Saturday, 25th May 2019

5 months ago

ಭಾರತ್ ಬಂದ್ ಎಫೆಕ್ಟ್ – ಕಾಫಿನಾಡಲ್ಲಿ KSRTC ಗೆ 31 ಲಕ್ಷ ರೂ. ನಷ್ಟ

ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವ ಜೊತೆಗೆ ಕೆಎಸ್‌ಆರ್‌ಟಿಸಿಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗಿದೆ. ಕಾರ್ಮಿಕರ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಎರಡು ದಿನ ಬಂದ್‍ನಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಒಟ್ಟು ಆರು ಡಿಪೋಗಳಲ್ಲಿ 327 ಬಸ್‍ಗಳು ಬಂದ್ ನಿಯಮಿತವಾಗಿ ಸಂಚರಿಸಿಲ್ಲ. ಇದರಿಂದ ಒಟ್ಟು ಅಂದಾಜು 31 ಲಕ್ಷ ರೂ. ನಷ್ಟ ಸಂಭವಿಸಿದೆ. ಮಂಗಳವಾರ ಹಾಗೂ ಬುಧವಾರ […]

5 months ago

ವಿದ್ಯಾರ್ಥಿಗಳ ಪರದಾಟ ನೋಡಲಾಗದೇ ಪೊಲೀಸ್ ವಾಹನದಲ್ಲೇ ಪ್ರಯಾಣ – ಮಾನವೀಯತೆ ಮೆರೆದ ಗದಗ ಪೊಲೀಸ್ರು

ಗದಗ: ಭಾರತ್ ಬಂದ್ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಾಹನದಲ್ಲೇ ಕಾಲೇಜಿಗೆ ಕಳುಹಿಸುವ ಮೂಲಕ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಬಸ್ ಸಂಚಾರ ಇಲ್ಲದೇ ವಿದ್ಯಾರ್ಥಿಗಳು ವಾಹನಗಳಿಲ್ಲದೆ ಬಸ್ ನಿಲ್ದಾಣದಲ್ಲಿಯೇ ನಿಂತು ಪರದಾಡುತ್ತಿದ್ದರು. ಬಳಿಕ ಪೊಲೀಸರು ವಿದ್ಯಾರ್ಥಿಗಳ ಕಷ್ಟವನ್ನು ನೋಡಲಾಗದೇ ತಮ್ಮ ವಾಹನದಲ್ಲಿ ಅವರನ್ನು ಹತ್ತಿಸಿ ಕಳುಹಿಸಿದ್ದಾರೆ. ಈ ಮೂಲಕ ಗದಗ ಶಹರ,...

ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ..!

5 months ago

ಬಳ್ಳಾರಿ: ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ಎರಡನೇಯ ದಿನವಾದ ಇಂದು ಕೂಡ ಬಳ್ಳಾರಿಯಲ್ಲಿ ಮುಂದುವರಿದಿದೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಶವಯಾತ್ರೆಯ ಮೂಲಕ ವಿನೂತನವಾಗಿ ಪ್ರತಿಭಟನೆ ಕೈಗೊಂಡಿದ್ದಾರೆ. ಬಂದ್ ಕರೆ ಹಿನ್ನೆಲೆಯಲ್ಲಿ ಇಂದು ಸಹ ಬಳ್ಳಾರಿ ಜಿಲ್ಲಾ...

ಬಸ್‍ಗಳಿಲ್ಲದೆ ಅಂತ್ಯಕ್ರಿಯೆಗೆ ಹೊರಟ ಮಹಿಳೆಯರು ಕಂಗಾಲು..!

5 months ago

ಗದಗ: 2ನೇ ದಿನದ ಭಾರತ್ ಬಂದ್ ಹಿನ್ನೆಲೆಯಿಂದಾಗಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಅಂತ್ಯಸಂಸ್ಕಾರಕ್ಕೆ ಹೋಗಬೇಕಿದ್ದ ಮಹಿಳೆಯರು ಕಂಗಾಲಾಗಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾರೆ. ಕಾರ್ಮಿಕರ ಮುಷ್ಕರ ಮೊದಲ ದಿನಕ್ಕಿಂತ ಎರಡನೇ ದಿನ ತುಸು ಜೋರಾಗಿದೆ. ಮುಷ್ಕರಕ್ಕೆ ಬೆಂಬಲಿಸುತ್ತಿರುವ ಪ್ರತಿಭಟನಾಕಾರರು...

ರಾಮನಗರದಲ್ಲಿ ಆರು ಬಸ್‍ಗಳಿಗೆ ಕಲ್ಲೆಸೆತ

5 months ago

-ನಿನ್ನೆ ಬಸ್ ಇದ್ರೂ ಪ್ರಯಾಣಿಕರಿಲಿಲ್ಲ, ಇಂದು ಪ್ರಯಾಣಿಕರಿದ್ರೂ ಬಸ್ ಇಲ್ಲ ರಾಮನಗರ/ಬೆಂಗಳೂರು: ಕಾರ್ಮಿಕರ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬಂದ್ ಗೆ ತೀವ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ದಿನವೂ ಸಾಧಾರಣ ಪ್ರತಿಭಟನೆ...

ಬಿಎಂಟಿಸಿಯ 12 ಬಸ್ ಮೇಲೆ ಕಲ್ಲು

5 months ago

ಬೆಂಗಳೂರು: ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬಿಎಂಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ನಾಗರಬಾವಿಯ ಮಾರುತಿ ನಗರದ 235 ಕೆ ಮತ್ತು 401 ನಂಬರಿನ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. 235 ಕೆ ನಂಬರ್...

ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗನಿಂದ ಸಖತ್ ಕ್ಲಾಸ್!

5 months ago

– ಅಂಗಡಿ ಮಾಲೀಕನ ಬೈಗುಳದಿಂದ ಕಾಲ್ಕಿತ್ತ ಪ್ರತಿಭಟನಾಕಾರರು ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಬಂದ್‍ಗೆ ಕರೆ ಕೊಟ್ಟಿದ್ದು, ಹೀಗಾಗಿ ಮೊದಲ ದಿನವಾದ ಇಂದು ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗರೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ...

ಉಡುಪಿ ಮಠಕ್ಕೂ ತಟ್ಟಿದೆ ಬಂದ್ ಬಿಸಿ!

5 months ago

– ಶ್ರೀಕೃಷ್ಣ ಮಠಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಇಳಿಮುಖ ಉಡುಪಿ: ಜಿಲ್ಲೆಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೂ ಭಾರತ್ ಬಂದ್ ಎಫೆಕ್ಟ್ ತಟ್ಟಿದೆ. ಪ್ರತಿದಿನ ಮಧ್ಯಾಹ್ನ ತುಂಬಿ ತುಳುಕುವ ಕೃಷ್ಣಮಠದ ಭೋಜನ ಶಾಲೆಗಳು ಇಂದು ಖಾಲಿ ಖಾಲಿಯಾಗಿ ಕಾಣುತ್ತಿದೆ. ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ...