Friday, 15th November 2019

Recent News

1 month ago

ತರಬೇತಿ ವಿಮಾನ ಪತನ- ಇಬ್ಬರು ಪೈಲಟ್ ಸಾವು

ಹೈದರಾಬಾದ್: ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನಪುರ ಗ್ರಾಮದ ಹೊಲದಲ್ಲಿ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ವಿದ್ಯಾರ್ಥಿ ಪೈಲಟ್‍ಗಳು ಮೃತಪಟ್ಟಿದ್ದಾರೆ. ಹೈದರಾಬಾದ್‍ನ ಏವಿಯೇಷನ್ ಅಕಾಡೆಮಿಯ ವಿದ್ಯಾರ್ಥಿಗಳಾದ ಪ್ರಕಾಶ್ ವಿಶಾಲ್ ಹಾಗೂ ಅಮಾನ್‍ಪ್ರೀತ್ ಕೌರ್ ಮೃತರು ಎಂದು ಗುರುತಿಸಲಾಗಿದೆ. ಸೆಸ್ನಾ ವಿಮಾನವು ಹೈದರಾಬಾದ್‍ನ ಬೇಗಂಪೆಟ್ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಅದೃಷ್ಟವಶಾತ್ ಕೃಷಿ ಭೂಮಿಯಲ್ಲಿಯೇ ವಿಮಾನ ಪತನಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ತರಬೇತಿ ನಿರತ ವಿಮಾನವು ಬೇಗಂಪೇಟ್ ಸ್ಟೇಷನ್‍ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಸ್ಥಳೀಯರು […]

3 months ago

ಅಭಿನಂದನ್‍ಗೆ ಹೊಡೆದು, ಗಾಯಗೊಳಿಸಿದ್ದ ಪಾಕ್ ಯೋಧನನ್ನು ಹತ್ಯೆಗೈದ ಭಾರತೀಯ ಸೇನೆ

ನವದೆಹಲಿ: ಪಾಕ್ ಭೂಪ್ರದೇಶದಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದು ಹಿಂಸೆ ನೀಡಿದ್ದ ಪಾಕ್ ಯೋಧನೊಬ್ಬನನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ. ಪಾಕಿಸ್ತಾನದ ಅಹ್ಮದ್ ಖಾನ್ ಭಾರತೀಯ ಯೋಧರ ಗುಂಡಿಗೆ ಬಲಿಯಾದ ಯೋಧ. ಅಹ್ಮದ್ ಖಾನ್ ಪಾಕ್ ಸೇನೆಯಲ್ಲಿ ಸುಬೇದಾರ್ ಆಗಿ ಕೆಲಸ ಮಾಡುತ್ತಿದ್ದ. ಅಹ್ಮದ್ ಖಾನ್ ಆಗಸ್ಟ್ 17ರಂದು...

ಜಮ್ಮು ಕಾಶ್ಮೀರದಲ್ಲಿ ಮಿಗ್ ವಿಮಾನ ಪತನ – ಇತ್ತ ಪಾಕಿಸ್ತಾನದ ಯುದ್ಧ ವಿಮಾನ ಭಾರತಕ್ಕೆ ಪ್ರವೇಶ?

9 months ago

ಶ್ರೀನಗರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಹುತಾತ್ಮರಾಗಿದ್ದಾರೆ. ಬುದ್ಗಾಮ್‍ನ ನಸಲಾಪುರದಲ್ಲಿ ಗಸ್ತು ತಿರುಗುವ ವೇಳೆ ಮಿಗ್ ವಿಮಾನ ಪತನಗೊಂಡಿದೆ. ಜಮ್ಮು- ಕಾಶ್ಮೀರದ ನೌಶೇರಾ ವಲಯದಲ್ಲಿ ಪಾಕಿಸ್ತಾನದ ಮೂರು ಯುದ್ಧ ವಿಮಾನ ಗಡಿ ಉಲ್ಲಂಘನೆ...

ಏರ್ ಶೋನಲ್ಲಿಂದು ಮಹಿಳೆಯರ ಹವಾ- ತೇಜಸ್ ವಿಮಾನದಲ್ಲಿ ಹಾರಾಡಲಿದ್ದಾರೆ ಪಿ.ವಿ ಸಿಂಧು

9 months ago

ಬೆಂಗಳೂರು: ಇಂದಿನ ಏರ್ ಶೋನಲ್ಲಿ ಮಹಿಳೆಯರು ಹವಾ ಸೃಷ್ಟಿಸಲಿದ್ದಾರೆ. ಲೋಹದ ಹಕ್ಕಿಗಳನ್ನು ಮಹಿಳಾ ಪೈಲೆಟ್ ಗಳು ಚಲಾಯಿಸುತ್ತಿದ್ದಾರೆ. ಮಾರ್ಚ್ 8ರ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿನ ಏರ್ ಇಂಡಿಯಾ ಶೋದಲ್ಲಿ ಮಹಿಳಾ ಪೈಲಟ್‍ಗಳೇ ಆಗಸದಲ್ಲಿ ಕಸರತ್ತು ಮಾಡಿ ಪವರ್ ತೋರಿಸಲಿದ್ದಾರೆ. ಇಂದು...

ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

1 year ago

ಜಕಾರ್ತ: ಇಂಡೋನೇಷ್ಯಾದ ಲಯನ್ಸ್ ಏರ್‌‌ಲೈನ್ಸ್‌ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಮೃತಪಟ್ಟಿದ್ದಾರೆ. ದುರಂತ ಸಂಭವಿಸಿದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಯ ಜಿಟಿ610 ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿದ್ದ ಭಾರತದ ಭಾವ್ಯೆ ಸುನೆಜಾ ಅವರು...

ಪೈಲಟ್‍ಗೆ ಅನಾರೋಗ್ಯ- ಮಂಗ್ಳೂರು ರನ್‍ವೇಯಲ್ಲಿ ನಿಂತ ವಿಮಾನ

1 year ago

ಮಂಗಳೂರು: ಪೈಲಟ್‍ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನವೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲೇ ನಿಂತುಕೊಂಡಿದೆ. ಮಂಗಳವಾರ ತಡರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್-ಎಸ್ ಜಿ59 ವಿಮಾನವು ರನ್ ವೇನಲ್ಲೇ ನಿಂತುಕೊಂಡಿದೆ. ಸುಮಾರು...

ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

1 year ago

ರಿಯಾದ್: ಸೌದಿ ಅರೇಬಿಯಾದ ರಿಯಾದ್ ಹೋಟೆಲ್‍ವೊಂದರಲ್ಲಿ ಏರ್ ಇಂಡಿಯಾ ಪೈಲಟ್‍ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಿತ್ವಿಕ್ ತಿವಾರಿ(27) ಮೃತಪಟ್ಟ ಪೈಲೆಟ್. ರಿತ್ವಿಕ್ ಹೋಟೆಲ್‍ನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ರಿತ್ವಿಕ್ ಹೋಟೆಲ್‍ನಲ್ಲಿರುವ ಜಿಮ್‍ನ ಶೌಚಾಲಯದಲ್ಲಿ ಬುಧವಾರ ಬೆಳಗ್ಗೆ ಕುಸಿದು...

ಬೇಟೆಗಾರರಿಂದ ರಕ್ಷಿಸಿದ ನಂತರ ಪೈಲಟ್‍ನೊಂದಿಗೆ ಸ್ನೇಹ ಬೆಳೆಸಿಕೊಂಡ ಚಿಂಪಾಂಜಿ ಮರಿ- ಕ್ಯೂಟ್ ವಿಡಿಯೋ ವೈರಲ್!

2 years ago

ಕಿನ್ಶಾಸಾ: ಮುದ್ದಾದ ಚಿಂಪಾಂಜಿ ಮರಿಯನ್ನು ಬೇಟೆಗಾರರಿಂದ ರಕ್ಷಿಸಿದ ಬಳಿಕ ಪೈಲಟ್ ಹೆಲಿಕಾಪ್ಟರ್ ನಲ್ಲಿ ಚಿಂಪಾಂಜಿಯ ಜೊತೆ ಹಾರಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ. ಮುಸ್ಸಾ ಎಂಬ ಮುದ್ದಾದ ಚಿಂಪಾಜಿ...