Wednesday, 18th September 2019

7 mins ago

ಪಾಕ್ ಹಾಸ್ಟೆಲ್‍ನಲ್ಲಿ ಹಿಂದೂ ವಿದ್ಯಾರ್ಥಿನಿ ಶವ ಪತ್ತೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಲೇ ಇದ್ದು, ಈಗ ಪಾಕಿನ ಸಿಂಧ್ ಪ್ರಾಂತ್ಯದಲ್ಲಿನ ಕಾಲೇಜು ಹಾಸ್ಟೆಲ್‍ನಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಘೋಟ್ಕಿಯ ಮಿರ್ಪುರ್ ಮ್ಯಾಥೆಲೊ ನಿವಾಸಿ ನಮೃತಾ ಚಂದಾನಿ ಮೃತ ದುರ್ದೈವಿ. ಬಲವಂತವಾಗಿ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸುವ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಪ್ರಾಥಮಿಕ ವರದಿಯಲ್ಲಿ ತಿಳಿಸುವುದು ಕಷ್ಟ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು […]

18 hours ago

ಮುಂದಿನ ಪ್ರಧಾನಿ ಅಫ್ರಿದಿ – ಪಾಕಿಸ್ತಾನದಲ್ಲಿ ಬಿಸಿ ಬಿಸಿ ಚರ್ಚೆ

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ವಕ್ತಾರ, ಡಿಜಿ ಐಎಸ್‍ಪಿಆರ್ ಆಸಿಫ್ ಗಫೂರ್ ಹಾಗೂ ಕ್ರಿಕೆಟರ್ ಶಾಹೀದ್ ಅಫ್ರಿದಿ ಬಿಗಿದಪ್ಪಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮುಂದಿನ ಪಾಕ್ ಪ್ರಧಾನಿಯಾಗಾಲಿದ್ದಾರಾ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದ ಟ್ವಿಟ್ಟರಿನಲ್ಲಿ ಇಬ್ಬರು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ನಿಡಾ ಖಾನ್,...

ಮೋದಿಗೆ ನರಕ ತೋರಿಸುತ್ತೇನೆ ಎಂದ ಪಾಕ್ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ?

3 days ago

ಇಸ್ಲಾಮಾಬಾದ್: ಕಾಶ್ಮೀರ ಬೇಕು ಎನ್ನುತ್ತಿರುವ ಮೋದಿಗೆ ನರಕ ತೋರಿಸುತ್ತೇನೆ ಎಂದು ಹೆಬ್ಬಾವಿನ ಜೊತೆ ವಿಡಿಯೋ ಮಾಡಿದ್ದ ಪಾಕಿಸ್ತಾನದ ಪಾಪ್ ಸಿಂಗರ್‍ಗೆ ಈಗ ಎರಡು ವರ್ಷ ಜೈಲಿಗೆ ಹೋಗುವ ಸ್ಥಿತಿ ಬಂದಿದೆ. ಲಹೋರ್ ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ ನಲ್ಲಿ ಹೆಬ್ಬಾವು ಮತ್ತು...

ಭಾರತದೊಂದಿಗಿನ ಯುದ್ಧದಲ್ಲಿ ಪಾಕ್ ಸೋಲುತ್ತೆ: ಇಮ್ರಾನ್ ಖಾನ್

3 days ago

ಇಸ್ಲಾಮಾಬಾದ್: ಭಾರತಕ್ಕೆ ಪರಮಾಣು ಬಾಂಬ್ ದಾಳಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಈಗ ಸೋಲಿನ ಭಯ ಶುರುವಾಗಿದೆ. ಭಾರತದೊಂದಿಗೆ ಯುದ್ಧ ಮಾಡಿದರೆ ನಾವು ಸೋಲುತ್ತೇವೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಅಲ್ ಜಜೀರಾ ವಿಶೇಷ...

ಬಿಜೆಪಿಗೆ ವೋಟ್ ಹಾಕದವರು ಪಾಕ್ ಪರ ಇರ್ತಾರೆ: ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

3 days ago

ಬೆಂಗಳೂರು: ದೇಶಭಕ್ತರು ಬಿಜೆಪಿಗೆ ವೋಟ್ ಹಾಕುತ್ತಾರೆ. ಪಾಕಿಸ್ತಾನದ ಪರ ಇರುವವರು ಬಿಜೆಪಿಗೆ ವೋಟ್ ಹಾಕಲ್ಲ. ನಾನು ಇದೂವರೆಗೂ ನನ್ನ ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂನಿಗೂ ವೋಟ್ ಹಾಕಿ ಅಂತ ಕೈ ಮುಗಿದು ಕೇಳಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮಸೇನೆಯ...

ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

4 days ago

ಶ್ರೀನಗರ: ಭಾರತೀಯ ಸೇನೆಯಿಂದ ಹತರಾದ ಪಾಕ್ ಸೈನಿಕರ ಮೃತದೇಹವನ್ನು ಪಾಕಿಸ್ತಾನ ಸೇನೆ ಶ್ವೇತ ಬಾವುಟ ತೋರಿಸಿ ಶರಣಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ತೆಗೆದುಕೊಂಡು ಹೋಗಿದೆ. ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಸೈನಿಕರನ್ನು ಸೆಪ್ಟೆಂಬರ್ 10, 11 ರಂದು ಭಾರತೀಯ ಸೇನೆ...

ನರಿಬುದ್ಧಿ ಬಿಡದ ಪಾಕಿಸ್ತಾನ – ಪಾಕ್ ಗೂಢಾಚಾರಿ ಅರೆಸ್ಟ್

5 days ago

ಜೈಪುರ: ರಾಜಸ್ಥಾನದ ಬಾರ್ಮೆರ್ ಪ್ರದೇಶದಲ್ಲಿ ಪಾಕಿಸ್ತಾನದ ಗೂಢಾಚಾರಿಯನ್ನು ರಕ್ಷಣಾ ಪಡೆಗಳು ಬಂಧಿಸಲಾಗಿದೆ. ರಾಜಸ್ಥಾನದ ಬಾರ್ಮೆರ್ ಗಡಿ ಪ್ರದೇಶವನ್ನು ದಾಟಿ ಬರುತ್ತಿದ್ದ ವೇಳೆ ಬೇಹುಗಾರಿಕಾ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನ ಸೈನ್ಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಭಾರತೀಯ ಸೇನೆ ಹಾಗೂ ಗಡಿ ಭದ್ರತಾ ಪಡೆ...

‘ಆಡೋದಾದ್ರೆ ಆಡಿ ಇಲ್ಲ ಅಂದ್ರೆ ಬೇಡ’ – ಲಂಕಾ ತಂಡಕ್ಕೆ ಪಾಕ್ ಸಂದೇಶ

5 days ago

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದಿನ ಶ್ರೀಲಂಕಾ ವಿರುದ್ಧದ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರಾಕರಿಸಿದ್ದು, ಆ ಮೂಲಕ ಟೂರ್ನಿ ಆಡಿದರೆ ಪಾಕ್‍ನಲ್ಲಿ ಆಡಿ ಇಲ್ಲ ಬೇಡ ಎಂಬ ಸಂದೇಶವನ್ನು ನೀಡಿದೆ. ಪಾಕಿಸ್ತಾನದಲ್ಲಿ ನಡೆಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾ ಕೆಲ...