Recent News

2 years ago

ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ 25ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ವೆಂಕಟೇಶ್ ಈಗ ಭಾರತೀಯ ಚಿತ್ರರಂಗದ ಹೆಸರಂತ ನಿರ್ಮಾಪಕರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರವಿತೇಜ, ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಗಳಿಗೆ ಬಂಡವಾಳ ಹೂಡಿದ ಹೆಗ್ಗಳಿಕೆ ರಾಕ್‍ಲೈನ್ ವೆಂಕಟೇಶ್‍ಗೆ ಸಲ್ಲುತ್ತದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ಈಗ ಮಲೆಯಳಂ ನಟ ಮೋಹನ್ ಲಾಲ್ ನಟನೆಯ `ವಿಲನ್’ ನಿರ್ಮಾಪಕರಾಗಿದ್ದು ಚಿತ್ರ ಇದೇ 28ಕ್ಕೆ ಬಿಡುಗಡೆಯಾಗಲಿದೆ. ಒಬ್ಬ […]

2 years ago

ರೊಬೋ-2.0 ಚಿತ್ರದ ಆ್ಯಮಿ ಜಾಕ್ಸನ್ ಫಸ್ಟ್ ಲುಕ್ ಬಿಡುಗಡೆ!

ಮುಂಬೈ: ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆ್ಯಮಿ ಐಟಂ ಸಾಂಗ್ ಕೂಡ ಮಾಡಲಿದ್ದು, 2.0 ಚಿತ್ರದ ಮೊದಲ ಲುಕ್ ಕ್ರಿಷ್-3 ಚಿತ್ರದ ಕಂಗನಾ ನಟಿಸಿದ ಕಾಯಾ ಪಾತ್ರ ನೆನಪಿಸುತ್ತದೆ. ಚಿತ್ರದ ನಿರ್ದೇಶಕ...

ಡಿಸೆಂಬರ್ 12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

2 years ago

ಚೆನ್ನೈ: ಸೂಪರ್‍ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಆಗುವುದು ಪಕ್ಕಾ ಎಂದು ಹಿಂದೂ ಮಕ್ಕಳ ಕಚ್ಚಿ(ಎಚ್‍ಎಂಕೆ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಅರ್ಜುನ್ ಸಂಪತ್ ಹೇಳಿದ್ದಾರೆ. ಸೋಮವಾರ ಬೆಳಗ್ಗೆ ಅರ್ಜುನ್ ಸಂಪತ್ ರಜನಿಕಾಂತ್ ಅವರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು....

ರಜನಿಕಾಂತ್ ಬಿಜೆಪಿಗೆ ಬಂದ್ರೆ ಅವರನ್ನು ನಾವು ಸ್ವಾಗತಿಸುತ್ತೇವೆ: ಅಮಿತ್ ಷಾ

2 years ago

ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಸೇರುವ ಬಗ್ಗೆ ಈಗಾಗಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ `ಉತ್ತಮ ವ್ಯಕ್ತಿಗಳು ಬಿಜೆಪಿಗೆ ಸೇರಲು ಮನಸ್ಸು ಮಾಡಿದರೆ ಅವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆ ಅಂತಾ...

ರಜನಿಯ ಎಂದಿರನ್ 2.0 ಚಿತ್ರಕ್ಕೆ ದಾಖಲೆ ಮೊತ್ತದ ಇನ್ಶುರೆನ್ಸ್- ವಿಮೆಯ ಮೊತ್ತ ಎಷ್ಟು ಗೊತ್ತಾ?

3 years ago

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂದಿರನ್ 2.0 ಚಿತ್ರಕ್ಕೆ 350 ಕೋಟಿ ರೂ. ವಿಮೆ ಮಾಡಿಸಲಾಗಿದ್ದು ಹೊಸ ದಾಖಲೆ ಬರೆದಿದೆ. 2010ರಲ್ಲಿ ಬಿಡುಗಡೆಗೊಂಡಿದ್ದ ಎಂದಿರನ್ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಭಾರೀ ಮೊತ್ತದ ವಿಮೆ ಹೊಂದಿದ ಭಾರತೀಯ ಚಿತ್ರ ಎನಿಸಿಕೊಂಡಿದೆ....

ರಜನಿಕಾಂತ್ ಬಿಜೆಪಿಗೆ ಸೇರುತ್ತಾರಾ? ಹೊಸ ಪಕ್ಷ ಕಟ್ಟುತ್ತಾರಾ?

3 years ago

ಚೆನ್ನೈ: ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವಿನ ರಾಜಕೀಯ ಗುದ್ದಾಟವನ್ನು ಬಿಜೆಪಿ ಎನ್‍ಕ್ಯಾಶ್ ಮಾಡಿಕೊಳ್ಳಲು ಮುಂದಾದಂತೆ ಕಾಣುತ್ತಿದ್ದು, ಸೂಪರ್‍ಸ್ಟಾರ್ ರಜನಿಕಾಂತ್‍ಗೆ ಗಾಳ ಹಾಕಿದೆ. ಪಕ್ಷಕ್ಕೆ ಸೇರ್ಪಡೆಯಾದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನಿಮ್ಮನ್ನು ಬಿಂಬಿಸುತ್ತೇವೆ ಎಂದು ಬಿಜೆಪಿ ನಾಯಕರು ರಜನಿಕಾಂತ್ ಅವರಲ್ಲಿ ಹೇಳಿದ್ದಾರೆ ಎಂದು...