Monday, 18th November 2019

Recent News

3 days ago

ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

– ರಕ್ಷಣೆ ಕೋರಿದ ವಿಡಿಯೋ ವೈರಲ್ – ಭಾರತದ ರಾಯಭಾರಿಯಿಂದ ಮಹಿಳೆಯ ರಕ್ಷಣೆ ದುಬೈ: ಯುಎಇಯ ಶಾರ್ಜಾದಲ್ಲಿ ಪತಿ ಕಿರುಕುಳ ಕೊಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ರಕ್ಷಣೆ ಕೋರಿ ವಿಡಿಯೋ ಟ್ವೀಟ್ ಮಾಡಿದ್ದರು. ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ಬೆಂಗಳೂರು ಮೂಲದ ಜಸ್ಮಿನ್ ಸುಲ್ತಾನಾ ಅವರನ್ನು ಮೊಹಮದ್ ಕಿಝಾರುಲ್ಲಾ ಮದುವೆಯಾಗಿದ್ದನು. ಬಳಿಕ […]

2 weeks ago

ರಸ್ತೆಯಲ್ಲಿ ಅಡ್ಡಗಟ್ಟಿ ಕಾರಿನ ಟಾಪ್ ಮೇಲೆ ಕೂತ ಗಜರಾಜ – ವಿಡಿಯೋ ವೈರಲ್

ಬ್ಯಾಂಕಾಕ್: ಸಾಮಾನ್ಯವಾಗಿ ಕಾರಿನ ಟಾಪ್ ಮೇಲೆ ನಾಯಿ, ಕೋತಿ, ಪಕ್ಷಿಗಳು ಹಾಗೂ ಜನರು ಹತ್ತಿ ಕೂತ ದೃಶ್ಯವನ್ನು ನೋಡಿರಬಹುದು. ಆದರೆ ಥೈಲ್ಯಾಂಡ್‌ನಲ್ಲಿ ದೈತ್ಯ ಆನೆಯೊಂದು ಕಾರಿನ ಟಾಪ್ ಹತ್ತಿ ಕೂತ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಥೈಲ್ಯಾಂಡ್‌ನ ಖಾವೊ ಯೈ ರಾಷ್ಟ್ರೀಯ ಉದ್ಯಾನವದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ...

ಸೋಲಿನಿಂದ ಭಾವನಾತ್ಮಕ ವಿಡಿಯೋ ಹರಿಬಿಟ್ಟ ಸೋನಾಲಿ ಪೋಗಟ್

3 weeks ago

ಚಂಡೀಗಢ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಪೋಗಟ್ ಸೋಲು ಅನುಭವಿಸಿದ್ದಾರೆ. ಈ ಬೇಸರದಲ್ಲೇ ಸೋನಾಲಿ ಭಾವನಾತ್ಮಕ ವಿಡಿಯೋ ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗಿದೆ. ಹರ್ಯಾಣದ ಟಿಕ್‍ಟಾಕ್ ಸ್ಟಾರ್ ಸೋನಾಲಿ ಪೋಗಟ್ ಜನಪ್ರಿಯತೆಯನ್ನು ಲಾಭ...

ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ ಕಾನ್ಸ್‌ಟೇಬಲ್ ರಚಿಸಿ, ಹಾಡಿದ ಸಾಂಗ್

1 month ago

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಹಾಕುತ್ತಾರಲ್ಲ ಎಂದು ಜನರು ಪೊಲೀಸರನ್ನು ಬೈದಾಡಿಕೊಂಡು ತಿರುಗಿರೋದೆ ಹೆಚ್ಚು. ಆದ್ರೆ ಈಗ ಬೆಂಗಳೂರಿನ ಶ್ವಾನದಳದ ಕಾನ್ಸ್‌ಟೇಬಲ್ ಒಬ್ಬರು ಸಂಚಾರಿ ನಿಯಮ ಪಾಲಿಸಿ ಎಂದು ಹಾಡಿರುವ ಹಾಡು ಎಲ್ಲರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು...

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರಿಗೆ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು

1 month ago

ವಿಜಯಪುರ: ಡೋಣಿ ನದಿ ದಾಟುವಾಗ ಡಬಲ್ ಟ್ರಾಲಿ ಸಮೇತ ನದಿಯಲ್ಲಿ ಕೊಚ್ಚಿಹೋದ ಟ್ರ್ಯಾಕ್ಟರ್ ಇಂಜಿನ್ ಅನ್ನು ರೈತರು ಹಗ್ಗ ಕಟ್ಟಿ ಹೊರತೆಗೆದಿದ್ದಾರೆ. ಈ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದಿದೆ. ತಾಳಿಕೋಟೆಯ ರಾಜು ಬೀಳಗಿ ಅವರು ಶುಕ್ರವಾರ...

ನೆಟ್ಟಿಗರ ಮನಗೆದ್ದ ಟೂರ್ ಗೈಡ್ ಡ್ಯಾನ್ಸ್- ವಿಡಿಯೋ ವೈರಲ್

2 months ago

ಚೆನ್ನೈ: ಇತ್ತೀಚೆಗಷ್ಟೇ ಅಂಕಲ್ ಹಾಗೂ ವೈದ್ಯರೊಬ್ಬರು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ತಮಿಳುನಾಡಿನ ಟೂರ್ ಗೈಡ್ ಹಾಕಿರುವ ಸ್ಟೆಪ್ಸ್ ಕೂಡ ಸಖತ್ ವೈರಲ್ ಆಗಿದೆ. ಟೂರ್ ಗೈಡ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು...

ಪ್ರವಾಹದಲ್ಲಿ ದೋಣಿ ಮಗುಚಿ, ನೀರಿಗೆ ಬಿದ್ದ ಬಿಜೆಪಿ ಸಂಸದ- ವಿಡಿಯೋ ವೈರಲ್

2 months ago

ಪಾಟ್ನಾ: ಬಿಹಾರದ ಮಸೌರಿಯಲ್ಲಿ ಪ್ರವಾಹ ಪರಿಸ್ಥಿಯನ್ನು ಪರಿಶೀಲಿಸಲು ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ತರೆಳಿದ್ದರು. ಈ ವೇಳೆ ನೆರೆ ವೀಕ್ಷಣೆ ಮಾಡುತ್ತಿದ್ದಾಗ ಸಂಸದರಿದ್ದ ದೋಣಿ ಮಗುಚಿ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ...

ಬಾಲಕಿ ಹಣೆಗೆ ಮುತ್ತಿಟ್ಟ ಹೆಬ್ಬಾವು- ವಿಡಿಯೋ ವೈರಲ್

2 months ago

ನವದೆಹಲಿ: ಹಳದಿ ಹೆಬ್ಬಾವೊಂದು ಬಾಲಕಿಯ ಹಣೆಗೆ ಮುತ್ತಿಟ್ಟು, ಮುದ್ದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಈ ಹೆಬ್ಬಾವು ಬಾಲಕಿಯನ್ನು ಮುದ್ದಾಡುವ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಹೆಬ್ಬಾವು ಮಾತ್ರವಲ್ಲ, ಯಾವುದೇ ಹಾವನ್ನು ಕಂಡ ತಕ್ಷಣ...