Monday, 20th August 2018

Recent News

2 days ago

ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಗ್ರಾಮಸ್ಥರು!

ಕಾರವಾರ: ಹಳ್ಳದಲ್ಲಿ ಎದೆ ಮಟ್ಟದ ನೀರು ಹರಿಯುತ್ತಿದ್ದರೂ, ಊರಿನ ಕತ್ತಲು ಓಡಿಸಲು ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಗ್ರಾಮಸ್ಥರು ಜೀವದ ಹಂಗು ತೊರೆದು ತುಂಬಿ ಹರಿಯುತ್ತಿದ್ದ ಹೊಳೆಯ ನೀರಿನಲ್ಲೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ನಡೆದಿದೆ. ಅಂಕೋಲ ತಾಲೂಕಿನ ಕಟ್ಟಿನಕಲು ಗ್ರಾಮದ ಕೋಟೇಪಾಲ್, ಕುಣಬೇರಕೇರಿ, ಬೇರೂಳ್ಳಿ, ಮತಿನಮತ್ತಿಯ ಸುತ್ತಮುತ್ತಲ ಗ್ರಾಮದಲ್ಲಿ ಕಳೆದ 8 ದಿನಗಳಿಂದ ಮಳೆಗೆ ಕಂಬದ ಮೇಲೆ ಮರ ಉರುಳಿ ವಿದ್ಯುತ್ ವ್ಯತ್ಯಯವಾಗಿತ್ತು. ಹೆಸ್ಕಾಂಗೆ ಈ ಬಗ್ಗೆ […]

1 week ago

ಬೆಳಕು ಫಲಶೃತಿ: ಎಂಬಿಎ ಪದವಿ ಮುಗಿಸಿ ಉದ್ಯೋಗ ಪಡೆದ ಕೋಲಾರದ ಪ್ರತಿಭೆ

ಕೋಲಾರ: ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದು ಪದವಿ ಮುಗಿಸಿದ ಕೋಲಾರ ತಾಲೂಕು ಕೋಡಿ ಕಣ್ಣೂರು ಗ್ರಾಮದ ಭಾಗ್ಯಶ್ರೀ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಚೆನ್ನಾಗಿ ಓದಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಸೀಟು ಪಡೆದು ಪ್ರವೇಶ ಶುಲ್ಕ ಭರಿಸಲಾಗದೇ ದಿಕ್ಕು ದೋಚದೇ ಕಂಗಲಾಗಿದ್ದರು. ಓದಲೇ ಬೇಕು ಎಂಬ ಛಲದಿಂದ ಓದಲು ಸಹಾಯ ಮಾಡಿ ಎಂದು...

ದೃಷ್ಟಿ ಕಳೆದುಕೊಂಡ ಬಾಲಕಿಯ ಕಣ್ಣಿನ ಆಪರೇಷನ್ ಗೆ ಬೇಕಿದೆ ಸಹಾಯ

2 weeks ago

ಮಂಡ್ಯ: ನಗರದ ಕಾಳಿಕಾಂಭ ದೇವಾಲಯದ ಬಳಿಯಿರುವ ಡವರಿ ಕಾಲೋನಿಯ ನಿವಾಸಿ ತುಳಸಿ ಅವರ 5 ವರ್ಷದ ಪುತ್ರಿ ಆರತಿ. ಕಣ್ಣು ಕಳೆದುಕೊಂಡಿರುವ ಆರತಿ ತಾಯಿಯ ಆಸರೆ ಇಲ್ಲದೇ ಒಂದು ಹೆಜ್ಜೆಯೂ ಇಡುವಂತಿಲ್ಲ. ಮೂರು ತಿಂಗಳ ಹಿಂದೆ ಆಟವಾಡುವಾಗ ಬಾಲಕಿ ಆರತಿ, ಎಡಗಣ್ಣಿಗೆ...

ಎಂಜಿನಿಯರಿಂಗ್ ಗೆ ಪ್ರವೇಶ ಪಡೆದ ಬಡ ವಿದ್ಯಾರ್ಥಿನಿಗೆ ಬೇಕಿದೆ ಹಾಸ್ಟೆಲ್ ಫೀಸ್

2 weeks ago

ಕಾರವಾರ: ಹೆತ್ತವರು ಓದದೇ ಇದ್ರೂ ಮಕ್ಕಳನ್ನು ಓದಿಸುವ ಆಸೆ. ಎಷ್ಟೇ ಕಷ್ಟ ಬಂದ್ರೂ ಓದಿ ಸಾಧಿಸಿದ ಛಲಗಾತಿ ಪುಷ್ಪ. ಈಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮ ಪಂಚಾಯ್ತಿಯ ಶಿರೂರು ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿನಿ. ತಂದೆ ಮಂಜುನಾಥ್...

ಟೀ ಮಾರುತ್ತಾ ಜೀವನ ನಡೆಸೋ ಕುಟುಂಬದ ಮಗನ ವಿದ್ಯಾಭ್ಯಾಸಕ್ಕೆ ಬೇಕಿದೆ ನೆರವು

3 weeks ago

ಮೈಸೂರು: ಜಿಲ್ಲೆಯ ಕೂರ್ಗಳ್ಳಿ ನಿವಾಸಿ 52 ವರ್ಷದ ಶಿವಪ್ರಕಾಶಸ್ವಾಮಿ ಅವರು ಕಾಲುಗಳಿದ್ದು ಸ್ವಾಧೀನ ಇಲ್ಲದೇ ಕಷ್ಟಪಡುತ್ತಿದ್ದಾರೆ. ಇವರಿಗೆ ಪತ್ನಿ ಸಾವಿತ್ರಮ್ಮ ಮತ್ತು 12 ವರ್ಷದ ಮಗನಿದ್ದಾನೆ. 22 ವರ್ಷಗಳ ಹಿಂದೆ ಇವರ ಮೇಲೆ ಆಕಸ್ಮಿಕವಾಗಿ ಮರ ಉರುಳಿ ಬಿದ್ದು ಎರಡು ಕಾಲುಗಳು...

ಸಾಹಿತಿ ಎನಿಸಿಕೊಂಡಿರೋ ವಿದ್ಯಾರ್ಥಿಗೆ ಬೇಕಿದೆ ವಸತಿ-ಊಟದ ಸೌಲಭ್ಯ

3 weeks ago

ಬೀದರ್: ಓದಿನ ಮೇಲೆ ಶ್ರದ್ಧೆ-ಆಸಕ್ತಿ ಇದ್ರೆ ಬಡತನ ಅಡ್ಡಿಯಾಗಲಾರದು ಎಂಬುದಕ್ಕೆ ಈ ಕಥೆ ಸಾಕ್ಷಿ. ಬಡ ಪ್ರತಿಭಾವಂತ ರಾಜು ಎಂ ಪವಾರ್ ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದವರು. ತಂದೆ ಮಾರುತಿ ಪವಾರ್ ತಾಯಿ ರಂಗಾಬಾಯಿ. ಇವರಿಗೆ 4 ಮಕ್ಕಳು. ಮಕ್ಕಳಿಗೆ ವಿದ್ಯಾಭ್ಯಾಸ...

ಡ್ರಮ್ ತೆಪ್ಪದಲ್ಲಿ ಕೆರೆ ದಾಟುವ ಗ್ರಾಮದ ಜನರಿಗೆ ಬೇಕಿದೆ ಶಾಶ್ವತ ಪರಿಹಾರ

3 weeks ago

ಚಿಕ್ಕಬಳ್ಳಾಪುರ: ಕಳೆದ ವರ್ಷ ಸುರಿದ ಮಳೆಗೆ ಕೆರೆ ತುಂಬಿ ತುಳುಕುತ್ತಿದ್ದು, ಹಲವು ವರ್ಷಗಳಿಂದ ಇದ್ದ ರಸ್ತೆಯ ಸಂಪರ್ಕವನ್ನೇ ಕಡಿದು ಹಾಕಿದೆ. ಹೀಗಾಗಿ ಒಂದಲ್ಲ ಎರಡಲ್ಲ ನಾಲ್ಕು ಗ್ರಾಮಗಳ ಜನ ದಿನನಿತ್ಯ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕೆರೆ ದಾಟಬೇಕಾದ ಅನಿವಾರ್ಯ ಪರಿಸ್ಥಿತಿಯಾಗಿದೆ. ಹೌದು....

ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆಜಿ ಮಕ್ಕಳಿಗಿಲ್ಲ ಸರ್ಕಾರದ ಬಿಸಿಯೂಟ!

4 weeks ago

ಶಿವಮೊಗ್ಗ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಎಲ್‍ಕೆಜಿ ಆರಂಭಿಸಿದೆ. ಆದರೆ ಸರ್ಕಾರ ಮಾತ್ರ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೆ ತಾರತಮ್ಯ ಮಾಡುತ್ತಿದೆ. ಇದು ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಉಂಟೂರು ಕಟ್ಟೆ ಕೈಮರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ಥಿತಿ....