Tuesday, 16th July 2019

9 hours ago

ಸಾಲಬಾಧೆ ತಾಳಲಾರದೆ ಬೀದರ್ ರೈತ ಆತ್ಮಹತ್ಯೆ

ಬೀದರ್: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಪಾಶಾಪೂರ್ ಗ್ರಾಮದಲ್ಲಿ ನಡೆದಿದೆ. ರಾಜಪ್ಪ ಬಿರಾದರ್ (42) ಆತ್ಮಹತ್ಯೆಗೆ ಶರಣಾದ ರೈತ. ವಿವಿಧ ಬ್ಯಾಂಕುಗಳಲ್ಲಿ ಆರು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಈ ಬಾರಿಯಾದರೂ ಮುಂಗಾರು ಮಳೆ ಉತ್ತಮವಾಗಿ ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿಂದ ಮತ್ತೆ ಬ್ಯಾಂಕ್‍ನಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಮುಂಗಾರು ಮಳೆ ಕೈಕೊಟ್ಟಿದೆ. ಇದೇ ಬೇಸರದಿಂದ ರಾಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]

3 days ago

ಕಲ್ಲಿನಿಂದ ಹೊಡೆದು ಯುವಕನ ಬರ್ಬರ ಕೊಲೆ

ಬೀದರ್: ಕಲ್ಲಿನಿಂದ ಹೊಡೆದು ಯುವಕನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಹೊರ ವಲಯದ ಚಿಕ್ಕ ಪೇಟೆ ಬಳಿ ಇಂದು ನಡೆದಿದೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಯುವಕ ಶರಣು ಕೊಲೆಯಾದ ದುರ್ದೈವಿ. ಇವನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದವನಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹೀಗಾಗಿ...

ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

2 weeks ago

ಬೀದರ್: ನಗರದ ಯುವ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಗರದ ನಿವಾಸಿ ಅಭಿಷೇಕ್ ಇನಾನಿ ಅಪಹರಣವಾದ ಯುವ ಉದ್ಯಮಿ. ಅಭಿಷೇಕ್ ಅವರು ಬುಧವಾರ ಸಂಜೆ ಕಂಪನಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ...

ಮುಗಿಯದ ಬ್ರಿಮ್ಸ್ ಸಮಸ್ಯೆ – ಕುಡಿಯುವ ನೀರಿನ ಘಟಕಗಳಿದ್ದರೂ ಪ್ರಯೋಜನಕ್ಕೆ ಬರಲ್ಲ

2 weeks ago

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಬ್ರಿಮ್ಸ್) ಗ್ರಹಣ ಬಡಿದಿದ್ದು, ಬ್ರಿಮ್ಸ್ ನ ಸಮಸ್ಯೆಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ ಎನ್ನುವ ಹಾಗಾಗಿದೆ. ಇಲ್ಲಿ ಕುಡಿಯುವ ನೀರಿನ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ. ಬ್ರಿಮ್ಸ್ ನಲ್ಲಿ ಇರುವ ಸಮಸ್ಯೆಗಳಿಗೆ ಮುಗಿಯದ ಕಥೆಯಾಗಿ ಬಿಟ್ಟಿದೆ....

100 ಇದ್ದ ಸದಸ್ಯರನ್ನು 104 ಮಾಡ್ಲಿಕ್ಕೆ ಆಗಿಲ್ಲ, 15 ಜನ ಶಾಸಕರನ್ನು ಆಪರೇಷನ್ ಮಾಡ್ತಾರಾ – ಐವಾನ್

2 weeks ago

ಬೀದರ್: ಬಿಬಿಎಂಪಿಯ 100 ಮಂದಿ ಬಿಜೆಪಿ ಸದಸ್ಯರ ಬಲವನ್ನು 104 ಮಾಡಲಿಕ್ಕೆ ಆಗಿಲ್ಲ. ಇನ್ನು 15 ಜನ ಶಾಸಕರನ್ನು ಬಿಜೆಪಿಯವರು ಆಪರೇಷನ್ ಮಾಡತ್ತಾರಾ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಪ್ರಶ್ನೆ ಮಾಡಿದ್ದಾರೆ. ಒಂದು ವರ್ಷದಿಂದ ಎಷ್ಟು ವಿಕೆಟ್ ಹೋಗಿದೆ...

ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

2 weeks ago

ಬೀದರ್: ನಿವೃತ್ತಿ ಹಣಕ್ಕಾಗಿ ಸ್ವತಃ ಮೊಮ್ಮಗನೇ ತನ್ನ ಅಜ್ಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೊಲೆಯಾದ ಅಜ್ಜಿಯನ್ನು ಲೀಲಾವತಿ (62)...

ಕೆಮಿಕಲ್ ರಿಯಾಕ್ಟರ್ ಸ್ಫೋಟ: ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

2 weeks ago

ಬೀದರ್: ಕೆಮಿಕಲ್ ರಿಯಾಕ್ಟರ್ ಸ್ಫೋಟಗೊಂಡು ಭಾರೀ ಅಗ್ನಿ ಅವಘಡ ಸಂಭವಿಸಿ, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಬೀದರ್‌ನ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಚಂದ್ರಾಲ್ಯಾಬ್ ಎಂಬ ಕೆಮಿಕಲ್ ಫ್ಯಾಕ್ಟರಿಯ ದೇವರಾಜ್ ಗಂಭೀರವಾಗಿ ಗಾಯಗೊಂಡ ಕಾರ್ಮಿಕ. ಕೆಮಿಕಲ್ ರಿಯಾಕ್ಟರ್ ಪಕ್ಕದಲ್ಲಿಯೇ...

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ: ಸಿಎಂ

3 weeks ago

ಬೀದರ್: ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ನನ್ನ ಪ್ರತ್ಯುತ್ತರ ಎಂದು ಗ್ರಾಮ ವಾಸ್ತವ್ಯದ ಬಗ್ಗೆ ಕೇಳಿಬಂದ ವಿಪಕ್ಷಗಳ ಟೀಕೆಗಳಿಗೆ ಸಿಎಂ ಅವರು ಕುವೆಂಪು ಅವರ ಸ್ಲೋಗನ್ ಮೂಲಕ ಟಾಂಗ್ ನೀಡಿದರು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ...