Tuesday, 22nd January 2019

10 hours ago

16 ಲಕ್ಷ ಸುಪಾರಿ ಕೊಟ್ಟು ಪತ್ನಿಯಿಂದ ಪತಿ ಕೊಲೆ.!

ಚಂಡೀಗಢ: ಮಹಿಳೆಯೊಬ್ಬಳು ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಜೋಗೇಂದ್ರ ಸಿಂಗ್ (37) ಮೃತ ವ್ಯಕ್ತಿ. ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಸ್ವೀಟಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಭಾನುವಾರ ಸಿಂಗ್ ಮೃತದೇಹ ಗುರುಗ್ರಾಮದ ಬಾಜ್ಗೆರಾದ ಒಂದು ಕಣಿವೆಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ಸಿಂಗ್ ನನ್ನು ಹಗ್ಗದಿಂದ ಕಟ್ಟಲಾಗಿದ್ದು, ಗೋಣಿ ಚೀಲದಲ್ಲಿ ತುಂಬಿರುವುದು ಹಾಗೂ […]

3 days ago

ತಿಂಡಿ ಖರೀದಿಗಾಗಿ ಸಾಮಾನ್ಯರಂತೆ ಕ್ಯೂನಲ್ಲಿ ನಿಂತ ಬಿಲ್ ಗೇಟ್ಸ್!

ವಾಷಿಂಗ್ಟನ್: ಕೆಲವರು ಎಷ್ಟೇ ಶ್ರೀಮಂತರಾಗಿದ್ದರೂ, ಸಾಮಾನ್ಯರಂತೆಯೇ ಬದುಕಿರುತ್ತಾರೆ. ಮತ್ತೆ ಕೆಲವರು ಏನೂ ಇಲ್ಲದೇ ಇದ್ದರೂ ಎಲ್ಲದರಲ್ಲಿಯೂ ಶ್ರೀಮಂತಿಕೆ ಪ್ರದರ್ಶಿಸುವರನ್ನು ಸಮಾಜದಲ್ಲಿ ಕಾಣಬಹುದು. ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಕಂಪನಿಯ ಸ್ಥಾಪಕರಾಗಿರುವ ಬಿಲ್‍ಗೇಟ್ಸ್ ಓರ್ವ ಸಾಮಾನ್ಯ ವ್ಯಕ್ತಿಯಂತೆ ತಿಂಡಿ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ವಿಶ್ವದಾದ್ಯಂತ ಮಿಂಚಿನಂತೆ ಹರಿದಾಡುತ್ತಿದೆ. ಮೈಕ್ರೋಸಾಫ್ಟ್ ಕಂಪನಿಯ ಮಾಜಿ ಉದ್ಯೋಗಿ...

200 ರೂ. ನೀಡದ್ದಕ್ಕೆ ಅಪ್ರಾಪ್ತ ಮಗನಿಂದ ತಂದೆ ಕೊಲೆ

1 week ago

ನವದೆಹಲಿ: ಅಪ್ರಾಪ್ತ ಮಗನೊಬ್ಬ ಹಣ ಕೊಡಲಿಲ್ಲವೆಂದು ತನ್ನ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರಾಷ್ಟ್ರ ರಾಜಧಾನಿಯ ನ್ಯೂ ಅಶೋಕ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 17 ವರ್ಷದ ಬಾಲಕ ಕೇವಲ 200 ರೂಪಾಯಿಗಾಗಿ ತಂದೆಯನ್ನೇ ಕೊಲೆ...

ಸಂಕ್ರಾಂತಿ ಹಬ್ಬಕ್ಕೆ ಹಣ ಕೊಡದ್ದಕ್ಕೆ ಹೆಣವಾದ್ಲು ಪತ್ನಿ!

1 week ago

ಚೆನ್ನೈ: ಸಂಕ್ರಾಂತಿ ಹಬ್ಬಕ್ಕೆ ಬಂದ ಪತ್ನಿ ಹಣ ಕೊಡಲಿಲ್ಲ ಅಂತ ಆಕೆ ಮಲಗಿದ್ದ ವೇಳೆ ಕತ್ತು ಕೊಯ್ದು ಪತಿಯೇ ಕೊಲೆಗೈದ ಘಟನೆ ಶನಿವಾರದಂದು ತಮಿಳುನಾಡಿನ ಒಸಿಲಿಂಪಟ್ಟಿ ಗ್ರಾಮದ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ರಸಾತಿ(65) ಕೊಲೆಯಾದ ದುರ್ದೈವಿ. ರಾಮರ್(70) ಕೊಲೆ ಮಾಡಿರುವ ಪಾಪಿ...

ಸಂಕ್ರಾಂತಿ ಹಬ್ಬದಂದು ರಾಯಚೂರು ರೈತರಿಗೆ ಸಿಹಿ ಸುದ್ದಿ

1 week ago

ರಾಯಚೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾ ಜಾರಿಯಾಗುತ್ತೋ ಇಲ್ಲವೋ ಅನ್ನೋ ಅನುಮಾನದಲ್ಲಿದ್ದ ರೈತರಿಗೆ ಈಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೊದಲ ಹಂತವಾಗಿ ರಾಜ್ಯದ 57,994 ರೈತರ ವಾಣಿಜ್ಯ ಬ್ಯಾಂಕ್ ಖಾತೆಗೆ 258 ಕೋಟಿ 93 ರೂ. ಲಕ್ಷ ರೂಪಾಯಿ ಬಿಡುಗಡೆ...

ಬ್ರಾಹ್ಮಣ ವಧು-ವರರ ಸಮಾವೇಶಕ್ಕೆ ಬಾರದ ವಧುಗಳು – ಆಯೋಜಕರ ಜೊತೆ ಜಟಾಪಟಿ

1 week ago

ಶಿವಮೊಗ್ಗ: ವಧುವರರ ಸಮಾವೇಶಕ್ಕೆ ವಧುಗಳು ಆಗಮಿಸದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವರನ ಕಡೆಯವರು ಆಯೋಜಕರ ಜೊತೆ ಜಟಾಪಟಿ ಮಾಡಿಕೊಂಡ ಘಟನೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಸಪ್ತಪದಿ ಬ್ರಾಹ್ಮಣ ವಧು-ವರರ ವಿವಾಹ ವೇದಿಕೆ ಭಾನುವಾರ ರಾಜ್ಯ ಮಟ್ಟದ ವಧು-ವರರ ಪ್ರಥಮ ಮುಖಾಮುಖಿ...

ಇಸ್ಪೀಟ್ ಆಡೋರಿಗೆ ಕೊಡ್ತಾರೆ ಮೂರು ಹೊತ್ತು ಊಟ ಜೊತೆ 1 ಸಾವಿರ ಟಿಪ್ಸ್!

1 week ago

ಕೊಪ್ಪಳ: ಧಾರ್ಮಿಕ ಸ್ಥಳಗಳಲ್ಲಿ ಉಚಿತವಾಗಿ ಮೂರು ಹೊತ್ತು ಆಹಾರ ಸಿಗುವುದನ್ನು ನೀವು ಕೇಳಿರಬಹುದು. ಆದರೆ ನಗರದಲ್ಲಿ ಇಸ್ಪೀಟ್ ಅಡ್ಡಕ್ಕೆ ಬರುವವರಿಗೆ ಮಾತ್ರ ಮೂರು ಊಟದ ಜೊತೆಗೆ ಒಂದು ಸಾವಿರ ರೂ. ಆಡುವುದಕ್ಕೆ ಟಿಪ್ಸ್ ಕೊಡ್ತಾರೆ. ಹೌದು, ಕೊಪ್ಪಳದ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿರುವ...

ತಿರುಪತಿ ಚಿನ್ನ ಕೊಡಸ್ತೀನಿ ಅಂತ 50 ಲಕ್ಷ ರೂ. ನಾಮ ಹಾಕ್ದ..!

2 weeks ago

ಧಾರವಾಡ: ವಂಚಕನೊಬ್ಬ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ಕೊಡುವುದಾಗಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬನನ್ನು ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದಿಂದ ಗಡಿಪಾರಾಗಿರುವ ಚೀಟರ್ ಮೋನ್ಯಾ ಅಲಿಯಾಸ್ ಮೋಹನ್ ವಾಳ್ವೇಕರ್ ಎಂಬ ವ್ಯಕ್ತಿ ಮೋಸ ಮಾಡಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ...