Tag: ನ್ಯೂ ಇಯರ್

  • ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ಚಿಕ್ಕಬಳ್ಳಾಪುರ: ನೈಟ್ ಕರ್ಪ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿಯ ವೈಟ್ ನಿರ್ವಾಣ ಬೈ ಜಡೆ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ರೆಸಾರ್ಟ್ ನಲ್ಲಿ ತಡರಾತ್ರಿ ಡಿಜೆ ಹಾಕಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರ ಸಿಪಿಐ ಪ್ರಶಾಂತ್ ಹಾಗೂ ಮೂವರು ಸಿಬ್ಬಂದಿ ಭೇಟಿ ನೀಡಿದ್ದರು. ಆದರೆ ಗೇಟ್ ಗೆ ಬೀಗ ಹಾಕಿದ್ದ ರೆಸಾರ್ಟ್ ಮಾಲೀಕರು ಸಾಕಷ್ಟು ಸಮಯ ಬೀಗ ತೆಗೆದಿಲ್ಲ. ನಂತರ ಗೇಟ್ ಬೀಗ ತೆಗೆದಾಗ ಕೆಲ ಪಾನಮತ್ತ ಯುವಕರು ಹೊರ ಬಂದು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಗೇಟ್ ಬಳಿಯೇ ಪೊಲೀಸರು ಹಾಗೂ ಯುವಕರ ನಡುವೆ ತಳ್ಳಾಟ, ನೂಕಾಟ ಆಗಿದೆ. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    chikkaballapur celebration

    ಈ ವೇಳೆ ಪೊಲೀಸರ ಮೇಲೆಯೇ ಪಾನಮತ್ತ ಯುವಕರ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಚಿಕ್ಕಬಳ್ಳಾಪುರ ಇನ್ಸ್ಪೆಕ್ಟರ್ ಅವರೊಂದಿಗೆ ಗಲಾಟೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಸ್ಪಿ ಹಾಗೂ ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಪಾನಮತ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್

  • ನ್ಯೂ ಇಯರ್ ಸೆಲೆಬ್ರೆಷನ್ ಹೇಗಿರಬೇಕೆಂದು ಹೇಳಿದ್ರು ಪೊಲೀಸರು

    ನ್ಯೂ ಇಯರ್ ಸೆಲೆಬ್ರೆಷನ್ ಹೇಗಿರಬೇಕೆಂದು ಹೇಳಿದ್ರು ಪೊಲೀಸರು

    – ಫನ್ನಿ ಪೋಸ್ಟ್ ಮೂಲಕ ಜಾಗೃತಿ

    ಮುಂಬೈ: ಹೊಸ ತಳಿಯ ಕೊರೊನಾ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಜನವರಿ 31 ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇಂದು ಸಂಜೆಯಿಂದ ಮುಂಬೈ ನಗರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನರಿಗೆ ಮನೆಯಲ್ಲಿಯೇ ಹೊಸ ವರ್ಷ ಆಚರಿಸಿ ಎಂದು ಹೇಳಿರುವ ಪೊಲೀಸರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

    MUMBAI

    ಮುಂಬೈ ಪೊಲೀಸರು ಟ್ವಿಟ್ಟರ್ ನಲ್ಲಿ ಇಬ್ಬರು ಗೆಳೆಯರ ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ನೆಟ್ಟಿಗರು ಫನ್ನಿ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿ ಮನೆಯಲ್ಲಿಯೇ ನ್ಯೂ ಇಯರ್ ಆಚರಿಸೋದಾಗಿ ಹೇಳಿದ್ದಾರೆ. ಕೊರೊನಾ ಸೋಂಕು ಹಬ್ಬುವ ಆತಂಕದಿಂದ ಪೊಲೀಸರು ನೈಟ್‍ಕರ್ಫ್ಯೂ ವಿಧಿಸಿವೆ.

    https://twitter.com/MumbaiPolice/status/1344485533876105217

    ಏನದು ಪೋಸ್ಟ್?: ಇಬ್ಬರು ಗೆಳೆಯರು ಸಂಭಾಷಣೆ ನಡೆಸಿರುವಂತಿರುವ ವಾಟ್ಸಪ್ ಚಾಟ್ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಗೆಳೆಯ, ಇವತ್ತಿನ ರಾತ್ರಿ ಏನು ಪ್ಲಾನ್? ನಿನ್ನ ಮನೆನಾ ಅಥವಾ ನನ್ನ ಮನೆಯಲ್ಲಾ? ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರೋ ಗೆಳೆಯ ನೀನು ನಿನ್ನ ಮನೆಯಲ್ಲಿ, ನಾನು ನನ್ನ ಮನೆಯಲ್ಲಿ ಎಂದು ಹೇಳಿದ್ದಾನೆ. ಪೊಲೀಸರು ಸಿಂಗಲ್ ಆಗಿದ್ರೆ ಮಿಂಗಲ್ ಆಗಿ, ಅದು ಆನ್‍ಲೈನ್ ನಲ್ಲಿ ಎಂದು ಹೇಳಿದ್ದಾರೆ.

  • ಬೆಂಗ್ಳೂರು ರಸ್ತೆಯಲ್ಲಿ ಪಾರ್ಟಿ ಇಲ್ಲ – ಪಬ್, ಕ್ಲಬ್, ಬಾರ್ ಎಲ್ಲ ಓಪನ್

    ಬೆಂಗ್ಳೂರು ರಸ್ತೆಯಲ್ಲಿ ಪಾರ್ಟಿ ಇಲ್ಲ – ಪಬ್, ಕ್ಲಬ್, ಬಾರ್ ಎಲ್ಲ ಓಪನ್

    – ಇಡೀ ರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್
    – ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ
    – ಡಿ.31ರ ಸಂಜೆಯಿಂದ 144 ಸೆಕ್ಷನ್ ಜಾರಿ

    ಬೆಂಗಳೂರು: ಕೊರೊನಾ ಹಿನ್ನೆಲೆ ಹೊಸ ವರ್ಷದ ಪಾರ್ಟಿಗೆ ನಿರ್ಬಂಧಗಳನ್ನು ಹೇರಲಾಗಿದ್ದು, ರಸ್ತೆ, ಹೊರ ಜಾಗಗಳಲ್ಲಿ ಯಾವುದೇ ರೀತಿಯ ಪಾರ್ಟಿ ಆಯೋಜಿಸುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನ್ಯೂ ಇಯರ್ ಪಾರ್ಟಿ ನಡೆಯುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ಪಾರ್ಟಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

    New Year 2

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 31 ರಂದು ರಾತ್ರಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ರಸ್ತೆ, ಹೊರಜಾಗದಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ. ಖಾಸಗಿ ಜಾಗಗಳಲ್ಲಿ ಪಾರ್ಟಿ ಮಾಡಿಕೊಳ್ಳಬಹುದು. ಆದರೆ ಯಾವುದೇ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಪಬ್, ಬಾರ್, ಕ್ಲಬ್ ಗಳಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ, ಡ್ಯಾನ್ಸ್, ಮ್ಯೂಸಿಕ್ ಇರುವುದಿಲ್ಲ. ಸಾಮಾನ್ಯವಾಗಿ ಅಳವಡಿಸುವ ಮ್ಯೂಸಿಕ್ ಹಾಕಿಕೊಳ್ಳಬಹುದು ಎಂದು ವಿವರಿಸಿದರು.

    New Year 3

    ಪಬ್, ಬಾರ್, ಕ್ಲಬ್ ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಎಂ.ಜಿ.ರಸ್ತೆ, ಕೋರಮಂಗಲ, ಇಂದಿರಾ ನಗರಗಳಲ್ಲಿ ಪ್ರವೇಶಕ್ಕೆ ಸಂಬಂಧಪಟ್ಟ ಹೋಟೆಲ್, ಪಬ್‍ನ ಪಾಸ್ ಅಥವಾ ಕೂಪನ್ ಹೊಂದಿರಬೇಕು. ಇಲ್ಲವಾದಲ್ಲಿ ಈ ಪ್ರದೇಶಗಳಲ್ಲಿ ಅನವಶ್ಯಕವಾಗಿ ಸಂಚರಿಸುವವರಿಗೆ ಅವಕಾಶವಿಲ್ಲ. ಮಾರ್ಗಸೂಚಿ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ದೂರು ನೀಡಬಹುದು ಎಂದು ಕಮಲ್ ಪಂಥ್ ತಿಳಿಸಿದರು.

    new year

    ಡಿಸೆಂಬರ್ 31ರಂದು ಅನವಶ್ಯಕವಾಗಿ ಯಾರೂ ಹೊರಗಡೆ ಓಡಾಡಬಾರದು. ಆ ರೀತಿ ತಿರುಗಾಡೋದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವ್ಹೀಲಿಂಗ್ ಮಾಡಿದರೆ ವಾಹನ ಜಪ್ತಿ ಮಾಡಲಾಗುವುದು. ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ.

    new year 1 1

    ಮೇಟ್ರೋ ಓಡಾಟದ ಬಗ್ಗೆ ಬಿಎಮ್‍ಆರ್‍ಸಿಎಲ್ ತಿರ್ಮಾನ ತೆಗೆದುಕೊಳ್ಳುತ್ತದೆ. ಆದರೆ ಇಡೀ ರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್ ಇರುತ್ತೆ. ಪಬ್ ಆ್ಯಂಡ್ ಬಾರ್‍ಗಳಿಗೆ ಯಾವುದೇ ಸಮಯ ಇರುವುದಿಲ್ಲ. ಈ ಹಿಂದಿನಂತೆ ಓಪನ್ ಇರುತ್ತವೆ. ಲೈಸೆನ್ಸ್‍ನಲ್ಲಿ ಎಷ್ಟು ಸಮಯದವರೆಗೆ ವ್ಯಾಪಾರ ಮಾಡಬಹುದು ಎಂದು ಅನುಮತಿ ಪಡೆದಿದ್ದಾರೋ ಅಲ್ಲಿಯವರೆಗೆ ಓಪನ್ ಮಾಡಬಹುದಾಗಿದೆ.

  • ಹೊಸ ವರ್ಷಾಚರಣೆಗೆ ಹಣ ಹೊಂದಿಸಲು ಸರಗಳ್ಳತನ ಮಾಡ್ತಿದ್ದವರು ಅರೆಸ್ಟ್

    ಹೊಸ ವರ್ಷಾಚರಣೆಗೆ ಹಣ ಹೊಂದಿಸಲು ಸರಗಳ್ಳತನ ಮಾಡ್ತಿದ್ದವರು ಅರೆಸ್ಟ್

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಹಣ ಹೊಂದಿಸಲು ಸರಗಳ್ಳತನಕ್ಕೆ ಕೈ ಹಾಕಿದ್ದ ನಟೋರಿಯಸ್ ಇಬ್ಬರು ಕಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

    ಸಯ್ಯದ್ ಸುಹೇಲ್ ಹಾಗೂ ಸಯ್ಯದ್ ರಿಜ್ವಾನ್ ಬಂಧಿತ ಆರೋಪಿಗಳು. ಆರೋಪಿ ಇಬ್ಬರು ಕೂಡ ಬೆಂಗಳೂರಿನವರಾಗಿದ್ದು ಬೇರೆ ಬೇರೆ ಪ್ರದೇಶದಿಂದ ಬಂದು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಡಿಸೆಂಬರ್ ಕೊನೆಯಲ್ಲಿ ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡೊದಕ್ಕೆ ಹಣ ಬೇಕು ಎಂದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಐದಾರು ಕಡೆ ಸರಗಳ್ಳತನ ಮಾಡಿದ್ದಾರೆ.

    Police Jeep 1

    ಸರಗಳ್ಳರ ದುಷ್ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಬಂದು ಮಹಿಳೆಯ ಸರವನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆರೋಪಿಗಳು ಕಳೆದ ಮೂರ್ನಾಲ್ಕು ತಿಂಗಳಲ್ಲಿ ಬೇರೆ ಬೇರೆ ಕಡೆ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಹೆಬ್ಬಾಳ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಕೃತ್ಯಗಳು ಬಯಲಾಗುವ ಸದ್ಯತೆಗಳಿವೆ.

  • ನ್ಯೂ ಇಯರ್ ಪಾರ್ಟಿಯಲ್ಲಿ ಕಿರಿಕ್: ಸಪ್ಲೈಯರ್‌ಗೆ ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್

    ನ್ಯೂ ಇಯರ್ ಪಾರ್ಟಿಯಲ್ಲಿ ಕಿರಿಕ್: ಸಪ್ಲೈಯರ್‌ಗೆ ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಸಪ್ಲೈಯರ್ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದ ಎಂಟು ಜನ ಆರೋಪಿಗಳನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

    ವೆಂಕಟೇಶ್‍ಪುರಂ ನಿವಾಸಿಗಳಾದ ಹರಿ (19), ಪ್ರಕಾಶ್ (19), ರಂಜೀತ್ ಕುಮಾರ್ (22), ಸಂತೋಷ್ (19), ಕರಣ್ (20), ವಿಜಯ್ (19) ಸೇರಿದಂತೆ ಎಂಟು ಜನ ಬಂಧಿತ ಆರೋಪಿಗಳು. ಬಾಣಸವಾಡಿಯ ಓಲಿವ್ ರೆಸಿಡೆನ್ಸಿ ಹೋಟೆಲ್‍ನಲ್ಲಿ ಹೊಸ ವರ್ಷಕ್ಕೆಂದು ಎಂಟು ಜನ ಯುವಕರು ಹೋಗಿದ್ದರು. ಪಾರ್ಟಿ ವೇಳೆ ಕುಡಿದು ಜೋರಾಗಿ ಕೂಗಾಡುತ್ತಿದ್ದರು. ಇದನ್ನು ನೋಡಿದ ಸಪ್ಲೈಯರ್ ಇಶಾಂತ್ ಜೋರಾಗಿ ಕೂಗಾಡಬೇಡಿ, ಇತರರಿಗೆ ತೊಂದರೆ ಆಗುತ್ತೆ ಎಂದು ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡ ಯುವಕರು ಸಪ್ಲೈಯರ್ ಇಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ, ಚಾಕು ಇರಿದು ಪರಾರಿಯಾಗಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ನ್ಯೂ ಇಯರ್ ಸಂಭ್ರಮದಲ್ಲಿ ಕೀಟಲೆ ಮಾಡಿದ್ದ ನಾಲ್ವರ ಬಂಧನ

    Arrest A

    ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ ದೃಶ್ಯವು ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಆದರೆ ಆರೋಪಿಗಳು ಪತ್ತೆ ಸಾಧ್ಯವಾಗಿರಲಿಲ್ಲ. ಬಳಿಕ ತೀವ್ರ ಕಾರ್ಯಾಚರಣೆ ನಡೆಸಿ, ಭಾನುವಾರ ಎಲ್ಲ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

  • ರಾಯಚೂರಿನಿಂದ ಹೊಸ ವರ್ಷಾಚರಣೆಗೆ ತೆರಳಿದ್ದವರು ಆಂಧ್ರದಲ್ಲಿ ನದಿಪಾಲು

    ರಾಯಚೂರಿನಿಂದ ಹೊಸ ವರ್ಷಾಚರಣೆಗೆ ತೆರಳಿದ್ದವರು ಆಂಧ್ರದಲ್ಲಿ ನದಿಪಾಲು

    – ಮೂವರು ಬಾಲಕಿಯರು ಸೇರಿ ನಾಲ್ವರು ಸಾವು

    ರಾಯಚೂರು: ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ನದಿದಂಡೆಗೆ ತೆರಳಿದ್ದ ರಾಯಚೂರಿನ ಮೂವರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಆಂಧ್ರ ಪ್ರದೇಶದಲ್ಲಿ ನದಿ ಪಾಲಾಗಿದ್ದಾರೆ.

    ಮದಿಹಾ (12), ಫರಿಯಾ (10) ಮತ್ತು ಲೋದಾ (10) ಮೃತ ದುರ್ದೈವಿಗಳು. ನದಿಗೆ ಬಿದ್ದ ಅಕ್ಕನ ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ (35) ಸಹ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಸಿದ್ದವಟಂನಲ್ಲಿ ಈ ಘಟನೆ ನಡೆದಿದೆ.

    RCR

    ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಆಂಧ್ರದ ಸಿದ್ದವಟಂನಲ್ಲಿನ ಅಜ್ಜಿಯ ಮನೆಗೆ ತೆರಳಿದ್ದರು. ಅಲ್ಲಿ ಮಾವ ನೂರ್ ಅಹ್ಮದ್ ಜೊತೆ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮಕ್ಕಳು ಮುಳುಗಿದ್ದಾರೆ. ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ ಸಹ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.

    ಮೃತ ಮಕ್ಕಳು ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಪ್ರದೇಶದ ಇನಾಂದಾರ್ ಕಾಲೋನಿ ನಿವಾಸಿ ಗೌಸ್‍ಪೀರ್ ಎಂಬವರ ಮಕ್ಕಳು ಎಂದು ತಿಳಿದು ಬಂದಿದೆ. ಗೌಸ್‍ಪೀರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಬೀದಿ ಕಾಮಣ್ಣರ ವಿರುದ್ಧ ಕಠಿಣ ಕ್ರಮ: ಭಾಸ್ಕರ್ ರಾವ್

    ಬೀದಿ ಕಾಮಣ್ಣರ ವಿರುದ್ಧ ಕಠಿಣ ಕ್ರಮ: ಭಾಸ್ಕರ್ ರಾವ್

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯುವತಿಯರಿಗೆ ಕಿರುಕುಳ ನೀಡಿದ ಕಾಯುಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ನಗರದಲ್ಲಿ ಪ್ರತಿಗೊಷ್ಠಿಯಲ್ಲಿ ಮಾತನಾಡಿದ ಬಾಸ್ಕರ್ ರಾವ್, ಯುವತಿಯರಿಗೆ ಕಿರುಕುಳ ನೀಡಿರುವ ಸಿಸಿಟಿವಿ ವಿಡಿಯೋಗಳನ್ನ ಪಡೆದು ಕಾಮುಕರ ವಿರುದ್ಧ ದೂರು ಕೊಡುವಂತೆ ಅಪ್ರೋಚ್ ಮಾಡಲಾಗುತ್ತೆ. ಒಂದು ವೇಳೆ ನೊಂದ ಯುವತಿಯರು ಯಾರು ಕೂಡ ಪೊಲೀಸ್ ಠಾಣೆಗೆ ಬಂದು ದೂರು ಕೊಡದಿದ್ದರೂ, ನಾವೇ ಸ್ವಯಂಪ್ರೇರಿತವಾಗಿ ಸೊಮೊಟೊ ಕೇಸ್ ದಾಖಲಿಕೊಂಡು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಾಗುತ್ತೆ. ತಪ್ಪು ಮಾಡಿದವರಿಗೆ ರಕ್ಷಣೆ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

    mg road 2

    ಹೊಸ ವರ್ಷದ ಸಂಭ್ರಮಾಚರಣೆಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನರು ಬಂದಿದ್ದರು. ಬ್ರಿಗೇಡ್ ರೋಡ್, ಚರ್ಚ್ ಸ್ಟ್ರಿಟ್‍ನಿಂದ ಹೆಚ್ಚು ಜನ ಕೋರಮಂಗಲಕ್ಕೆ ಬಂದಿದ್ದರು. ಸುಮಾರು ಮೂರು ಲಕ್ಷದಷ್ಟು ಮಂದಿಯನ್ನ ನಮ್ಮ ಪೊಲೀಸರು ಹತೋಟಿಗೆ ತಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  • 2 ದೋಣಿ ಮೇಲೆ ಯಾವತ್ತೂ ಪಯಣ ಮಾಡ್ಬೇಡಿ: ದರ್ಶನ್

    2 ದೋಣಿ ಮೇಲೆ ಯಾವತ್ತೂ ಪಯಣ ಮಾಡ್ಬೇಡಿ: ದರ್ಶನ್

    ಬೆಂಗಳೂರು: ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳುವ ಮೂಲಕ ಹೊಸ ವರ್ಷಕ್ಕೆ ಶುಭಾಶಯವನ್ನು ಕೋರಿದ್ದಾರೆ.

    ನಟ ದರ್ಶನ್ ಟ್ವೀಟ್ ಮಾಡುವ ಮೂಲಕ ಸಮಸ್ತ ಜನರಿಗೆ 2020ರ ಹೊಸ ವರ್ಷದ ಶುಭಾಶಯವನ್ನು ತಿಳಿಸಿದ್ದಾರೆ.

    “ಕಳೆದು ಹೋದ ಸಮಯ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲ. ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ. ನಿಮ್ಮ ಗುರಿ, ಅದಕ್ಕೆ ಬೇಕಾದ ಕಾರ್ಯ ನಿಷ್ಠೆ ಮೇಲೆ ನಂಬಿಕೆ ಇರಲಿ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ದಾಸ ದರ್ಶನ್” ಎಂದು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.

    ಜೊತೆಗೆ ರಾಬರ್ಟ್ ಸಿನಿಮಾ ಫಸ್ಟ್ ಲುಕ್ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದಾರೆ. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಮೋಷನ್ ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ದಚ್ಚುವಿನ ನಯಾ ಲುಕ್‍ಗೆ ಫಿದಾ ಆಗಿದ್ದರು. ಯೂಟ್ಯೂಬ್‍ನಲ್ಲಿ ಕೂಡ ಮೋಷನ್ ಪೋಸ್ಟರ್ ಭಾರೀ ಸದ್ದು ಮಾಡಿತ್ತು.

    ‘ರಾಬರ್ಟ್’ ಸಿನಿಮಾ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದೆ. ದರ್ಶನ್‍ಗೆ ಜೊಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  • ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ಬೆಂಗಳೂರು: ಹೊಸ ವರ್ಷ ಇಂದು ಆರಂಭವಾಗಿದ್ದು, 2020ರ ಸ್ವಾಗತಕ್ಕೆ ನೂರಾರೂ ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾದರು. ನಗರದ ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಇಂದು ಬೆಳ್ಳಂಬೆಳಗ್ಗೆ ಆಚರಣೆ ಮುಗಿದ ಬೆನ್ನಲ್ಲೇ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಗಳು ಬಣಗುಡುತ್ತಿದ್ದವು.

    ಮೋಜು ಮಸ್ತಿ ಮಾಡಿ ರಸ್ತೆ ಅಂದ ಹಾಳು ಮಾಡಿದ್ದನ್ನ ಪೌರಕಾರ್ಮಿಕರು ಸ್ವಚ್ಛತೆಗೊಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಮುಂಜಾನೆಯೇ ರಸ್ತೆ ಸ್ವಚ್ಛತೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಬಾರಿ ಹೊಸ ವರ್ಷಕ್ಕೆ ಹೊಸ ಟಾಸ್ಕ್ ತೆಗೆದುಕೊಂಡಿತ್ತು.

    BRIGADE

    ಅದೇನೆಂದರೆ ಎಂಜಿ ರೋಡ್, ಬ್ರಿಗೇಡ್ ರೋಡ್‍ನಲ್ಲಿ ಕಸ ಹುಡುಕಿದವರಿಗೆ ಬಹುಮಾನ ಎಂಬ ಸ್ಪರ್ಧೆ ಸಹ ಆಯೋಸಿತ್ತು. ಅಷ್ಟರ ಮಟ್ಟಿಗೆ ಬಿಬಿಎಂಪಿ ಪೌರಕಾರ್ಮಿಕರು ಸಂಪೂರ್ಣ ಕ್ಲೀನ್ ಮಾಡಿದ್ದಾರೆ ಎಂದು ಆತ್ಮವಿಶ್ವಾಸದಿಂದ ಸ್ಪರ್ಧೆ ಆಯೋಜಿಸಿದವರು ಹೇಳಿದ್ದಾರೆ.

    ಮತ್ತೊಂದೆಡೆ ನಗರದ ದೇವಾಲಯಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದರಿಂದ ದೇವರ ದರ್ಶನ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

  • ವಿನೂತನವಾಗಿ ಹೊಸ ವರ್ಷಕ್ಕೆ ಕಿಚ್ಚ ಕುಟುಂಬದಿಂದ ವಿಶ್

    ವಿನೂತನವಾಗಿ ಹೊಸ ವರ್ಷಕ್ಕೆ ಕಿಚ್ಚ ಕುಟುಂಬದಿಂದ ವಿಶ್

    ಬೆಂಗಳೂರು: ವಿಶ್ವಾದಾದ್ಯಂತ ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಇತ್ತ ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ನೂತನವಾಗಿಯೇ ಸಮಸ್ತ ಕನ್ನಡಿಗರಿಗೂ ನ್ಯೂ ಇಯರ್ ವಿಶ್ ಮಾಡಿದ್ದಾರೆ.

    ಸುದೀಪ್ ಟ್ವೀಟ್ ಮಾಡುವುದರ ಜೊತೆಗೆ ಒಂದು ವಿಡಿಯೋ ಅಪ್ಲೋಡ್ ಮಾಡುವ ಮೂಲಕ ನ್ಯೂ ಇಯರ್‌ಗೆ ಶುಭಾಶಯ ಕೋರಿದ್ದಾರೆ. “ವಿಡಿಯೋದಲ್ಲಿ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಪ್ರೀತಿಯ ಕಿಚ್ಚ ಸುದೀಪನ ಕುಟುಂಬದಿಂದ ಎಂದು ಹೇಳಿ ಪಕ್ಕಕ್ಕೆ ಹೋಗುತ್ತಾರೆ. ಆಗ ಅವರ ಕುಟುಂಬದ ಸದಸ್ಯರೆಲ್ಲರೂ ಹೊಸ ವರ್ಷದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ. ಹೀಗಾಗಿ ಸುದೀಪ್ ವಿನೂತನವಾಗಿಯೇ ನ್ಯೂ ಇಯರ್‌ಗೆ ವಿಶ್ ಮಾಡಿದ್ದಾರೆ.

    ಇದಕ್ಕೂ ಮೊದಲು “2020ಗೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು, ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು. ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು” ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೆರಡು ಟ್ವೀಟ್ ಮಾಡಿ “ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡರೆ ನೀವು ನಡೆದು ಬಂದ ಹಾದಿ ಬಗ್ಗೆ ಸ್ಪಷ್ಟತೆಗಳು ಸಿಕ್ಕಿಬಿಡುತ್ತವೆ. ಆ ಸ್ಪಷ್ಟತೆಗಳ ಆಧಾರದ ಮೇಲೆ ಈ ವರ್ಷ ಮಾಡಬೇಕಾದ್ದೇನು? ಮಾಡಬಾರದ್ದೇನು? ನೀ ಬದಲಾಗಬೇಕಾದ್ದು ಎಲ್ಲಿ? ಸ್ಥಿರತೆ ಕಾಪಾಡಿಕೊಳ್ಳಬೇಕಾದ್ದು ಎಲ್ಲಿ? ಎಂಬವುಗಳ ಬಗ್ಗೆ ದಿಟ್ಟ ನಿರ್ಧಾರ ಹೊಂದಿ 2020ನೇ ವರ್ಷಕ್ಕೆ ಹೆಜ್ಜೆಯಿಡೋಣ. 2020 ಅನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿ, ಹೆಚ್ಚು ಸಾರ್ಥಕವಾಗಿ ಕಳೆಯೋಣ” ಎಂದು ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ.