Monday, 26th August 2019

Recent News

3 weeks ago

‘ಅನ್ಯ ಜಾತಿ ಹುಡುಗನನ್ನೇ ಮದ್ವೆ ಆಗ್ತೀನಿ’ – ಹಠ ಹಿಡಿದ ಮಗಳನ್ನು ಹತ್ಯೆಗೈದ ತಂದೆ

ಚಂಡೀಗಢ: ತಾನು ಆಯ್ಕೆ ಮಾಡಿದ ಹುಡುಗನನ್ನು ಬಿಟ್ಟು, ಪ್ರೀತಿಸಿದ್ದ ಅಂತರ್ಜಾತಿಯವನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹರಿಯಾಣದ ಸಿಂಘು ಬಾರ್ಡರ್ ನ ಗ್ರಾಮವೊಂದರಲ್ಲಿ ನಡೆದಿದೆ. ಯುವತಿಯ ಕುಟುಂಬದವರಿಗೆ ಆ ಪ್ರದೇಶದ ಯುವಕರನ್ನು ಮದುವೆಯಾಗುವದು ಇಷ್ಟವಿರಲಿಲ್ಲ. ಎಷ್ಟು ಹೇಳಿದರೂ ಮಗಳು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಹೀಗಾಗಿ ಸಿಟ್ಟಿಗೆದ್ದ ತಂದೆ ಮಗಳನ್ನೇ ಕೊಲೆ ಮಾಡಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದ ಪ್ರಕಾರ, ಕಳೆದ ವಾರವಷ್ಟೇ ಆಕೆಗೆ ತಕ್ಕ ಹುಡುಗನನ್ನು ಪೋಷಕರು ನಿಶ್ಚಯಿಸಿದ್ದರು. […]

3 weeks ago

ಗುಂಡಿನ ಚಕಮಕಿ – 7 ಮಾವೋವಾದಿಗಳ ಹತ್ಯೆ

ರಾಯ್ಪುರ್: ಛತ್ತೀಸ್‍ಗಢ ರಾಜ್ಯದ ರಜ್ನಂದ್‍ಗಾಂವ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಏಳು ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಸಿತ್ಗೋಟ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ಚಕಮಕಿ 7 ಮಾವೋವಾದಿಗಳನ್ನು ಹೊಡೆದುರುಳಿಸುವಲ್ಲಿ ಭದ್ರತಾ ಸಿಬ್ಬಂದಿ ಯಶಶ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ...

ಬುಡಕಟ್ಟು ಬಾಲಕಿಯೊಂದಿಗೆ ಪ್ರೇಮ – ಮುಸ್ಲಿಂ ಬಾಲಕನ ಹತ್ಯೆ

4 weeks ago

ಗಾಂಧಿನಗರ: ಬುಡಕಟ್ಟು ಬಾಲಕಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ 17 ವರ್ಷದ ಮುಸ್ಲಿಂ ಅಪ್ರಾಪ್ತನನ್ನು ಕೆಲ ಯುವಕರು ಸೇರಿ ಹೊಡೆದು ಹತ್ಯೆ ಮಾಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಫೈಯಾಜ್ ಕೊಲೆಯಾದ ಬಾಲಕ. ಬೋರಿದ್ರ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯನ್ನು ಪ್ರೀತಿಸಿದ್ದ ಈ ಕಾರಣಕ್ಕೆ...

ರಾಜೀವ್ ಗಾಂಧಿ ಹತ್ಯೆಗೈದ ನಳಿನಿಗೆ 30 ದಿನ ಪೆರೋಲ್ – ಜೈಲಿನಿಂದ ಬಿಡುಗಡೆ

1 month ago

ಚೆನ್ನೈ: ಮಗಳ ಮದುವೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತೈಗೈದ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‍ಗೆ 30 ದಿನಗಳ ಪೆರೋಲ್ ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾಳೆ. ಕಳೆದ 28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ನಳಿನಿ...

126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

1 month ago

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ರಕ್ಷಣಾ ಸಿಬ್ಬಂದಿ ಒಟ್ಟು 126 ಉಗ್ರರನ್ನು ಹತ್ಯೆಗೈದಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಕಳೆದ ಮೂರೂವರೆ ವರ್ಷಗಳಲ್ಲಿ 400 ಉಗ್ರರು ಜಮ್ಮು ಕಾಶ್ಮೀರದಲ್ಲಿ ಒಳನುಸುಳಿದ್ದು ಅದರಲ್ಲಿ 126...

ಅರಣ್ಯಾಧಿಕಾರಿಗಳ ಎದುರೇ ಕಲ್ಲು, ದೊಣ್ಣೆಯಿಂದ ಹೊಡೆದು ಚಿರತೆಯ ಹತ್ಯೆ

2 months ago

ಚಿತ್ರದುರ್ಗ: ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದನ್ನು ಸಾರ್ವಜನಿಕರು ಕಲ್ಲು ಹಾಗೂ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಹಾರ ಅರಸಿ ನಾಡಿನತ್ತ ಬಂದಿದ್ದ ಚಿರತೆಯೊಂದು ಇಂದು ಬೆಳಗ್ಗೆ ಕುರುಬರಹಳ್ಳಿಯ ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು....

ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ: ಇಬ್ಬರು ಅರೆಸ್ಟ್

2 months ago

ಚಂಡೀಗಢ: ಹರ್ಯಾಣ ಕಾಂಗ್ರೆಸ್ ಮುಖಂಡ ವಿಕಾಸ್ ಚೌಧರಿ ಅವರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಓರ್ವ ಮಹಿಳೆ ಹಾಗೂ ಪುರುಷನನ್ನು ಹರ್ಯಾಣ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ಕುರಿತು ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಗುಂಡಿನ ದಾಳಿ...

ನಾನೇ ತಲೆಗೆ ಎರಡು ಸುತ್ತು ಗುಂಡು ಹಾರಿಸಿದೆ: ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ತಪ್ಪೊಪ್ಪಿಗೆ

2 months ago

ನವದೆಹಲಿ: ವಿಚಾರವಾದಿ ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ಶರದ್ ಕಲಾಸ್ಕರ್ ತಪ್ಪೊಪ್ಪಿಕೊಂಡಿದ್ದು, ದಾಬೋಲ್ಕರ್ ಅವರ ತಲೆಗೆ ನಾನೇ ಎರಡು ಸುತ್ತು ಗುಂಡು ಹಾರಿಸಿದೆ ಎಂದು ಹೇಳಿದ್ದಾನೆ. ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ನಡೆದು 6 ವರ್ಷಗಳ ನಂತರ ಇದೀಗ ಆರೋಪಿ ಶರದ್...