ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಹಣ ಹೊಂದಿಸಲು ಸರಗಳ್ಳತನಕ್ಕೆ ಕೈ ಹಾಕಿದ್ದ ನಟೋರಿಯಸ್ ಇಬ್ಬರು ಕಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಸಯ್ಯದ್ ಸುಹೇಲ್ ಹಾಗೂ ಸಯ್ಯದ್ ರಿಜ್ವಾನ್ ಬಂಧಿತ ಆರೋಪಿಗಳು. ಆರೋಪಿ ಇಬ್ಬರು ಕೂಡ ಬೆಂಗಳೂರಿನವರಾಗಿದ್ದು ಬೇರೆ ಬೇರೆ ಪ್ರದೇಶದಿಂದ ಬಂದು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಡಿಸೆಂಬರ್ ಕೊನೆಯಲ್ಲಿ ಬ್ರಿಗೇಡ್ ರೋಡ್ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡೊದಕ್ಕೆ ಹಣ ಬೇಕು ಎಂದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಐದಾರು ಕಡೆ ಸರಗಳ್ಳತನ ಮಾಡಿದ್ದಾರೆ.
Advertisement
Advertisement
ಸರಗಳ್ಳರ ದುಷ್ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಬಂದು ಮಹಿಳೆಯ ಸರವನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆರೋಪಿಗಳು ಕಳೆದ ಮೂರ್ನಾಲ್ಕು ತಿಂಗಳಲ್ಲಿ ಬೇರೆ ಬೇರೆ ಕಡೆ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಹೆಬ್ಬಾಳ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು ಮತ್ತಷ್ಟು ಕೃತ್ಯಗಳು ಬಯಲಾಗುವ ಸದ್ಯತೆಗಳಿವೆ.