Saturday, 20th July 2019

Recent News

2 years ago

ಸಂತೆಗೆ ಬಂದಿದ್ದ ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆ

ಯಾದಗಿರಿ: ಏಳು ತಿಂಗಳ ಗರ್ಭಿಣಿಗೆ ನಡುರಸ್ತೆಯಲ್ಲಿ ಹೆರಿಗೆಯಾಗಿರುವ ಘಟನೆ ಜಿಲ್ಲೆಯ ಕಕ್ಕೇರಾ ಪಟ್ಟಣದ ಹೊರ ಭಾಗದಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಬೆಂಚಿಗಡ್ಡಿ ಗ್ರಾಮದಿಂದ ಕಕ್ಕೇರಾದ ಸಂತೆಗೆ ಬಂದಿದ್ದ ಮರಿಯಮ್ಮ ವಾಪಸ್ ತೆರಳುವಾಗ ನಡುರಸ್ತೆಯಲ್ಲಿ ಅವಳಿ ಮಕ್ಕಳಗೆ ಜನ್ಮ ನೀಡಿದ್ದಾರೆ. ಎರಡು ಮಕ್ಕಳಲ್ಲಿ ಒಂದು ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮರಿಯಮ್ಮ ಅವರ ನೋವು ನೋಡದೆ ಅಲ್ಲಿಯ ಮಹಿಳೆಯರು ಟಂಟಂನಲ್ಲಿ ಹೆರಿಗೆಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಂದು ಹೆಣ್ಣು ಮಗು ಹಾಗೂ […]

2 years ago

ಬಸ್ ಸ್ಟ್ಯಾಂಡ್ ಟಾಯ್ಲೆಟ್‍ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ರು!

ಬಾಗಲಕೋಟೆ: ಶೌಚಕ್ಕೆಂದು ತೆರಳಿ ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಗಿನ ಜಾವ ಹುನಗುಂದ ತಾಲೂಕಿನ ಇಳಕಲ್ ಬಸ್‍ನಿಲ್ದಾಣದಲ್ಲಿ ನಡೆದಿದೆ. ನಿರ್ಮಲಾ ಹಡಪದ ಎಂಬವರೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ನಿರ್ಮಲಾ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಣಿ ಗ್ರಾಮದದವರು. ಪತಿ ಸಿದ್ದೇಶ ಜೊತೆ ದುಡಿಯಲು ಗೋವಾಕ್ಕೆ ತೆರಳಿದ್ದ ನಿರ್ಮಲಾ ಈ...

35 ಸಾವಿರ ಅಡಿ ಎತ್ತರದದಲ್ಲಿ ಮಗುವಿಗೆ ಜನ್ಮ ನೀಡಿದ್ಳು ತಾಯಿ!

2 years ago

ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೊಬ್ಬರು ಜೆಟ್ ಏರ್‍ವೇಸ್ ವಿಮಾನದಲ್ಲಿ ಮಾರ್ಗ ಮಧ್ಯ ಅನಿರೀಕ್ಷಿತವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೌದು. ಭಾನುವಾರ ಬೆಳಗ್ಗೆ 2.55ಕ್ಕೆ ಜೆಟ್ ಏರ್‍ವೇಸ್ 9 ಡಬ್ಲ್ಯು 569 ವಿಮಾನ ದಮ್ಮಾಮ್‍ನಿಂದ ಕೊಚ್ಚಿಗೆ ಆಗಮಿಸುತಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ...

ಹಾಸಿಗೆಗಳು ಖಾಲಿ ಇಲ್ಲ, ರೋಗಿಗಳು ಆಸ್ಪತ್ರೆಗೆ ಬರಬೇಡಿ: ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೋರ್ಡ್

2 years ago

ಚಿತ್ರದುರ್ಗ: ಹಾಸಿಗೆಗಳು ಖಾಲಿ ಇರುವುದಿಲ್ಲ. ಹೀಗಾಗಿ ಏನೇ ಆದ್ರೂ ನಮ್ಮ ಆಸ್ಪತ್ರೆಗೆ ಬರಲೇಬೇಡಿ. ಬೇರೆ ಎಲ್ಲಾದ್ರೂ ಕರ್ಕೊಂಡು ಹೋಗಿ ಅನ್ನೋ ಮುನ್ನೆಚ್ಚರಿಕಾ ಸಂದೇಶವಿರೋ ಬೋರ್ಡ್ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹಾಕಲಾಗಿದೆ. ನೂರು ಹಾಸಿಗೆಗಳಿರುವ ಈ ಆಸ್ಪತ್ರೆಗೆ ದಿನನಿತ್ಯ 20ಕ್ಕೂ ಅಧಿಕ ಗರ್ಭಿಣಿಯರು ಬರ್ತಾರೆ....

ಕೋಮಾದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳಾ ಪೊಲೀಸ್!

2 years ago

ಬ್ಯೂನಸ್ ಐರಿಸ್: ಮಹಿಳಾ ಪೊಲೀಸರೊಬ್ಬರು ಕೋಮಾ ಸ್ಥಿತಿಯಲ್ಲಿವಾಗಲೇ ಮಗುವಿಗೆ ಜನ್ಮ ನೀಡಿರೋ ಅಪರೂಪದ ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ. 2016ರಲ್ಲಿ ಕಾರು ಅಫಘಾತದಿಂದ 34 ವರ್ಷದ ಮಹಿಳೆ ಎಮಿಲಿಯಾ ಬನ್ನಾನ್ ಕೋಮಾಗೆ ಜಾರಿದ್ದರು. ಕೋಮಾ ಸ್ಥಿತಿಯಲ್ಲೇ ಅವರು ಮಗುವಿಗೆ ಜನ್ಮ ನೀಡಿದ್ದು, ಇದೀಗ...

ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ : ತುಂಬು ಗರ್ಭಿಣಿಯನ್ನ ನಡುರಾತ್ರಿ ಹೊರಗೆ ಕಳಿಸಿದ ಸಿಬ್ಬಂದಿ

2 years ago

ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅನ್ನೋ ಕಾರಣ ಹೇಳಿ ಮಧ್ಯರಾತ್ರಿ ವೇಳೆ ತುಂಬು ಗರ್ಭಿಣಿಯನ್ನ ಆಸ್ಪತ್ರೆಯಿಂದ ಹೊರಗೆ ಕಳುಹಿಸಿರುವ ಅಮಾನವೀಯ ಘಟನೆ ನಡೆದಿದೆ. ಹೆರಿಗೆಗಾಗಿ ಯಾದಗಿರಿಯ ಮುಂಡರಗಿಯಿಂದ ಬಂದ ಒಂಭತ್ತು ತಿಂಗಳ ಗರ್ಭಿಣಿ ಮಹಾದೇವಮ್ಮ ಎರಡು ದಿನಗಳಿಂದ ರಿಮ್ಸ್...

ನಡುರಸ್ತೆಯಲ್ಲೇ ಮಗುವಿಗೆ ಜನ್ಮ ಕೊಟ್ಟ ತಾಯಿ- ಹೆರಿಗೆ ಮಾಡಿಸಿದ ವೃದ್ಧ ಭಿಕ್ಷುಕಿ

2 years ago

ರಾಯಚೂರು: ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ಮಹಿಳೆ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಈ ಸಮಯದಲ್ಲಿ ರಸ್ತೆಯ ಬದಿ ಮಲಗಿದ್ದ ವೃದ್ಧ ಭಿಕ್ಷುಕಿ ಹೆರಿಗೆ ಮಾಡಿಸಿದ್ದಾರೆ. ಯಲ್ಲಮ್ಮ ಎಂಬವರು ರಸ್ತೆಯಲ್ಲಿ ಮಗುವಿಗೆ ಜನ್ಮನೀಡಿದ ಮಹಿಳೆ. ಯಲ್ಲಮ್ಮ...