ಮುಂಬೈ: ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ (Sunil Kamble) ಮಹಾರಾಷ್ಟ್ರದ (Maharastra) ಪುಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
Advertisement
ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ತೃತೀಯಲಿಂಗಿ ಆರೈಕೆಗಾಗಿ ವಿಶೇಷ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. ಇದನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಪುಣೆ ಜಿಲ್ಲೆಯ ಉಸ್ತುವಾರಿ ಸಚಿವ ಅಜಿತ್ ಪವಾರ್ (Ajit Pawar) ಉದ್ಘಾಟಿಸಿದರು. ಕಾರ್ಯಕ್ರಮದ ಸ್ಥಳದಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಸುನೀಲ್ ಕಾಂಬ್ಳೆ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಇದಾದ ಬಳಿಕ ವೇದಿಕೆಯಿಂದ ಕೆಳಗಿಳಿಯುವಾಗ ಕಾಂಬ್ಳೆಯವರು ಎಡವಿ ಬಿದ್ದರು. ಇದೇ ಕೋಪದ ಕ್ಷಣದಲ್ಲಿ ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆ ಸಮಯದಲ್ಲಿ ನಿಜವಾಗಿಯೂ ಏನಾಯಿತು ಎಂದು ಯಾರಿಗೂ ಅರ್ಥವಾಗಲಿಲ್ಲ. ಆದರೆ ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸುಧಾಮೂರ್ತಿ ಇನ್ಫೋಸಿಸ್‌ಗೆ ಸೇರಲು ನಾನು ಒಪ್ಪಿರಲಿಲ್ಲ: ಕಾರಣ ಬಿಚ್ಚಿಟ್ಟ ನಾರಾಯಣ ಮೂರ್ತಿ
Advertisement
In a viral video, an incident occurred in a program which saw presence of Deputy Chief Minister Ajit Pawar, where BJP MLA Sunil Kamble slapped a police officer. #bjp #BJPMLA #SunilKamble #Pune #AjitPawar #PuneBJP #Policeofficer #Punecity #आमदार #सुनीलकांबळे @BJP4Maharashtra… pic.twitter.com/obL0ggS6Z0
— Pune Pulse (@pulse_pune) January 5, 2024
ಕಾರ್ಯಕ್ರಮದಲ್ಲಿ ಸಚಿವ ಹಸನ್ ಮುಶ್ರೀಫ್, ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ, ಸಂಸದ ಸುನೀಲ ತಾಟಕರೆ, ಶಾಸಕ ಸುನೀಲ ಕಾಂಬಳೆ, ಶಾಸಕ ರವೀಂದ್ರ ಧಾಂಗೇಕರ, ಸಸೂನ್ ಆಸ್ಪತ್ರೆಯ ವಿನಾಯಕ ಕಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಶಾಸಕ ಸುನೀಲ್ ಕಾಂಬ್ಳೆ ನಾನಾ ಕಾರಣಗಳಿಗಾಗಿ ಆಗಾಗ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಈ ಘಟನೆಯನ್ನು ಉಪಮುಖ್ಯಮಂತ್ರಿ ಪ್ರತ್ಯಕ್ಷವಾಗಿ ನೋಡಿರುವುದರಿಂದ ಶಾಸಕರ ಮೇಲೆ ಕ್ರಮ ಕೈಗೊಳ್ಳುತ್ತಾರಾ ಎಂಬ ಪ್ರಶ್ನೆ ಎದ್ದಿದೆ.