗೆ ತಿರುಗೇಟು ನೀಡಿದರು. ಮದ್ದೂರಿನ ವೈದ್ಯನಾಥಪುರದಲ್ಲಿ ಪಬ್ಲಿಕ್ ಟಿವಿ...

ಸಂಬಂಧ ಇಲ್ಲದೇ ಇರೋ ವಿಷಯದ ಬಗ್ಗೆ ನಾನು ಮಾತನಾಡಲ್ಲ: ಪ್ರೀತಮ್ ಗೌಡ

9 months ago

ಬೆಂಗಳೂರು: ಆಪರೇಷನ್ ಕಮಲದ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿಕೆಟ್ ಉರುಳುತ್ತದೆ ಎನ್ನುವ ಹೇಳಿಕೆಗೆ ಬಿಜೆಪಿಯ ಹಾಸನ ಶಾಸಕ ಪ್ರೀತಮ್‍ ಗೌಡ ನಾನು ಏನು ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರೀತಮ್ ಗೌಡ ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ,...

ನಟಿಯರ ಬಗ್ಗೆ ಗಾಯಕ ಎಸ್‍ಪಿಬಿ ಶಾಕಿಂಗ್ ಹೇಳಿಕೆ

10 months ago

ಹೈದಾರಾಬಾದ್: ಬಹುಭಾಷಾ ಗಾಯಕ, ನಟ ಎಸ್‍ಪಿ ಬಾಲಸುಬ್ರಮಣ್ಯಂ ಅವರು ಕಾರ್ಯಕ್ರಮವೊಂದರಲ್ಲಿ ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಎಸ್‍ಪಿಬಿ ಅವರು ನಟಿಯರು ಧರಿಸುವ ಉಡುಪಿನ ಬಗ್ಗೆ ಪ್ರಶ್ನಿಸಿದ್ದಾರೆ. ನಟಿಯರು ತಾವು ಧರಿಸುವ ಉಡುಪಿನಿಂದ ಅವರಿಗೆ ಕೆಲಸ...

ಹಾರ್ದಿಕ್ ಪಾಂಡ್ಯ ಹೇಳಿಕೆಗೆ ಟಾಂಗ್ ಕೊಟ್ಟ ರಾಖಿ ಸಾವಂತ್

10 months ago

ಮುಂಬೈ: ಭಾರತ ಕ್ರಿಕೆಟ್ ತಂಡದ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಗೆ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಟಾಂಗ್ ನೀಡಿದ್ದಾರೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾರತ ತಂಡದ ಕ್ರಿಕೆಟ್ ಆಟಗಾರರಾದ...

ರಾಮ ಆಯ್ತು, ಈಗ ಸೀತೆ ಸರದಿ – ದನದ ಮಾಂಸ ತಿನ್ತಿದ್ದಳು: ಚಿಂತಕಿ ಕಲೈಸೆಲ್ವಿ

10 months ago

ಮೈಸೂರು: ರಾಮಾಯಣದ ರಾಮ ಆಯ್ತು ಇದೀಗ ಸೀತೆಯ ಸರದಿ. ರಾಮ ಮದ್ಯವ್ಯಸನಿ ಎಂದು ವಿಚಾರವಾದಿ ಕೆ.ಎಸ್. ಭಗವಾನ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿದ್ದಾಳೆ ಎಂದು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪೆರಿಯಾರ್...

ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ರವಿಶಾಸ್ತ್ರಿ

11 months ago

ಸಿಡ್ನಿ: ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಪಡೆದು ದಾಖಲೆ ನಿರ್ಮಿಸಿದ ಕೆಲವೇ ಕ್ಷಣಗಳಲ್ಲಿ ತಂಡದ ಕೋಚ್ ರವಿಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಶಾಸ್ತ್ರಿ,...

ಆರೋಗ್ಯ ಸಚಿವರನ್ನು ಮೊದ್ಲು ನಿಮಾನ್ಸ್‌ಗೆ ಸೇರಿಸ್ಬೇಕು: ವಾಟಾಳ್ ನಾಗರಾಜ್

11 months ago

ಮೈಸೂರು: ಆರೋಗ್ಯ ಸಚಿವರಾದ ಶಿವಾನಂದ ಪಾಟೀಲರ ಆರೋಗ್ಯವೇ ಸರಿಯಿಲ್ಲ. ಅವರಿಗೆ ತಲೆ ಕೆಟ್ಟು ಅರೆ ಹುಚ್ಚರಾಗಿರಬೇಕು. ಹೀಗಾಗಿ ಮೊದಲು ಅವರನ್ನೇ ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದ್ದಾರೆ. ಸುಳ್ವಾಡಿ ಗ್ರಾಮಕ್ಕೆ ಬಂದು ನಾನು ಏನು...