1 year ago

ಓದಿಲ್ಲ, ಸಂಗೀತ ತರಬೇತಿ ಪಡೆದಿಲ್ಲ, ಕುರಿ ಮೇಯಿಸುತ್ತಾ ಸರಿಗಮಪ ವೇದಿಕೆಯೇರಿದ ಹನುಮಂತನ ಕಥೆ

ಹಾವೇರಿ: ಯಾವುದೇ ಸಂಗೀತ ತರಬೇತಿಯನ್ನು ಪಡೆಯದೆ, ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಕಾರ್ಯಕ್ರಮಕ್ಕೆ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಆಯ್ಕೆಯಾಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇಂದು ಹಾಡು ಹೇಳುವ ಮೂಲಕ ಹನುಮಂತ ಪ್ರಸಿದ್ಧಿಯಾಗಿದ್ದಾರೆ. ಬಾಲ್ಯದಿಂದಲೂ ಹನುಮಂತ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಓದಿದ್ದು ಕೇವಲ ಐದನೇ ತರಗತಿ. ಸಂಗೀತ ಕಲಿಯಲು ಯಾವುದೇ ಸಂಗೀತ ಶಾಲೆಗೂ ಹೋಗಿಲ್ಲ. ಕುರಿಗಳನ್ನ ಮೇಯಿಸುತ್ತಾ ಮೊಬೈಲಿನಲ್ಲಿ ಹಾಡು ಕೇಳುತ್ತಾ ಇಂಪಾಗಿ ಹಾಡುಗಳನ್ನ ಹಾಡುವುದನ್ನು […]

1 year ago

ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೂರ್ತಿ ಪತ್ತೆ- ಹನುಮಂತನನ್ನು ನೋಡಲು ಮುಗಿಬಿದ್ದ ಜನತೆ

ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯ ದೇವಸ್ಥಾನದ ಬಳಿ ಹನುಮಂತನ ವಿಗ್ರಹವೊಂದು ಪತ್ತೆಯಾಗಿದ್ದು, ಇದೀಗ ಆ ಮೂರ್ತಿಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ರಾಜಕಾಲುವೆ ಸ್ವಚ್ಛತೆಯ ವೇಳೆ ಈ ಮೂರ್ತಿ ಪತ್ತೆಯಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಗ್ರಹ ಕಾಣಿಸಿಕೊಂಡಿದ್ದು, ಕೂಡಲೇ ರಾಜಕಾಲುವೆ ಸ್ವಚ್ಛತೆ ಸಿಬ್ಬಂದಿ ಅದನ್ನು ರಸ್ತೆಬದಿಯಿಟ್ಟಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳದಲ್ಲಿ...