Saturday, 25th January 2020

3 weeks ago

ನಾವು ಊದಿದ್ರೆ ನೀವೆಲ್ಲ ಹಾರಿ ಹೋಗ್ತೀರಿ, ಸಿಎಎ ವಿರೋಧಿಗಳನ್ನು ಶೂಟ್ ಮಾಡ್ಬೇಕು – ಸೋಮಶೇಖರ ರೆಡ್ಡಿ

ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡಿದ ಎಲ್ಲರನ್ನೂ ಶೂಟ್ ಮಾಡಿದ್ದರೆ ಅನುಕೂಲ ಆಗಿರೋದು. ದೇಶದ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ನೀವು ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮೂಲಕ ಶಾಸಕ ಸೋಮಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿರುವ ಶಾಸಕ ಸೋಮಶೇಖರ ರೆಡ್ಡಿ, ಪೌರತ್ವ ಕಾಯ್ದೆಯನ್ನು ವಿರೋಧಿಸುವವರು ಜಾಸ್ತಿ ನಕ್ರಾ ಮಾಡಿದರೆ ಸರಿ ಇರಲ್ಲ. ನಾವು ಶೇ.80 ರಷ್ಟು ಜನ ಇದ್ದೇವೆ. ಹಿಂದುಗಳು ಖಡ್ಗ ಹಿಡಿದುಕೊಂಡು […]

3 weeks ago

ಬುಗರಿ ಆಡಿ ಸೈಕಲ್ ಓಡಿಸಿದ ಶಾಸಕ ರಾಜೀವ್ ವಿಡಿಯೋ ವೈರಲ್

ಚಿಕ್ಕೋಡಿ: ಬಿಜೆಪಿ ಶಾಸಕ ಪಿ ರಾಜೀವ್ ತಮ್ಮ ವಿಶಿಷ್ಟ ನಡುವಳಿಕೆಯಿಂದ ಸದಾ ಒಂದಿಲ್ಲಾ ಒಂದು ಸುದ್ದಿಯಲ್ಲಿ ಇರುತ್ತಾರೆ. ಕೆಲ ದಿನಗಳ ಹಿಂದೆ ಶಾಲಾ ಮಕ್ಕಳಿಗೆ ಸಂವಿಧಾನ ಹಾಗೂ ವಿಜ್ಞಾನದ ಬಗ್ಗೆ ಪಾಠ ಮಾಡಿ ‘ಶಾಸಕ ಶಿಕ್ಷಕ’ ಎಂದು ಸುದ್ದಿಯಾಗಿದ್ದ ಅವರು ಬುಗರಿ ಆಟವಾಡಿ ಹಾಗೂ ತಮ್ಮ ಕ್ಷೇತ್ರದಲ್ಲಿ ಸೈಕಲ್ ಮೂಲಕ ಕ್ಷೇತ್ರದ ಜನರ ಬಳಿ ತೆರಳಿ...

ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ: ರೇಣುಕಾಚಾರ್ಯ ವಿರುದ್ಧ ಬಿಎಸ್‌ವೈ ಗರಂ

3 months ago

ಬೆಂಗಳೂರು: ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೂಗುಚ್ಚ ಕೊಡಲು ಹೋಗಿ ಶಾಸಕ ಎಂ.ಪಿ.ರೇಣುಕಾಚರ್ಯ ಬೈಗುಳ ತಿಂದ ಪ್ರಸಂಗ ಇಂದು ನಡೆದಿದೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೂ ಮುನ್ನ...

ಮಹಾರಾಷ್ಟ್ರಕ್ಕೆ ನೀರು ಬಿಡುವ ಬಗ್ಗೆ ಸಿಎಂ ಪರ ಯತ್ನಾಳ್ ಬ್ಯಾಟಿಂಗ್

3 months ago

– ಕರ್ನಾಟಕ, ಮಹಾರಾಷ್ಟ್ರ ಒಂದೇ ತಾಯಿಯ ಮಕ್ಕಳಿದ್ದಂತೆ – ಕೊಡುವುದು, ಕೊಳ್ಳುವುದು ಸಹಜ ಪ್ರಕ್ರಿಯೆ ವಿಜಯಪುರ: ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರವಾಗಿ ಹೇಳಿಕೆ ನೀಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟ್ ಬೀಸಿದ್ದಾರೆ. ನಗರದಲ್ಲಿ...

ಬಿಗ್ ಬಾಸ್ ನಿಷೇಧಿಸುವಂತೆ ಬಿಜೆಪಿ ಶಾಸಕನಿಂದ ಕೇಂದ್ರ ಸಚಿವರಿಗೆ ಪತ್ರ

4 months ago

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿಯ ಬಿಗ್ ಬಾಸ್‍ನ 13ನೇ ಆವೃತ್ತಿಯ ಪ್ರಸಾರಕ್ಕೆ ತಡೆ ನೀಡಬೇಕೆಂದು ಬಿಜೆಪಿಯ ಗಾಜಿಯಾಬಾದ್ ಶಾಸಕ ನಂದ ಕಿಶೋರ್ ಗುಜ್ಜಾರ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ...

ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

4 months ago

-ಶೇ.48ರಷ್ಟು ಮತಗಳಿಂದ ನನ್ನ ಜಯ ಡೆಹರಾಡೂನ್: ನನ್ನ ವಿಧಾನಸಭಾ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ. ನಾನು ಕೇವಲ ಶೇ.48ರಷ್ಟು ಮತಗಳನ್ನು ಪಡೆದು ಶಾಸಕನಾಗಿದ್ದೇನೆ ಎಂದು ಬಿಜೆಪಿ ಶಾಸಕ ಸುರೇಶ್ ರಾಠೋಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಕ್ಷೇತ್ರದ ಶಾಸಕ...

ನ.17ರೊಳಗೆ ರಾಮ ಮಂದಿರ ನಿರ್ಮಿಸುತ್ತೇವೆ- ಬಿಜೆಪಿ ಶಾಸಕ

4 months ago

ಜೈಪೂರ್: ಅಯೋಧ್ಯೆ ಭೂ ವಿವಾದ ಪ್ರಕರಣದ ಕುರಿತು ಇನ್ನು ಹತ್ತು ಜನರನ್ನು ವಿಚಾರಣೆ ನಡೆಸುವುದು ಬಾಕಿ ಇದೆ. ಈಗಲೇ ಬಿಜೆಪಿ ಶಾಸಕರೊಬ್ಬರು ನವೆಂಬರ್ 17ರೊಳಗೆ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದ ಪಾಲಿಯಲ್ಲಿ ನಡೆದ ರಾಮಲೀಲಾ ಕಾರ್ಯಕ್ರಮದಲ್ಲಿ...

ಸಹಾಯ ಕೇಳಿದ ಸಂತ್ರಸ್ತರ ಮೇಲೆ ಎಂ.ಪಿ ಕುಮಾರಸ್ವಾಮಿ ದರ್ಪ

6 months ago

ಚಿಕ್ಕಮಗಳೂರು: ಸಹಾಯ ಕೇಳಿದ ಸಂತ್ರಸ್ತರ ಮೇಲೆ ದರ್ಪ ಮೆರೆದಿರುವ ಆರೋಪವೊಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಕೇಳಿ ಬಂದಿದೆ. ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಈ ನಡುವೆ ಸಹಾಯ ಕೇಳಿದ ಪ್ರವಾಹ ಸಂತ್ರಸ್ತರ ಹರಿಹಾಯ್ದಿದ್ದಾರೆ....