Saturday, 15th June 2019

1 month ago

ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ – ಭವಾನಿ ರೇವಣ್ಣ

ಹಾಸನ: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮಕ್ಕಳ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದಕ್ಕೆ ತಕ್ಕ ಫಲಿತಾಂಶವನ್ನು ಭಗವಂತ ನೀಡಿದ್ದಾನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಮತ್ತು ಜಿಲ್ಲೆಯ ಜಿ.ಪಂ. ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಯಾರು ಎಷ್ಟು ಸಭೆ ಮಾಡಿದ್ದಾರೆ ಎನ್ನುವುದು ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತು. ಎಸ್‍ಎಸ್‍ಎಲ್‍ಸಿ […]

1 month ago

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

ಬೆಂಗಳೂರು: ಶಿಕ್ಷಣ ಇಲಾಖೆ ಸ್ಕೂಲ್ ಬ್ಯಾಗ್‍ನ ತೂಕ ಇಳಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ. ಕೆಜಿ ಗಟ್ಟಲೆ ಸ್ಕೂಲ್ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳ ದೈಹಿಕ  ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 1-10 ನೇ ತರಗತಿವರಗಿನ ಮಕ್ಕಳ ಬ್ಯಾಗ್ ತೂಕಕ್ಕೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಬ್ಯಾಗ್ ತೂಕವು ಮಗುವಿನ ದೇಹದ...

ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

3 months ago

ಜೈಪುರ: ಪಾಕ್ ಕಪಿಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ವೇಳೆ ವೀರಯೋಧನ ಕಥೆಯನ್ನು ಪಾಠವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದು ರಾಜಸ್ತಾನದ ಶಿಕ್ಷಣ ಮಂತ್ರಿಗಳು ಸರ್ಕಾರಕ್ಕೆ...

ಹಾಜರಿ ಕೂಗಿದ್ರೆ ವಿದ್ಯಾರ್ಥಿಗಳು ‘ಎಸ್ ಸರ್’ ಬದಲು ‘ಜೈ ಹಿಂದ್’ ಹೇಳ್ಬೇಕು- ಶಿಕ್ಷಣ ಇಲಾಖೆ ಆದೇಶ

6 months ago

ಗಾಂಧಿನಗರ: ಶಾಲೆಯಲ್ಲಿ ಶಿಕ್ಷಕರು ಹಾಜರಿ ಕೂಗಿದರೆ ವಿದ್ಯಾರ್ಥಿಗಳು ಎಸ್ ಸರ್ ಎನ್ನುವ ಬದಲಾಗಿ ಜೈ ಹಿಂದ್/ ಜೈ ಭಾರತ್ ಅಂತ ಹೇಳಬೇಕು ಎಂದು ಗುಜರಾತ್ ಶಿಕ್ಷಣ ಇಲಾಖೆ ಆದೇಶ ಜಾರಿ ಮಾಡಿದೆ. ಈ ಹಿಂದೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರ್ಕಾರವು ಇಂತಹ...

ಶಿಕ್ಷಣ ಇಲಾಖೆಯಲ್ಲೂ ಸೂಪರ್ ಸಿಎಂ ಕಮಾಲ್

7 months ago

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಾಗಿ ಅಧಿಕಾರಕ್ಕೆ ಬಂದಾಯ್ತು. ಜೆಡಿಎಸ್‍ನಿಂದ ಕುಮಾರಸ್ವಾಮಿ ಸಿಎಂ ಆಗಿದ್ದೂ ಆಯ್ತು. ಆದರೆ ಮೈತ್ರಿ ಸರ್ಕಾರದ ಆಡಳಿತ ಶುರುವಾಗಿನಿಂದ ಈ ತನಕ ಸಿಎಂಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದು ಸೂಪರ್ ಸಿಎಂ, ಸಚಿವ ಎಚ್.ಡಿ ರೇವಣ್ಣ. ಹೌದು ರಾಜ್ಯ ಸರ್ಕಾರದಲ್ಲಿ ಸಿಎಂ,...

ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ-ಶಿಕ್ಷಣ ಇಲಾಖೆಯಿಂದ ನ್ಯೂ ರೂಲ್ಸ್

9 months ago

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಇನ್ಮುಂದೆ ಖಾಸಗಿ ಶಾಲೆಗಳಂತೆ ಹೈಟೆಕ್ ಸ್ಪರ್ಶ ಸಿಗಲಿದೆ. ಪ್ರೈವೇಟ್ ಶಾಲೆಗಳಂತೆ ಹೊಸ ಹೊಸ ರೂಲ್ಸ್ ತರೋದಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಮೊದಲ ಹೆಜ್ಜೆ ಇರಿಸಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ...

ಕೊಡಗಿನ 61 ಶಾಲೆಗಳಿಗೆ ಹೋಗುವಂತಿಲ್ಲ, 76 ರಿಪೇರಿಯಾಗಬೇಕಿದೆ: ಎನ್.ಮಹೇಶ್

10 months ago

ಮಡಿಕೇರಿ: ಕೊಡಗಿನಲ್ಲಿ 61 ಹೆಚ್ಚಿನ ಶಾಲೆಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 76 ಶಾಲೆಗಳು ರಿಪೇರಿಯಾಗಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ 61...

ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಅಕ್ರಮ ಪುಸ್ತಕ ಮಾರಾಟಜಾಲ ಪತ್ತೆ

10 months ago

ಚಾಮರಾಜನಗರ: ಸರ್ಕಾರಿ ಶಾಲೆಗಳ ಪಠ್ಯಪುಸ್ತಗಳನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಶಿಕ್ಷಣ ಸಚಿವ ಎನ್.ಮಹೇಶ್ ರವರ ತವರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭಾವ ಉಂಟಾಗಿದೆ....