DistrictsKarnatakaLatestMain PostMandya

ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ನೀಡಿದ ಮಂಡ್ಯದ ಯುವಕ

ಮಂಡ್ಯ: ಈಗಿನ ಕಾಲದಲ್ಲಿ ರಸ್ತೆಯಲ್ಲಿ 1 ರೂ. ಸಿಕ್ಕರೂ ಬಿಡುವವರಿಲ್ಲ. ಅಂಥದ್ದರಲ್ಲಿ ಮಂಡ್ಯದ ಯುವಕನೊಬ್ಬ ದಾರಿಯಲ್ಲಿ ಸಿಕ್ಕ 33 ಗ್ರಾಂ. ತೂಕದ ಚಿನ್ನವನ್ನು ತನ್ನ ಹತ್ತಿರ ಇಟ್ಟುಕೊಳ್ಳದೆ ಪೊಲೀಸ್ ಠಾಣೆಗೆ ನೀಡಿ ಅದನ್ನು ಅದರ ವಾರಸುದಾರರಿಗೆ ತಲುಪಿಸಿ ಎನ್ನುವ ಮೂಲಕ ಮಾನವೀಯತೆ ಮೆರೆದಿದ್ದಾನೆ.

ಘಟನೆಯು ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದು, ಚಂದ್ರಶೇಖರ್ ಮಾನವೀಯತೆ ಮೆರೆದ ವ್ಯಕ್ತಿ. ಮೈಸೂರಿನ ಟ್ರ್ಯಾಕ್ಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಆತ ನಿನ್ನೆ ಕುಟುಂಬಸ್ಥರ ಜೊತೆ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದನು. ಈ ವೇಳೆ ನಿದ್ದೆ ಮಾಡಲು ರೂಮ್‍ಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಬೀದಿ ದೀಪಕ್ಕೆ ಹೊಳೆಯುತ್ತಿದ್ದ ವಸ್ತುವೊಂದು ಚಂದ್ರಶೇಖರ್ ಕಣ್ಣಿಗೆ ಬಿದ್ದಿದೆ. ಇದನ್ನೂ ಓದಿ: ನಾಯಿ ವಾಕಿಂಗ್‍ಗೆ ಸ್ಟೇಡಿಯಂ ಖಾಲಿ ಮಾಡಿಸಿದ್ದ ಐಎಎಸ್ ಅಧಿಕಾರಿ ವರ್ಗಾವಣೆ

ನಂತರ ಅದು ಏನು ಅಂತ ನೋಡಿದಾಗ ಅದು ಚಿನ್ನದ ಸರವಾಗಿದೆ. ಬಳಿಕ ಚಂದ್ರಶೇಖರ್ ಅದನ್ನು ರೂಮ್‍ಗೆ ತೆಗೆದುಕೊಂಡು ಹೋಗಿದ್ದಾನೆ. ಈ ಸರ ಯಾರದ್ದೋ? ಪಾಪ ಕಳೆದುಕೊಂಡು ಎಷ್ಟು ಕಷ್ಟಪಡುತ್ತಿದ್ದಾರೊ ಅಂತ ಬೆಳಗ್ಗೆ ಎದ್ದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಬಳಿಕ ಸರ್ ಇದು ರಸ್ತೆಯಲ್ಲಿ ಸಿಕ್ಕಿದೆ. ಇದನ್ನು ಅದರ ವಾರಸುದಾರರಿಗೆ ತಲುಪಿಸಿ ಎಂದು ಪೊಲೀಸರಿಗೆ ನೀಡಿದ್ದಾನೆ. ಚಂದ್ರಶೇಖರ್‌ನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Back to top button