Tuesday, 26th March 2019

Recent News

2 weeks ago

ಮಾನವೀಯತೆ ಮೆರೆದ ಪೊಲೀಸ್ ಇನ್ಸ್‌ಪೆಕ್ಟರ್ – ಶಹಬ್ಬಾಶ್‍ಗಿರಿ ಕೊಟ್ಟ ಡಿಸಿಪಿ ಅಣ್ಣಾಮಲೈ

ಬೆಂಗಳೂರು: ದುಷ್ಕರ್ಮಿಯಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡುವ ಮೂಲಕ ಪೊಲೀಸ್ ಇನ್ಸ್‌ಪೆಕ್ಟರ್ ಮಾನವೀಯತೆಯ ಮೆರೆದಿದ್ದಾರೆ. ಸಿದ್ದಲಿಂಗಯ್ಯ ಗಿರಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದು, ಶಿಕ್ಷಕಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಶಿಕ್ಷಕಿ ತನುಜಾರನ್ನು ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತನುಜಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ವೇಳೆ ಸಿದ್ದಲಿಂಗಯ್ಯ ಗಾಯಾಳು ತನುಜಾರಿಗೆ ರಕ್ತ ಕೊಟ್ಟು ಜೀವ ಉಳಿಸಿದ್ದಾರೆ. ನಡೆದಿದ್ದು ಏನು? ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನುಜಾರಿಗೆ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದನು. ಇದರಿಂದ […]

3 weeks ago

ದಾಸನಪುರ ಕ್ರಿಕೆಟ್ ಲೀಗ್‍ನಲ್ಲಿ ಮಾನವೀಯತೆ ಮೆರೆದ ನಟ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಕುಸಿದು ಬಿದ್ದ ತಮ್ಮ ಅಭಿಮಾನಿಯನ್ನು ಕೈ ಹಿಡಿದು ಎತ್ತಿ ಮಾನವೀಯತೆ ಮೆರೆದಿದ್ದಾರೆ. ನೆಲಮಂಗಲದ ಮಾದವಾರದ ನೈಸ್ ಮೈದಾನದಲ್ಲಿ ನಡೆಯುತ್ತಿರುವ ದಾಸನಪುರ ಕ್ರಿಕೆಟ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಲು ಯಶ್ ಆಗಮಿಸಿದ್ದರು. ಈ ವೇಳೆ ನಟ ಯಶ್ ಅವರನ್ನು ನೋಡಲು ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಅಭಿಮಾನಿಯೊಬ್ಬರು...

ಭಾರತ್ ಬಂದ್- ಪಬ್ಲಿಕ್ ಟಿವಿ ವಾಹನದಲ್ಲಿ ರೋಗಿ ಆಸ್ಪತ್ರೆಗೆ ರವಾನೆ

3 months ago

ಗದಗ: ಎರಡು ದಿನ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಗಿ ಪರದಾಡುತ್ತಿದ್ದು, ಅವರನ್ನು ಪಬ್ಲಿಕ್ ಟಿವಿ ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಜಶೇಖರ್ ಪಾಶ್ರ್ವವಾಯು ರೋಗದಿಂದ ಬಳಲುತ್ತಿದ್ದರು. ಅಲ್ಲದೇ ಕಲಬುರಗಿ ಜಿಲ್ಲೆಯಿಂದ ಬಂದ ಅವರು ಗದಗ ಕೇಂದ್ರ...

ಮಾನವೀಯತೆ ಮೆರೆದ ಜೇವರ್ಗಿ ಶಾಸಕ ಅಜಯ್ ಸಿಂಗ್

3 months ago

ಕಲಬುರಗಿ: ಜಿಲ್ಲೆಯ ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರು ಮಾನವೀಯತೆ ಮೆರೆದಿದ್ದಾರೆ. ಅಪಘತಕ್ಕೀಡಾಗಿ ಗಾಯಗೊಂಡು ಕಾರಿನಲ್ಲಿದ್ದ ವ್ಯಕ್ತಿಯನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಅಜಯ್ ಸಿಂಗ್ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಸ್ವತಃ ಅಜಯ್ ಸಿಂಗ್ ಅವರೇ ತಮ್ಮ ಫೇಸ್ ಬುಕ್...

ಬಸ್ ಪಲ್ಟಿ- ಮಾನವೀಯತೆ ಮೆರೆದ್ರು ಮೃತ ವಿದ್ಯಾರ್ಥಿನಿಯ ಪೋಷಕರು

5 months ago

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲಾ ಬಸ್ ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳ ಅಂಗಾಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದಿಯಾ(16) ಅಪಘಾತದಲ್ಲಿ ಮೃತಪಟ್ಟಿದ್ದ ವಿದ್ಯಾರ್ಥಿನಿ. ದಿಯಾ ತಂದೆ ರಾಜೇಂದ್ರ ಸಿಂಗ್ ಶೇರಾವತ್...

ನಾಯಿಗಳಿಂದ ನವಜಾತ ಶಿಶುವನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳು!

5 months ago

ನವದೆಹಲಿ: ಸಂಚಾರ ಪೊಲೀಸ್ ಅಧಿಕಾರಿಗಳು ರಸ್ತೆಯ ಬಳಿ ಇದ್ದ ಪೊದೆಯಲ್ಲಿ ಬಿದ್ದಿದ್ದ ನವಜಾತ ಶಿಶುವಿನ ಸುತ್ತ ಸುತ್ತುವರಿದ್ದಿದ್ದ ನಾಯಿಗಳಿಂದ ಮಗುವನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಅನಿಲ್, ಅಮರ್ ಸಿಂಗ್ ಮತ್ತು ಪರ್ವೀನ್ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳಾಗಿದ್ದು, ಇವರು ಆರ್.ಕೆ ಖನ್ನಾ...

ತಿಪ್ಪೆಗುಂಡಿಯಲ್ಲಿ ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

6 months ago

ತುಮಕೂರು: ಅನ್ನ ಆಹಾರ ಇಲ್ಲದೆ ತಿಪ್ಪೆಗುಂಡಿಯಲ್ಲಿ ಬಿದ್ದು ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ನುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಆಟೋ ಚಾಲಕರೊಬ್ಬರು ರಕ್ಷಣೆ ಮಾಡಿದ್ದಾರೆ. ತುಮಕೂರು ನಗರದ ಪ್ರವಾಸಿ ಮಂದಿರದ ಬಳಿ ರಸ್ತೆ ಪಕ್ಕದಲ್ಲಿರುವ ಕಸದ ಗುಂಡಿಯಲ್ಲಿ ಮಾನಸಿಕ ಅಸ್ವಸ್ಥ ಬಿದ್ದು ವಿಲವಿಲ ಒದ್ದಾಡುತ್ತಿದ್ದನು....

ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಿಪಿಐ!

6 months ago

ದಾವಣಗೆರೆ: ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಹರಪ್ಪನಹಳ್ಳಿ ಸಿಪಿಐ ಮಾನವೀಯತೆಯನ್ನು ಮೆರೆದಿದ್ದಾರೆ. ಹರಪ್ಪನಹಳ್ಳಿಯ ಹಿಕ್ಕಿಂಗೆರೆ ಕ್ರಾಸ್ ಬಳಿ ಬೈಕ್ ನಲ್ಲಿ ಅಪಘಾತವಾದ ದಂಪತಿ ಗಾಯದಿಂದ ನರಳಾಡುತ್ತಿದ್ದರು. ಅದೇ ಸಮಯದಲ್ಲಿ ಸಿಪಿಐ ದುರುಗಪ್ಪ ದಾವಣಗೆರೆಯಿಂದ ಹರಪ್ಪನಹಳ್ಳಿಗೆ ಹೋಗುತ್ತಿದ್ದರು. ಅಪಘಾತದಿಂದ ಬಿದ್ದಿರುವ...