Tag: ಬಿಟ್ ಕಾಯಿನ್

  • ಬಿಟ್ ಕಾಯಿನ್ ಹಗರಣ ಮರುತನಿಖೆಗೆ ಎಸ್‍ಐಟಿ ರಚನೆ – ನಾಳೆಯಿಂದಲೇ ತನಿಖೆಗೆ ಮರುಜೀವ

    ಬಿಟ್ ಕಾಯಿನ್ ಹಗರಣ ಮರುತನಿಖೆಗೆ ಎಸ್‍ಐಟಿ ರಚನೆ – ನಾಳೆಯಿಂದಲೇ ತನಿಖೆಗೆ ಮರುಜೀವ

    ಬೆಂಗಳೂರು: ಬಿಜೆಪಿ ಕಾಲದ ಬಿಟ್ ಕಾಯಿನ್ ಹಗರಣದ (Bitcoin Scam) ವಿರುದ್ಧ ಮರು ತನಿಖೆ ನಡೆಸುವಂತೆ ಸರ್ಕಾರ ಆದೇಶ (Karnataka Government) ಹೊರಡಿಸಿದೆ. ತನಿಖೆಗೆ ಎಸ್‍ಐಟಿ (SIT ) ರಚನೆ ಮಾಡಲಾಗಿದ್ದು, ತನಿಖೆ ಮಂಗಳವಾರದಿಂದಲೇ ಪ್ರಾರಂಭಗೊಳ್ಳಲಿದೆ.

    MANISH KARBIKARಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ಈಗಾಗಲೇ ಎಸ್‍ಐಟಿಯನ್ನು ರಚನೆ ಮಾಡಲಾಗಿದೆ. ಸಿಐಡಿ ಸೈಬರ್ ಸೆಲ್‍ನ ಎಸ್ಪಿ ಶರತ್ ಪ್ರಕರಣದ ತನಿಖಾಧಿಕಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಿಟ್ ಕಾಯಿನ್ ಹಗರಣವನ್ನು ಈ ಹಿಂದೆ ಸಿಸಿಬಿ ತನಿಖೆ ಮಾಡಿತ್ತು. ಆಗ ತನಿಖೆಯಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ರಾಜಕಾರಣಿಗಳು ಹಣ ತನಿಖೆಯ ದಾರಿ ತಪ್ಪಿಸಿದ್ದಾರೆ ಎನ್ನಲಾಗಿತ್ತು. ಇದನ್ನೂ ಓದಿ: ನಿಗದಿಗಿಂತ ಚುನಾವಣೆಯಲ್ಲಿ ಅಧಿಕ ವೆಚ್ಚ – ಇಬ್ಬರೂ ಬಿಜೆಪಿ ನಾಯಕರಿಗೆ ನೋಟಿಸ್

    ಈ ಬಗ್ಗೆ ಸಿಐಡಿ ಡಿಜಿ ಸಲೀಂ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ್ದಾರೆ. ಎಸ್‍ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಜೊತೆ ಮಾತುಕತೆ ನಡೆಸಿದ ಅವರು, ತನಿಖೆಯ ರೂಪುರೇಷೆ, ಫೈಲ್ ವರ್ಗಾವಣೆ, ಕೆಳ ಹಂತದಲ್ಲಿ ಯಾವೆಲ್ಲ ಅಧಿಕಾರಿಗಳು ಟೀಂನಲ್ಲಿ ಇರಬೇಕು ಎಂಬುದನ್ನು ಚರ್ಚಿಸಿದ್ದಾರೆ. ಈ ಹಿಂದಿನ ತನಿಖೆಯಲ್ಲಿ ಸಿಸಿಬಿಯಿಂದ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಇದರಿಂದಾಗಿ ಎಸ್‍ಐಟಿ ತನಿಖೆ ನಡೆಸಲು ಕೋರ್ಟ್‍ನಿಂದ ಅನುಮತಿ ಪಡೆಯಬೇಕಿದೆ. ಈ ಬಗ್ಗೆ ಸಿದ್ಧತೆ ನಡೆಸಲಾಗಿದೆ.

    ಸಿಸಿಬಿಯಿಂದ ಫೈಲ್‍ಗಳ ವರ್ಗಾವಣೆ ಕೋರಿ ಪತ್ರ ಬರೆಯುವಂತೆ ಸಹ ಸೂಚಿಸಲಾಗಿದೆ. ಸಿಸಿಬಿಯ ತನಿಖಾ ಫೈಲ್ ಎಸ್‍ಐಟಿ ಕೈ ಸೇರಿದ ಬಳಿಕ ಮಂಗಳವಾರ ಅಥವಾ ಬುಧವಾರದಿಂದ ಅಧಿಕೃತವಾಗಿ ಎಸ್‍ಐಟಿ ತನಿಖೆ ಆರಂಭಿಸಲಿದೆ. ಇದನ್ನೂ ಓದಿ: ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಮೇಲೆ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಇನ್ನೆರಡು ದಿನದಲ್ಲಿ ಆದೇಶ

    ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಇನ್ನೆರಡು ದಿನದಲ್ಲಿ ಆದೇಶ

    ಬೆಂಗಳೂರು: ಬಿಟ್ ಕಾಯಿನ್ (Bit Coin) ಹಗರಣಕ್ಕೆ ಮರುಜೀವ ಸಿಕ್ಕಂತಾಗಿದೆ. ಅಧಿಕೃತವಾಗಿ ಚಾಲನೆಗೆ ಬಂದಿದ್ದು, ಮರು ತನಿಖೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದ ಡಿಜಿ&ಐಜಿ ಅಲೋಕ್ ಮೋಹನ್ ಪ್ರಕರಣದ ಸಾರಾಂಶ ತಿಳಿಸಿದ್ದಾರೆ. ಈ ಮೂಲಕ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಕಾಂಗ್ರೆಸ್ (Congress) ಸರ್ಕಾರ.

    ಪ್ರಕರಣದ ಮೊದಲ ಹಂತವಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಬಳಿಕ ಅಲೋಕ್ ಮೋಹನ್ ಪತ್ರದ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಯಾವ ತನಿಖಾ ಸಂಸ್ಥೆಗೆ ತನಿಖೆಗೆ ನೀಡಬೇಕೆಂದು ತೀರ್ಮಾನ ಮಾಡಲಿರೋ ಸರ್ಕಾರ ಸಿಐಡಿಯಿಂದಲಾ? ಎಸ್‌ಐಟಿ ಇಂದಲಾ ತನಿಖೆ? ಎಂಬುದನ್ನು ಇನ್ನೆರಡು ದಿನಗಳಲ್ಲಿ ಸ್ಪಷ್ಟಪಡಿಸಲಿದೆ‌‌‌. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್

    Bitcoin Scam Shri Krishna alias Shriki 5

    ಕಾಟನ್ ಪೇಟೆಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಮತ್ತೆ ತನಿಖೆ ಮಾಡಿಸಲು ಮುಂದಾದ ಸರ್ಕಾರ, ಬಿಜೆಪಿ ಕಾಲದ ಪ್ರಕರಣಕ್ಕೆ ಮರು ಜೀವದ ತೀರ್ಮಾನ ಮಾಡಿದೆ.

    ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬಿಟ್ ಕಾಯಿನ್ ಹಗರಣ ತನಿಖೆ ಪುನಾರಂಭ ಮಾಡ್ತೀವಿ: ಜಿ.ಪರಮೇಶ್ವರ್

    ಬಿಟ್ ಕಾಯಿನ್ ಹಗರಣ ತನಿಖೆ ಪುನಾರಂಭ ಮಾಡ್ತೀವಿ: ಜಿ.ಪರಮೇಶ್ವರ್

    ಬೆಂಗಳೂರು: ಬಿಟ್ ಕಾಯಿನ್‌ ಹಗರಣ (Bitcoin Scam) ಮರು ತನಿಖೆಗೆ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (Dr G.Parameshwara) ಹೇಳಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣವನ್ನೂ ಮರು ಪರಿಶೀಲನೆ ಮಾಡುತ್ತೇವೆ.‌ ಬಿಜೆಪಿಯವರು ಈಗಲೇ ಕುಣಿದಾಡ್ತಿದ್ದಾರೆ. ನಮ್ಮ ಸರ್ಕಾರ ಬಂದು 20 ದಿನ ಆಗಿದೆ ಅಷ್ಟೇ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು. ಬಿಟ್ ಕಾಯಿನ್ ಪ್ರಕರಣವನ್ನೂ ಮರು ಪರಿಶೀಲನೆ ಮಾಡ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆಯಿಲ್ಲ : ಸಿದ್ದರಾಮಯ್ಯ ವಾಗ್ದಾಳಿ

    crypto currencies bitcoin

    ಸುರ್ಜೇವಾಲ ಅಧಿಕಾರಿಗಳ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅಧಿಕೃತ ಸಭೆ ಆಗಿರಲಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು. ಆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಅಷ್ಟೇ. ವಿಧಾನಸೌಧದ ಒಳಗೆ ಸಭೆ ಮಾಡಿದರೆ ತಪ್ಪು. ಖಾಸಗಿ ಹೊಟೇಲ್‌ನಲ್ಲಿ ಡಿ‌.ಕೆ.ಶಿವಕುಮಾರ್ ಸಭೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸುರ್ಜೇವಾಲ ಬಂದಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಬಿಜಪಿಯವರು ದೂರು‌ ನೀಡಲಿ. ರಾಜಭವನದವರು ಪರಿಶೀಲನೆ ಮಾಡ್ತಾರೆ ಎಂದಿದ್ದಾರೆ.

    Bitcoin Scam Shri Krishna alias Shriki 5

    ದಲಿತ ಸಿಎಂ ವಿಚಾರದಲ್ಲಿ ನೀವು ಬಹಳ ಡೀಪ್‌ ಆಗಿ ಹೋಗುವ ಅಗತ್ಯವಿಲ್ಲ. ನಮ್ಮ ಸಮುದಾಯಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮಾತನಾಡಿದ್ದೇನೆ. ನಾಳೆಯೇ ಹೋಗಿ ನಾವು ಸಿಎಂ ಆಗಬೇಕು ಅಂತ ನಾವು ಕೇಳಲ್ಲ. ಯಾವುದೇ ಗೊಂದಲವಾದ ಮಾತುಗಳು ಅದರಲ್ಲಿ ಇಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ನಿತಿನ್ ಗಡ್ಕರಿ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರ- ಶಿವಮೊಗ್ಗ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಒತ್ತಾಯ

    ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದ್ದರು.

  • ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

    ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

    ನವದೆಹಲಿ: ಡಿಜಿಟಲ್ ರೂಪಾಯಿ (Digital Rupee) ಕಡೆಗೆ ದೇಶ ತರಾತುರಿಯಲ್ಲಿ ಹೆಜ್ಜೆ ಹಾಕುತ್ತಿದೆ. ಇದರ ಭಾಗವಾಗಿ ಡಿಸೆಂಬರ್ 1 ರಿಂದ ರಿಟೈಲ್ ಡಿಜಿಟಲ್ ರೂಪಾಯಿಯನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಆರ್‌ಬಿಐ (RBI) ಚಲಾವಣೆಗೆ ತರುತ್ತಿದೆ.

    Digital rupee CBDC RBI India

    ಮೊದಲಿಗೆ ಬೆಂಗಳೂರು (Bengaluru), ಮುಂಬೈ (Mumbai), ದೆಹಲಿ (NewDelhi), ಭುವನೇಶ್ವರದಲ್ಲಿ ಈ ಪ್ರಯೋಗ ನಡೆಯಲಿದೆ. ಪ್ರಯೋಗದ ಭಾಗವಾಗಿ ಆಯ್ದ ಪ್ರಾಂತ್ಯಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ (Digital Rupee) ಮೂಲಕ ವ್ಯವಹಾರ ನಡೆಯಲಿದೆ. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿವೆ. ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್‌ ರುಪಿ ಬಿಡುಗಡೆ – ಲಾಭ ಏನು? ಕ್ರಿಪ್ಟೋ ಕರೆನ್ಸಿಗಿಂತ ಭಿನ್ನ ಹೇಗೆ?

    crypto currencies bitcoin

    ಎಸ್‌ಬಿಐ, ಐಸಿಐಸಿಐ ಸೇರಿ ನಾಲ್ಕು ಬ್ಯಾಂಕ್‌ಗಳು ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಈ ಬ್ಯಾಂಕ್‌ಗಳು ಒದಗಿಸುವ ಡಿಜಿಟಲ್ ವ್ಯಾಲೆಟ್ ಸಹಾಯದೊಂದಿಗೆ ವ್ಯವಹಾರ ನಡೆಸಬಹುದು. ಈಗ ನಗದು ಮೇಲಿರುವ ನಂಬಿಕೆ, ಭದ್ರತೆ, ವಿಶ್ವಾಸಗಳನ್ನು ಡಿಜಿಟಲ್ ರೂಪಾಯಿಗೂ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    RBI

    ಡಿಜಿಟಲ್ ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
    ಆರ್‌ಬಿಐ ಬ್ಯಾಂಕುಗಳ ಮೂಲಕ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವಿತರಣೆ ಮಾಡುತ್ತದೆ. ನಂತರ ಅರ್ಹ ಬ್ಯಾಂಕುಗಳು ನೀಡುವ ಮೊಬೈಲ್ ಫೋನ್ ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ರೂಪಾಯಿಯನ್ನು ಬಳಸಲು ಸಾಧ್ಯವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆಯೂ ವಹಿವಾಟು ನಡೆಸಬಹುದು. ಆನ್‌ಲೈನ್ ವಹಿವಾಟಿನಂತೆ ವ್ಯಾಪಾರದ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಬಳಸಿ ರೂಪಾಯಿಗಳನ್ನು ಬಳಸಬಹುದಾಗಿದೆ ಎಂದು ಆರ್‌ಬಿಐ ಅಧಿಕೃತ ಪ್ರಕಟಣೆ ತಿಳಿಸಿದೆ.

    nirmala sitharaman budget

    ಎಲ್ಲಿ ಲಭ್ಯ?
    ಮೊದಲ ಹಂತದಲ್ಲಿ ಎಸ್‌ಬಿಐ (SBI), ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟ ಮಾಡಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಮಾತ್ರ ಡಿಜಿಟಲ್ ಕರೆನ್ಸಿ ಬಳಕೆಗೆ ಅನುಮತಿ ನೀಡಲಾಗಿದೆ.

    Digital Rupee 2

    ಲಾಭ ಏನು?
    ಬಹಳ ಮುಖ್ಯವಾಗಿ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಯಾರ ಬಳಿಯು ಇರುವುದಿಲ್ಲ. ಆಗಾಗ ಏರಿಳಿತ ಸಂಭವಿಸುತ್ತಿರುತ್ತದೆ. ಆದರೆ ಡಿಜಿಟಲ್ ರುಪಿ ವ್ಯವಸ್ಥೆಯ ಮೇಲೆ ಆರ್‌ಬಿಐ (RBI) ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ವಹಿವಾಟು ಶುಲ್ಕ ಇಳಿಕೆಯಾಗುವುದರಿಂದ ಎರಡು ಬ್ಯಾಂಕುಗಳ ನಡುವಿನ ವ್ಯವಹಾರ ಮತ್ತಷ್ಟು ಸರಳವಾಗಲಿದೆ. ಮುದ್ರಣ ವೆಚ್ಚ ಇರುವುದಿಲ್ಲ ಮತ್ತು ಹಾಳಾಗುವುದಿಲ್ಲ. ಅಷ್ಟೇ ಅಲ್ಲದೇ ಸಾಗಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿ ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ ಎಂದು ಟ್ವೀಟ್‌ ಮಾಡಿದ್ದಾರೆ.

    modi twitter account hacked 1

    ನರೇಂದ್ರ ಮೋದಿ ಅವರ ಹೆಸರಿನಲ್ಲಿ ಎರಡು ಖಾತೆ ಇದೆ. @narendramodi ಖಾತೆ ವೈಯಕ್ತಿಕ ಖಾತೆ ಆಗಿದ್ದರೆ @PMOIndia ಪ್ರಧಾನಿ ಸಚಿವಾಲಯ ಖಾತೆಯಾಗಿದೆ. ಭಾನುವಾರ ನಸುಕಿನ ಜಾವ 2:14ರ ವೇಳೆಗೆ @narendramodi ಖಾತೆಯಿಂದ ಬಿಟ್‌ ಕಾಯಿನ್‌ ಬಗ್ಗೆ ಟ್ವೀಟ್‌ ಮಾಡಲಾಗಿದೆ. ಇದನ್ನೂ ಓದಿ: ಭಾರತ ನೋವಲ್ಲಿದೆ ಆದರೆ ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ: ಮೋದಿ

    ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧವಾಗಿದೆ. ಸರ್ಕಾರ 500 ಬಿಟ್ ಕಾಯಿನ್ ಖರೀದಿಸಿದ್ದು ಪ್ರಜೆಗಳಿಗೆ ಹಂಚಲಾಗುವುದು ಎಂದು ಟ್ವೀಟ್‌ ಮಾಡಲಾಗಿತ್ತು. ಈ ವಿಚಾರ ತಕ್ಷಣವೇ ಗೊತ್ತಾಗಿ ಟ್ವೀಟರ್ ಸಂಸ್ಥೆಗೆ ಮಾಹಿತಿ ನೀಡಿ ಖಾತೆಯನ್ನು ಸರಿಪಡಿಸಲಾಗಿದೆ. ಈ ಹಿಂದಿನ ಟ್ವೀಟ್ ಪರಿಗಣಿಸದಂತೆ @PMOIndia ಖಾತೆಯ ಮನವಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌ ಆಗಿರುವುದು ಟ್ರೆಂಡಿಂಗ್‌ ಟಾಪಿಕ್‌ ಆಗಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್

    ಕರ್ನಾಟಕದಲ್ಲಿ ಶ್ರೀಕಿ ಪ್ರಕರಣದ ಬಳಿಕ ಬಿಟ್‌ ಕಾಯಿನ್‌ ವಿಚಾರ ದೇಶವ್ಯಾಪಿ ಸದ್ದು ಮಾಡಿದೆ. ಸಮಾಜ ವಿರೋಧಿ ಚಟುವಟಿಕೆಗಳಿಗೆ ವೇದಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಟ್‌ ಕಾಯಿನ್‌ ನಿಯಂತ್ರಿಸಲು ಈ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಲು ಕೇಂದ್ರ ಸರ್ಕಾರ ತಯಾರಿ ನಡೆದಿದೆ. ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ.

  • ಕಾನೂನು ಬದ್ಧವಾಗಿ ಬಿಟ್ ಕಾಯಿನ್ ಸ್ವೀಕರಿಸುವ ಯಾವುದೇ ಯೋಜನೆ ಸರ್ಕಾರದ‌ ಮುಂದಿಲ್ಲ – ನಿರ್ಮಲಾ

    ಕಾನೂನು ಬದ್ಧವಾಗಿ ಬಿಟ್ ಕಾಯಿನ್ ಸ್ವೀಕರಿಸುವ ಯಾವುದೇ ಯೋಜನೆ ಸರ್ಕಾರದ‌ ಮುಂದಿಲ್ಲ – ನಿರ್ಮಲಾ

    ನವದೆಹಲಿ : ದೇಶದಲ್ಲಿ ಕಾನೂನು ಬದ್ಧವಾಗಿ ಬಿಟ್ ಕಾಯಿನ್ ಸ್ವೀಕರಿಸುವ ಯಾವುದೇ ಯೋಜನೆ ಸರ್ಕಾರದ‌ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಂಸತ್ ಅಧಿವೇಶನ ವೇಳೆ ಸುಮಲತಾ, ಡಿಕೆ ಸುರೇಶ್‌ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

    ಭಾರತದಲ್ಲಿ ಸದ್ದಿಲ್ಲದೇ ಬಿಟ್ ಕಾಯಿನ್ ವ್ಯಾಪ್ತಿ ಹೆಚ್ಚುತ್ತಿದೆ, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಪ್ರಶ್ನೆ ಕೇಳಲಾಗಿತ್ತು. ‌ಇದಕ್ಕೆ ಉತ್ತರ ನೀಡಿರುವ ಅವರು, ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರವು ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿದ್ದಾರೆ‌.

    BIT COIN

    ಕೆಲವು ಮಾಹಿತಿಗಳ ಪ್ರಕಾರ, ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರು ಭಾರತದಲ್ಲಿದ್ದಾರೆ ಈ ಸಂಖ್ಯೆ 10 ಕೋಟಿಗೂ ಅಧಿಕವಾಗಿದೆ. ಭಾರತದ ಬಳಿಕ ಅಮೆರಿಕದಲ್ಲಿ ಅತಿ ಹೆಚ್ಚು ಮಂದಿ ಹೂಡಿಕೆ ಮಾಡಿದ್ದು ಈ ಸಂಖ್ಯೆ 2.74 ಕೋಟಿಯಾಗಿದೆ. ರಷ್ಯಾ 1.74 ಕೋಟಿ ಮತ್ತು ನೈಜೀರಿಯಾ 1.30 ಕೋಟಿಯೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ‘ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021’ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ದೇಶದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಲು ಮಸೂದೆ ಪ್ರಯತ್ನಿಸಿದೆ. ಮಸೂದೆಯು ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ. ಆದಾಗ್ಯೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸುತ್ತದೆ ಎಂದು ಲೋಕಸಭೆಯ ವೆಬ್‌ಸೈಟ್‌ನಲ್ಲಿನ ಬುಲೆಟಿನ್ ಉಲ್ಲೇಖಿಸಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸಲು ಪ್ರಯತ್ನಿಸಿದೆ. ಇದನ್ನೂ ಓದಿ: ಮಹಿಳಾ ಸಂಸದರೊಂದಿಗೆ ಸೆಲ್ಫಿ, ನೆಟ್ಟಿಗರಿಂದ ಕ್ಲಾಸ್‌- ತರೂರ್ ಕ್ಷಮೆಯಾಚನೆ

    Bitcoin

    2017 ರಲ್ಲಿ, ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆರ್ಥಿಕ ವ್ಯವಹಾರಗಳ ಇಲಾಖೆ(ಡಿಇಎ) ಕಾರ್ಯದರ್ಶಿ ಸುಭಾಷ್ ಗಾರ್ಗ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಅಂತರ-ಸಚಿವಾಲಯ ಸಮಿತಿಯನ್ನು ಸ್ಥಾಪಿಸಿದೆ. ಸಮಿತಿಯು ಜುಲೈ 2019 ರಲ್ಲಿ ವಿವರವಾದ ವರದಿಯನ್ನು ಸಲ್ಲಿಸಿತು. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳಿಗೆ ನಿಷೇಧವನ್ನು ಪ್ರಸ್ತಾಪಿಸಿತು. ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ಸಾರ್ವಭೌಮರಲ್ಲದವರು ರಚಿಸಿದ್ದಾರೆ ಮತ್ತು ಈ ಅರ್ಥದಲ್ಲಿ ಸಂಪೂರ್ಣವಾಗಿ ಖಾಸಗಿ ಉದ್ಯಮಗಳು ಎಂದು ಸಮಿತಿಯು ಶಿಫಾರಸು ಮಾಡಿದೆ. ಈ ಖಾಸಗಿ ಕ್ರಿಪ್ಟೋಕರೆನ್ಸಿಗಳು ಕರೆನ್ಸಿಯ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರದ ಕಾರಣ ಅವುಗಳಿಗೆ ಯಾವುದೇ ಅಂತರ್ಗತ ಮೌಲ್ಯವಿಲ್ಲ. ಸಮಿತಿಯು “ರಾಜ್ಯದಿಂದ ನೀಡಲಾದ ಯಾವುದೇ ಕ್ರಿಪ್ಟೋಕರೆನ್ಸಿಯನ್ನು ಹೊರತುಪಡಿಸಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ” ಎಂದು ಸೂಚಿಸಿದೆ. ಇದನ್ನೂ ಓದಿ:  ಮಾರ್ಷಲ್‌ಗಳ ಮೇಲೆ ಹಲ್ಲೆ – ರಾಜ್ಯಸಭೆಯ 12 ಸದಸ್ಯರು ಅಮಾನತು

    crypto currencies bitcoin

    ಈ ತಿಂಗಳ ಆರಂಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್‌ಬಿಐ, ಹಣಕಾಸು ಸಚಿವಾಲಯ ಮತ್ತು ಸೆಬಿಯ ಅಧಿಕಾರಿಗಳೊಂದಿಗೆ ಕ್ರಿಪ್ಟೋಕರೆನ್ಸಿಗಳ ಕುರಿತು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದರು. ಇದಕ್ಕೂ ಮುನ್ನ ಇತ್ತೀಚೆಗೆ ಸಿಡ್ನಿ ಸಂವಾದದಲ್ಲಿ, ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಈ ಕ್ರಿಪ್ಟೋಕರೆನ್ಸಿ ಮೇಲೆ ಕೆಲಸ ಮಾಡುವುದು ಮುಖ್ಯ ಮತ್ತು ಅದು ನಮ್ಮ ಯುವಕರನ್ನು ಹಾಳು ಮಾಡಬಹುದು, ಇದು ತಪ್ಪು ಕೈಗಳಿಗೆ ಸಿಗದಂತೆ ನೋಡಿಕೊಳ್ಳುವುದು ಮುಖ್ಯ ಎಂದಿದ್ದರು.

  • ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ

    ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ

    ಬೆಂಗಳೂರು: ಬಿಟ್ ಕಾಯಿನ್ ಕೆಸರೆರಚಾಟದಲ್ಲಿ ಪುತ್ರನನ್ನು ಎಳೆದು ತಂದ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ರಾಕೇಶ್ ಈಗ ಬದುಕಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲಾ. ಬಿಜೆಪಿಯವರು ಸುಮ್ಮನೆ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಿದ್ದಾರಾ..? ಯಾಕೆ ಎಲ್ಲರೂ ರಿಯಾಕ್ಟ್ ಮಾಡ್ತಿದ್ದಾರೆ. ಅಲ್ಲಿಗೆ ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ…?. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ…?. ಸುಪ್ರಿಂ ಕೋರ್ಟ್ ಹಾಲಿ ನ್ಯಾಯ ಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಲಿ. ಎಲ್ಲವೂ ತನಿಖೆ ಆಗಲಿ 2013 ರಿಂದಲೂ ತನಿಖೆ ನಡೆಸಲಿ ಆದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

    ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲೇ ನಡೆದಿರಲಿ. ಒಂದು ನ್ಯಾಯಾಂಗ ತನಿಖೆ ಮಾಡಿಸಿ. ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ ರಚನೆ ಮಾಡಿ ತನಿಖೆಗೆ ಕೊಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ

    ಶ್ರೀಕಿ ಬಂಧಿಸಿದಾಗ ಗೃಹ ಸಚಿವರಾಗಿದ್ದವರು ಬೊಮ್ಮಾಯಿ ಅವರಲ್ಲವೇ..? ಶ್ರೀಕಿಯಿಂದ ಬಿಟ್ ಕಾಯಿನ್ ವರ್ಗಾವಣೆಗೆ ಪೊಲೀಸರು wallet ಮಾಡಿಕೊಂಡಿದ್ರು. wallet ಗೆ ವರ್ಗಾವಣೆಯಾದ 0.8 ಬಿಟ್ ಕಾಯಿನ್ ಏನಾಯ್ತು..?ಇದಕ್ಕೆ ಉತ್ತರ ಕೊಡಬೇಕು ಅವರು. ಅಧಿವೇಶನ ಬರಲಿ, ಪಕ್ಷದಲ್ಲಿ ಚರ್ಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಿಎಂ ಬೊಮ್ಮಾಯಿ ಅವರ ಪಾತ್ರವಿದೆ ಅಂತ ನಾನು ನೇರವಾಗಿ ಹೇಳಲ್ಲ. ತನಿಖೆ ನಡೆಯಬೇಕು ಆಗಲೇ ಸತ್ಯ ಬಹಿರಂಗಗೊಳ್ಳಲಿದೆ. ನನ್ನ ಬಳಿ ದಾಖಲೆಗಳಿಲ್ಲ ಆಧಾರ ಇಲ್ಲದೆ ನಾನು ಮಾತಾಡಲ್ಲ ಎಂದರು.

  • ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಹುಬ್ಬಳ್ಳಿ: ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಜನಸ್ವರಾಜ ಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಸ್ವರಾಜ ಯಾತ್ರೆ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವೆ. ಒಟ್ಟು ನಾಲ್ಕು ಭಾಗಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ನಳಿನ್ ಕುಮಾರ್ ಕಟೀಲ್, ಮತ್ತೊಂದು ಕಡೆ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ

    bjp cng

    ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಬಹುಮತ ಪಡೆಯಬೇಕು ಎಂಬ ಅಪೇಕ್ಷೆ ಇದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ. ನಾವು ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾನು ಉತ್ತರ ಕನ್ನಡ ಮುಗಿಸಿ ಮತ್ತೆ ಹಾವೇರಿಗೆ ಹೋಗುತ್ತೇನೆ. ನಂತರ ಗದಗ, ಬಾಗಲಕೋಟೆ, ಬಿಜಾಪುರ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

    Congress

    ಕಾಂಗ್ರೆಸ್ ಎರಡು ಬಣವಾಗಿರುವ ಕುರಿತು ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಯಾವ ಪಕ್ಷದ ಬಗ್ಗೆಯೂ ಟೀಕೆ,ಟಿಪ್ಪಣಿಗಳನ್ನು ಮಾಡುವುದಿಲ್ಲ. ಕಾಂಗ್ರೆಸ್ ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮುಂದೆ ನೋಡೋಣ ಎಂದು ತಿಳಿಸಿದರು.

    Bitcoin

    ಬಿಟ್ ಕಾಯಿನ್ ಮುಚ್ಚಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಕುರಿತು ಮಾತನಾಡಿದ ಅವರು, ಅದೆಲ್ಲ ಸುಳ್ಳು. ಈ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಪಕ್ಷದಲ್ಲಿ ಈ ಕುರಿತು ಯಾವುದೇ ದಾಖಲೆಗಳಿದ್ದರೂ ನಮಗೆ ಕೊಟ್ಟರೆ ಅವರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆ. ಯಾವುದನ್ನು ಮುಚ್ಚಿಡುವುದಿಲ್ಲ, ಯಾರನ್ನು ರಕ್ಷಣೆಯನ್ನು ಸಹ ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ ಕರೆ 

    mandya rain

    ರಾಜ್ಯದ ಪ್ರವಾಹ ಕುರಿತು ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಈಗಾಗಲೇ ಸರ್ವೇ ಮಾಡಿಸುತ್ತಿದ್ದಾರೆ. ಈ ಕುರಿತು ಪರಿಹಾರ ಕೊಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಭೆಗಳನ್ನು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಬೆಳೆ ನಾಶವಾಗಿದೆ ಅವರಿಗೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

    b s yediyurappa

  • ಮಾತನಾಡೋದು ಬೇರೆ, ದಾಖಲೆ ಬಿಡುಗಡೆ ಮಾಡೋದು ಬೇರೆ: ಸಿದ್ದರಾಮಯ್ಯ

    ಮಾತನಾಡೋದು ಬೇರೆ, ದಾಖಲೆ ಬಿಡುಗಡೆ ಮಾಡೋದು ಬೇರೆ: ಸಿದ್ದರಾಮಯ್ಯ

    ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ನಮ್ಮ ಬಳಿ ದಾಖಲೆ ಕೇಳಿದರೆ ಹೆಂಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಪ್ರಶ್ನಿಸಿದ್ದಾರೆ.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಬಳಿ ಸರ್ಕಾರವಿದೆ‌. ದಾಖಲೆ ಅವರೇ ಕೊಡಬೇಕು. ನಮ್ಮ ಬಳಿ ದಾಖಲೆ ಕೇಳಿದ್ರೆ ಹೆಂಗೆ? ದಾಖಲೆ ಬಿಡುಗಡೆ ಮಾಡ್ತೀನಿ ಅಂತ ನಾನು ಎಲ್ಲಿ ಹೇಳಿದ್ದೆ? ಮಾತನಾಡುತ್ತೇನೆ ಎಂದಿದ್ದೆ ಮಾತಾಡೋದು ಬೇರೆ ದಾಖಲೆ ಬಿಡುಗಡೆ ಮಾಡೋದು ಬೇರೆ ಎಂದಿದ್ದಾರೆ. ಇದನ್ನೂ ಓದಿ: ಮಂಗಳಮುಖಿ ಪೂಜಾರಿ ನಿಗೂಢ ಸಾವಿಗೆ ಟ್ವಿಸ್ಟ್- ಸಾವಿಗೂ ಮುನ್ನ ಮಾಡಿದ್ದ ಸೆಲ್ಫಿ ವಿಡಿಯೋ ಬಯಲು!

    Bitcoin

    ನಿನ್ನೆ ಅರ್ಧದಲ್ಲಿ ಭಾಷಣ ಮೊಟಕುಗೊಳಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಭಾಷಣಕ್ಕೆ ಅಡ್ಡಿಯೂ ಇಲ್ಲ ಪಡ್ಡಿಯೂ ಇಲ್ಲ ನಾನು ಮೊದಲೇ ಭಾಷಣ ಮಾಡಲ್ಲ ಶುಭಾಶಯ ಹೇಳಿ ಹೋಗುತ್ತೇನೆ ಎಂದಿದ್ದೆ. ಹಾಗಾಗಿ ಭಾಷಣ ಅರ್ಧಕ್ಕೆ ಮುಗಿಸಿದೆ. ಬೇರೆ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ವಿಶ್ ಮಾಡ್ತೀನಿ ಎಂದು ಹೇಳಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಮೆಂಟಲ್ ಗಿರಾಕಿಗಳು, ಅವರಿಗೆ ನಾನ್ಯಾಕೆ ಉತ್ತರಿಸಲಿ: ಡಿಕೆಶಿ ವಾಗ್ದಾಳಿ

    ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರದಿಂದ ಭಾರೀ ಬಿಟ್‌ ಕಾಯಿನ್‌ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ತಿರುಗೇಟು ನೀಡಿದ್ದ ಸಿಎಂ ಬೊಮ್ಮಾಯಿ ನಾವು ಹಗರಣ ಮಾಡಿದ್ದೇವೆ ಎಂಬ ಆರೋಪಕ್ಕೆ ಕಾಂಗ್ರೆಸ್‌ನವರು ದಾಖಲೆಯನ್ನು ಬಿಡುಗಡೆ ಮಾಡಲಿ ಎಂದು ಸವಾಲು ಎಸೆದಿದ್ದರು.

  • ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

    ಬೆಂಗಳೂರು: ಬಿಟ್‍ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಬಿಜೆಪಿ ವಿರುದ್ಧ ಆರೋಪ ಮಾಡ್ತಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧವೇ ಕಮಲ ಪಡೆ ಹೊಸ ಬಾಂಬ್ ಸಿಡಿಸಿದೆ. ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಎನ್ನಲಾದ ಶ್ರೀಕಿಗೆ ಪ್ರಿಯಾಂಕ್ ಖರ್ಗೆ ಸಂಪರ್ಕ ಇತ್ತು ಎಂದು ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪ ಮಾಡಿದ್ದಾರೆ.

    ಪ್ರಿಯಾಂಕ್ ಐಟಿ ಬಿಟಿ ಮಂತ್ರಿ ಆಗಿದ್ದಾಗ ಶ್ರೀಕಿಯನ್ನು ಭೇಟಿ ಮಾಡಿ ಬಿಟ್ ಕಾಯಿನ್ ಹಗರಣದಿಂದ ಕಪ್ಪು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದ್ದು, ಅವರು ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್‍ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ.. ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕು ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಟ್‌ಕಾಯಿನ್‌ ಹಗರಣಕ್ಕೆ ಸಿಎಂ ತಲೆದಂಡವಾಗಲಿದೆ : ಪ್ರಿಯಾಂಕ್ ಖರ್ಗೆ

    Bitcoin Scam Shri Krishna alias Shriki 5

    ಕಟೀಲ್ ಮೌನವನ್ನು ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆಗೆ ಕೃಷಿ ಮಂತ್ರಿಗಳು ತಿರುಗೇಟು ನೀಡಿದ್ದಾರೆ. ಕಟೀಲ್ ಲೆವೆಲ್ಲೇ ಬೇರೆ. ಪ್ರಿಯಾಂಕ್ ಹೇಳಿಕೆಗೆಲ್ಲಾ ಅವರು ಉತ್ತರ ಕೊಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

    ಶ್ರೀಕಿಗೆ ಭದ್ರತೆ ಕೊಡಬೇಕೆಂಬ ಸಿದ್ದರಾಮಯ್ಯ ಒತ್ತಾಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಶ್ರೀಕಿಗೆ ಸರ್ಕಾರಕ್ಕಿಂತ್ಲೂ ಕಾಂಗ್ರೆಸ್‍ನವರೇ ಹೆಚ್ಚು ರಕ್ಷಣೆ ಕೊಡ್ತಾರೆ ಎಂದು ಟಾಂಗ್ ನೀಡಿದ್ದಾರೆ.