– ಚನ್ನಾಪುರ ಗ್ರಾಮದ ಯಲ್ಲಪ್ಪ, ಗೌರವ್ವ ದಂಪತಿ ಬಾಳಿಗೆ ಬೆಳಕಾದ ಪಬ್ಲಿಕ್ ಟಿವಿ ‘ಬೆಳಕು’ ಕಾರ್ಯಕ್ರಮ
ಹುಬ್ಬಳ್ಳಿ: ಪಬ್ಲಿಕ್ ಟಿವಿ ‘ಬೆಳಕು’ ಕಾರ್ಯಕ್ರಮ ಸಹಾಯಕರಿಗೆ, ಬಡವರಿಗೆ ನೇರವಾಗಿ ಸಾವಿರ ಕುಟುಂಬಗಳ ಸಂಕಷ್ಟ ನಿವಾರಣೆಗೆ ಕೈಜೋಡಿಸಿದೆ. ಅದರಂತೆ ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರ ಗ್ರಾಮದ ಯಲ್ಲಪ್ಪ ಮತ್ತು ಗೌರವ್ವ ದಂಪತಿ ಬಾಳಿಗೆ ‘ಪಬ್ಲಿಕ್ ಟಿವಿ’ ಬೆಳಕಾಗಿದೆ.
Advertisement
ಯಲ್ಲಪ್ಪ ಮತ್ತು ಗೌರವ್ವ ದಂಪತಿಯ ಮೊದಲ ಮಗಳು ಪ್ರೀತಿ. ಅವಳಿಗೆ ಈಗ 13 ವರ್ಷ. ಈಕೆಗೆ ಹುಟ್ಟುತ್ತಲೇ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಪ್ರೀತಿ ನಾಲ್ಕು ವರ್ಷದವಳಿದ್ದಾಗಲೇ ತೀವ್ರ ಸಕ್ಕರೆ ಕಾಯಿಲೆಗೆ ತುತ್ತಾದಳು. ಪ್ರೀತಿಗೆ ಡಯಾಲಿಸಿಸ್ ಮಾಡಿಸಲು ತಿಂಗಳಿಗೆ ಐದಾರು ಸಾವಿರ ಖರ್ಚು ಬರುತ್ತಿತ್ತು. ಯಲ್ಲಪ್ಪ ಹಮಾಲಿ ಕೆಲಸ ಮಾಡುತ್ತಿದ್ದು, ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದರು. ಮತ್ತೊಂದು ಕಡೆ ಪ್ರೀತಿಗೆ ದಿನಕ್ಕೆ ಮೂರು ಬಾರಿ ಇಂಜೆಕ್ಷನ್ ಮಾಡಿಸಬೇಕು. ಹೀಗಾಗಿ ತಾಯಿ ಗೌರವ್ವ ಮನೆಯಲ್ಲಿಯೇ ಇರಬೇಕು. ಯಲ್ಲಪ್ಪನ ಕೂಲಿ ಹಣ ಮನೆ ನಡೆಸಲು ಸಹ ಸಾಕಾಗುತ್ತಿರಲಿಲ್ಲ. ಈ ಕುರಿತು ಜು.5 ರಂದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಪ್ರಸಾರವಾಗಿತ್ತು.ಇದನ್ನೂ ಓದಿ: Public TV | `ಬೆಳಕು’ ಫಲಶೃತಿ – ಅತ್ಯಾಡಿ ಗ್ರಾಮಕ್ಕೆ ಕಬ್ಬಿಣದ ತೂಗುಸೇತುವೆ ಭಾಗ್ಯ
Advertisement
Advertisement
ಈ ಕುಟುಂಬ ಮನೆಯಲ್ಲಿಯೇ ಇದ್ದುಕೊಂಡು ಒಂದು ಕಡೆ ಪ್ರೀತಿಯ ಆರೋಗ್ಯ ನೋಡಿಕೊಂಡು, ಮತ್ತೊಂದು ಕಡೆ ಕುಟುಂಬ ನಿರ್ವಹಣೆಗೆ ಬಟ್ಟೆ ಅಂಗಡಿ ವ್ಯಾಪಾರ ಮಾಡುವ ಆಸಕ್ತಿ ಹೊಂದಿತ್ತು. ಹೀಗಾಗಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವಂತೆ ಬೇಡಿಕೆಯಿಟ್ಟಿತ್ತು. ಕುಟುಂಬದ ಮನವಿಯಂತೆ ಬಟ್ಟೆ ಅಂಗಡಿ ವ್ಯವಸ್ಥೆ ಮಾಡಿದೆ. ಪಬ್ಲಿಕ್ ಟಿವಿಯಿಂದಾದ ಸಹಾಯಕ್ಕೆ ಯಲ್ಲಪ್ಪ ಅವರ ಕುಟುಂಬ ಬಟ್ಟೆ ಅಂಗಡಿಗೆ “ಪಬ್ಲಿಕ್ ಟಿವಿ ಬೆಳಕು ಬಟ್ಟೆ ಅಂಗಡಿ” ಎಂದು ಹೆಸರಿಟ್ಟಿದೆ. ಕುಟುಂಬ ಪಬ್ಲಿಕ್ ಟಿವಿಗೆ ಹಾಗೂ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ಅರ್ಪಿಸಿದೆ.ಇದನ್ನೂ ಓದಿ: